ಆವೃತ್ತಿಗಳು
Kannada

ಸಾಮಾಜಿಕ ಉದ್ಯಮಿಗಳ 100 ಸ್ಪೂರ್ತಿದಾಯಕ ಮಾತುಗಳು

ಟೀಮ್​​ ವೈ.ಎಸ್​​. ಕನ್ನಡ

YourStory Kannada
28th Jan 2016
Add to
Shares
0
Comments
Share This
Add to
Shares
0
Comments
Share


2015ರಲ್ಲಿ ಪ್ರಕಟವಾದ ಹಲವು ಸಾಮಾಜಿಕ ಉದ್ಯಮಗಳ ಕಥೆಗಳಿಂದ ನಾವು 100 ಸ್ಪೂರ್ತಿದಾಯಕ ಮಾತುಗಳನ್ನು ಆರಿಸಿದ್ದೇವೆ. ಸಾಮಾಜಿಕ ಉದ್ಯಮಿಗಳು, ಚಳುವಳಿಗಳು ಮತ್ತು ಎನ್‌ಜಿಓಗಳ ಸ್ಥಾಪಕರ ಮಾತುಗಳು ಇವಾಗಿವೆ. ವಾತಾವರಣವನ್ನು ಸುಧಾರಿಸಲು ಮತ್ತು ರಾಜಕೀಯ ಮಿತಿಗಳಿಂದಾಚೆಗೆ ಸಾಮಾಜಿಕ ಉದ್ಯಮ ನಡೆಸಲು ಈ ಮಾತುಗಳು ಸಾಕಷ್ಟು ಸಹಕಾರಿಯಾಗಿವೆ.

ತಮ್ಮ ಪ್ರಗತಿಗಳಿಂದ ತಾವು ತಿಳಿದುಕೊಂಡಿರುವ ವಿಷಯವನ್ನು ಅವರು ನಮಗೆ ತಿಳಿಸಿದ್ದಾರೆ. ಇದರಿಂದ ಭಾರತ ಮತ್ತು ಪ್ರಪಂಚ ಸಾಕಷ್ಟು ಮಟ್ಟಿಗೆ ಸುಧಾರಣೆ ಕಾಣುವುದು ಸಾಧ್ಯವಾಗುತ್ತದೆ. ಸ್ಪೂರ್ತಿ, ದೃಷ್ಟಿಕೋನ, ವಾಸ್ತವಾಂಶಗಳು, ಸಂರಕ್ಷಣೆ, ನಮ್ರತೆ, ಸಹಾನುಭೂತಿ ಮತ್ತು ಧೈರ್ಯ ನೀಡುವ ಈ 100 ಮಾತುಗಳು ಎಲ್ಲರನ್ನೂ ಸೆಳೆಯುತ್ತವೆ. ರಜಾ ಕಾಲದ ಸಮಯ ಮತ್ತು ಹೊಸ ವರ್ಷದ ಸಂಭ್ರಮದ ಕ್ಷಣಗಳಿಗೆ ಶುಭಹಾರೈಸುತ್ತಾ ಈ ವರ್ಷವಿಡೀ ಯಶಸ್ಸುಗಳಿಸುವಂತಾಗಲಿ ಎಂದು ಹಾರೈಸುತ್ತದೆ ಯುವರ್ ಸ್ಟೋರಿ ತಂಡ.

image


ನನ್ನ ಪ್ರಕಾರ ಸ್ಮಾರ್ಟ್ ಸಿಟಿ ಎಂದರೇ ಸಂಪೂರ್ಣ ಹಸಿರು ಪಟ್ಟಣ-ಹರಿಣಿ ನಾಗೇಂದ್ರ, ಅಜೀಂ ಪ್ರೇಮ್ಜಿ ಯುನಿವರ್ಸಿಟಿ

ನಮ್ಮ ದೇಶದಲ್ಲಿ ಸಾಮಾಜಿಕ ಬಂಡವಾಳವನ್ನು ಉಪಯೋಗಿಸಬೇಕಾದ ಅಗತ್ಯವಿದೆ-ಹೇಮಂತ್ ಗುಪ್ತಾ, ಥ್ಯಾಂಕ್ ಯೂ, ಇಂಡಿಯಾ

ಯಶಸ್ವಿ ಔದ್ಯಮಿಕ ಕಥಾನಕಗಳನ್ನು ಪ್ರಕಟಗೊಳಿಸಿ ತನ್ಮೂಲಕ ಸಕಾರಾತ್ಮಕ ಸಂದೇಶಗಳನ್ನು ಹರಡಬೇಕಾದ ತುರ್ತಾದ ಅಗತ್ಯವಿದೆ-ರಾಜೇಶ್ ಎ.ಆರ್, ಲೇಬರ್ನೆಟ್ ಸರ್ವೀಸ್

ತ್ಯಾಜ್ಯ ಮೂಲಗಳನ್ನು ಸಂಸ್ಕರಿಬೇಕಾಗಿದೆ ಎಂದರೇ ಅದು ಕೇವಲ ಪಾರಿಸರಿಕ ಅಗತ್ಯಗಳಿಗೆ ಮಾತ್ರವಲ್ಲ ಆರ್ಥಿಕ ಲಾಭಗಳ ಉದ್ದೇಶವೂ ಇದರ ಹಿಂದಿದೆ ಅನ್ನುವುದನ್ನು ಮುನ್ಸಿಪಲ್ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕು-ನಿರ್ಮಲಾ ಭೋಗಿಲಾಲ್, ಬಟ್ಲಿಬೋಯ್

ನಗರ ತನ್ನದೇ ಆದ ಆತ್ಮವನ್ನು ಹೊಂದಿದೆ; ಇದು ಜನರಿಗೆ ಸಹಾಯ ಹಸ್ತ ನೀಡುವ ಮೂಲಕ ತನ್ನ ಆತ್ಮದೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳುತ್ತದೆ-ಮಂಜಿತ್ ಸಿಂಗ್ ಹೂಂಜಾನ್, ಕಲ್ಕತ್ತಾ ಫೋಟೋ ಟೂರ್ಸ್

ಭಾರತಕ್ಕೆ ಇಂದು ಪ್ರಬಲ ಸಾಮಾಜಿಕ ಪ್ರಜ್ಞೆಯುಳ್ಳ ವ್ಯವಸ್ಥೆಯ ಅಗತ್ಯವಿದೆ-ಅತುಲ್ ಸತಿಜಾ, ನಡ್ಜ್ ಫೌಂಡೇಷನ್

ಬದುಕಿಗೊಂದು ಉದ್ದೇಶವೇ ಇಲ್ಲದಿದ್ದರೇ ಅತ್ಯುತ್ತಮ ಆರೋಗ್ಯವಿದ್ದೂ ಪ್ರಯೋಜನವಿಲ್ಲ- ಊರ್ಮಿ ಬಸು, ನ್ಯೂ ಲೈಟ್

ನೀವು ಆರಂಭದಲ್ಲೇ ವೈಫಲ್ಯವನ್ನು ಮನಸಿನಲ್ಲಿಟ್ಟುಕೊಂಡರೇ, ಮುಂದೆಂದೂ ಏನೂ ಘಟಿಸುವುದೇ ಇಲ್ಲ-ಜೆಂಪು ರೊಂಗ್ಮೈ, ಕ್ಯಾನ್ ಯೂಥ್

ಮರುನವೀಕರಣ ಅನ್ನುವುದು ಒಂದು ಕಲೆ; ಇದು ಬದುಕು ಹಾಗೂ ಜೀವನೋಪಾಯ ನಿರ್ವಹಣೆಗೆ ಅತಿ ಅಗತ್ಯ-ಟ್ರಾಶ್ ಟು ಕ್ಯಾಶ್

ಎಲ್ಲಾ ನೈತಿಕ ಗುಣಗಳ ಫಲಿತಾಂಶವೇ ನಿಷ್ಟೆ-ಡಾ.ಬಿ.ಆರ್ ಅಂಬೇಡ್ಕರ್

ಸಾಮಾಜಿಕ ಆಸಕ್ತಿ ಸೆಳೆಯಲು ಮತ್ತು ಜಾಗೃತಿ ಮೂಡಿಸಲು ಸುಲಭವಾದ ದಾರಿಯೆಂದರೆ ಯಶೋಗಾಥೆಗಳ ಉದಾಹರಣೆ ನೀಡುವುದು- ಶ್ರೀಕಾಂತ್ ಗಜ್‌ಬಿಯೆ, ಬೀ ದ ಚೇಂಜ್

image


ಪ್ರಪಂಚದ ಜನಸಂಖ್ಯೆಯ ಅರ್ಧದಷ್ಟು ಮಂದಿ ದಿನಕ್ಕೆ ಕೇವಲ 150 ರೂ. ಆದಾಯ ಪಡೆಯುತ್ತಿದ್ದಾರೆ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ- ಶ್ರಿಯಾನ್ಸ್ ಭಂಡಾರಿ, ಗ್ರೀನ್ ಸೋಲ್

ಮಿಲಿಯನ್‌ಗಟ್ಟಲೆ ಜನರ ಜೀವನವನ್ನು ಬದಲಾಯಿಸಬಲ್ಲ ಅವಕಾಶಗಳನ್ನು ಸೃಷ್ಟಿಸುವಂತಹ ಸಾಫ್ಟ್‌ ವೇರ್‌ ಗಳಿಗೆ ಕೊರತೆಯೇ ಇಲ್ಲ- ಸ್ಮಿತಾ ರಾಮ್, ರಂಗ್ ದೇ

ಹೆಣ್ಣುಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡುವುದರಿಂದ ಆ ಮಗು ಬಾಲ್ಯ ವಿವಾಹಕ್ಕೆ ತುತ್ತಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ- ಯೋಗೇಶ್ ವೈಷ್ಣವ್, ವಿಕಲ್ಪ್ ಸಂಸ್ಥಾನ್

ಗ್ರಾಮೀಣ ಭಾರತದ ಪ್ರದೇಶಗಳು ಪ್ರಪಂಚದ ಕ್ಯಾನ್ಸರ್ ಪೀಡಿತ ರಾಜಧಾನಿ- ಪ್ರವೀಣ್ ಆದಿಲ್, ಕ್ಲಿನಿಕ್ ಇತಿದಿರ್ಕಾ

ಹೆಚ್‌ಐವಿ ಪೀಡಿತ ಮಗುವಿಗೆ ತಾನೇಕೆ ತಾರತಮ್ಯಕ್ಕೊಳಗಾಗುತ್ತಿದ್ದೇನೆ ಎಂಬ ಅರಿವೇ ಇರುವುದಿಲ್ಲ- ಅರವಿಂದ್ ಮಾಥುರ್, ಜೋಧ್‌ಪುರ್ ನೆಟ್‌ವರ್ಕ್ ಆಫ್ ಪಾಸಿಟಿವ್ ಪೀಪಲ್

ಸಾಮಾಜಿಕ ಜವಾಬ್ದಾರಿ ಹೊಂದಿಲ್ಲದ ಯಾವುದೇ ಉದ್ಯಮದಿಂದ ಏನೂ ಸಾಧಿಸಲು ಸಾಧ್ಯವಿಲ್ಲ- ಅಲೆಕ್ಸ್ ಗೋಮೆಜ್, ಹೆಲ್ಪಿಂಗ್ ಫೇಸ್‌ಲೆಸ್

