ಆವೃತ್ತಿಗಳು
Kannada

ಉದ್ಯಮದಲ್ಲೂ ಈಜು ಬಲು ಸಲೀಸು- ‘ಇದು ವಂಡರ್’ ಬಾಕ್ಸ್.. !

ಟೀಮ್​​ ವೈ.ಎಸ್​​.

9th Oct 2015
Add to
Shares
1
Comments
Share This
Add to
Shares
1
Comments
Share

ಅದು 80ರ ದಶಕಕ್ಕೂ ಹಿಂದಿನ ಮಾತು. ಭಾರತದಲ್ಲಿ ಕ್ರೀಡೆ ಮತ್ತು ಶಿಕ್ಷಣ ಎರಡು ತದ್ವಿರುದ್ಧ ಧ್ರುವಗಳಲ್ಲಿದ್ದವು. ಕ್ರೀಡೆಯತ್ತ ಹೊರಳಿದ್ರೆ, ಶಿಕ್ಷಣ ಕೈಕೊಟ್ಟಂತೆಯೇ ಲೆಕ್ಕ. ಯಾರು ಕ್ರೀಡೆಯಲ್ಲಿ ಮುಂದೆ ಬರುತ್ತಾರೋ ಅವರು ಶಿಕ್ಷಣದಲ್ಲಿ ಹಿಂದೆ ಬೀಳುತ್ತಾರೆ ಅಂತ ನಂಬುತ್ತಿದ್ದ ಕಾಲವದು.

ಆದರೆ, ಇದರಲ್ಲೂ ಕೆಲವು ಭಿನ್ನ ಉದಾಹರಣೆಗಳಿದ್ದವು. ಪರಿತಾ ಪರೇಖ್ ಈ ಸಾಲಿಗೆ ಸೇರುತ್ತಾರೆ. ಪರಿತಾ, ಸ್ವಿಮ್ಮಿಂಗ್ ಮತ್ತು ಪಾಠ ಎರಡರಲ್ಲೂ ಅತ್ಯುತ್ತಮ ದಾಖಲೆಗಳನ್ನು ನಿರ್ಮಿಸಿದ್ದರು.

image


ಈ ವರ್ಷಾರಂಭದಲ್ಲಿ ಪರಿತಾ ಪರೇಖ್ ವಂಡರ್​​ಬಾಕ್ಸ್​​ ಎನ್ನುವ ಉದ್ಯಮ ಸ್ಥಾಪಿಸಿದರು. ಇದು ವಯಸ್ಸು ಆಧರಿತ ಕಲಿಕೆ ಟೂಲ್​​ ಕಿಟ್​​ಗಳ ಮೂಲಕ ಮಕ್ಕಳ ಯೋಚನಾ ಶಕ್ತಿಯನ್ನು ಬದಲಾಯಿಸುವ ಉದ್ಯಮವಾಗಿದೆ. “ಮಕ್ಕಳು ಎಷ್ಟು ಆಟ ಆಡುತ್ತಾರೋ ಅವರಲ್ಲಿ ಅಷ್ಟೇ ಪ್ರಮಾಣದಲ್ಲಿ ಹೊಸತನ ಮತ್ತು ಕ್ರಿಯೇಟಿವಿಟಿ ಹೆಚ್ಚಾಗುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಢೀಕರಿಸಲ್ಪಟ್ಟಿದೆ. ಈಗಿನ ಮಕ್ಕಳಿಗೆ ತಂತ್ರಜಾನದ ಉಪಯೋಗ ಹೆಚ್ಚು ಕರಗತವಾಗಿದೆ. ನಮ್ಮ ಕಾಲದಲ್ಲಿದ್ದಂತೆ ಮಕ್ಕಳಿಗೆ ಇದರಿಂದ ಹೊಸತನ ಕಂಡುಕೊಳ್ಳುವುದಾಗಲೀ, ಖುಷಿಯಾಗಲೀ ಸಿಗುತ್ತಿಲ್ಲ. ವಂಡರ್​​ಬಾಕ್ಸ್​​ ಇದನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ, ಎನ್ನುತ್ತಾರೆ ಪರಿತಾ ಪರೇಖ್.

ಯುವರ್​​ ಸ್ಟೋರಿಯು, ಪರಿತಾ ಅವರನ್ನು ಅವರ ಈಜು ಸ್ಪರ್ಧೆಗಳು, ಶಿಕ್ಷಣ ಮತ್ತು ಮಕ್ಕಳಿಗೆ ಅವರು ಹಂಚುತ್ತಿರುವ ಖುಷಿ, ಅವರ ಉದ್ಯಮ ಹೀಗೆ ನಾನಾ ವಿಚಾರಗಳ ಕುರಿತು ಮಾತನಾಡಿತು.

ಈಜು ಚಾಂಪಿಯನ್

ತಮ್ಮ ಮೂರನೇ ವಯಸ್ಸಿನಲ್ಲಿಯೇ ಪರಿತಾ ಈಜುಕೊಳಕ್ಕೆ ಧುಮುಕಿದ್ದರು. “ಈಜುಕೊಳವು ಅಕ್ಷರಶ: ನನ್ನ ಎರಡನೇ ಮನೆಯಾಗಿತ್ತು, ಎನ್ನುತ್ತಾರೆ ಪರಿತಾ. 11 ವರ್ಷದವಳಿದ್ದಾಗಲೇ ಅವರು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲಲು ಆರಂಭಿಸಿದ್ದರು. 4ನೇ ಫಿನಾ ವಿಶ್ವ ಚಾಂಪಿಯನ್​ಶಿಪ್, ಆಫ್ರೋ-ಏಷ್ಯನ್ ಗೇಮ್ಸ್ ಮತ್ತು ಎರಡು ದಕ್ಷಿಣ ಏಷ್ಯಾ ಗೇಮ್ಸ್​​ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

image


ನಾನು ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಈಜುಗಾತಿ ಎಂಬ ದಾಖಲೆ ಹೊಂದಿದ್ದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದೆ ಎಂದು ವಿವರಿಸುತ್ತಾರೆ ಪರಿತಾ. 5 ಅಂತಾರಾಷ್ಟ್ರೀಯ ಪದಕಗಳು, 10ಕ್ಕೂ ಹೆಚ್ಚು ರಾಷ್ಟ್ರೀಯ, ರಾಜ್ಯ ಪದಕಗಳು, 50ಕ್ಕೂ ಹೆಚ್ಚು ರಾಷ್ಟ್ರೀಯ, ರಾಜ್ಯಮಟ್ಟದ ದಾಖಲೆಗಳನ್ನು ಹೊಂದಿರುವ ಪರಿತಾರ ದಾಖಲೆ ನಿಜಕ್ಕೂ ಗಮನಾರ್ಹ.

ಆರು ವರ್ಷಗಳ ಹಿಂದೆ ಕಾಲಿನ ಗಾಯದಿಂದಾಗಿ, ಅವರು ಈಜುವುದನ್ನು ನಿಲ್ಲಿಸಬೇಕಾಯಿತು. ಆದರೆ, ಈಗಲೂ ಅವರ ಹಲವು ದಾಖಲೆಗಳು ಅಬಾಧಿತವಾಗಿವೆ ಎನ್ನುವುದನ್ನು ಹಂಚಿಕೊಳ್ಳಲು ತುಂಬಾ ಖುಷಿ ಪಡುತ್ತಾರೆ.

ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಕುಟುಂಬ

ಪರಿತಾರ ಕುಟುಂಬವು ಅಹ್ಮದಾಬಾದ್​​ನಲ್ಲಿ ಅಂತಾರಾಷ್ಟ್ರೀಯ ಶಾಲೆಯನ್ನು ನಡೆಸುತ್ತಿದೆ. ಅಲ್ಲೇ ಪರಿತಾ ಶಿಕ್ಷಣ ಪಡೆದಿದ್ದು.

ಅತ್ಯುತ್ತಮ ಈಜುಗಾರ್ತಿಯಾಗಿದ್ದ ಪರಿತಾ ಶಿಕ್ಷಣದಲ್ಲೂ ಮುಂಚೂಣಿಯಲ್ಲಿದ್ದರು. ಅಮೆರಿಕಾದ ಬ್ರೌನ್ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದರು. ಆಂಥ್ರಪಾಲಜಿ, ರಾಜ್ಯಶಾಸ್ತ್ರ, ಇತಿಹಾಸ ಮತ್ತು ಧಾರ್ಮಿಕ ಅಧ್ಯಯನದಲ್ಲಿ ಸಾಕಷ್ಟು ಸಂಶೋಧನೆಯನ್ನೂ ಮಾಡಿದ್ದರು.

ಪ್ರಧಾನಿಯವರ ಚುನಾವಣಾ ಪ್ರಚಾರದಲ್ಲಿ…

ಅಧ್ಯಯನಶೀಲರಾಗಿರುವ ಪರಿತಾರ ರಾಜಕೀಯ ಆಸಕ್ತಿಯಿಂದಾಗಿ, ಅವರು ಸಿಟಿಜನ್ಸ್ ಫಾರ್ ಅಕೌಂಟೇಬಲ್ ಗವರ್ನೆನ್ಸ್​​ನ ಸ್ಥಾಪಕ ಸದಸ್ಯರಾದರು. ಅಷ್ಟೇ ಅಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು. ಪ್ರಚಾರದ ಭಾಗವಾಗಿ, ಅವರು ದೇಶದ ಕುಗ್ರಾಮಗಳಿಗೂ ಭೇಟಿ ನೀಡಿದ್ದರು. ಉತ್ತರಪ್ರದೇಶ, ಬಿಹಾರ, ಒಡಿಶಾ ಮೊದಲಾದ ಕಡೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗೂ ಭೇಟಿ ನೀಡಿ, ಭಾರತದ ಯೋಚನೆಯನ್ನು ಮೋದಿಯವರಿಗೆ ತಲುಪಿಸಿದ್ದರು.

ಚುನಾವಣಾ ಪ್ರಚಾರದ ಬಳಿಕ, ಅಹ್ಮದಾಬಾದ್ ಇಂಟರ್​ನ್ಯಾಷನಲ್ ಸ್ಕೂಲ್​​ನಲ್ಲಿ ನ್ಯೂ ಇನಿಷಿಯೇಟಿವ್​​ಗಳ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಕಲಿಕೆ, ತಂತ್ರಜಾನದ ಮೂಲಕ ಕಲಿಕೆ, ಕಥೆ ಹೇಳುವುದು, ಥಿಯೇಟರ್​​ಗಳ ಮೂಲಕ ಕಲಿಕೆ, ಸಿದ್ಧಾಂತ ಕಲಿಕಾ ಕ್ಲಬ್ ಹೀಗೆ ನಾನಾ ಪ್ರಯೋಗಗಳ ಮೂಲಕ ಹೊಸತನಗಳನ್ನು ಜಾರಿಗೆ ತರುತ್ತಿದ್ದಾರೆ. ಈ ಅನುಭವವೇ ವಂಡರ್​​ಬಾಕ್ಸ್ ಸ್ಥಾಪನೆಗೆ ಮೂಲ ಪ್ರೇರಣೆ ಎನ್ನುತ್ತಾರೆ ಪರಿತಾ.

ಉದ್ಯಮಶೀಲತೆ

ಮಕ್ಕಳೆಡೆಗಿನ ಪ್ರೀತಿ, ಶಿಸ್ತು ಮತ್ತು ಕ್ರೀಡಾಪಟುವಾಗಿ ಬೆಳೆಸಿಕೊಂಡ ಸಾಹಸಶೀಲನತೆ, ಕುಟುಂಬದಲ್ಲೇ ಇರುವ ಆದರ್ಶಪ್ರಾಯರು, ಶಿಕ್ಷಣ ತಜ್ಱರು, ಉದ್ಯಮಿಗಳು ಎಲ್ಲದರ ಪ್ರಭಾವದಿಂದಾಗಿ ಅವರು ಉದ್ಯಮಕ್ಕೆ ಕಾಲಿಡಲು ಪ್ರೇರಣೆಯಾಯಿತು.

ನಾನು ಚಿಕ್ಕವಳಿದ್ದಾಗ, ತುಂಬಾ ಕುತೂಹಲ ಹೊಂದಿದ್ದೆ, ಚಟುವಟಿಕೆಯಿಂದಿದ್ದೆ, ಕುತೂಹಲವನ್ನು ತಣಿಸಿಕೊಳ್ಳುವ ನನ್ನ ಉತ್ಸಾಹವೇ, ನನ್ನ ಜೀವನದ ಎಲ್ಲಾ ಮಜಲುಗಳಲ್ಲಿ ಸಹಕಾರ ನೀಡಿತು. ಎಲ್ಲಾ ಮಕ್ಕಳು ಆಂತರಿಕವಾಗಿಯೇ, ಕುತೂಹಲ ಹೊಂದಿರುತ್ತಾರೆ ಎನ್ನುವುದು ನನ್ನ ಭಾವನೆ. ಆ ಕುತೂಹಲವನ್ನು ಕೆರಳಿಸುವಂತಹ ಯಾವುದಾದರೂ ಉತ್ಪನ್ನವನ್ನು ಸೃಷ್ಟಿಸಬೇಕು ಅಂತ ಯೋಚನೆ ಮಾಡುತ್ತಿದ್ದೆ, ಅದರ ಪರಿಣಾಮವೇ ವಂಡರ್​​ಬಾಕ್ಸ್​​.

ವಂಡರ್​​ಬಾಕ್ಸ್

ವಂಡರ್​​ಬಾಕ್ಸ್ ಚಂದಾ ಮಾದರಿಯಲ್ಲಿದೆ. 3ತಿಂಗಳಿನಿಂದ 12 ತಿಂಗಳುಗಳ ವರೆಗೆ ಚಂದಾದಾರರಾಗಬಹುದು. ಪ್ರತಿ ತಿಂಗಳು ಹೊಸ ಬಾಕ್ಸ್ಅನ್ನು ಕಳುಹಿಸಿಕೊಡಲಾಗುತ್ತದೆ. ಸಿಂಗಲ್ ಬಾಕ್ಸ್ ಆಯ್ಕೆಯು ಆನ್​​ನಲ್ಲಿ ಲಭ್ಯವಿದೆ.

ವಂಡರ್​​ಬಾಕ್ಸ್ ತಂಡದಲ್ಲಿ 15 ಜನರಿದ್ದಾರೆ. ಪರಿತಾ ಅವರು ವಂಡರ್​​ಬಾಕ್ಸ್ ಹಿಂದಿನ ಕ್ರಿಯೇಟಿವ್ ಶಕ್ತಿ. ಅವರು ಉತ್ಪನ್ನ ತಯಾರಿಕೆ ಮತ್ತು ಇನ್ನೋವೇಷನ್​​ನ ಮುಖ್ಯಸ್ಥರಾಗಿದ್ದಾರೆ.

ನಾನು ಮಕ್ಕಳ ಜೊತೆ ಅತ್ಯಂತ ನಿಕಟವಾಗಿ ಕೆಲಸ ಮಾಡಿದ್ದೇನೆ. ಮಕ್ಕಳಿಗೆ ಯಾವ ರೀತಿಯ ಸಾಧನಗಳು ಖುಷಿ ಕೊಡುತ್ತವೆ ಮತ್ತು ಅವರ ಕಲಿಕೆಗೆ ಉಪಯುಕ್ತವಾಗಿವೆ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೆ. ನಿಜವಾದ ಸವಾಲು ಎದುರಾಗಿದ್ದು, ಪ್ರತಿ ತಿಂಗಳೂ ಹೊಸ ಹೊಸ ಐಡಿಯಾಗಳೊಂದಿಗೆ ಬಾಕ್ಸ್ ತಯಾರಿಸುವುದರಲ್ಲಿ. ನಾನು ಮೂರು ಪಠ್ಯಕ್ರಮ ಸಿದ್ಧಪಡಿಸುವವರ ನೇತೃತ್ವವಹಿಸಿದ್ದೇನೆ, ಇಬ್ಬರು ಉತ್ಪನ್ನ ತಯಾರಕರಿದ್ದಾರೆ, ಮೂವರು ಗ್ರಾಫಿಕ್ಸ್ ಡಿಸೈನರ್​​ಗಳಿದ್ದಾರೆ. ಇವರೆಲ್ಲರ ಶ್ರಮದಿಂದಾಗಿ ಪುಟಾಣಿಗಳು ಪ್ರತಿ ತಿಂಗಳೂ ಹೊಸ ಹೊಸ ಖುಷಿ ಅನುಭವಿಸುತ್ತಿದ್ದಾರೆ. ಕ್ರಿಯೇಟಿವಿಟಿ ಮತ್ತು ಅನ್ವೇಷಣೆಗಳಿಗೆ ಹೊಸ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಸವಾಲುಗಳು

ಒಳ್ಳೆಯ ಉದ್ಯೋಗ ಬಿಟ್ಟು, ಯೋಜನೆ ರೂಪಿಸಿವುದು, ತಂಡವನ್ನು ಕಟ್ಟುವುದು, ಚಿಂತನೆಯನ್ನು ಹಂಚಿಕೊಳ್ಳುವುದು ದೊಡ್ಡ ಸವಾಲು. ಅತ್ಯುತ್ತಮ ಪ್ರತಿಭೆಗಳನ್ನು ಹುಡುಕುವುದು, ಶೀಘ್ರವಾಗಿ ಬೆಳೆಯುವುದು, ಒಳ್ಳೆಯ ಘಟಕಗಳನ್ನು ನಿರ್ವಹಿಸುವುದು ಮೊದಲಾದವುಗಳು ಉಳಿದ ಸವಾಲುಗಳಾಗಿದ್ದವು. ಆದರೆ ಆ ಎಲ್ಲಾ ಸವಾಲುಗಳು ನಿಜಕ್ಕೂ ನಮಗೆ ಸಹಕಾರಿಯಾಗಿದ್ದವು. ಮಕ್ಕಳು ನಮ್ಮ ಉತ್ಪನ್ನಗಳನ್ನು ಕಂಡಾಗ ಹಿಗ್ಗುವ ರೀತಿ, ಅವರು ಅದರ ಜೊತೆಗೆ ಆಟವಾಡುವಾಗಿನ ಖುಷಿ, ಅದರಿಂದಾಗಿ ಅವರ ಚಿಂತನೆ ಬದಲಾಗುತ್ತಿರುವ ರೀತಿಯನ್ನು ಕಂಡಾಗಲೆಲ್ಲಾ ನಾವು ಈ ಸವಾಲು ಸ್ವೀಕರಿಸಿದ್ದು ಸಾರ್ಥಕ ಎನ್ನಿಸುತ್ತಿದೆ. ವಂಡರ್​​ಬಾಕ್ಸ್​​ನಲ್ಲಿ ನಂಬಿಕೆ ಇಟ್ಟಿರುವ ಒಂದೇ ಚಿಂತನೆಯುಳ್ಳ ಮನಸ್ಸುಗಳನ್ನು ಜೊತೆಗಾರರಾಗಿ ಪಡೆಯಲೂ ನಾವು ಅದೃಷ್ಟ ಮಾಡಿದ್ದೇವೆ. ನಮ್ಮ ಚಿಂತನೆಯನ್ನು ಜನರೂ ಹಂಚಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಪರಿತಾ.

ಗ್ರಾಹಕರು

ಅರ್ಥಗರ್ಭಿತ ಸಮಸ್ಯೆಗಳನ್ನು ಪರಿಹರಿಸಿ ಮತ್ತು ಖುದ್ದು ನಾವೇ ಖರೀದಿಸುವಷ್ಟು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಎನ್ನುವುದು ಸಂಸ್ಥೆಯ ವ್ಯವಹಾರ ಮಂತ್ರ ಎನ್ನುತ್ತಾರೆ ಪರಿತಾ.

ಇದನ್ನೆಲ್ಲಾ ಮಾಡಬೇಕಾದರೆ, ನಾವು ಮಕ್ಕಳಂತೆ ಚಿಂತನೆ ಮಾಡುವುದನ್ನು ಕಲಿಯಬೇಕು. ಹೀಗಾಗಿ, ನಾವು ರಿಪೀಟ್ ಗ್ರಾಹಕರನ್ನು ಪಡೆಯುತ್ತೇವೆ ಎನ್ನುತ್ತಾರೆ ಪರಿತಾ.

ಹೊಸತನವೇ ನಮ್ಮ ಯಶಸ್ಸಿನ ಮೂಲಸೂತ್ರ. ನಾವು ಒಂದು ಬಾಕ್ಸ್ಅನ್ನು ಮತ್ತೆ ಬಳಕೆ ಮಾಡುವುದಿಲ್ಲ. ನಮ್ಮ ಬಾಕ್ಸ್​​ಗಳ ಪ್ರತಿ ಘಟಕಗಳನ್ನೂ ಮಕ್ಕಳ ಆಕಾಂಕ್ಷೆ, ಆಸಕ್ತಿಯನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿರುತ್ತದೆ.

ಭವಿಷ್ಯ ಕರೆಯುತ್ತಿದೆ !

ಕುಟುಂಬ ಸದಸ್ಯರ ಬೆಂಬಲ ಮತ್ತು ತಂಡದ ಸದಸ್ಯರ ಉತ್ಸಾಹದಿಂದಾಗಿ ಪ್ರತಿ ತಿಂಗಳೂ ಹೊಸ ಬಾಕ್ಸ್ ತಯಾರಿಸುತ್ತೇವೆ. ಈ ಬಾಕ್ಸ್​​ಗಳನ್ನು ತೆರೆಯುವಾಗ ಗ್ರಾಹಕರು ಪಡುವ ಅಚ್ಚರಿ, ಖುಷಿ, ಮಕ್ಕಳ ಆಸಕ್ತಿ ಇವೇ ನಮ್ಮ ಭವಿಷ್ಯಕ್ಕೆ ಪ್ರೇರಕವಾಗಿವೆ ಎನ್ನುತ್ತಾರೆ ಪರಿತಾ.

ಭವಿಷ್ಯದ ಕುರಿತು ಮಾತನಾಡುವ ಪರಿತಾ, ವಂಡರ್ ಬಾಕ್ಸ್ ಅನ್ನು ಈ ಕ್ಷೇತ್ರದ ಮಾರುಕಟ್ಟೆಯಲ್ಲಿ ನಂಬರ್ 1 ಮಾಡುವುದೇ ಗುರಿ ಎನ್ನುತ್ತಾರೆ. ನಾವು ಈಗಾಗಲೇ ಹೂಡಿಕೆದಾರರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಒಂದು ಸುತ್ತಿನ ಹೂಡಿಕೆ ಅಂತಿಮವಾಗಿದೆ. ನಮ್ಮ ಉತ್ಪನ್ನಗಳನ್ನು ವಿದೇಶಗಳಿಗೂ ಪಸರಿಸಲು ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ಪರಿತಾ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags