ಆವೃತ್ತಿಗಳು
Kannada

ಅಶಿಕ್ಷಿತ ಭಾರತ... ಗ್ರಾಮೀಣ ಹಂತದಲ್ಲಿ ಕಲಿಕೆ

ಟೀಮ್​​ ವೈ.ಎಸ್​. ಕನ್ನಡ

YourStory Kannada
23rd Nov 2015
4+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

1. ವರದಿ

ಭಾರತದ ಶೈಕ್ಷಣಿಕ ಮಾರುಕಟ್ಟೆ 92.98 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಇದರಲ್ಲಿ ಶೇ. 59.7ರಷ್ಟು ಉನ್ನತ ಶಿಕ್ಷಣಕ್ಕೆ ಮೀಸಲಾಗಿದೆ. ಈ ವಲಯ ಪ್ರತಿ ವರ್ಷ 36,000 ವಿಶ್ವವಿದ್ಯಾನಿಲಯಗಳಿಂದ 20 ಮಿಲಿಯನ್ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿದೆ. ಶೇ. 38.1ರಷ್ಟು ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಾಗಿದ್ದು, ಶೇ. 1.6ರಷ್ಟು ಪ್ರಾಥಮಿಕ ಶಾಲೆಗಳಿಗೆ ಮತ್ತು 0.6ರಷ್ಟು ತಂತ್ರಜ್ಞಾನಕ್ಕೆ ಮೀಸಲಾಗಿದೆ. 2000ನೇ ಇಸ್ವಿಯ ಏಪ್ರಿಲ್‍ನಿಂದ 2014ರ ಸಪ್ಟೆಂಬರ್ ವರೆಗೆ ಎಫ್‍ಡಿಐ ಭಾರತಕ್ಕೆ 964.03 ಮಿಲಿಯನ್ ಡಾಲರ್ ನೆರವು ನೀಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೂಡ ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂಕಿ ಅಂಶಗಳನ್ನು ನೋಡೋದಾದ್ರೆ ಶಿಕ್ಷಣ ಕ್ಷೇತ್ರ ಶೇಕಡಾ 11.3ರಷ್ಟು ಪ್ರಗತಿ ಕಾಣ್ತಾ ಇದೆ. 2005-2012ರ ಅವಧಿಯಲ್ಲಿ ಹೊಸದಾಗಿ 18,000 ಕಾಲೇಜುಗಳು ಆರಂಭವಾಗಿವೆ. ಇದರೊಂದಿಗೆ ಕಾಲೇಜುಗಳ ಒಟ್ಟು ಸಂಖ್ಯೆ 35,539ಕ್ಕೆ ತಲುಪಿತ್ತು. ಇನ್ನು ದೇಶದಲ್ಲಿ 574 ವಿಶ್ವವಿದ್ಯಾನಿಲಯಗಳು ಕೂಡ ಇವೆ. ಇದರಲ್ಲಿ ಶೇ. 50ರಷ್ಟು ರಾಜ್ಯಗಳ ಪಾಲಿದ್ರೆ, ಶೇ. 23ರಷ್ಟು ಪರಿಗಣಿತ, ಶೇ.19ರಷ್ಟು ಖಾಸಗಿ ಸಂಸ್ಥೆಗಳು ಹಾಗೂ ಶೇ. 8ರಷ್ಟು ಕೇಂದ್ರೀಯ ವಿವಿಗಳಿವೆ.

ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ದಿನೇ ದಿನೇ ಹೆಚ್ಚಾಗ್ತಾ ಇದೆ. 1858ರಲ್ಲಿ ಆರಂಭವಾಗಿದ್ದ ಬ್ರಿಟಿಷ್ ಆಳ್ವಿಕೆ 1947ರಲ್ಲಿ ಕೊನೆಯಾಗಿತ್ತು. ಅಚ್ಚರಿಯ ವಿಷಯ ಅಂದ್ರೆ 1900-1947ರ ಅವಧಿಯಲ್ಲಿ ಭಾರತದಲ್ಲಿ ಸಾಕ್ಷರತೆ ಪ್ರಗತಿ ಕಂಡಿದೆ. ಶೇ.5.8ರಷ್ಟಿದ್ದ ಸಾಕ್ಷರತೆ ಪ್ರಮಾಣ 1947ರ ವೇಳೆಗೆ ಶೇ. 12ರಷ್ಟಾಗಿತ್ತು. 1947-1994ರ ವೇಳೆಗೆ ಭಾರತದಲ್ಲಿ ಸಾಕ್ಷರತೆ ಪ್ರಮಾಣ ಶೇ.48ರಷ್ಟಿತ್ತು. ಸದ್ಯ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ. 74.04ಕ್ಕೆ ತಲುಪಿರುವುದು ಹೆಮ್ಮೆಯ ವಿಚಾರ. ಆದ್ರೆ ಶಿಕ್ಷಣ ಕ್ಷೇತ್ರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ರೂ ಭಾರತ ಬೇರೆ ದೇಶಗಳಿಗಿಂತ ಸಾಕ್ಷರತೆಯಲ್ಲಿ ಯಾಕೆ ಹಿಂದಿದೆ ಅನ್ನೋದೇ ಆತಂಕದ ವಿಚಾರ.

image


2. ಗ್ರಾಮೀಣ ಇಕ್ಕಟ್ಟು

ಭಾರತದಲ್ಲಿ ಶೇ.68ರಷ್ಟು ಗ್ರಾಮೀಣ ಪ್ರದೇಶವಿದೆ. 833 ಮಿಲಿಯನ್ ಜನರು ಗ್ರಾಮೀಣ ಪ್ರದೇಶದ ನಿವಾಸಿಗಳು, ಶೇ.51.73ರಷ್ಟು ಮಂದಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 2013ರ ಗಣತಿ ಪ್ರಕಾರ ಶೇ.28ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಭಾರತವನ್ನು ಆಳವಾದ ನಿಷ್ಕ್ರಿಯತೆಗೆ ದೂಡಲು ಇದೊಂದೇ ಕಾರಣ ಸಾಕು. ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಕೂಡ ಭಾರತದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೆಚ್ಚಾಗಿ ನಗರಕ್ಕೇ ಸೀಮಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.29ರಷ್ಟು ಪ್ರಾಥಮಿಕ ಶಾಲೆಗಳು ಖಾಸಗಿಯವರ ಕೈಯಲ್ಲಿವೆ. ಬಡತನ, ಶೈಕ್ಷಣಿಕ ಸಂಪನ್ಮೂಲಗಳ ಕೊರತೆ, ಸಾಂಸ್ಕøತಿಕ ಹಠಮಾರಿತನ, ಮೂಲಸೌಕರ್ಯಗಳ ಕೊರತೆ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯದಿಂದಾಗಿ ಗ್ರಾಮೀಣ ಭಾರತದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ.

ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕಾಗಿ `ಪ್ರಥಮ್' ಎನ್‍ಜಿಓ ಶ್ರಮಿಸ್ತಾ ಇದೆ. `ಪ್ರಥಮ್' ಭಾರತದಾದ್ಯಂತ ಅಂಕಗಣಿತದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಭಾರತದಲ್ಲಿ ಕನಿಷ್ಠ ಲೆಕ್ಕ ಕೂಡ ಬಾರದವರ ಸಂಖ್ಯೆ ಹೆಚ್ಚಾಗಿದೆ. ಭಾರತ ಕೇವಲ ಚೀನಾ, ಜಪಾನ್, ಸಿಂಗಾಪುರ ಮಾತ್ರವಲ್ಲದೆ ಕಿರ್ಗಿಸ್ತಾನಕ್ಕಿಂತಲೂ ಹಿಂದಿದೆ. ಈ ಕಠು ವಾಸ್ತವವನ್ನು `ಏಸರ್ 2014' ಬಹಿರಂಗಪಡಿಸಿದೆ. ವರದಿಯ ಪ್ರಕಾರ 6-14 ವರ್ಷದ ಮಕ್ಕಳಲ್ಲಿ ಶೇ.96ರಷ್ಟು ಮಂದಿ ಶಾಲೆಗಳಲ್ಲಿ ಹೆಸರು ನೋಂದಾಯಿಸಿದ್ದಾರೆ. ಶೇ.3.3ರಷ್ಟು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಗೋವಾ, ಮಣಿಪುರ ಮತ್ತು ಕೇರಳದಲ್ಲಂತೂ ಶೇ.60ರಷ್ಟು ಮಕ್ಕಳು ಖಾಸಗಿ ಶಾಲೆಗಳನ್ನೇ ನಂಬಿಕೊಂಡಿದ್ದಾರೆ. ಗುಜರಾತ್, ಛತ್ತೀಸ್‍ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಓಡಿಶಾ, ತ್ರಿಪುರಾ, ಮಧ್ಯಪ್ರದೇಶ, ಕರ್ನಾಟಕ ಮತ್ತು ಅರುಣಾಚಲಪ್ರದೇಶದಲ್ಲಿ ಶೇ.30-40ರಷ್ಟು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನೆಚ್ಚಿಕೊಂಡಿದ್ದಾರೆ.

2009ರಲ್ಲಿ ತಮಿಳುನಾಡು, ಮಣಿಪುರ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಶೇ.39ಕ್ಕಿಂತ ಕಡಿಮೆ ಸರ್ಕಾರಿ ಶಾಲೆಯ 5ನೇ ತರಗತಿಯ ಶೇ.75ರಷ್ಟು ವಿದ್ಯಾರ್ಥಿಗಳು, 2ನೇ ತರಗತಿಯ ಪುಸ್ತಕವನ್ನು ಓದಲು ವಿಫಲರಾಗಿದ್ರು. 2014ರಲ್ಲಿ ಈ ಪ್ರಮಾಣ 8ಕ್ಕೆ ತಲುಪಿದೆ. ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಓದುವಿಕೆಯ ಗ್ರಹಿಕೆ ಶೇ.50ಕ್ಕಿಂತ ಕಡಿಮೆಯಾಗಿದೆ. ಏಸರ್ 2014ರ ಪ್ರಕಾರ, ಭಾರತದಲ್ಲಿ ಓದುವ ಹವ್ಯಾಸ ಅತ್ಯಂತ ನಿರಾಶಾದಾಯಕವಾಗಿದೆ. 2014ರಲ್ಲಿ 3ನೇ ತರಗತಿಯ 1/4ರಷ್ಟು ವಿದ್ಯಾರ್ಥಿಗಳು ಮಾತ್ರ 2ನೇ ತರಗತಿಯ ಪಠ್ಯ ಪುಸ್ತಕವನ್ನು ಓದುವಲ್ಲಿ ಯಶಸ್ವಿಯಾಗಿದ್ದಾರೆ. 5ನೇ ತರಗತಿಯಲ್ಲಿ ಈ ಪ್ರಮಾಣ ಅರ್ಧಕ್ಕಿಂತ ಕಡಿಮೆಯಿತ್ತು. ಆದ್ರೆ 8ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಶೇ.75ರಷ್ಟು ಮಕ್ಕಳು ಮಾತ್ರ 2ನೇ ತರಗತಿ ಪುಸ್ತಕಗಳನ್ನು ಓದಲು ಸಫಲರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಗ್ರಾಮೀಣ ಭಾರತದಲ್ಲಿ ಅಂಕಗಣಿತದ ಜ್ಞಾನ ಕೂಡ ಹೆಚ್ಚಾಗಿಲ್ಲ.

image


ಸಂಶೋಧನೆಯ ಪ್ರಕಾರ ಬಹುತೇಕ ಎನ್‍ಜಿಓಗಳು ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು ಸಾಂಪ್ರದಾಯಿಕ ಮತ್ತು ಸಮುದಾಯ ಆಧಾರಿತ ಪ್ರಯತ್ನಗಳನ್ನು ಮಾಡುತ್ತಿವೆ. ಶೇ.70ರಷ್ಟು ಭಾಗ ಶಿಕ್ಷಣದಲ್ಲಿ ಮುಂದಿದೆ, ಅಥವಾ ಸಾಕ್ಷರತೆಯನ್ನೇ ಹೊಂದಿಲ್ಲ. ಶೈಕ್ಷಣಿಕ ಹಕ್ಕು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೆಹಲಿಯಂತಹ ಮೆಟ್ರೋಪಾಲಿಟನ್ ನಗರಗಳಲ್ಲೂ ಅಪೌಷ್ಠಿಕತೆಯಂತಹ ಸಮಸ್ಯೆ ಎದುರಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. 1900ರಲ್ಲಿ ಶೇ.1ಕ್ಕಿಂತ್ಲೂ ಕಡಿಮೆ ಮಹಿಳೆಯರು ಸಾಕ್ಷರರಾಗಿದ್ರು. ಈಗ ಆ ಪ್ರಮಾಣ 57.93ಕ್ಕೆ ತಲುಪಿದೆ. ಆದ್ರೆ ಜಾಗತಿಕವಾಗಿ ಆ ಅಂಕಿ-ಅಂಶಕ್ಕೆ ಮೌಲ್ಯವಿಲ್ಲ. ಗಣತಿ ಪ್ರಕಾರ ಎಲ್ಲಾ ಭಾಷೆಗಳನ್ನು ಸರಿಯಾಗಿ ಓದಬಲ್ಲ, ಮತ್ತು ಬರೆಯಬಲ್ಲ ಸಾಮಥ್ರ್ಯ ಹೊಂದಿರುವ 7 ವರ್ಷಕ್ಕಿಂತ ದೊಡ್ಡವರನ್ನು ಸಾಕ್ಷರರೆಂದು ಪರಿಗಣಿಸಲಾಗುತ್ತದೆ.

3. ಸರ್ಕಾರದ ಸಡಿಲ ನೀತಿ

ಗ್ರಾಮೀಣ ಭಾಗದಲ್ಲಿ ಕಡಿಮೆ ವೆಚ್ಚದ ಶಿಕ್ಷಣ, ಸಾಂಸ್ಕøತಿಕ ಹಿಂದುಳಿಯುವಿಕೆ ವಿರುದ್ಧ ಹೋರಾಟ, ಮೂಲಸೌಕರ್ಯ, ಶೈಕ್ಷಣಿಕ ಮತ್ತು ಭೌಗೋಳಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾರು ಹೋರಾಡ್ತಿದ್ದಾರೆ ಅನ್ನೋದು ಈಗಿರುವ ಪ್ರಶ್ನೆ. `ಟೀಚ್ ಫಾರ್ ಇಂಡಿಯಾ' ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಉನ್ನತ ಶಿಕ್ಷಣ ಪಡೆದವರಿಗೆ ತರಬೇತಿ ನೀಡುತ್ತಿದೆ. ಹಿಂದುಳಿದ ಪ್ರದೇಶಗಳ ಶಾಲಾ ಮಕ್ಕಳಿಗೆ ನೆರವಾಗುತ್ತಿದೆ. ಭಾರತದಲ್ಲಿ ಶಿಕ್ಷಣ ಸಮಸ್ಯೆ ಹಾಗೂ ಶಿಕ್ಷಕರ ಸಮಸ್ಯೆಯ ಮೂಲವನ್ನು ಹುಡುಕಿದೆ. ಭಾರತದಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ. ಯುವ ಪದವೀಧರರು ಹಾಗೂ ಅರ್ಹ ಶಿಕ್ಷಕರ ನೇಮಕ ಸರ್ಕಾರಕ್ಕೆ ತಲೆನೋವಾಗಿದೆ. ಭಾರತಕ್ಕೆ 12 ಲಕ್ಷ ಶಿಕ್ಷಕರ ಅಗತ್ಯವಿದೆ, ಸರ್ಕಾರಿ ಶಾಲೆಗಳಲ್ಲಿ 5.3 ಲಕ್ಷ ಹುದ್ದೆಗಳು ಖಾಲಿ ಇವೆ. ಅಗತ್ಯ ಸೌಕರ್ಯಗಳನ್ನು ಒದಗಿಸುವ ಮೂಲಕ ಒಳ್ಳೆ ಶಿಕ್ಷಕರನ್ನು ಪಡೆದುಕೊಳ್ಳಬೇಕಿದೆ. ಈ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹೊಣೆಯನ್ನು ಟಿಎಫ್‍ಐ ಹೊತ್ತುಕೊಂಡಿದೆ.

ಜಮ್ಮು ಕಾಶ್ಮೀರದಲ್ಲಿ `ಹರ್ಬನ್ಸ್ ಭಲ್ಲಾ' ಸಂಸ್ಥೆ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡ್ತಾ ಇದೆ. ಹಿಂದುಳಿದ ಪ್ರದೇಶದ ಮುಸ್ಲಿಂ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಸುಮಾರು 300 ಮಕ್ಕಳು ಹರ್ಬನ್ಸ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರತ್ಯೇಕ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಹ ಸಂಸ್ಥೆ ಗಮನಹರಿಸುತ್ತಿದೆ. `ನಿಶ್ತಾ' ಸಂಘಟನೆ ಕೂಡ ಇಂಥದ್ದೇ ಸಾಮಾಜಿಕ ಕಳಕಳಿ ಮೆರೆಯುತ್ತಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ, ಶಿಕ್ಷಣ ಮತ್ತು ಪರಿಸರದ ಬಗ್ಗೆ ಗಮನಹರಿಸಿದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ವಿಶಿಷ್ಟ ವಿಧಾನದಲ್ಲಿ ಶಿಕ್ಷಣ ನೀಡುತ್ತಿದೆ. ಕಲಿಕೆಯನ್ನು ಸರಳ ಹಾಗೂ ಪರಿಣಾಮಕಾರಿಯಾಗಿ ಮಾಡಲು ಶಿಕ್ಷಣದ ಬಗೆಗಿನ ಮಾಹಿತಿ ಸ್ಥಳೀಯರಿಗೂ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಿಶ್ತಾ, ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ, ಅಂಗನವಾಡಿ, ಸಾಂಸ್ಕøತಿಕ ತರಬೇತಿ ಕೇಂದ್ರಗಳನ್ನು ತೆರೆದಿದೆ. ಆತ್ಮರಕ್ಷಣೆ ಬಗೆಗೂ ತರಬೇತಿ ನೀಡುತ್ತಿದೆ. `ಅಗಸ್ತ್ಯಾ ಇಂಟರ್‍ನ್ಯಾಶನಲ್ ಫೌಂಡೇಶನ್' ಕೂಡ ಬಡ ಮಕ್ಕಳಿಗಾಗಿ ವಿಜ್ಞಾನ ಕೇಂದ್ರ, ಮೊಬೈಲ್ ಪ್ರಯೋಗಾಲಯಗಳನ್ನು ತೆರೆದಿದೆ. ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ, ಯುವ ಸಲಹೆಗಾರರ ನೇಮಕ, ಕಲಾ ತರಗತಿಗಳನ್ನು ಹಮ್ಮಿಕೊಂಡಿದೆ. ಬರೀ ತಳಮಟ್ಟದ ಶಿಕ್ಷಣ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆಗೆ ನೆರವಾಗುತ್ತಿದೆ.

ಜೈಪುರ ಮೂಲದ `ಬೋಧ್' ಕೂಡ 1987ರಲ್ಲಿ ಸ್ಥಾಪನೆಯಾಗಿದೆ. ನಗರ ವಂಚಿತರಾಗಿ ಇದನ್ನೊಮದು ಸಮುದಾಯವನ್ನಾಗಿ ಪರಿವರ್ತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನೂ ಇದು ಒದಗಿಸುತ್ತಿದೆ. ಡಿಜಿಟಲ್ ಸಾಕ್ಷರತೆ ಗ್ರಾಮೀಣ ಭಾಗಗಳ ಗುರುತಾಗಬೇಕು. ಯಾಕಂದ್ರೆ ಮಿಲಿಯನ್‍ಗಟ್ಟಲೆ ಮಕ್ಕಳಿಗೆ ಇಂಟರ್ನೆಟ್ ಅಂದ್ರೆ ಏನು ಅನ್ನೋದೇ ತಿಳಿದಿಲ್ಲ. ಅದರ ಬಳಕೆ, ಮಹತ್ವ ಮತ್ತು ಪ್ರಯೋಜನಗಳ ಅರಿವಿಲ್ಲ. ಭಾರತದಲ್ಲಿ ಸುಮಾರು 300 ಮಿಲಿಯನ್ ನಗರವಾಸಿಗಳು ಮಾತ್ರ ಅಂತರ್ಜಾಲ ಬಳಸುತ್ತಿದ್ದಾರೆ. ಇ-ವಿದ್ಯಾಲೋಕ ಸಂಘ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಕಲಿಕಾ ಕೇಂದ್ರಗಳನ್ನು ತೆರೆದಿದೆ. ಇಂಟರ್ನೆಟ್ ಮೂಲಕ ಮಕ್ಕಳ ಕಲಿಕೆಗೆ ಬೇಕಾದ ಮಾಹಿತಿಗಳನ್ನು ಪೂರೈಸಲಾಗುತ್ತಿದೆ. ಪ್ರಮಾಣೀಕೃತ ಪಾಠ ಯೋಜನೆ, ಕೌಶಲ್ಯ ಕಲಿಕೆ ಮತ್ತು ಶಾಲೆಗಳಿಗೆ ಪುಸ್ತಕ ಪೂರೈಸಲು ಹಳ್ಳಿಗಳಲ್ಲಿ ಸ್ವಯಂ ಸೇವಕರ ತಂಡಕ್ಕೆ ತರಬೇತಿ ನೀಡುತ್ತಿದೆ.

ಸಾರಸಂಗ್ರಹಿ ಸಂಸ್ಥೆ `ಬೇರ್‍ಫೂಟ್ ಕಾಲೇಜ್' ಗ್ರಾಮೀಣ ಭಾಗದಲ್ಲಿ ಸಾಕ್ಷರತೆಗಾಗಿ ಏನೇನು ಅಭಿವೃದ್ಧಿಯಾಗಬೇಕು ಎಂಬ ಬಗ್ಗೆ ಬೆಳಕು ಚೆಲ್ಲುತ್ತಿದೆ. ಸಾಮಾಜಿಕ-ಸಾಂಸ್ಕøತಿಕ ವಿಚಾರಧಾರೆಗಳ ಮೂಲಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದೆ. 1975ರಿಂದ ಕಾರ್ಯಾಚರಣೆ ನಡೆಸ್ತಾ ಇರೋ ಈ ಸಂಸ್ಥೆ, 75,000 ಮಕ್ಕಳಿಗೆ ರಾತ್ರಿ ಶಾಲೆ ಸೌಲಭ್ಯವನ್ನು ಕಲ್ಪಿಸಿದೆ. ಗ್ರಾಮೀಣ ಸರ್ಕಾರಿ ಶಾಲೆಗಳಿಗಾಗಿ 14,000 ಶಿಕ್ಷಕರಿಗೆ ತರಬೇತಿ ನೀಡಿದೆ. ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳ ಕಲಿಕೆಗಾಗಿ ಬಾಲವಾಡಿಗಳನ್ನು ಕೂಡ ನಡೆಸುತ್ತಿದೆ.

