ಆವೃತ್ತಿಗಳು
Kannada

ಮಂಗಳಮುಖಿಯರ ಜ್ಞಾನರ್ಜನೆಗೆ ಹೊಸ ವ್ಯವಸ್ಥೆ- MSUನಿಂದ ತೃತೀಯ ಲಿಂಗಿಗಳಿಗೆ ಸಪ್ರೈಸ್

ಟೀಮ್​ ವೈ.ಎಸ್​. ಕನ್ನಡ

19th Apr 2017
Add to
Shares
15
Comments
Share This
Add to
Shares
15
Comments
Share

ಭಾರತದಲ್ಲಿ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಕೇರಳ ರಾಜ್ಯಮಟ್ಟದ ಟ್ರಾನ್ಸ್​ಜಂಡರ್ ಅಥ್ಲೆಟಿಕ್ ಕೂಟವನ್ನು ಆಯೋಜಿಸಿ ದಾಖಲೆ ಬರೆದಿದೆ. ಇದರ ಬೆನ್ನಹಿಂದಯೇ ತೃತೀಯ ಲಿಂಗಿಗಳಿಗೆ ಶಿಕ್ಷಣ ಕೊಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಮೊದಲ ಹೆಜ್ಜೆಯಾಗಿ ತಮಿಳುನಾಡಿನ ಪ್ರಸಿದ್ಧ ಮನೋನ್ಮನಿಯಂ ಸುಂದರನರ್ ಯುನಿಯವರ್ಸಿಟಿ (MSU) ಹೊಸ ಕ್ರಮವನ್ನು ಕೈಗೊಂಡಿದೆ. ತನ್ನ ಯೂನಿವರ್ಸಿಟಿ ವ್ಯಾಪ್ತಿಯಲ್ಲಿ ಶಿಕ್ಷಣಕ್ಕಾಗಿ ಬರುವ ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು MSU ನಿರ್ಧರಿಸಿದೆ. MSU ವಿಶ್ವವಿದ್ಯಾಲಯ ಪದವಿಯಿಂದ ಹಿಡಿದು, ಡಾಕ್ಟರೇಟ್ ತನಕ ಎಲ್ಲಾ ಸಜ್ಜೆಕ್ಟ್​ಗಳನ್ನೂ ಉಚಿತವಾಗಿ ಕಲಿಸಲಿದೆ. ಈ ಶೈಕ್ಷಣಿಕ ವರ್ಷದಿಂದ ಈ ನಿಯಮ ಜಾರಿಗೆ ಬರಲಿದೆ. ಟ್ರಾನ್ಸ್​ಜಂಡರ್ ಕಮ್ಯೂನಿಟಿಯ ಅಭಿವೃದ್ಧಿಗೆ ಹೊಸ ದಾರಿಯನ್ನು ತೋರಿಸಲಿದೆ.

image


MSU 1990ರಲ್ಲಿ ಆರಂಭವಾಗಿತ್ತು. ಈ ಯೂನಿವರ್ಸಿಟಿಗೆ ಒಳಪಡುವ ಹಲವು ಕಾಲೇಜುಗಳಲ್ಲಿ ಸುಮಾರು 65000ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

“ಸಾಮಾನ್ಯವಾಗಿ ಮಂಗಳಮುಖಿಯರನ್ನು ಸಮಾಜವೇ ದೂರವಿಟ್ಟಿರುತ್ತದೆ. ಅಷ್ಟೇ ಅಲ್ಲ ಅವರನ್ನು ಮನೆಯವರೇ ದೂರವಿಟ್ಟು, ಬೀದಿಬದಿಯಲ್ಲಿ ಭಿಕ್ಷೆ ಬೇಡುವಂತೆ ಮಾಡುತ್ತಾರೆ. ಆದ್ರೆ ಅವರಿಗೆ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ರೆ ಅವರು ಕೂಡ ಸರಕಾರಿ ಅಥವಾ ಖಾಸಗಿ ಕೆಲಸಗಳನ್ನು ಹುಡುಕಿಕೊಳ್ಳಬಲ್ಲರು. ಈ ದೃಷ್ಟಿಯಲ್ಲಿ MSU ಸರಿಯಾದ ಹೆಜ್ಜೆಯನ್ನು ಇಟ್ಟಿದೆ.”
ಕೆ. ಭಾಸ್ಕರ್, ಎಲ್ಜಿಬಿಟಿ ನೇಷನ್ ವೈಸ್ ಚಾನ್ಸಲರ್
image


ಈ ಬಗ್ಗೆ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಾಲೇಜುಗಳಿಗೆ, ಸಂಸ್ಥೆಗಳಿಗೆ ಆದೇಶವನ್ನು ಹೊರಡಿಸಿದ್ದು, ತೃತೀಯ ಲಿಂಗಿ ಸಮುದಾಯಕ್ಕೆಂದೇ ಮೀಸಲಿಟ್ಟು ಬಾತ್​ರೂಮ್ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಅಬಿವೃದ್ಧಿ ಪಡಿಸಬೇಕು ಎಂದು ಆದೇಶಿಸಿದೆ. ತೃತೀಯ ಲಿಂಗಿಗಳ ಅಭಿವೃದ್ಧಿ ಬಗ್ಗೆ ತಮಿಳುನಾಡು ಸರಕಾರ ವಿಶೇಷ ಆಸಕ್ತಿವಹಿಸಿದ್ದು, ಕಳೆದ ವರ್ಷ ಪೊಲೀಸ್ ಇಲಾಖೆಗೆ ಇವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ದೇಶದ ಮೊತ್ತ ಮೊದಲ ಪ್ರೈಡ್ ಪರೇಡ್ ಅನ್ನು 2009ರಲ್ಲಿ ಆಯೋಜಿಸಲಾಗಿತ್ತು.

“ ಅವಕಾಶ ಸಿಕ್ಕಿದರೆ ಉಳಿದವರಂತೆ ನಾವು ಕೂಡ ಜೀವಿಸಬಲ್ಲೆವು ಅನ್ನುವುದನ್ನು ಹಲವು ಮಂಗಳಮುಖಿಯರು ತೋರಿಸಿಕೊಟ್ಟಿದ್ದಾರೆ. ಸೇಲಂನಲ್ಲಿ ತಮಿಳುನಾಡು ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳಮುಖಿ ಒಬ್ಬರು ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಆಗಿದ್ದಾರೆ. ಈಗ MSU ಶೈಕ್ಷಣಿಕ ಫೀಸ್ ಅನ್ನು ರದ್ದುಗೊಳಿಸಿ ಆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲರಂತೆ ಅವರೂ ಬದುಕಬೇಕು.”

ಒಟ್ಟಿನಲ್ಲಿ MSU ಇಟ್ಟಿರುವ ಹೆಜ್ಜೆ ಹಲವು ವಿಶ್ವವಿದ್ಯಾಲಯಗಳಿವೆ ವಿವಿಧ ರೀತಿಯಲ್ಲಿ ಮಾದರಿಯಾಗಬಹುದು. ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಈ ರೀತಿಯ ನಿರ್ಧಾರ ಕೈಗೊಂಡರೆ ಅದಕ್ಕಿಂತ ದೊಡ್ಡ ಸ್ವಾಗತಾರ್ಹ ವಿಷಯ ಮತ್ತೊಂದಿಲ್ಲ.

ಇದನ್ನು ಓದಿ:

1. 434 ಮಕ್ಕಳನ್ನು ರಕ್ಷಿಸಿದ ರೇಖಾ ಮಿಶ್ರಾ ಕಥೆ ಕೇಳಿ..!

2. ಗಾಸಿಪ್​ಗಳಿಗೆ ಗುಡ್ ಬೈ-ಫ್ಲಿಪ್​ಕಾರ್ಟ್ ತೆಕ್ಕೆಗೆ ಬಿತ್ತು ಇ-ಬೇ

3. ವಿಮಾನದಲ್ಲಿ ಪ್ರಯಾಣಿಲು 'ಆಧಾರ್' ಆಧಾರ..!


Add to
Shares
15
Comments
Share This
Add to
Shares
15
Comments
Share
Report an issue
Authors

Related Tags