ಆವೃತ್ತಿಗಳು
Kannada

ಒಳ್ಳೆಯ ವೈದ್ಯರ ಮಾಹಿತಿ ಬೇಕೆ ಇಲ್ಲಿದೆ ‘ಡಾಕ್ಟರ್ ಕ್ವಿಕ್’

ಟೀಮ್​​ ವೈ.ಎಸ್​​. ಕನ್ನಡ

YourStory Kannada
30th Nov 2015
5+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಇಲ್ಲಿಂದ ಯಾರು ಬೇಕಾದ್ರು ಡಾಕ್ಟರ್, ಆಸ್ಪತ್ರೆ ಮತ್ತು ಔಷಾಧಿ ಅಂಗಡಿಗಳ ಮಾಹಿತಿ ಉಚಿತವಾಗಿ ಪಡೆಯಬಹುದು..

ವೈದ್ಯರ ಫೀಸ್ ಎಷ್ಟು, ಅವರೇನು ಓದಿದ್ದಾರೆ. ಬೇರೆ ಡಾಕ್ಟರ್​​ ಜೊತೆಗೆ ಅವರನ್ನು ತಾಳೆ ನೋಡಬಹುದು..

ಜಗತ್ತಿನ ಅತ್ಯಂತ ಸರ್ವಶ್ರೇಷ್ಠ ವೈದ್ಯರು ಭಾರತದಲ್ಲಿದ್ದಾರೆ. ಆದರೆ ಹಲವು ಜನರಿಗೆ ಸೂಕ್ತ ವೈದ್ಯರ ಬಗ್ಗೆ ಸರಿಯಾದ ಮಾಹಿತಿಯಿಲ್ಲ ಮತ್ತು ಅವರನ್ನು ತಲುಪಲು ಆವರಿಂದ ಆಗುತ್ತಿಲ್ಲ. ಮತ್ತೆ ಕೆಲವರಿಗೆ ವೈದ್ಯರ ಜೊತೆ ಸಂಪರ್ಕಿಸಲು ಸೂಕ್ತ ಸಮಯ ಕೂಡ ಸಿಗುತ್ತಿಲ್ಲ. ಆದರೆ ಈ ಎಲ್ಲ ಸಮಸ್ಯೆಯ ಪರಿಹಾರವೆನ್ನುವಂತೆ ‘ಡಾಕ್ಟರ್ ಕ್ವಿಕ್’ ವೆಬ್​​​ಸೈಟ್​​​​​ -ಆ್ಯಪ್ ಕೆಲಸ ಮಾಡುತ್ತಿದೆ. `ಡಾಕ್ಟರ್ ಕ್ವಿಕ್' ಸಿಇಓ ಅಶಿಶ್ ಕುಮಾರ್ ಹೇಳುವಂತೆ. "ಭಾರತದಲ್ಲಿ ಒಳ್ಳೆಯ ಡಾಕ್ಟರ್ ತನಕ ಹಲವರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಆ ಸಮಯಕ್ಕೆ ಅವರ ಬಗ್ಗೆ ಸೂಕ್ತ ಮಾಹಿತಿ ಅವರಿಗೆ ಸಿಗುತ್ತಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ನಾವು ಈ ವೆಬ್​​ಸೈಟ್ ಮತ್ತು ಆ್ಯಪ್​​ನ ನಿರ್ಮಾಣ ಮಾಡಿದ್ದೇವೆ. ವೆಬ್​ಸೈಟ್, ಆನ್​​ಲೈನ್ ಮಾದ್ಯಮ, ಫೋನ್ ಮತ್ತು ವಾಟ್ಸ್​​ಆ್ಯಪ್ ಮತ್ತು ಮೊಬೈಲ್ ಪೋನ್ ಮೂಲಕ ಆ್ಯಪ್​​ನ ಮೂಲಕ ಡಾಕ್ಟರ್ ಸಂಪರ್ಕ ಮತ್ತು ಸಹಾಯ ಪಡೆಯಬಹುದಾಗಿದೆ. ಇದು ಕೇವಲ ಹೆಲ್ಫ್​​ಲೈನ್​​​ ಆಗಿ ಮಾತ್ರ ಉಳಿದಿಲ್ಲ. ವೈದ್ಯರ, ಆಸ್ಪತ್ರೆಗಳ, ಲ್ಯಾಬರೋಟರಿಗಳ ಮತ್ತು ಔಷಧಿಯ ಅಂಗಡಿಗಳ ಮಾಹಿತಿ ನೀಡುತ್ತದೆ. ಗೂಗಲ್ ತರಹ ಇದೊಂದು ಸರ್ಚ್ ಇಂಜಿನ್ ಆಗಿದ್ದು. ಉಚಿತವಾಗಿ ಖಚಿತವಾಗಿ ಇದು ಕಾರ್ಯನಿರ್ವಹಿಸುತ್ತಿದೆ"..

image


ಈ ವೇದಿಕೆಯಿಂದ ಮಧ್ಯಮ ಮತ್ತು ಬಡ ಜನರಿಗೆ ಸಹಾಯ ಮಾಡುವತ್ತ ಈ ಕಂಪನಿ ಕೆಲಸ ಮಾಡುತ್ತಿದೆ. ‘ಡಾಕ್ಟರ್ ಕ್ವಿಕ್’ ಜನರಿಗೆ ಆದಷ್ಟೂ ಕಡಿಮೆ, ಡಿಸ್ಕೌಂಟ್​​ನಲ್ಲಿ ತಪಾಸಣೆ ಚಿಕಿತ್ಸೆ ನೀಡುವಂತೆ ಕಾರ್ಯಕ್ರಮ ರೂಪಿಸಿದೆ. ವೈದ್ಯರು, ಆಸ್ಪತ್ರೆಗಳ ಜೊತೆ ಮತ್ತು ಔಷಧಾಲಯಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಕಡಿಮೆ ದರದಲ್ಲಿ, ಸ್ವಲ್ಪ ಡಿಸ್ಕೌಂಟ್​​ನಲ್ಲಿ ಜನರಿಗೆ ಚಿಕಿತ್ಸೆ ನೀಡುವಂತೆ ಒಪ್ಪಂದ ಮಾಡಿಕೊಂಡಿದೆ. ಅಶಿಶ್ ಹೇಳುವಂತೆ "ಈ ವೇದಿಕೆಯಲ್ಲಿ ಅನೇಕ ಆಸ್ಟತ್ರೆಗಳು ಮತ್ತು ಡಾಕ್ಟರ್ ಸೇರಿತ್ತಿದ್ದಾರಂತೆ. ನಾವು ನಮ್ಮ ಕಡೆಯಿಂದ ಅಸಾಹಯಕ, ಹಿಂದುಳಿದ ಜನರ ಚಿಕಿತ್ಸೆಯಲ್ಲಿ ಸ್ವಲ್ಪ ರಿಯಾಯತಿ ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದೇವೆ, ಎಲ್ಲ ರೀತಿಯಿಂದಲೂ ಇಲ್ಲಿ ಹೆಚ್ಚು ರಿಯಾಯತಿ ಸಿಗಲಿದೆ. ಇಷ್ಟಲ್ಲದೆ ಆದಷ್ಟೂ ಬೇಗ ನಮ್ಮೊಂದಿಗೆ ಇನ್ನಷ್ಟೂ ಹೆಚ್ಚು ಆಸ್ಪತ್ರೆ ಮತ್ತು ವೈದ್ಯರು ಸೇರಿಕೊಳಲ್ಲಿದ್ದಾರೆ"

ಡಾಕ್ಟರ್ ಕ್ವಿಕ್​​​ನಿಂದಾಗಿ ಯಾವ ರೋಗಿಯಾದ್ರು ತಮ್ಮಿಷ್ಟದ ಡಾಕ್ಟರ್ ಬೇಟಿಯಾಗಲು ಅನುಮತಿ ಪಡೆಯಬಹುದು. ಆ್ಯಪ್ ಅಥವಾ ವೆಬ್​​ಸೈಟ್​​ನಲ್ಲಿ ಅವರ ಕ್ಯಾಲೆಂಡರ್ ನೋಡಿ ಅವರ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಅವರನ್ನು ಕಾಣಲು ಬುಕ್ ಮಾಡಬಹುದು. ಡಾಕ್ಟರ್ ಕ್ವಿಕ್ ವೆಬ್​ಸೈಟ್ ಮತ್ತು ಟೋಲ್ ಫ್ರಿ ನಂಬರ್​ನಿಂದಾಗಿ ಸುಲಭವಾಗಿ ಡಾಕ್ಟರ್ ಅಪಾಯಿಂಟ್​​​ಮೆಮಟ್ ಪಡೆಯಬಹುದಾಗಿದೆ. ಜೊತೆಗೆ ನಿಮ್ಮ ಅನುಕೂಲ ಮತ್ತು ನಿಮ್ಮ ಆರ್ಥಿಕ ಸ್ಥಿತಿಗೆ ಅನುಸಾರ ಹೊಂದಾಣಿಕೆಯಾಗುವಂತಹ ಆಸ್ಪತ್ರೆಯನ್ನು ಇಲ್ಲಿ ಹುಡುಕಬಹುದು. ನಿಮ್ಮ ಬಡ್ಜೆಟ್​​​ಗೆ ತಕ್ಕಂತೆ ಆಸ್ಪತ್ರೆಗಳನ್ನು ಇದು ಹುಡಕಲಿದೆ. ನಿಮ್ಮ ಕುಟುಂಬಸ್ಥರ ಮತ್ತು ಸ್ನೇಹಿತರಿಗೆ ಇದರಿಂದ ಸಹಾಯ ಮಾಡಬಹುದಾಗಿದೆ. ಅಶೀಶ್ ಹೇಳುವಂತೆ "ಇಲ್ಲಿ ಚಿಕಿತ್ಸೆಯ ನಂತರ, ಚಿಕಿತ್ಸೆಗಾಗಿ ಡಾಕ್ಟರ್​ನ್ನು ಕಾಯುವಂತ ಪ್ರಮೇಯ ಇಲ್ಲಿ ಬರುವುದಿಲ್ಲ. ಡಾಕ್ಟರ್​​ನ್ನು ಕಾಯುವುದು ಅತ್ಯಂತ ಕೆಟ್ಟ ಅನುಭವವಾಗಿರುತ್ತೆ. ‘ಡಾಕ್ಟರ್ ಕ್ವಿಕ್’ನ ಸಹಾಯದಿಂದ ಡಾಕ್ಟರ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ, ರೋಗಿಗಳ ಆರೋಗ್ಯ ಸಮಯದಲ್ಲಿ ಅವರ ಬಿಡುವಿನ ವೇಳೆಯನ್ನು ಬಳಸಿಕೊಳ್ಳುವಂತೆ ಇಲ್ಲಿ ಎಲ್ಲವನ್ನು ನೋಡಿಕೊಳ್ಳಲಾಗುತ್ತದೆ. ಕೇವಲ ಆಸ್ಪತ್ರೆ ಹುಡುಕುವುದು ಮತ್ತು ಡಾಕ್ಟರ್ ಸಂಪರ್ಕ ಕೊಡಿಸುವುದು ಇವರ ಕೆಲಸವಲ್ಲ. ಯಾವ ಆಪರೇಶನ್​​ಗೆ, ಯಾವ ಖಾಯಿಲೆಗೆ, ಚಿಕಿತ್ಸೆಗೆ ಎಷ್ಟು ಖರ್ಚು ತಗಲುತ್ತದೆ ಎಂಬ ಮಾಹಿತಿ ಕೂಡ ಇಲ್ಲಿ ಲಭ್ಯವಿದೆ. ಇದರಿಂದ ಜನರ ಸುಲಿಗೆ ತಪ್ಪಿಸಬಹುದಾಗಿದೆ. ಆರೋಗ್ಯದ ದಾಖಲೆಯನ್ನು ಇಲ್ಲಿ ಕಾಪಾಡಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟೂ ಸೇವೆಗಳನ್ನು ಇಲ್ಲಿ ಸಿಗಲಿವೆ"..

"ಇಲ್ಲಿಯತನಕ ಒಬ್ಬ ತಜ್ಞ ಡಾಕ್ಟರ್, ಉತ್ತಮ ಸೌಲಭ್ಯಗಳ ಆಸ್ಪತ್ರೆ ಮತ್ತು ಪ್ರಮಾಣಿತ ಔಷಧಿ ನೀಡುವಂತ ಮೆಡಿಕಲ್ ಸ್ಟೋರ್ ಹುಡುಕುವುದು ಕಷ್ಟವಾಗಿತ್ತು. ಆದರೆ ಡಾಕ್ಟರ್ ಕ್ವಿಕ್​​ನಿಂದ ಇದು ಸುಲಭವಾಗಿದೆ. ಬೆರಳ ತುದಿಯಲ್ಲೆ ಎಂತಹ ಚಿಕಿತ್ಸೆ ಬೇಕಾದ್ರು ಇಲ್ಲಿ ಸಾಧ್ಯ. ಉತ್ತಮ ವೈದ್ಯರು, ಆಸ್ಪತ್ರೆ ಹುಡುಕುವುದು ಇದರಿಂದಾಗಿ ಮಕ್ಕಳಾಟವಾಗಿಬಿಟ್ಟಿದೆ. ಜನ ಹೆಲ್ಫ್​​​ಲೈನ್ ಅಥವಾ ವೆಬ್​​ಸೈಟ್ ಮೂಲಕ ತಮ್ಮ ಸಮಸ್ಯೆ ಹೇಳಿಕೊಂಡರೆ ಸಾಕೂ ತಕ್ಷಣ ಅವರ ಬಡ್ಜೆಟ್​​​ನಂತೆ ಅವರಿಗೆ ಡಾಕ್ಟರ್ ಅಪಾಯಿಂಟ್​​​ಮೆಂಟ್ ಕೊಡಿಸಲಾಗುತ್ತದೆ. ಡಾಕ್ಟರ್​​ಗಳು 24/7 ಇಲ್ಲಿ ಲಭ್ಯವಿರುತ್ತಾರೆ. ಇಷ್ಟೆ ಅಲ್ಲ ರೋಗಿಗಳ ಆರೋಗ್ಯ ಕಾರ್ಡ್ ಇಲ್ಲಿ ನೋಡಿಕೊಳ್ಳಲಾಗುತ್ತದೆ. ರೋಗಿಗಳ ಯಾವಾಗ ಬೇಕೋ ಅವಾಗ ಅವರ ಆರೋಗ್ಯ ಕಾರ್ಡ್​ನ್ನು ಉಚಿತವಾಗಿ ನೋಡಬಹುದಾಗಿದೆ" ಎಂತಾರೆ ಆಶೀಶ್.

ಅಶೀಶ್ ಅವರೆ ಹೇಳುವಂತೆ "ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಯಂತೆ ನಾವು ಡಿಜಿಟಲ್ ಆಗಿ ಈ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದೇವೆ. ರೋಗಿಗಳಿಗೆ ಬೆರಳ ತುದಿಯಲ್ಲೆ, ಡಾಕ್ಟರ್, ಆಸ್ಪತ್ರೆ ಮತ್ತು ಔಷಾಧಿ ಅಂಗಡಿಗಳ ಹೆಚ್ಚು ವಿಕಲ್ಪಗಳು ಇದರಿಂದ ಸಿಗಲಿದೆ. ಎಷ್ಟೂ ವೈವಿದ್ಯತೆಯಿದೆ ಎಂದರೆ ನಮ್ಮ ಸುತ್ತಮುತ್ತಲಿರುವ ಡಾಕ್ಟರ್ ಅವರ ಸಾಮರ್ಥ್ಯವು ಇದು ತಿಳಿಸಲಿದೆ.. ಅವರ ಡಿಗ್ರಿ, ಅವರ ಅನುಭವ ಇದುವರೆಗೂ ಅವರ ನಿಭಾಯಿಸಿದ ಕೇಸ್​​ಗಳ ವಿವರ ನೀಡಲಿದೆ. ವೈದ್ಯರ ಒಂದು ಪರಿಚಯ ಇಲ್ಲಿ ಸಿಗಲಿದೆ ಹಾಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ. ಪ್ರತಿ ವೈದ್ಯರನ್ನು ಅಳೆದು ತೂಗಿ, ರೋಗಿ ಚಿಕಿತ್ಸೆ ಪಡೆಯುವ ಆಸ್ಪತ್ರೆಯ ಮಾಹಿತಿ ಪಡೆಯುವಂತಹ ವಿನೂತನ ವೇದಿಕೆ ಇದಾಗಿದೆ.. ಇದರೊಂದಿಗೆ ‘ಡಾಕ್ಟರ್ ಕ್ವಿಕ್’ನಲ್ಲಿ ನೋದಾಯಿಸಿದ ರೋಗಿಗೆ ಇ-ಕಾರ್ಡ್ ನೋಡುವಂತಹ ಸೇವೆ ಕೂಡ ಉಚಿತವಾಗಿ ನೀಡಲಾಗುತ್ತದೆ. ಇದನ್ನು ನೀವು ಜಗತ್ತಿನ ಯಾವ ಮೂಲೆಯಿಂದಾದ್ರು ನೋಡಬಹುದು’..

image


"ನಮ್ಮೊಂದಿಗೆ ಕೈ ಜೋಡಿಸಿರುವ ಪ್ರತಿ ಡಾಕ್ಟರ್, ಆಸ್ಪತ್ರೆ ಮತ್ತು ರೋಗಿಗಳಿಗೆ 10 ರಿಂದ 15 ಪ್ರತಿಶತ ರಿಯಾಯಿತಿಯ ಸೇವೆ ನೀಡಲಾಗುತ್ತಿದೆ. ಇದಕ್ಕಾಗಿ ನಾವು ಆಸ್ಪತ್ರೆ ಮತ್ತು ವೈದ್ಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಸದ್ಯ ನಮ್ಮ ಸೇವೆ ದಿಲ್ಲಿ ಎನ್​ಸಿಆರ್ ಮತ್ತು ಮುಂಬೈನಲ್ಲಿ ಲಭ್ಯವಿದೆ. ಆದಷ್ಟೂ ಬೇಗ ಈಡೀ ದೇಶದಲ್ಲಿ ನಮ್ಮ ಸೇವೆಯನ್ನು ನೀಡುವ ಯೋಜನೆಯತ್ತ ಕಾರ್ಯಪ್ರವೃತ್ತರಾಗಿದ್ದೇವೆ". ಎಂತಾರೆ ಅಶೀಶ್.

ಲೇಖಕರು: ಅನ್​ಮೋಲ್

ಅನುವಾದಕರು: ಎನ್.ಎಸ್. ರವಿ

5+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags