ಗುರುಗ್ರಾಮದಲ್ಲಿರುವ 366 ಹೌಸಿಂಗ್ ಸೊಸೈಟಿಗಳು ಯಮುನಾ ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಿವೆ.

ಈ ವರ್ಷದ ಆರಂಭದ ದಿನಗಳಲ್ಲಿ ಜಿ ಎಂ ಡಿ ಎ (ಗುರುಗ್ರಾಮ್ ಮೆಟ್ರೋಪಾಲಿಟನ್ ಡೆವೆಲಪ್ಮೆಂಟ್ ಅಥಾರಿಟಿ) ಗುರುಗ್ರಾಮದಲ್ಲಿರುವ ಹೌಸಿಂಗ್ ಸೊಸೈಟಿಗಳನ್ನು ಹಠಾತ್ ತಪಾಸಣೆ ಮಾಡಿ, ಅವುಗಳಿಂದ ಸಂಸ್ಕರಣೆಗೊಳ್ಳದ ತ್ಯಾಜ್ಯಸಹಿತವಾದ ಚರಂಡಿ ನೀರು ಯಮುನಾ ನದಿಯನ್ನು ಸೇರುತ್ತಿದೆಯೆಂಬುದನ್ನು ಪತ್ತೆ ಹಚ್ಚಿದೆ.

ಗುರುಗ್ರಾಮದಲ್ಲಿರುವ 366 ಹೌಸಿಂಗ್ ಸೊಸೈಟಿಗಳು ಯಮುನಾ ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಿವೆ.

Wednesday August 21, 2019,

2 min Read

ಭಾರತವು ಕೆಲವು ಅತ್ಯಂತ ಮಲಿನಗೊಂಡ ನದಿಗಳನ್ನು ಹೊಂದಿದ ದೇಶವಾಗಿದೆ. ಆ ನದಿಗಳಲ್ಲಿ ಗಂಗಾ ಮತ್ತು ಯಮುನಾ ನದಿಗಳು ಮುಖ್ಯವಾಗಿವೆ. ಈ ಎರಡು ನದಿಗಳು ರಾಷ್ಟ್ರದ ಗಮನ ಸೆಳೆದಿದ್ದು, ಅವುಗಳನ್ನು ಶುಚಿಗೊಳಿಸಲು ನಮಾಮಿ ಗಂಗಾನಂತಹ ಮಿಲಿಯನ್ ಡಾಲರ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.


ಈ ನಿಟ್ಟಿನಲ್ಲಿ, ಇತ್ತೀಚಿನ ವರದಿಯ ಪ್ರಕಾರ ಗುರುಗ್ರಾಮ ಮಹಾನಗರ ಅಭಿವೃದ್ಧಿ ಪ್ರಾಧಿಕಾರವು 366 ಹೌಸಿಂಗ್ ಸೊಸೈಟಿಗಳಿಗೆ ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ದೇಶಿಸಿದೆ.


ಆಗ್ರಾದಲ್ಲಿ ಮಲೀನಗೊಂಡ ಯಮುನಾ ನದಿಯ ನೀರು (ಚಿತ್ರಕೃಪೆ: ಇಂಡಿಯಾ ವಾಟರ್ ಪೋರ್ಟಲ್)


ಗುರುಗ್ರಾಮ ಮಹಾನಗರ ಅಭಿವೃದ್ಧಿ ಪ್ರಾಧಿಕಾರವು ಯಮುನಾ ನದಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ವಿಫಲವಾಗಿದೆ ಎಂಬ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ ಜಿ ಟಿ) ದ ವರದಿಯನ್ನು ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


ಎನ್ ಡಿ ಟಿವಿಯೊಂದಿಗೆ ಮಾತನಾಡಿದ ಜಿ ಎಮ್ ಡಿ ಎ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿ. ಉಮಾಶಂಕರ್ ಈ ರೀತಿ ಹೇಳುತ್ತಾರೆ,


“ಕಟ್ಟಡ ಕಟ್ಟುವ ಸಮಯದಲ್ಲಿ ಪ್ರತಿಯೊಂದೂ ವಸತಿ ಸಮುಚ್ಚಯಗಳಿಗೆ ಪ್ರತ್ಯೇಕ ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತೇವೆ ಎಂದು ನಗರ ಯೋಜನಾ ಇಲಾಖೆಗೆ ಮುಚ್ಚಳಿಕೆ ನೀಡಿ ನಿರ್ಮಾಣ ಪರವಾನಗಿ ಪಡೆದಿರುವ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ನೋಟೀಸು ನೀಡಲಾಗಿದೆ.”


ಅವರು ಮುಂದುವರಿಸಿ ಹೇಳುತ್ತಾರೆ


“ಮೇಲ್ಕಂಡ ನಿಬಂಧನೆಯ ಅನ್ವಯ ಎಷ್ಟು ಹೌಸಿಂಗ್ ಸೊಸೈಟಿಗಳು ಚರಂಡಿನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿವೆ ಎಂಬುದನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಹಠಾತ್ ಪರಿಶೀಲನೆ ನಡೆಸಲು ನಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಮತ್ತು ಸ್ಥಾಪಿಸಿರುವ ಘಟಕಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನೂ ಕೂಡ ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ. ಏಕೆಂದರೆ ಚರಂಡಿನೀರು ಸಂಸ್ಕರಣಾ ಘಟಕಗಳನ್ನು ನಿರ್ವಹಿಸುವ ವೆಚ್ಚವು ಹೆಚ್ಚಾದಂತೆ ಸಂಸ್ಕರಣೆಗೊಳ್ಳದ ತ್ಯಾಜ್ಯಸಹಿತವಾದ ನೀರನ್ನು ನೇರವಾಗಿ ಮುಖ್ಯ ಚರಂಡಿಗಳಿಗೆ ಬಿಡುವ ಸಂಭವವಿದೆ”


ಟ್ರಿಬ್ಯೂನ್ ವರದಿಯ ಪ್ರಕಾರ ಜಿ ಎಂ ಡಿ ಎ 366 ಹೌಸಿಂಗ್ ಸೊಸೈಟಿಗಳ ಮುನ್ಸೂಚನೆಯಿಲ್ಲದ ತಪಾಸಣೆ ಮಾಡಿ ಸಂಸ್ಕರಣೆಗೊಳ್ಳದ ತ್ಯಾಜ್ಯಸಹಿತವಾದ ನೀರು ಯಮುನಾ ನದಿಯನ್ನು ಸೇರುತ್ತಿದೆ ಎಂಬುದನ್ನು ಕಂಡುಹಿಡಿದಿದೆ.


ಸಂಸ್ಕರಣೆಗೊಳ್ಳದ ಈ ನೀರು ನಜಫ್ಗರ್ ನುಲ್ಲಾಗೆ ಹರಿದು ಅಲ್ಲಿಂದ ನೇರವಾಗಿ ಯಮುನಾ ನದಿಯನ್ನು ಸೇರುತ್ತದೆ. ಆದರೆ ದುರದೃಷ್ಟದ ವಿಷಯವೆಂದರೆ ಈ 366 ಹೌಸಿಂಗ್ ಸೊಸೈಟಿಗಳು ಯಾವುವು ಎಂಬುದನ್ನು ಗುರುತಿಸಲಾಗಿಲ್ಲ.


ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಎನ್ ಜಿ ಟಿ ಗುರುಗ್ರಾಮ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ಷಮತೆಯನ್ನು ವಿಮರ್ಶಿಸುವ ದೃಷ್ಟಿಯಿಂದ ಒಂದು ಪ್ರಧಾನ ಮೇಲ್ವಿಚಾರಣಾ ಸಮಿತಿಯನ್ನು ನೇಮಿಸಿತು. ಈ ಸಮಿತಿಯು ಪ್ರಾಧಿಕಾರದ ವಿಫಲತೆಯನ್ನು ಎತ್ತಿ ಹಿಡಿಯಿತು ಮತ್ತು ಯಮುನಾ ನದಿಯ ಮಾಲಿನ್ಯವನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿತು.


ತಪಾಸಣೆ ಮಾಡಲಾದ 366 ಹೌಸಿಂಗ್ ಸೊಸೈಟಿಗಳಿಗೆ ಈಗ ಎರಡು ಆಯ್ಕೆಗಳಿವೆ. ಜಿ ಎಮ್ ಡಿ ಎ ಮುಖ್ಯ ಚರಂಡಿಗಳಿಗೆ ಸಂಪೂರ್ಣವಾಗಿ ತ್ಯಾಜ್ಯಸಹಿತ ನೀರನ್ನು ಬಿಟ್ಟು ಸಂಸ್ಕರಣಾ ವೆಚ್ಚವನ್ನು ಭರಿಸುವುದು ಅಥವಾ ತಮ್ಮದೇ ಆದ ಚರಂಡಿ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು.