ಆವೃತ್ತಿಗಳು
Kannada

ನೀರು ಶುದ್ಧಿಕರಣ ಹೊಸ ವಿಧಾನ, ಶಾಲಾ ವಿದ್ಯಾರ್ಥಿಯ ಕಮಾಲ್

ಟೀಮ್​ ವೈ.ಎಸ್​. ಕನ್ನಡ

YourStory Kannada
20th Dec 2015
Add to
Shares
0
Comments
Share This
Add to
Shares
0
Comments
Share


ಅಶುದ್ಧ ನೀರು ಶುದ್ಧೀಕರಣದಲ್ಲಿ ಲಲಿತಾರ ಹೊಸ ಹೆಜ್ಜೆ..

ಮೆಕ್ಕೆಜೋಳದ ತ್ಯಾಜ್ಯದಿಂದ ವಾಟರ್ ಪ್ಯೂರಿಫಾಯರ್ ನಿರ್ಮಾಣ..

ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ನೀರು ಶುದ್ದಿ ಮಾಡುವ ಮಾಡಲ್..

ಕ್ಯಾಲಿಫೋರ್ನಿಯಾದಲ್ಲಿ ಕಮ್ಯುನಿಟಿ ಪ್ರಶಸ್ತಿಯಿಂದ ಸನ್ಮಾನ..


ಇವತ್ತು ಶುದ್ಧ ನೀರು ಸಿಗುವುದೇ ಕಷ್ಟದ ಕೆಲಸವಾಗಿದೆ. ಎಲ್ಲಿ ನೋಡಿದ್ರಲ್ಲಿ ಅಶುದ್ಧ ನೀರು ಎಲ್ಲರಿಗೂ ಕುಡಿಯಲು ಸಿಗುತ್ತಿದೆ. ಶುದ್ಧ ನೀರು ಎನ್ನುವುದು ಈಗ ಕಡಿಮೆಯಾಗುತ್ತಿದೆ. ಹಲವು ರೀತಿಯಲ್ಲಿ ನೀರಿನ ಮಾಲಿನ್ಯ ಎಗ್ಗಿಲ್ಲದೆ ಸಾಗುತ್ತಿದೆ. ಮುಂದೊಂದು ದಿನ ಶುದ್ಧ ನೀರು ಎಂಬುವುದು ಕನಸಾಗುವುದೇನೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡ ಶುದ್ಧ ನೀರು ಪೂರೈಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಹಲವು ಸಂಘ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ, ಆದರೆ ಶುದ್ಧ ನೀರು ಎಂಬುವುದು ಸಖತ್ ದುಬಾರಿಯಾಗಿದೆ.

ಆದರೆ ಒಡಿಶಾದ 14 ವರ್ಷದ ಹುಡುಗಿ ಈ ನಿಟ್ಟಿನಲ್ಲಿ ಮಹತ್ವದ ಸಾಧನೆ ಮಾಡಿದ್ದಾಲೆ. ಲಲಿತಾ ಪ್ರಸಿದಾ ಅವರ ಇಂತಹ ಸಾಧನೆಗೆ ಅವರಿಗೆ ಕಮ್ಯುನಿಟಿ ಇಂಪ್ಯಾಕ್ಟ್ ಪ್ರಶಸ್ತಿ ಕೊಟ್ಟು, ಕ್ಯಾಲಿಫೋರ್ನಿಯಾದಲ್ಲಿ ಸನ್ಮಾನಿಸಲಾಗಿದೆ. ಇದು ಕೇವಲ ಲಲಿತಾ ಪಾಲಿಗೆ ಅದ್ಭುತ ಹಾಗೂ ಹೆಮ್ಮೆಯ ಕ್ಷಣವಲ್ಲ. ಸಂಪೂರ್ಣ ಭಾರತಕ್ಕೆ ಇದು ಗೌರವದ ವಿಷಯವಾಗಿದೆ. ದಿಲ್ಲಿ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಲಲಿತಾ, ಒಂದು ಅದ್ಭುತ ಸಾಧನೆ ಮಾಡಿದ್ದಾರೆ. ಇಂತಹ ಕೆಲಸದ ಬಗ್ಗೆ ಯಾರು ಯೋಚಿಸಿರಲಿಲ್ಲ ಅಂತಹ ಕೆಲಸವನ್ನು ಅವರು ಮಾಡಿದ್ದಾರೆ. ಹಾಗಾಗಿ ಅವರು ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸುತ್ತಾರೆ.

image


ಮೆಕ್ಕೆಜೋಳದ ತ್ಯಾಜ್ಯದಿಂದ ಬರುವ ನೀರನ್ನು ಶುದ್ಧಿಕರಿಸುವಂತಹ ಒಂದು ಹೊಸ ಪ್ರಯೋಗ ಮಾಡಿರುವ ಲಲಿತಾ, ನೀರು ಶುದ್ಧೀಕರಿಸುವ ಹೊಸ ಮಾಡಲ್ ತಯಾರಿಸಿದ್ದಾರೆ. ಇದು ನೀರನ್ನು ಶುದ್ಧಿಕರಿಸುವ ಅತ್ಯಂತ ಸರಳ ಮತ್ತು ಸುಲಭ ವಿಧಾನವಾಗಿದೆ. ಕಡಿಮೆ ಖರ್ಚಿನಲ್ಲಿ ನೀರು ಶುದ್ಧೀಕರಿಸುವ ಈ ವಿಧಾನ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಮೂರನೇ ದೇಶವೆಂಬ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ. ಮೆಕ್ಕೆಜೋಳದಲ್ಲಿ ಜೋಳ ಬಳಕೆಯ ನಂತರ. ಅದರೊಳಗಿನ ದಿಂಡನ್ನು ಎಸೆಯಲಾಗುತ್ತದೆ. ಎಷ್ಟೋ ಸಲ ಕಾಳು ಬಿಡಿಸಿಕೊಂಡು ಅಥವಾ ಜೋಳ ತಿಂದ ಮೇಲೆ ಜನರು ಕಂಡ ಕಂಡಲ್ಲಿ ಜೋಳದ ದಿಂಡನ್ನು ಎಸೆಯುತ್ತಾರೆ. ಅದರಿಂದಲೇ ನೀರು ಶುದ್ಧೀಕರಿಸುವ ಹೊಸ ವಿಧಾನವನ್ನು ಕಂಡುಹಿಡಿದ್ರು. ತಮ್ಮ ಮೆಂಟರ್ ಪಲ್ಲವಿ ಮಹಾಪಾತ್ರ ಜೊತೆಗೂಡಿ ಅವರ ಮಾರ್ಗದರ್ಶನದಲ್ಲಿ ವಾಟರ್ ಪ್ಯೂರಿಫಾಯರ್​ನ ಆವಿಷ್ಕಾರ ಮಾಡಿದ್ದಾರೆ. ಭಾಗಶಃ ನೀರನ್ನು ಶುದ್ಧೀಕರಿಸುವಲ್ಲಿ ಇವರ ಈ ಆವಿಷ್ಕಾರ ಸಫಲವಾಗಿದೆ.

image


ತನ್ನ ಕೆಲಸದಿಂದಾಗಿ ಲಲಿತಾರ ತಂದೆ ಹಲವು ರಾಜ್ಯಗಳಿಗೆ ವರ್ಗಾವಣೆ ಆಗುತ್ತಿದ್ರು. ಹಾಗಾಗಿ ಅವರಿಗೆ ಹಲವು ರಾಜ್ಯಗಳನ್ನು ನೋಡುವ ಸೌಭಾಗ್ಯ ಒದಗಿ ಬಂತು. ಅಲ್ಲಿನ ಸಂಸ್ಕೃತಿಯನ್ನು ಅರಿಯುವ ಅವಕಾಶ ಸಿಕ್ತು. ಅವರು ಎಲ್ಲಾ ಕಡೆ ಸಾಮಾನ್ಯವಾಗಿ ನೋಡಿದ್ದೆಂದರೆ ಶುದ್ದ ಕುಡಿಯುವ ನೀರಿನ ಅಭಾವ. ಹಾಗಾಗಿ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಈ ಕ್ಷೇತ್ರದಲ್ಲಿ ಏನಾದ್ರು ಒಂದು ಸಾಧನೆ ಮಾಡಬೇಕೆಂದು ನೀರು ಶುದ್ಧೀಕರಿಸಲು ಮುಂದಾದ್ರು. ಈ ಮಾಡಲ್​ನಲ್ಲಿ ನೀರು ಶುದ್ಧೀಕರಿಸುವ ಐದು ಪದರಗಳಿವೆ. ಪ್ರತಿ ಪದರವೂ ಹಂತ-ಹಂತವಾಗಿ ನೀರು ಶುದ್ಧೀಕರಿಸುತ್ತದೆ. ಇದರಲ್ಲಿ ನಾಲ್ಕು ಜೋಳದ ದಿಂಡನ್ನು ಬಳಸಲಾಗಿದೆ. ಇಲ್ಲಿ ಪ್ರತಿ ಹಂತದಲ್ಲೂ ಜೋಳದ ದಿಂಡನ್ನು ಇಡಲಾಗಿದೆ. ಪ್ರತಿ ಹಂತದಲ್ಲೂ ಸಣ್ಣ-ಸಣ್ಣ ಜೋಳದ ದಿಂಡನ್ನು ಕತ್ತರಿಸಿ ಇಡಲಾಗಿದೆ. ನಾಲ್ಕನೇ ಪದರದಲ್ಲಿ ಸ್ವಲ್ಪ ಒಣಗಿರುವ ಮೆಕ್ಕೆಜೋಳದ ದಿಂಡನ್ನು ಇಡಲಾಗಿದೆ. ಐದನೇ ಪದರದಲ್ಲಿ ಮರಳು ಹಾಕಿದ್ದು. ಇದರಿಂದ 99 ಪ್ರತಿಶತ ನೀರು ಶುದ್ಧವಾಗುತ್ತದೆಂದು ಪ್ರಯೋಗದಿಂದ ಸಾಭೀತಾಗಿದೆ, ನೀರಿನಲ್ಲಿರುವ ಎಲ್ಲಾ ರೀತಿಯ ಮಾಲಿನ್ಯವನ್ನು ಸ್ವಚ್ಛಗೊಳಿಸುವಲ್ಲಿ ಇದು ಯಶಸ್ವಿಯಾಗಿದೆ.

ಮೊದಲ ಸಲ ಲಲಿತಾ ಕ್ಯಾಲಿಫೋರ್ನಿಯಾ ಪ್ರಯಾಣ ಬೆಳೆಸಿದ್ರು. ಅವರ ಪರಿವಾರ ಮತ್ತು ಅವರ ಮೆಂಟರ್ ಜೊತೆ ಅವರು ವಿದೇಶ ಪ್ರಯಾಣ ಬೆಳೆಸಿದ್ರು. ಲಲಿತಾ ತಮ್ಮ ಈ ಭೇಟಿಯಿಂದ ಸಖತ್ ಖುಷಿಯಾಗಿದ್ದಾರೆ. 19 ತೀರ್ಪುಗಾರರ ಮುಂದೆ ತಮ್ಮ ಅನ್ವೇಷಣೆಯ ಬಗ್ಗೆ ವಿವರಿಸಿದ್ರು. ಅದರಲ್ಲಿ 20 ಪ್ರಾಜೆಕ್ಟ್ ಅಂತಿಮಗೊಳಿಸಲಾಯ್ತು. ಈ ಅಂತಿಮ 20 ಜನರಲ್ಲಿ, ಭಾರತದಿಂದ ಆಯ್ಕೆಯಾದ ಏಕೈಕ ಭಾರತೀಯ ಹೆಮ್ಮೆ ಲಲಿತಾಗೆ ಸಲ್ಲುತ್ತದೆ. 8 ಜನರಿಗೆ ಹಲವು ವಿಭಾಗದಲ್ಲಿ ಪ್ರಶಸ್ತಿ ನೀಡಿದ ತೀರ್ಪುಗಾರರು ಲಲಿತಾಗೆ ಕಮ್ಯುನಿಟಿ ಇಂಪ್ಯಾಕ್ಟ್ ಪ್ರಶಸ್ತಿ ನೀಡಿದ್ರು. ‘ ಇದು ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ವಿಷಯ ಇದು ನನಗೆ ಮಾತ್ರವಲ್ಲ ಇಡೀ ಭಾರತಕ್ಕೆ ಸಂದ ಗೌರವ. ಈ ಒಂದು ಸಂತಸದ ಸಮಯ ನಾನೆಂದು ಮರೆಯಲು ಸಾಧ್ಯವಿಲ್ಲ. ಇದೊಂದು ಹೆಮ್ಮೆಯ ಸಂಗತಿಯೆಂದು ಲಲಿತಾ ಖುಷಿಯಿಂದ ಆತ್ಮವಿಶ್ವಾಸದಿಂದ ಹೇಳುತ್ತಾರೆ.

image


ಲಲಿತಾ ಇನ್ನೂ ಅನ್ವೇಷಣೆ ಮಾಡಬೇಕೆಂದು ಇದ್ದಾರೆ. ನೆಲಮಟ್ಟದಲ್ಲಿ ಕೆಲಸ ಮಾಡಬೇಕು, ಬಡ ಜನರಿಗೆ ಶುದ್ಧ ನೀರನ್ನು ಪೂರೈಸಬೇಕೆಂಬುದು ಅವರ ಆಶಯವಾಗಿದೆ.


ಲೇಖಕರು: ಅಶುತೋಷ್ ಖಾಂತ್ವಾಲ್​​

ಅನುವಾದಕರು: ಎನ್.ಎಸ್.ರವಿ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags