ಆವೃತ್ತಿಗಳು
Kannada

ಮೂರು ವರ್ಷದಲ್ಲಿ 100 ಕೋಟಿ ವಹಿವಾಟು..!

ಟೀಮ್​ ವೈ.ಎಸ್​​.

21st Oct 2015
Add to
Shares
16
Comments
Share This
Add to
Shares
16
Comments
Share

ಮನೆ ಹುಡುಕಾಡುತ್ತಿರುವವರಿಗೆ ನೆರವಾಗಲು, ಅರ್ಧ ಡಜನ್​​ನಷ್ಟು ನವ್ಯೋದ್ಯಮಗಳು ಹುಟ್ಟಿಕೊಂಡಿವೆ. ಇನ್ನೂ ಅಷ್ಟೇ ಸಂಖ್ಯೆಯ ಉದ್ಯಮಿಗಳು ಈ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಬೇರೂರುವ ಪ್ರಯತ್ನದಲ್ಲಿರೋ ನವ್ಯೋದ್ಯಮವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಮ್ಯಾಜಿಕ್ರೇಟ್ ಎಂಬ ನವ್ಯೋದ್ಯಮವು ಹೊಸತನ ನಿರ್ಮಾಣ ಸಾಮಾಗ್ರಿಗಳನ್ನು, ಪ್ರೀಫ್ಯಾಬ್ರಿಕೇಟೆಡ್ ತಂತ್ರಜ್ಞಾನಗಳನ್ನು ಒದಗಿಸುತ್ತಿದೆ. ಇದು ಎಎಸಿ(ಆಟೋಕ್ಲೇವ್ ಎರೇಟೆಡ್ ಕಾಂಕ್ರೀಟ್) ಎಂಬ ಇಟ್ಟಿಗೆಗೆ ಪರ್ಯಾಯ ಸಾಮಗ್ರಿಯನ್ನು ತಯಾರಿಸುತ್ತಿದೆ. “ಎಎಸಿ ಬ್ಲಾಕ್​​ಗಳು ಕೆಂಪು ಇಟ್ಟಿಗೆಗೆ ಹೋಲಿಸಿದರೆ ಕೈಗೆಟುಕುವ ದರದಲ್ಲಿದೆ. ಮತ್ತೊಂದೆಡೆ ಇವು ಬೇಗನೇ ಫಿಕ್ಸ್ ಮಾಡಬಹುದಾಗಿದ್ದು, ಕಾರ್ಮಿಕರ ಸಂಖ್ಯೆ, ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿ ಕೂಡಾ ಆಗಿದೆ. ಸಧ್ಯ ಬಾಲಾವಸ್ಥೆಯಲ್ಲಿರುವ ಈ ಕ್ಷೇತ್ರ ಬೆಳೆಯಲು ಸಾಕಷ್ಟು ಅವಕಾಶವಿದೆ,” ಎನ್ನುತ್ತಾರೆ ಮ್ಯಾಜಿಕ್ರೇಟ್​​ನ ಸಹಸಂಸ್ಥಾಪಕ ಸೌರಭ್ ಬನ್ಸಾಲ್.

image


ಐಐಟಿ ಖರಗ್ಪುರದ ಪದವೀಧರ ಸೌರಭ್, ದೆಹಲಿ ಐಐಟಿ ಪದವೀಧರ ಸಿದ್ಧಾರ್ಥ್ ಬನ್ಸಾಲ್ ಮತ್ತು ಚಾರ್ಟರ್ಡ್ ಅಕೌಂಟಂಟ್ ಪುನೀತ್ ಮಿತ್ತಲ್ ಜೊತೆಗೂಡಿ ಈ ಉದ್ಯಮವನ್ನು ಸ್ಥಾಪಿಸಿದರು. ಮೋತಿಲಾಲ್ ಓಸ್ವಾಲ್​​ರ ಬಂಡವಾಳ ಮತ್ತು ಬ್ಯಾಂಕ್ ಸಾಲಗಳ ಮೂಲಕ ಉದ್ಯಮವನ್ನು ಆರಂಭಿಸಲಾಯಿತು.

ನಿರ್ಮಾಣ ಕ್ಷೇತ್ರದಲ್ಲಿ ವಿಪುಲ ಅವಕಾಶವಿದೆ ಎನ್ನುವುದು ಅರಿವಾದಾಗ, ನಮಗೆ ಈ ಐಡಿಯಾ ಬಂತು ಎನ್ನುತ್ತಾರೆ ಸೌರಭ್. “ನಿರ್ಮಾಣ ಕ್ಷೇತ್ರದಲ್ಲಿ ನೌಕರರು, ಸಮಯ ಮತ್ತು ಶಕ್ತಿಯನ್ನು ಉಳಿಸುವ ದಾರಿಗಳ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಮ್ಯಾಜಿಕ್ರೇಟ್ ತಯಾರಿಸುವ ಕಲ್ಪನೆ ಸೃಷ್ಟಿಯಾಯಿತು. ನಮ್ಮ ದೇಶದ ಜಿಡಿಪಿಗೆ ನಿರ್ಮಾಣ ಕ್ಷೇತ್ರದ ಕೊಡುಗೆ ದೊಡ್ಡದಿದೆ. ನಿರ್ಮಾಣ ಸಾಮಾಗ್ರಿಗಳ ಪೈಕಿ ಸ್ಟೀಲ್ ಮತ್ತು ಸಿಮೆಂಟ್ ಬಳಿಕ ಅತಿ ಹೆಚ್ಚು ಬಳಕೆಯಾಗುವುದೇ ಇಟ್ಟಿಗೆಗಳು,” ಎನ್ನುತ್ತಾರೆ ಸೌರಭ್. ಇಟ್ಟಿಗೆ ಆಧರಿತ ಗೋಡೆ ಕಟ್ಟುವ ಕ್ಷೇತ್ರದ ಮೌಲ್ಯ ಏನಿಲ್ಲವೆಂದರೂ 50 ಸಾವಿರ ಕೋಟಿ. ಭಾರತದಲ್ಲಿ ಸುಮಾರು 1,00,000 ಇಟ್ಟಿಗೆ ನಿರ್ಮಾಣ ಕಾರ್ಖಾನೆಗಳಿವೆ. ಆದರೆ, ಇವೆಲ್ಲವೂ ಅಸಂಘಟಿತವಾಗಿದ್ದು ಸಾಕಷ್ಟು ಶ್ರಮ ವ್ಯರ್ಥವಾಗುತ್ತಿದೆ ಎನ್ನುತ್ತಾರೆ ಸೌರಭ್. ಎಎಸಿ ಬ್ಲಾಕ್​​ಗಳ ಮೂಲಕ ಮ್ಯಾಜಿಕ್ರೇಟ್, ಈ ಕ್ಷೇತ್ರವನ್ನು ಸಂಘಟಿಸಲು ಮತ್ತು ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸುತ್ತಿದೆ.

ಈ ಕ್ಷೇತ್ರದಲ್ಲಿ ಅವಕಾಶ ಹೆಚ್ಚಿದೆ ನಿಜ. ಆದರೆ, ಅಲ್ಟ್ರಾಟೆಕ್, ಬಿಜೆ ಶಿರ್ಕೆ, ಬಿಐಎಲ್ಟೆಕ್, ಹೈದ್ರಾಬಾದ್ ಇಂಡಸ್ಟ್ರೀಸ್ ಲಿಮಿಟೆಡ್ ಮೊದಲಾದ ದೊಡ್ಡ ಕಂಪನಿಗಳ ಜೊತೆ ಪೈಪೋಟಿಗೆ ಬೀಳಬೇಕಾಗಿದೆ. ಹಾಗಿದ್ದೂ, ಈ ಕ್ಷೇತ್ರದಲ್ಲಿರುವ ಅವಕಾಶಗಳಿಂದಾಗಿ, ಎಲ್ಲರಿಗೂ ಬೆಳೆಯಲು ಅವಕಾಶವಿದೆ. “ಗೋಡೆ ನಿರ್ಮಾಣ ಕ್ಷೇತ್ರದ ಮೌಲ್ಯ 50,000 ಕೋಟಿ ರೂಪಾಯಿ ಇದೆ. ಈ ಪೈಕಿ ಶೇಕಡಾ 10ರಷ್ಟು ಎಎಸಿ ಬ್ಲಾಕ್​​ಗಳತ್ತ ತಿರುಗಿದರೂ ನಮ್ಮ ವಹಿವಾಟು ಸಾಕಷ್ಟು ಬೆಳೆಯಲಿದೆ. ನಾವು ಪಶ್ಚಿಮ ಮತ್ತು ಉತ್ತರ ಭಾರತದ ಮಾರುಕಟ್ಟೆಯ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಅದಕ್ಕಾಗಿ 3 ಘಟಕಗಳನ್ನು ಹೊಂದಿದ್ದೇವೆ. ಎಎಸಿಯ ಮಾರುಕಟ್ಟೆಯು ಕಳೆದ 5 ವರ್ಷಗಳಲ್ಲಿ 50 ಕೋಟಿಯಿಂದ 500 ಕೋಟಿಯವರೆಗೆ ಬೆಳೆದಿದೆ,” ಎನ್ನುತ್ತಾರೆ ಸೌರಭ್.

2008ರಲ್ಲಿ ಆರಂಭವಾದ ಮ್ಯಾಜಿಕ್ರೇಟ್, ಸೂರತ್​​ನಲ್ಲಿ ಸುಮಾರು 400000 ಸಿಬಿಎಂ ಸಾಮರ್ಥ್ಯದ ಎರಡು ಘಟಕಗಳನ್ನು ಹೊಂದಿದೆ. ದೆಹಲಿಯಲ್ಲಿ ಇತ್ತೀಚೆಗಷ್ಟೇ 3,50,00 ಸಿಬಿಎಂ ಸಾಮರ್ಥ್ಯದ ಮತ್ತೊಂದು ಘಟಕ ಆರಂಭಿಸಲಾಗಿದೆ. ಬೆಂಗಳೂರು ಮತ್ತು ಮುಂಬೈನಲ್ಲೂ ಘಟಕ ಸ್ಥಾಪಿಸಲು ಜಮೀನಿಗಾಗಿ ಹುಡುಕಾಡುತ್ತಿದ್ದಾರೆ. 2016ರ ವೇಳೆಗೆ ಸುಮಾರು 2 ಮಿಲಿಯನ್ ಸಿಬಿಎಂ ಸಾಮರ್ಥ್ಯದೊಂದಿಗೆ ದೇಶದ ಅತಿ ದೊಡ್ಡ ಎಎಸಿ ಉತ್ಪಾದಕ ಎಂಬ ಹೆಗ್ಗಳಿಕೆ ಪಡೆಯುವ ಗುರಿಯನ್ನು ಸಂಸ್ಥೆ ಹಾಕಿಕೊಂಡಿದೆ. ಎಎಸಿ ಬ್ಲಾಕ್​​ಗಳ ಜೊತೆಗೆ ಈ ನವ್ಯೋದ್ಯಮವು ಮತ್ತೆರಡು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮ್ಯಾಜಿಕ್ ಬಾಂಡ್, ಡ್ರೈ ಮಿಕ್ಸ್ ಮೋರ್ಟಾರ್ ಆಗಿದ್ದು, ಎರಡು ಬ್ಲಾಕ್​​ಗಳನ್ನು ಸೇರಿಸಲು ಸಹಾಯ ಮಾಡುತ್ತದೆ. ಇನ್ನೊಂದು ಮ್ಯಾಜಿಕ್ ಪ್ಲಾಸ್ಟ್, ಇದು ಹಗುರವಾದ ಜಿಪ್ಸಂ ಪ್ಲಾಸ್ಟರ್ ಆಗಿದೆ. ಸ್ಟೀಲ್ ಬಳಸಿರುವ ದೊಡ್ಡ ಗಾತ್ರದ ಎಎಸಿ ಬ್ಲಾಕ್​​ಗಳನ್ನು ತಯಾರಿಸಲು ಯೋಜನೆ ರೂಪಿಸಿದ್ದಾರೆ.

ನಮಗೆ ಅವಕಾಶಗಳು ಜಾಸ್ತಿ ಇದ್ದರೂ ಬಿಲ್ಡರ್​​ಗಳ ಕಡೆಯಿಂದ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. “ಸಾಂಪ್ರದಾಯಿಕ ಇಟ್ಟಿಗೆಗಳ ಬದಲಾಗಿ ಎಎಸಿ ಬ್ಲಾಕ್​​ಗಳನ್ನು ಬಳಸುವಂತೆ ಬಿಲ್ಡರ್​​ಗಳನ್ನು ಒಪ್ಪಿಸುವುದೇ ದೊಡ್ಡ ಸವಾಲಾಗಿತ್ತು. ಘಟಕಗಳ ಸಾಮರ್ಥ್ಯದ ಅರ್ಧದಷ್ಟು ಉತ್ಪಾದನೆಯಲ್ಲಿ, ಆರಂಭಿಕ ವರ್ಷಗಳಲ್ಲಿ ಹಣದ ಹರಿವನ್ನು ನೋಡಿಕೊಳ್ಳುವುದು ಕಠಿಣ ಕೆಲಸವಾಗಿತ್ತು,” ಎನ್ನುತ್ತಾರೆ ಸೌರಭ್. 8 ವಿಭಿನ್ನ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರಕೆ ಮಾಡಿ ಎಎಸಿ ತಯಾರಿಸುವುದು ದೊಡ್ಡ ಸವಾಲಾಗಿತ್ತು. ಉತ್ತಮ ಗುಣಮಟ್ಟದ ಉತ್ಪನ್ನವನ್ನು ತಯಾರಿಸುವುದು ಕೂಡಾ ಸವಾಲೇ ಸರಿ. ಉತ್ಪಾದನೆಯ ವೇಳೆ, ಬ್ಲಾಕ್​​ಗಳು ತುಂಡಾಗುವುದರಿಂದ ಸುಮಾರು ಶೇಕಡಾ 10ರಷ್ಟು ನಷ್ಟ ಉಂಟಾಗುತ್ತದೆ ಎನ್ನುತ್ತಾರೆ ಸೌರಭ್.

ಆರಂಭಿಕ ಹಿನ್ನಡೆಗಳನ್ನು ಎದುರಿಸಿ ಮುಂದೆ ಬಳಿಕ ಎಲ್ಲವೂ ಸರಾಗವಾಗತೊಡಗಿದೆ. ಈ ಬಿಲ್ಡರ್​​ಗಳೂ ಎಎಸಿ ಬ್ಲಾಕ್​​ಗಳನ್ನು ಬಳಸುವುದರಿಂದ ಆಗುವ ಲಾಭಗಳನ್ನು ಅರಿತುಕೊಂಡಿದ್ದಾರೆ. ಮ್ಯಾಜಿಕ್ರೇಟ್ ವೇಗವಾಗಿ ಬೆಳೆಯಲಾರಂಭಿಸಿದೆ. ಕಳೆದ ವರ್ಷ 100 ಕೋಟಿ ರೂಪಾಯಿ ವಹಿವಾಟು ನಡೆಸಿದೆ.

3 ಘಟಕಗಳಲ್ಲಿ ಒಟ್ಟು 300 ಜನರ ತಂಡ ದುಡಿಯುತ್ತಿದ್ದಾರೆ. ಐಐಟಿ ಮತ್ತು ಐಐಎಂಗಳ ಪದವೀಧರರು ಈ ತಂಡದಲ್ಲಿದ್ದಾರೆ.

Add to
Shares
16
Comments
Share This
Add to
Shares
16
Comments
Share
Report an issue
Authors

Related Tags