ಭಾರತದ ಜಿಡಿಪಿಯಲ್ಲಿ ಸುಮಾರು 12 ಬಿಲಿಯನ್ ಯುಎಸ್ ಡಾಲರ್ ನಷ್ಟು ನಷ್ಟ ವಿಟಮಿನ್ ಮತ್ತು ಮಿನರಲ್‌ ಕೊರತೆಯಿಂದ ಉಂಟಾಗುತ್ತದೆ- ಸೆಂಟರ್ ಫಾರ್ ಸೈನ್ಸ್ ಎಂಡ್ ಎನ್‌ವೈರನ್‌ಮೆಂಟ್

ನಾವು ಸಾಮಾಜಿಕವಾಗಿ ಒಳ್ಳೆಯದನ್ನು ಮಾಡುತ್ತಿದ್ದರೇ ಅಲ್ಲೇ ನಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬೇಕು ಮತ್ತು ಆಗ ಯಾರಿಂದಲೂ ಹಣವನ್ನು ನಿರೀಕ್ಷಿಸುವುದು ಅಸಾಧ್ಯವಾಗುತ್ತದೆ- ಮುಕುಂದ್ ಬಿ.ಎಸ್, ರಿನ್ಯೂ ಐಟಿ

ನಿಮ್ಮದೇ ಸ್ವಂತ ಸಂಪಾದನೆಯಿಂದ ಚಾರಿಟಿಗಳಿಗೆ ದಾನ ಮಾಡಿದಾಗ ಸಂಪೂರ್ಣ ತೃಪ್ತಿ ದೊರಕುತ್ತದೆ- ಪಾಲಮ್ ಕಲ್ಯಾಣಸುಂದರಮ್

ಯಾರು ಸಬಲೀಕರಣಗೊಳ್ಳುವ ಅವಶ್ಯಕತೆಯಿದೆಯೋ ಅವರನ್ನು ಸಬಲಗೊಳಿಸುವುದೇ ಅವರಿಗೆ ನ್ಯಾಯ ಒದಗಿಸುವ ಉತ್ತಮ ದಾರಿ- ನಿಶಾಂತ್ ಗಂಭೀರ್, ಲೆಕ್ಸ್ ಡು ಇಟ್

12 ಮಿಲಿಯನ್‌ ಮಕ್ಕಳು ತಮ್ಮ ಬಾಲ್ಯವನ್ನು ತರಗತಿಗಳಲ್ಲಿ ಕಳೆಯುವ ಬದಲು ಕೆಲಸ ಮಾಡುವುದರಲ್ಲೇ ಕಳೆಯುತ್ತಿದ್ದಾರೆ. ಭಾರತದಲ್ಲಿ ಪ್ರತಿ ಅರ್ಧಗಂಟೆಗೊಂದು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ- ಯುಎನ್ ರಿಪೋರ್ಟ್ಸ್

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೊಬೈಲ್ ಸ್ಕಿಲ್ ಡೆವಲಪ್‌ಮೆಂಟ್ ಲ್ಯಾಬೋರೇಟರೀಸ್‌ಗಳನ್ನು ಪರಿಚಯಿಸಬೇಕಾಗಿದೆ- ಡಾ. ಎಪಿಜೆ ಅಬ್ದುಲ್ ಕಲಾಂ

ನೀವು ಸಮಾಜದಿಂದ ಏನನ್ನು ಪಡೆಯುತ್ತಿರೋ ಅದರ ಎರಡು ಪಟ್ಟಿನಷ್ಟು ಸಮಾಜಕ್ಕೆ ಹಿಂದಿರುಗಿಸಬೇಕು- ಪದ್ಮಶ್ರೀ ಕರಾಂಶಿ ಜೆತಾಬಾಯ್ ಸೋಮಯ್ಯ

ಸಂಗೀತ ಜನರ ಮನಮುಟ್ಟುತ್ತದೆ ಮತ್ತು ಅದನ್ನು ನಾವು ಒಂದು ಮಾಧ್ಯಮವಾಗಿ ಬಳಸಿಕೊಳ್ಳುತ್ತಿದ್ದೇವೆ. ಇದು ಅತ್ಯಂತ ಅಹಿಂಸಾತ್ಮಕ ಮಾಧ್ಯಮವಾಗಿದೆ- ಸಿದ್ಧನಾಥ್ ಬುಯಾವ್, ಸೇವೆ ಟೈರಾಕೋಲ್ ಸೇವ್ ಗೋವಾ

ವೈವಿಧ್ಯಮಯವಾಗಿ ಯೋಚಿಸುವುದರಿಂದ ನಮ್ಯತೆ ಗಳಿಸಲು ಸಾಧ್ಯವಾಗುತ್ತದೆ- ಜಾಕೋಬ್ ಮ್ಯಾಥ್ಯೂ, ಸ್ಪ್ರಿಂಗ್ ಹೆಲ್ತ್

ಗೌರವ ಮತ್ತು ಸಹಾನುಭೂತಿಗಳು ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ- ಪೂಜಾ ಮಹಾಜನ್, ಪೇಟಾ

ಒಂದು ಸುಸ್ಥಿರ ಸಮಾಜವು 4 ಸ್ಥಂಬಗಳ ಮೇಲೆ ಆಧಾರಿತವಾಗಿದೆ. ಅವುಗಳೆಂದರೆ ಜನರು, ಗ್ರಹ, ಶಾಂತಿ ಮತ್ತು ಸಮೃದ್ಧಿ- ಕೈಲಾಶ್ ಸತ್ಯಾರ್ಥಿ

ಸಹಾನುಭೂತಿಗೆ ಯಾವುದೇ ಭೌಗೋಳಿಕ ಗಡಿಗಳಿರುವುದಿಲ್ಲ- ಶುಕ್ಲಾ ಬೋಸ್, ಪರಿಕರ್ಮಾ

image


ಪ್ರಪಂಚವನ್ನು ಉತ್ತಮಗೊಳಿಸಲು ನಾವೂ ಸ್ವಯಂಸೇವಕರಂತೆ ಕಾರ್ಯನಿರ್ವಹಿಸಲು ಸಾಧ್ಯವಿದೆ. ಇದಕ್ಕಾಗಿ ಒಂದು ಹೆಜ್ಜೆ ಮುಂದಿಡುವ ಧೈರ್ಯ ಮಾಡಬೇಕು ಮತ್ತು ಅದರ ಜವಾಬ್ದಾರಿ ವಹಿಸಿಕೊಳ್ಳಬೇಕು- ಮೋಹಿನಿ ಪಾಂಡೇ, ಲರ್ನಿಂಗ್ ಸರ್ಕಲ್ಸ್

ಸೋಪ್‌ಗಳಿಂದ ಘನತೆ ದೊರಕುತ್ತದೆ. ಆದರೆ ಸ್ವಚ್ಛಗೊಳಿಸುವುದು ನಮ್ಮ ಕರ್ತವ್ಯ ಎಂದು ನಾನು ಭಾವಿಸುತ್ತೇನೆ- ಎರಿನ್ ಜೈಕಿಸ್, ಸುಂದರ

ಜನರು ಸಾವಯವ ಉತ್ಪನ್ನಗಳು ದುಬಾರಿ ಎಂದು ಭಾವಿಸುತ್ತಾರೆ. ಇದೊಂದು ದೊಡ್ಡ ಮೆಂಟಲ್ ಬ್ಲಾಕ್ ಆಗಿದೆ- ಸ್ವಾತಿ ಮಹೇಶ್ವರಿ, ರಸ್ಟಿಕ್ ಆರ್ಟ್

ಗರ್ಭಿಣಿಯಾದಾಗ ಎದುರಿಸುವ ಸಮಸ್ಯೆಗಳು ಮತ್ತು ಹೆರಿಗೆಯ ವೇಳೆ ಪ್ರತಿ ನಿತ್ಯ 800ಕ್ಕೂ ಹೆಚ್ಚು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ- ವರ್ಲ್ಡ್​ ಹೆಲ್ತ್ ಆರ್ಗನೈಸೇಶನ್

ಭಾರತದಲ್ಲಿ ಮೂರನೇ ಗ್ರೇಡ್‌ನ ಕೇವಲ ಶೇ.25.3% ರಷ್ಟು ಮಕ್ಕಳು ಮಾತ್ರ 2 ಅಂಕಿಗಳ ಸರಳ ವ್ಯವಕಲನ ಮಾಡುವ ಸಾಮರ್ಥ್ಯ ಹೊಂದಿದ್ದಾರೆ- ಏಸರ್ ರಿಪೋರ್ಟ್ 2014

ಪರಿಸರದ ಪರವಾಗಿ ಕಾರ್ಯನಿರ್ವಹಿಸುವುದು ಅಭಿವೃದ್ಧಿ ವಿರೋಧಿ ಎಂಬುದಾಗಿ ಪ್ರಚಾರವಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ- ರಿತು ಭಾರದ್ವಾಜ್, ಕಾಮನ್ ಥ್ರೆಡ್

ಕಾರ್ಯಕ್ರಮ ನೀಡುತ್ತಿರುವ ಸಂಗೀತಗಾರರು ಅಂಧರು ಎಂಬುದು ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಕಾರ್ಯಕ್ರಮದ ಅಂತ್ಯದಲ್ಲಿ ಈ ವಿಚಾರ ಪ್ರೇಕ್ಷಕರಿಗೆ ತಿಳಿದಾಗ ಅವರಿಗೆ ಒಮ್ಮೆ ಆಘಾತವಾಗುತ್ತದೆ. ಇಂತಹ ಅನೇಕ ಕಾರ್ಯಕ್ರಮಗಳನ್ನು ನಾವು ನಡೆಸಿದ್ದೇವೆ- ಸುನಿಲ್ ಜೆ.ಮ್ಯಾಥ್ಯೂ, ಎಸ್‌ಆರ್‌ವಿಸಿ

ವಿತರಣಾ ಸರಪಳಿಯನ್ನು ಸುಸ್ಥಿರವಾಗಿರಿಸಿಕೊಳ್ಳಲು ಕೈಗಾರಿಕೆಗಳ ಸಹಯೋಗ ಏರ್ಪಡಿಸಿಕೊಳ್ಳುವುದು ಒಂದು ಅತ್ಯುತ್ತಮ ಅವಕಾಶ- ಸಸ್ಟೈನಬಲ್ ಸಪ್ಲೈ ಚೈನ್ ಟ್ರೆಂಡ್ಸ್ 2015 ರಿಪೋರ್ಟ್ಸ್

ಸವಲತ್ತುಗಳನ್ನೊಳಗೊಂಡ ವಿಭಾಗ ಮತ್ತು ಏನೂ ಇಲ್ಲದವರ ವಿಭಾಗಕ್ಕೆ ನೇರ ಸಂಪರ್ಕ ಒದಗಿಸುವುದು ಹೂಡಿಕೆಯಷ್ಟೇ ಮಹತ್ವ ಪಡೆದಿದೆ- ಡಿಬಾಬ್ರಾತಾ ಬ್ಯಾನರ್ಜಿ, ಪಿಸಿಟಿ

ಸಮಸ್ಯೆಗಳಿಗೆ ಸಮರ್ಪಕವಾಗಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನಾವು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸೇರಿಸಿಲ್ಲ. ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ- ರಾಹುಲ್ ಪಣಿಕ್ಕರ್, ಎಂಬ್ರೇಸ್ ಇನ್ನೋವೇಶನ್

ಸಾಮಾಜಿಕ ಉದ್ಯಮ ಮತ್ತು ಅದರ ಉದ್ದೇಶಗಳು ಸಮಾಜದ ಪ್ರಮುಖ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂಬುದನ್ನು ನಂಬಲು ಹಲವರು ಸಿದ್ಧರಿಲ್ಲ- ನಾಗೇಶ್ ಚುಕ್ಕಾ, ವಿರಿಮೈಂಡ್

ವೃದ್ಧಾಪ್ಯದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ದೊರಕಬೇಕಾದ ಕಾಳಜಿ ಮತ್ತು ಗಮನ ವಹಿಸಬೇಕಾದ ಹೆಲ್ತ್ ಕೇರ್ ಉದ್ಯಮ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ- ಕಾವ್ಯ ಜೆ., ಫ್ರಂಟೆಂಡರ್ಸ್

ನಮ್ಮ ದೇಶದಲ್ಲಿ ಜನರ ಅಜ್ಞಾನದಿಂದಲೇ ಭ್ರಷ್ಟಾಚಾರ ಹುಟ್ಟಿಕೊಂಡಿದೆ- ಪ್ರಭಾಕರ್ ಸಿಂಗ್, ಜಂಟಾ ಚೌಪಾಲ್

ಅತೀ ಹೆಚ್ಚು ಜನರು ಶೀಘ್ರದಲ್ಲೇ ಸಾಮಾಜಿಕ ಉದ್ಯಮದಲ್ಲಿ ತೊಡಗಿಕೊಳ್ಳಲಿದ್ದಾರೆ- ಜಾಕೋಬ್ ಮ್ಯಾಥ್ಯೂ, ಇಂಡಸ್ಟ್ರೀ ಕ್ರಾಫ್ಟ್ಸ್ ಫೌಂಡೇಶನ್

ಇತರರಿಂದ ವಿಮರ್ಶೆ ಅಥವಾ ನಂಬಿಕೆಯ ಕೊರತೆ ಎದುರಿಸಲು ಸದಾ ಸಿದ್ಧರಾಗಿರಿ- ಅಕ್ಷಯ್ ರೂಂಗ್‌ಟಾ, ಅಮೃತಧಾರಾ

ನಂಬಿಕೆಯೇ ಮಾನವತ್ವದ ನೆಲೆ - ಉಮೇಶ್ ಮಲ್ಹೋತ್ರ, ಹಿಪ್ಪೋ ಕ್ಯಾಂಪಸ್

ಒಂದು ಕಣ್ಣು ಕಳೆದುಕೊಂಡಿದ್ದ ಒಬ್ಬ ನಿವೃತ್ತ ಶಿಕ್ಷಕ ನಮ್ಮ ಸಂಶೋಧನೆಗಾಗಿ ತಮ್ಮ ಇನ್ನೊಂದು ಕಣ್ಣನ್ನು ನಮಗೆ ದಾನ ಮಾಡಲು ಇಚ್ಛಿಸಿದ್ದರು- ಕೆ.ಚಂದ್ರಶೇಖರ್, ಫೋರಸ್ ಹೆಲ್ತ್

ಬಹುತೇಕ ಭಾರತೀಯ ಕಂಪನಿಗಳು ಹವಾಮಾನ ಬದಲಾವಣೆ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅರ್ಥ ಮಾಡಿಕೊಂಡಿಲ್ಲ- ಎಸ್‌ಐಡಿಬಿಐ/ಜಿಐಝಡ್ ರಿಪೋರ್ಟ್

ಬೇರೆಯವರ ಸಮಸ್ಯೆಗಳನ್ನು ನಿಮ್ಮ ಸಮಸ್ಯೆಗಳೆಂದೇ ಭಾವಿಸಿ ಸ್ಪಂದಿಸಿ, ಸಹಕರಿಸಿ. ಅದರಿಂದ ದೊರಕುವ ಸಂತೋಷಕ್ಕೆ ಎಣೆಯೇ ಇಲ್ಲ- ಡಿ.ಆರ್. ಮೆಹ್ತಾ, ಬಿಎಂವಿಎಸ್ಎಸ್

ನನಗೆ ಸದಾ ನೈತಿಕ ಮಾರ್ಗದಲ್ಲೇ ಸಾಕಷ್ಟು ಹಣ ಗಳಿಸುವ ಇಚ್ಛೆ ಇದೆ- ಮೋಹಿತ್ ವರ್ಮಾ, ಥ್ರೆಡ್ ಕ್ರಾಫ್ಟ್ ಇಂಡಿಯಾ

ಗ್ರಾಮೀಣ ಪ್ರದೇಶದ ಜನರು ಶತಮಾನಗಳಿಂದ ಶೌಚಾಲಯಗಳನ್ನು ಬಳಸುತ್ತಿಲ್ಲ ಮತ್ತು ಇದಕ್ಕಾಗಿ ಸಾಂಸ್ಕೃತಿಕ ಬದಲಾವಣೆ ಅತ್ಯವಶ್ಯಕವಾಗಿದೆ- ಪೌಲ್ ಸಾಥಿಯಾನಾಥನ್, ಗಾರ್ಡಿಯನ್

ತಂಡಗಳ ಲೆಕ್ಕಾಚಾರ ಹೀಗಿರುತ್ತದೆ 1+1=3- ಸೌಮ್ಯ ಅಯ್ಯರ್, ಪ್ರಫುಲ್ ಊರ್ಜಾ

ನಿಮ್ಮ ವೈಫಲ್ಯಗಳಿಂದ ನೀವೇನಾದರೂ ಕಲಿಯುತ್ತಿದ್ದರೆ ನಿಮ್ಮ ಸೋಲು ಕೆಡುಕೆನಿಸುವುದಿಲ್ಲ. ವೈಫಲ್ಯಗಳು ಯಶಸ್ಸಿನ ಮೆಟ್ಟಿಲುಗಳು- ವೆಂಕಟ್ ಮರೋಜು, ಸೋರ್ಸ್ ಟ್ರೇಸ್

ನಗರ ಪ್ರದೇಶಗಳಲ್ಲಿ ನಾವು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ. ನಮ್ಮ ನಡವಳಿಕೆಗಳು ಬದಲಾಗಲೇಬೇಕಿದೆ- ಸುಜಾತಾ ರಾಮ್ನಿ, ದಾನಾ ನೆಟ್‌ವರ್ಕ್

ಭಾರತದಲ್ಲಿ 60 ಮಿಲಿಯನ್ ಜನರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅವರಿಗಾಗಿ ಡಿಜಿಟಲ್ ಲಾಭಾಂಶವನ್ನು ಹೇಗೆ ವಿಸ್ತರಿಸಬೇಕು ಎಂಬುದನ್ನು ನಾವು ಯೋಚಿಸಬೇಕಿದೆ- ರುಮಿ ಮಲ್ಲಿಕ್ ಮಿತ್ರಾ, ನಾಸ್‌ಕಾಮ್ ಫೌಂಡೇಶನ್

ಹೆಲ್ತ್ ಕೇರ್ ಉದ್ಯಮ ಸಾಮಾಜಿಕ ಘಟಕಗಳನ್ನು ಹೊಂದಬೇಕಾದ ಅಗತ್ಯ ಇದೆ- ಅರ್ಜುನ್ ಸಚ್ಚಿದಾನಂದ್, ಸಾಸ್ ಹೆಲ್ತ್ ಕೇರ್

ಇಂದೊಂದು ಬದಲಾವಣೆ ತರೋಣ. ಮುಗಿಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕಾಲಹರಣ ಮಾಡುವ ಬದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಚಿಂತಿಸೋಣ- ಜೈ ಮಿಶ್ರಾ, ಟೀಚ್ ಫಾರ್ ಇಂಡಿಯಾ

2030ರ ವೇಳೆಗೆ ಭಾರತದಲ್ಲಿ 80 ಮಿಲಿಯನ್ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ- ಜಮಾಲ್ ಅಹ್ಮದ್, ರಾಜೀವ್ ಗಾಂಧಿ ಸೆಂಟರ್

ನಮ್ಮ ಮೊತ್ತ ಮೊದಲ ಸ್ವಯಂಸೇವಕರು ಈಗ ಸಂಸ್ಥೆಯ ಉಪನಿರ್ದೇಶಕರು- ಸಬ್ಬಾಹ್ ಹಾಜಿ, ಹಾಜಿ ಪಬ್ಲಿಕ್ ಸ್ಕೂಲ್

ಕಾಲ ಬದಲಾದಂತೆ ಗ್ರಾಹಕರ ಮನಸ್ಥಿತಿಯಲ್ಲೂ ಬದಲಾವಣೆಯಾಗಿದೆ. ಕೇವಲ ಲ್ಯಾಂಪ್‌ಗಳಿಗೆ ಬೇಡಿಕೆ ಇಡುತ್ತಿದ್ದ ಜನರು ಈಗ ಫೋನ್‌ ಚಾರ್ಜರ್‌ಗಳು, ಫ್ಯಾನ್ ಮತ್ತು ಟಿವಿಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆ- ವೆರ್ನಿ ಸನ್ನೂ, ಬೇರ್ ಫೂಟ್ ಪವರ್

ಭಾರತದ ಪ್ರತಿ ಶಾಲೆಯಲ್ಲೂ ಅನುಭವಾತ್ಮಕ ಶಿಕ್ಷಣ ನೀಡಬೇಕು ಮತ್ತು ಜೀವನ ನಡೆಸಲು ಅಗತ್ಯವಿರುವ ಕೌಶಲ್ಯಗಳ ತರಬೇತಿ ನೀಡಬೇಕು. ಇದನ್ನು ಅವರ ಪಠ್ಯ ವಿಚಾರದಷ್ಟೇ ಪ್ರಮುಖ ವಿಚಾರವಾಗಿ ಬೋಧಿಸಬೇಕು- ಶ್ವೇತಾ, ಅಪ್ನಿ ಶಾಲಾ

ನಾನೊಂದು ದೊಡ್ಡ ಅಲೆಯಾಗಬೇಕೆಂದೇನೂ ಇಲ್ಲ. ಸಮುದ್ರದ ನೀರಿನ ಒಂದು ಹನಿಯಾದರೂ ಸಾಕು. ಅದರಿಂದ ಬದಲಾವಣೆ ಆಗುವುದು ಮುಖ್ಯ- ಏಂಜಲೀನಾ ಡಯಾಸ್, ಟೀಚ್ ಫಾರ್ ಇಂಡಿಯಾ

ಸೌರಶಕ್ತಿ ಇಂದಿಗೂ ಒಂದು ಹೊಸ ವಲಯವೇ ಆಗಿದೆ. ಈ ತಂತ್ರಜ್ಞಾನಕ್ಕೆ ಜನರಿನ್ನೂ ಹೊಂದಿಕೊಂಡಿಲ್ಲ- ಅನುಜ್ ಗುಪ್ತಾ, 8 ಮಿನುಟ್ಸ್

ಸೀಮಿತ ಸಂಪನ್ಮೂಲಗಳಿಂದ ಕೂಡಿದ ಗ್ರಹದಲ್ಲಿ ನೀವು ಹೇಗೆ ಅಂತ್ಯವಿಲ್ಲದ ಬೆಳವಣಿಗೆಯ ಜೀವನ ಶೈಲಿಯನ್ನು ರೂಢಿಸಿಕೊಳ್ಳುತ್ತೀರಿ?- ಮಾನ್ಸೂರ್ ಖಾನ್, ದ ಥರ್ಡ್ ಕರ್ವ್

ಕಾಲ ಕಳೆದಂತೆ ನನ್ನ ಮಗಳೂ ಸಹ ನನ್ನ ವಯಸ್ಸಿಗೆ ಬರುತ್ತಾಳೆ. ಆಗ ಈ ಗ್ರಹ ವಾಸಯೋಗ್ಯವಾಗಿರುವುದಿಲ್ಲ. ನಾನು ಅವರ ಪೀಳಿಗೆಗಾಗಿ ಹೋರಾಡುತ್ತೇನೆ- ನಾರಾಯಣ್ ಪೀಸಾಪಟಿ, ಬಾಕೀಸ್

ನಮ್ಮ ಕನಸುಗಳು ನಮ್ಮ ಭಯಗಳಿಗಿಂತ ದೊಡ್ಡವಾಗಿರಬೇಕು- ಮುಖೇಶ್ ಜೈನ್, ಅಕ್ಸೆಸ್ಸಿಬಲ್ ಇಂಡಿಯಾ ಕ್ಯಾಂಪೇನ್

image


ನನಗೆ ಸಾಯಲು ಹೆದರಿಕೆಯೇನೂ ಇಲ್ಲ. ಆದರೆ ಅರ್ಥಪೂರ್ಣವಾದ ಏನನ್ನಾದರೂ ಸಾಧಿಸುವ ಮೊದಲೇ ಸಾಯುತ್ತೇನೇನೋ ಎಂಬ ಭಯವಿದೆ- ಸಂಜಯ್ ಗುಹಾ ಥಾಕುರ್ತಾ, ರಂಗಮಾಟಿ

ಆಹಾರ, ಬಟ್ಟೆ, ಮನೆಗಳಷ್ಟೇ ಮನುಷ್ಯನ ಅವಶ್ಯಕತೆಗಳಲ್ಲ. ಅದನ್ನು ಮೀರಿದ್ದು ಇನ್ನೇನೋ ಇದೆ. ಅದಕ್ಕಾಗಿ ಮನುಷ್ಯ ನಿತ್ಯ ಹೋರಾಡುತ್ತಾನೆ- ಸ್ವಾಗತ್ ಥೋರಟ್, ಸ್ಪರ್ಶ್‌ ದ್ನ್ಯಾನ್

ಜನರು ತಮ್ಮ ಹೆಣ್ಣು ಮಕ್ಕಳನ್ನು ನಮ್ಮ ಸಂಸ್ಥೆಯೊಂದಿಗೆ ಟೈ-ಅಪ್ ಆಗಿರುವ ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಕಳುಹಿಸುವಂತೆ ಕುಟುಂಬಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾದ ಅಗತ್ಯವಿದೆ- ಸ್ವಾತಿ ಬೋಂಡಿಯಾ, ಓಂ ಶಾಂತಿ ಟ್ರೇಡರ್ಸ್

ಪ್ರಪಂಚದಲ್ಲಿ ಒಳ್ಳೆಯ ಜನರೇ ತುಂಬಿದ್ದಾರೆ- ನಾಗಾ ನರೇಶ್ ಕರುತುರಾ, ಗೂಗಲ್

ಯಾವುದಾದರೂ ವಿಷಯ ವಿನ್ಯಾಸದಿಂದ ಸೇರ್ಪಡೆಗೊಳ್ಳಬೇಕೇ ಹೊರತು ಕ್ರಿಯೆ-ಪ್ರಕ್ರಿಯೆಯಿಂದಲ್ಲ- ಮೋಹನ್ ಸುಂದರಮ್, ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೇಬ್ಲಿಟಿ

ಒಬ್ಬ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಆ ತಾಯಿ ಎದುರಿಸಬೇಕಾದ ತೊಂದರೆಗಳನ್ನು ಗಮನಿಸಿದ್ದೇನೆ- ಡಾ.ಗಣೇಶ್ ರಾಖ್

ಭಾರತದಲ್ಲಿ 125,000 ಹಳ್ಳಿಗಳ 400 ಮಿಲಿಯನ್ ಜನರು ವಿದ್ಯುತ್ ಸೌಲಭ್ಯ ಇಲ್ಲದೇ ಇದ್ದಾರೆ- ಮನೋಜ್ ಸಿನ್ಹಾ, ಎನರ್ಜಿ ಇನ್ನೋವೇಟರ್

ಒಬ್ಬ ನಾಯಕನಿಗಿಂತ ಮಿಲಿಯನ್‌ಗಟ್ಟಲೆ ಶಿಕ್ಷಕರ ಅಗತ್ಯ ಇದೆ- ಶರತ್ ಜೀವನ್, ಸ್ಟಿರ್ ಎಜುಕೇಶನ್

ತುಳಿತಕ್ಕೊಳಗಾದ ಜನರ ಹೃದಯಬಡಿತದಂತೆ ಭೂಮಿಯ ಹೃದಯವೂ ಬಡಿಯುತ್ತಿರುತ್ತದೆ- ಫೈಜ್ ಅಹ್ಮದ್ ಫೈಜ್

ಮರುಬಳಕೆ ಮಾಡಿ, ರಕ್ಷಿಸಿ ಮತ್ತು ಗೌರವಿಸಿ- ಅಭಿಜಿತ್ ಜೀಜೂರಿಕರ್ಸ ಅಕಾರ್ನ್ ಫೌಂಡೇಶನ್

ನಾವೇನು ಮಾಡುತ್ತಿದ್ದೇವೋ ಅದು ಸಮುದ್ರದ ಒಂದು ಹನಿಗೆ ಸಮಾನ. ಆದರೆ ಸಮುದ್ರವೂ ಸಹ ಒಂದು ಹನಿ ಇಲ್ಲದೇ ಅಪೂರ್ಣ ಎಂದೆನಿಸುತ್ತದೆ- ದೀಪಕ್ ಸಿಂಗ್ ಬೋನಲ್, ಹೆಲ್ಪೈಜ್

ಸಮುದಾಯಗಳನ್ನು ನಿರ್ಮಿಸುವಲ್ಲಿ ಸಾಮಾಜಿಕ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತವೆ- ಸಮ್ಯಕ್ ಚಕ್ರಬರ್ತಿ, ಗ್ರೀನ್ ಬತ್ತಿ ಪ್ರಾಜೆಕ್ಟ್

ಆರ್ಥಿಕ ಬಡತನ ಅಷ್ಟೇ ಅಲ್ಲದೇ ಸಾಂಸ್ಕೃತಿಕ ಬಡತನವೂ ನಮಗೆ ಸವಾಲಾಗಿದೆ- ಶ್ರೇಯಾ ಸೋನಿ, ಪಿಕ್ಚರ್ ವಾಲಾ ಫೌಂಡೇಶನ್

ತ್ಯಾಜ್ಯ ನಿರ್ವಹಣೆ ಪ್ರತೀ ನಾಗರೀಕನ ಜವಾಬ್ದಾರಿ- ಸಂದೀಪ್ ಜಾರ್ಜ್, ಗ್ರೀನ್ ಬ್ರಿಕ್ ಎಕೋ ಸೊಲ್ಯುಷನ್

ಕೇರಳ ಭವಿಷ್ಯದಲ್ಲಿ 3ನೇ ಪ್ರಪಂಚ ನಿರ್ಮಾಣ ಮಾಡುವ ನಿಜವಾದ ಭರವಸೆ ನೀಡುವ ಜಾಗವಾಗಿದೆ- ಬಿಲ್ ಮೆಕ್ ಕಿಬ್ಬನ್

ನಿಮ್ಮ ಪ್ರಯತ್ನಗಳಿಂದ ರೈತರಿಗೆ ಉಪಕಾರವಾಗಿದೆ ಎಂಬುದು ನಿಮಗೆ ಸಾಕಷ್ಟು ತೃಪ್ತಿ ಮತ್ತು ಸಂತೋಷ ದೊರಕುತ್ತದೆ- ಡಾ.ವರ್ಗೀಸ್ ಕುರಿಯನ್

ಬಹುತೇಕ ಸಾಂಪ್ರದಾಯಿಕ ಕಲಾವಿದರು ತಮ್ಮ ಕಲೆಯನ್ನು ಭಕ್ತಿಯ ಪ್ರತಿರೂಪದಂತೆ ಭಾವಿಸಿರುತ್ತಾರೆ ಮತ್ತು ಅಲ್ಲಿ ಕಲೆ ಸೃಷ್ಟಿ ಹೃದಯಾಂತರಾಳದಿಂದ ಹೊಮ್ಮುತ್ತದೆ- ಅದಿತಿ ಜಾರ್ಜ್, ಅದಿರಾಗ್

ನಿರುದ್ಯೋಗದಿಂದ ಉದ್ಯಮಶೀಲತೆಯತ್ತ ಸಾಗುವುದರಿಂದ ಪ್ರಪಂಚ ಬಡತನದಿಂದ ಮುಕ್ತವಾಗುತ್ತದೆ- ಪ್ರೊ. ಮಹಮ್ಮದ್ ಯೂನಸ್

ಶೈಕ್ಷಣಿಕ ವಲಯದಲ್ಲಿ ಕಾರ್ಯನಿರ್ವಹಿಸುವುದು ದೀರ್ಘಕಾಲಿಕ ಪರಿಣಾಮ ಸಾಧ್ಯವಾಗುತ್ತದೆ. ಇದಕ್ಕಾಗಿ ತಾಳ್ಮೆಯಿಂದ ಕಾಯುವುದು ಪ್ರಮುಖವಾದ ಅಂಶ- ಕ್ಷಿತಿಜ್ ಆನಂದ್, ಹ್ಯಾಪಿ ಹಾರಿಜನ್ಸ್ ಟ್ರಸ್ಟ್

ಹಿಂದುಳಿದ ಸಮುದಾಯಗಳ ಮಟ್ಟದಲ್ಲಿ ನೈರ್ಮಲ್ಯ ಮೂಡಿಸುವುದು ಸುಸ್ಥಿರ ಬದಲಾವಣೆಗೆ ಕಾರಣವಾಗುತ್ತದೆ- ವ್ಯಾಲೆಂಟೀನ್ ಪೋಸ್ಟ್, ಫಿನಿಶ್

ಭಾರತದಲ್ಲಿ ಶೇ.3ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆ ಪಾವತಿಸುವುದಕ್ಕಿಂತ ಹಣವನ್ನು ವ್ಯರ್ಥವಾಗಿ ಕಳೆಯುವವರ ಸಂಖ್ಯೆಯೇ ಹೆಚ್ಚಿದೆ. ಕಸ ಬೀಳದಂತೆ ತಡೆಯುವ ಬದಲು ಅದನ್ನು ಸ್ವಚ್ಛಗೊಳಿಸುವುದಕ್ಕಾಗಿ ಹಣ ಹೆಚ್ಚಾಗಿ ಪೋಲಾಗುತ್ತಿದೆ- ಜೋಡಿ ಅಂಡರ್‌ಹಿಲ್, ವೇಸ್ಟ್ ವಾರಿಯರ್ಸ್

ಒಂದೇ ಒಂದು ಬುಡದಿಂದ 100 ಕವಲು ಒಡೆಯಬೇಕು. ಅಂತೆಯೇ ಸ್ವಯಂ ಸೇವಕನಾಗಲು ಓರ್ವ ಮುಂದೆ ಬಂದರೆ ಅವನ ಹಿಂದೆ ಇನ್ನಷ್ಟು ಜನ ಬರುತ್ತಾರೆ- ರಜನಿ ಪರಾಂಜ್ಪೆ ಮತ್ತು ಬೀನಾ ಶೇಟ್ ಲಶ್ಕರಿ, ವಿಭಾ


ಲೇಖಕರು: ಮದನ್​ಮೋಹನ್​ ರಾವ್​​

ಅನುವಾದಕರು: ವಿಶ್ವಾಸ್ ಭಾರಧ್ವಾಜ್​​

Add to
Shares
0
Comments
Share This
Add to
Shares
0
Comments
Share
Report an issue
Authors

Related Tags