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು `ಹಿಪ್ಪೋಕ್ಯಾಂಪಸ್' ಮಂಡ್ಯ, ದಾವಣಗೆರೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ 104 ಹಳ್ಳಿಗಳಲ್ಲಿ ಕಲಿಕಾ ಕೇಂದ್ರಗಳನ್ನು ಆರಂಭಿಸಿದೆ. 3-6 ವರ್ಷದ ಮಕ್ಕಳು ಮತ್ತು 1-7 ವರ್ಷದ ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡಲಾಗ್ತಿದೆ. ಸ್ಥಳೀಯ ಶಿಕ್ಷಕರನ್ನೇ ನೇಮಕ ಮಾಡಿಕೊಂಡು ಅವರಿಗೆ ಸೂಕ್ತ ತರಬೇತಿ ಕೊಡಲಾಗುತ್ತದೆ. ಮ್ಯಾಥ್‍ಸ್ಟಾರ್, ಇಂಗ್ಲಿಷ್‍ಸ್ಟಾರ್, ಲೈವ್ಲಿಹುಡ್‍ನಂತಹ ಕಾರ್ಯಕ್ರಮಗಳ ಮೂಲಕ ಸಾಕ್ಷರತೆಗಾಗಿ ಹಿಪ್ಪೋಕ್ಯಾಂಪಸ್' ಶ್ರಮಿಸುತ್ತಿದೆ.

ರಾಜಸ್ಥಾನದ ಪಾಲಿ ಜಿಲ್ಲೆಯ 500 ಶಾಲೆಗಳಲ್ಲಿ ಎಜುಕೇಟ್ ಗಲ್ರ್ಸ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ 4,500ಕ್ಕೂ ಹೆಚ್ಚು ಹಳ್ಳಿಗಳಿಗೆ ಅದನ್ನು ವಿಸ್ತರಿಸಲಾಗಿದೆ. ಹೆಣ್ಣು ಮಕ್ಕಳನ್ನು ಸಾಕ್ಷರರನ್ನಾಗಿ ಮಾಡುವುದು ಪ್ರಮುಖ ಗುರಿ. ಇದಕ್ಕಾಗಿ 3,500 ಶಿಕ್ಷಕರು, 4,500 ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ. ಈ ಭಾಗದಲ್ಲಿ ಶೇಕಡಾ 99ರಷ್ಟು ಹೆಣ್ಣುಮಕ್ಕಳು ಈಗಾಗ್ಲೇ ಸುಶಿಕ್ಷಿತರಾಗಿರೋದು ವಿಶೇಷ. ರಾಜಸ್ಥಾನದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಅನಕ್ಷರಸ್ಥರು. ಇದು ಭಾರತದ ಸಾಕ್ಷರತೆ ಪ್ರಮಾಣಕ್ಕೆ ತೊಡಕಾಗಿದೆ. ಸಾರ್ವಜನಿಕ, ಖಾಸಗಿ ಹಾಗೂ ಲಾಭ ರಹಿತ ಸಂಸ್ಥೆಗಳ ನಡುವಣ ಪ್ರಾಮಾಣಿಕ ಸಹಯೋಗದಿಂದ ಮಾತ್ರ ಭಾರತದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯ.

ಲೇಖಕರು: ಎಸ್​​. ಅಝೀಜ್​​

ಅನುವಾದಕರು: ಭಾರತಿ ಭಟ್​​

4+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags