ಆವೃತ್ತಿಗಳು
Kannada

ಬ್ರೇಕ್‍ನ ನಂತರ ಮತ್ತೆ ಕೆಲಸಕ್ಕೆ - ಮಹಿಳೆಯರಿಗೆ ನೆರವಾಗುತ್ತಿರುವ 4 ಸಂಸ್ಥೆಗಳು

ಟೀಮ್​ ವೈ.ಎಸ್​. ಕನ್ನಡ

6th Mar 2016
Add to
Shares
7
Comments
Share This
Add to
Shares
7
Comments
Share

ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ತಾರತಮ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮಹಿಳೆಯರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಂಶೋಧನೆಯ ಪ್ರಕಾರ ಭಾರತದಲ್ಲಿ ಶೇ.45.9ರಷ್ಟು ಪದವೀಧರರು, ಶೇ.40.5ರಷ್ಟು ಪಿಎಚ್‍ಡಿ ಪದವೀಧರರೆಲ್ಲ ವಿದ್ಯಾರ್ಥಿನಿಯರು ಅನ್ನೋದು ವಿಶೇಷ. ಇನ್ನೊಂದೆಡೆ ಕೂಲಿ ಕೆಲಸಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೂಡ ಕಡಿಮೆಯಾಗಿದೆ. ಈ ಸಂಖ್ಯೆ 2004-05ರಲ್ಲಿ ಶೇ.37ರಷ್ಟಿದ್ರೆ, 2009-10ರಲ್ಲಿ ಶೇ.29ರಷ್ಟಾಗಿದೆ. 1972-73ರಲ್ಲಿ ಶೇ.13.4ರಷ್ಟಿದ್ದ ನಗರ ಕಾರ್ಮಿಕರ ಸಂಖ್ಯೆ, 2011-12ರ ವೇಳೆಗೆ ಶೇ.14.7ಕ್ಕೆ ತಲುಪಿದೆ. 2025ರ ವೇಳೆಗೆ ಭಾರತ, ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯನ್ನು ಶೇ.10ರಷ್ಟು ಹೆಚ್ಚಿಸಲು ಸಫಲವಾದಲ್ಲಿ ನಮ್ಮ ದೇಶದ ಜಿಡಿಪಿ ಶೇ.16ರಷ್ಟು ಹೆಚ್ಚಳವಾಗುವುದರಲ್ಲಿ ಅನುಮಾನವೇ ಇಲ್ಲ.

ಅನೇಕ ಸಂಸ್ಥೆಗಳು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಮರು ಸೇರ್ಪಡೆಗೂ ಚಾನ್ಸ್ ಕೊಡುತ್ತಿವೆ. ಮಾಲೀಕರು ಸಹ ವೈವಿದ್ಯತೆಯ ಪ್ರಾಮುಖೀಯತೆಯನ್ನು ಗುರುತಿಸಿದ್ದಾರೆ ಜೊತೆಗೆ ನೇಮಕಾತಿ ಸಂದರ್ಭದಲ್ಲಿ ಒಂದು ಬ್ರೇಕ್ ಬಳಿಕ ಮತ್ತೆ ವೃತ್ತಿ ಬದುಕು ಆರಂಭಿಸಲು ಇಚ್ಛಿಸುವ ಮಹಿಳೆಯರಿಗೆ ಆದ್ಯತೆ ನೀಡುತ್ತಿದ್ದಾರೆ. ಮಗುವಿನ ಆಗಮನವಿರಬಹುದು, ಅಥವಾ ಕುಟುಂಬದ ಹಿರಿಜೀವಗಳ ಆರೈಕೆ ಇರಬಹುದು ಮಹಿಳೆಯರಿಗೆ ವೃತ್ತಿಯಿಂದ ವಿರಾಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಅಂತಹ ಮಹಿಳೆಯರಿಗೆ ಕಾರ್ಪೊರೇಟ್ ಜಗತ್ತಿಗೆ ಮರು ಪ್ರವೇಶ ಮಾಡಲು ಕಂಪನಿಗಳು ಮಾರ್ಗದರ್ಶನ ಸಿದ್ಧಪಡಿಸಿವೆ.

image


ಜಾಬ್ಸ್ ಫಾರ್ ಹರ್...

ಭಾರತೀಯ ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಪ್ರತಿಭೆಗಳನ್ನು ಬಳಸಿಕೊಳ್ಳಬೇಕು ಅನ್ನೋ ಕಾರಣಕ್ಕೆ ನೇಹಾ ಬಗಾರಿಯಾ ಅವರ ಬೆಂಗಳೂರು ಮೂಲದ ಜಾಬ್ಸ್ ಫಾರ್ ಹರ್ ಸಂಸ್ಥೆ ಜನ್ಮ ತಳೆದಿದೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಾರ್ಚ್7 ರಿಂದ 11ರವರೆಗೆ ಜಾಬ್ಸ್ ಫಾರ್ ಹರ್, ಮೆಗಾ ಡೈವರ್ಸಿಟಿ ಡ್ರೈವ್ ಅನ್ನು ಆಯೋಜಿಸಿದೆ. ಭಾರತದ ಪ್ರಮುಖ ಕಂಪನಿಗಳಾದ ಸಪಿಯೆಂಟ್, ಟಾರ್ಗೆಟ್, ಮೇಕ್ ಮೈ ಟ್ರಿಪ್, ರಿಲಯೆನ್ಸ್, ಮೈಂಡ್ ಟ್ರೀ ಹಾಗೂ ಮಂತ್ರಿ ಡೆವಲಪರ್ಸ್ ಈ ಡ್ರೈವ್‍ನಲ್ಲಿ ಪಾಲ್ಗೊಳ್ಳುತ್ತಿವೆ. ಈ ಡ್ರೈವ್ ಮೂಲಕ ಜಾಬ್ಸ್ ಫಾರ್ ಹರ್, ಬೆಂಗಳೂರು ಹೊರತುಪಡಿಸಿ ಇತರೆಡೆ ಪೋರ್ಟಲ್ ಆರಂಭಿಸುತ್ತಿದೆ. ಪ್ಯಾನ್ ಇಂಡಿಯಾ ಮಾದರಿ ಮೂಲಕ ಮುಂಬೈ, ದೆಹಲಿ ಮತ್ತು ಚೆನ್ನೈನತ್ತ ಹೆಚ್ಚು ಗಮನಹರಿಸಲಿದೆ.

ಜಾಬ್ಸ್ ಫಾರ್ ಹರ್ ಡಾಟ್ ಕಾಮ್ ಸದ್ಯ ತಿಂಗಳಿಗೆ 50 ಸಾವಿರ ವಿಸಿಟರ್‍ಗಳನ್ನು ತಲುಪುವ ಗುರಿ ಹೊಂದಿದೆ, 2.50 ಲಕ್ಷ ಪುಟ ವೀಕ್ಷಣೆಗೂ ಯೋಜನೆ ಹಾಕಿಕೊಂಡಿದೆ. ಈಗಾಗ್ಲೇ ಜಾಬ್ಸ್ ಫಾರ್ ಹರ್ ಈಗಾಗ್ಲೇ ಸಿಟಿ ಬ್ಯಾಂಕ್, ಫ್ಯೂಚರ್ ಗ್ರೂಪ್, ಜಿಇ, ಗೋದ್ರೆಜ್ ಗ್ರೂಪ್, ಕೋಟೆಕ್ ಮಹಿಂದ್ರಾ, ಸ್ನಾಪ್‍ಡೀಲ್, ಯುನಿಲಿವರ್ ಸೇರಿದಂತೆ ಉಳಿದ ಎಸ್‍ಎಂಇಗಳು ಮತ್ತು ಸ್ಟಾರ್ಟ್‍ಅಪ್‍ಗಳು ಸೇರಿ 750ಕ್ಕೂ ಹೆಚ್ಚು ಸಂಸ್ಥೆಗಳ ಸಹಯೋಗ ಹೊಂದಿದೆ. ಫುಲ್ ಟೈಮ್, ಪಾರ್ಟ್ ಟೈಮ್, ವರ್ಕ್ ಫ್ರಮ್ ಹೋಮ್, ಫ್ರೀಲಾನ್ಸ್ ಮತ್ತು ರಿಟರ್ನಿ ಇಂಟ್ರನ್ಷಿಪ್ ಒದಗಿಸುವ ಕಂಪನಿಗಳೊಂದಿಗೆ ಉದ್ಯೋಗ ಮಾಡುವ ಅವಕಾಶವನ್ನು ಜಾಬ್ಸ್ ಫಾರ್ ಹರ್ ಕಲ್ಪಿಸಿಕೊಟ್ಟಿದೆ.

ಅವತಾರ್ ಐ-ವಿನ್

ಮಹಿಳೆಯರಿಗೆ ತಮ್ಮ ವೃತ್ತಿ ಜೀವನವನ್ನು ಮರಳಿ ಆರಂಭಿಸಲು ಅವಕಾಶ ಮಾಡಿಕೊಟ್ಟ ಮೊದಲ ಕಂಪನಿ ಅಂದ್ರೆ ಚೆನ್ನೈ ಮೂಲದ ಅವತಾರ್ ಐ-ವಿನ್. 2005ರಲ್ಲಿ ಈ ಸಂಸ್ಥೆ ಆರಂಭವಾಗಿದೆ. ಭಾರತದಲ್ಲಿ ವೃತ್ತಿಪರ ಮಹಿಳೆಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಂದಾಗಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಲಿಂಗ ಸಮಾನತೆ ಕೆಲಸ ಮಾಡುವುದಿಲ್ಲ ಅನ್ನೋದು ಅವತಾರ್ ಐ-ವಿನ್ ಸಂಸ್ಥಾಪಕಿ ಡಾ.ಸೌಂದರ್ಯ ರಾಜೇಶ್ ಅವರ ಅಭಿಪ್ರಾಯ. 2006ರಲ್ಲಿ ಅವರು ಫ್ಯೂಚರ್ ಗ್ರೂಪ್‍ಗಾಗಿ 450 ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ರು. ``ಶೇ.48ರಷ್ಟು ಭಾರತೀಯ ಮಹಿಳಾ ಉದ್ಯೋಗಿಗಳು 30 ವರ್ಷಗಳೊಳಗೆ ಕೆಲಸದಿಂದ ಒಂದು ಬ್ರೇಕ್ ತೆಗೆದುಕೊಳ್ತಾರೆ, ಶೇ.60ರಷ್ಟು Sಖಿಇಒ ಉದ್ಯೋಗಿಗಳು ಅವರ ವೃತ್ತಿ ಜೀವನದ 10 ವರ್ಷಗಳೊಳಗೆ ಒಂದು ಬ್ರೇಕ್ ಪಡೆಯುತ್ತಾರೆ. ಈ ಮಹಿಳೆಯರು ತಮ್ಮ ವೃತ್ತಿ ಪುನರಾರಂಭಿಸಲು ಹೋರಾಟ ನಡೆಸುತ್ತಾರೆ. ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ವಿಚಾರದಲ್ಲಿ ಶ್ರೀಲಂಕಾ ಭಾರತಕ್ಕಿಂತ್ಲೂ ಮುಂದಿದೆ'' ಎನ್ನುತ್ತಾರೆ ಸೌಂದರ್ಯ. ಅವತಾರ್ ಐ-ವಿನ್ ತನ್ನ ನೆಟ್‍ವರ್ಕ್‍ನಲ್ಲಿ 40,000 ಮಹಿಳೆಯರನ್ನು ಹೊಂದಿದೆ, ವೃತ್ತಿಯಿಂದ ಬ್ರೇಕ್ ತೆಗೆದುಕೊಂಡಿದ್ದ 8,000 ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಂಡಿದೆ.

ಶೆರೋಸ್...

2014ರ ಜನವರಿಯಲ್ಲಿ ನೊಯ್ಡಾ ಮೂಲದ ಶೆರೋಸ್ ಡಾಟ್ ಇನ್ ಕಂಪನಿಯನ್ನು ಸೈರೀ ಶಹಲ್ ಸಹ ಸಂಸ್ಥಾಪಕರಾಗಿ ಕಟ್ಟಿ ಬೆಳೆಸಿದ್ರು. ಶೆರೋಸ್, ಭಾರತದ ಮಹಿಳೆಯರಿಗೆ ಆರಾಮದಾಯಕ ಹಾಗೂ ವರ್ಕ್ ಫ್ರಮ್ ಹೋಮ್ ಉದ್ಯೋಗಗಳ ಮೂಲಕ ಕಾರ್ಪೊರೇಟ್ ಉದ್ಯೋಗಗಳ ಮೇಲ್ವಿಚಾರಣೆ ಮಾಡುತ್ತಿದೆ. ಉದ್ಯೋಗಸ್ಥ ಮಹಿಳೆಯರ ಸಮುದಾಯವೊಂದನ್ನು ಶೆರೋಸ್ ನಿರ್ಮಾಣ ಮಾಡುತ್ತಿದೆ. ಸಂಪನ್ಮೂಲ ಹಾಗೂ ಮೆಂಟರ್‍ಗಳನ್ನು ಹುಡುಕಲು ನೆರವಾಗುತ್ತಿದೆ. ವೈಯಕ್ತಿಕ ಬದುಕು ಹಾಗೂ ವೃತ್ತಿ ಜೀವನದ ಮೇಲೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಗಮನಹರಿಸಲು ಮಹಿಳೆಯರಿಗೆ ನೆರವು ನೀಡುತ್ತಿದೆ. ಏಂಜೆಲ್ ಸುತ್ತಿನಲ್ಲಿ ಶೆರೋಸ್ 5 ಕೋಟಿ ರೂಪಾಯಿ ಬಂಡವಾಳ ಗಿಟ್ಟಿಸಿಕೊಂಡಿದೆ. ವುಮೆನ್ ಫ್ರೆಂಡ್ಲಿ ಮಾಲೀಕರು, ಫ್ಲೆಕ್ಸ್ ಫ್ರೆಂಡ್ಲಿ ಮಾದರಿಗಳು, ಪಾಲುದಾರಿಕೆ ಕಾರ್ಯಕ್ರಮಗಳ ಮೂಲಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಶೆರೋಸ್ ಸಮುದಾಯ, ವೃತ್ತಿ ಸಂಪನ್ಮೂಲಕ್ಕೆ ಪ್ರವೇಶ ಪಡೆದಿದೆ, ಶೆರೋಸ್ ಮಾರ್ಗದರ್ಶಕರು ತಮ್ಮ ಸ್ವಂತ ಷರತ್ತುಗಳ ಮೂಲಕ ವೃತ್ತಿಯಲ್ಲಿ ತೊಡಗಿಕೊಳ್ಳಲು, ಯಶಸ್ಸು ಸಾಧಿಸಲು ಸಹಾಯ ಮಾಡುತ್ತಿದ್ದಾರೆ.

ಹರ್ ಸೆಕೆಂಡ್ ಇನ್ನಿಂಗ್ಸ್..

ಕೇವಲ ಉದ್ಯೋಗ ಅರಸುವುದು ಮಾತ್ರವಲ್ಲ, ಮಹಿಳಾ ಉದ್ಯೋಗಿಗಳ ಸಬಲೀಕರಣದ ಉದ್ದೇದಿಂದ್ಲೇ ಆರಂಭವಾದ ಸಂಸ್ಥೆ ಹರ್ ಸೆಕೆಂಡ್ ಇನ್ನಿಂಗ್ಸ್. ಸುದೀರ್ಘ ವಿರಾಮದ ಬಳಿಕ ಕೆಲಸಕ್ಕೆ ಮರಳುವ ಮಹಿಳೆಯರಲ್ಲಿ ತಮ್ಮ ಅನುಭವ ಮತ್ತು ಕೌಶಲ್ಯದ ಬಗ್ಗೆ ಗೊಂದಲವಿರುತ್ತದೆ. ವೈಯಕ್ತಿಕ ಆಸಕ್ತಿ ಅಥವಾ ಅನುಕೂಲಕ್ಕಾಗಿ ಅವರು ಈ ಹಂತದಲ್ಲಿ ಹೆಚ್ಚು ಆಕರ್ಷಕ ಅಥವಾ ಸೂಕ್ತ ಕ್ಷೇತ್ರಕ್ಕೆ ಸ್ಥಳಾಂತರವಾಗಲು ಬಯಸುತ್ತಾರೆ. 2000ಕ್ಕೂ ಹೆಚ್ಚು ಮಹಿಳೆಯರು ತಮ್ಮ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಲು ತರಬೇತಿಯ ಮೊರೆಹೋಗಿದ್ದಾರೆ. ಆನ್‍ಲೈನ್‍ನಲ್ಲಿ ಮಹಿಳೆಯರಿಗಾಗಿ ಇ-ಕೋಚಿಂಗ್ ಸೆಶನ್‍ಗಳನ್ನು ನಡೆಸಲಾಗ್ತಿದೆ.

2014ರ ನವೆಂಬರ್‍ನಲ್ಲಿ ಮಂಜುಳಾ ಧರ್ಮಲಿಂಗಮ್ ಹಾಗೂ ಮಾಧುರಿ ಕಾಳೆ `ಹರ್ ಸೆಕೆಂಡ್ ಇನ್ನಿಂಗ್ಸ್' ಅನ್ನು ಆರಂಭಿಸಿದ್ದಾರೆ. ಬೆಂಗಳೂರು ಮತ್ತು ಮುಂಬೈನಲ್ಲಿ ಹರ್ ಸೆಕೆಂಡ್ ಇನ್ನಿಂಗ್ಸ್ ಕಾರ್ಯನಿರ್ವಹಿಸುತ್ತಿದೆ. ವರ್ಕ್ ಫ್ರಮ್ ಹೋಮ್, ತಾತ್ಕಾಲಿಕ ಅಸೈನ್‍ಮೆಂಟ್‍ಗಳು, ಶಾಶ್ವತ ಉದ್ಯೋಗ, ಪ್ರಾಜೆಕ್ಟ್, ಕನ್ಸಲ್ಟೆನ್ಸಿ ಹಾಗೂ ಔದ್ಯಮಿಕ ಅವಕಾಶಗಳು ಇಲ್ಲಿವೆ. ಹರ್ ಸೆಕೆಂಡ್ ಇನ್ನಿಂಗ್ಸ್, ವೈವಿಧ್ಯತೆ ಮತ್ತು ಸೇರ್ಪಡೆ ಕಾರ್ಯಕ್ರಮಗಳನ್ನು ಸುಧಾರಿಸಲು ಕಂಪನಿಗಳಿಗೆ ನೆರವಾಗುತ್ತಿದೆ. ಈ ವೈವಿಧ್ಯತೆ ಮತ್ತು ಸೇರ್ಪಡೆ ಮೌಲ್ಯಮಾಪನ ಸಮೀಕ್ಷೆ ಹಾಗೂ ಮಹಿಳೆಯರ ನಾಯಕತ್ವ ಪ್ರೋಗ್ರಾಮ್‍ಗಳನ್ನು ಒಳಗೊಂಡಿದೆ.

ಲೇಖಕರು: ಶಾರಿಕಾ ನಾಯರ್

ಅನುವಾದಕರು: ಭಾರತಿ ಭಟ್

Add to
Shares
7
Comments
Share This
Add to
Shares
7
Comments
Share
Report an issue
Authors

Related Tags