ಜೈ ಹೋ ಜಯವೇಲು...

ಟೀಮ್​ ವೈ.ಎಸ್​. ಕನ್ನಡ

 ಜೈ ಹೋ ಜಯವೇಲು...

Thursday September 22, 2016,

2 min Read

ವಿಶ್ವದಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಒಬೊಬ್ಬರು ಕೂಡ ಒಂದೊಂದು ರೀತಿಯಲ್ಲಿ ಬದುಕಿಗೆ ಸ್ಫೂರ್ತಿ ತುಂಬುತ್ತಾರೆ. ಆದ್ರೆ ಚೆನ್ನೈ ಮೂಲದ ಯುವಕ ಜಯವೇಲು ಕಥೆ ಎಲ್ಲರಿಗಿಂತ ಡಿಫರೆಂಟ್. 22 ವರ್ಷದ ಜಯವೇಲ್ ಈಗ ಚೆನ್ನೈನಲ್ಲಿ ದೊಡ್ಡ ಸುದ್ದಿಯಾಗಿದ್ದಾರೆ. ಜಯವೇಲ್ ಕುಟುಂಬ ಹೊಟ್ಟೆಹೊರೆಯುವುದಕ್ಕಾಗಿ ಚೆನ್ನೈನಲ್ಲಿ ಭಿಕ್ಷೆ ಬೇಡುತ್ತಿದ್ದರೆ, 22 ವರ್ಷದ ಈ ಯುವಕ ಕೇಂಬ್ರಿಡ್ಜ್ ಯೂನಿವರ್ಸಿಟಿಯ ಆಟೋಮೊಬೈಲ್ ಎಂಜಿನಿಯರಿಂಗ್ನಲ್ಲಿ ಅಡ್ವಾನ್ಸ್ಡ್ ಸ್ಟಡಿ ಮಾಡೋದಿಕ್ಕೆ ಆಯ್ಕೆ ಆಗಿದ್ದಾನೆ..!

image


ಸುಮಾರು ಎರಡೂವರೆ ದಶಕಗಳ ಹಿಂದಿನ ಕಥೆ. 1980ರಲ್ಲಿ ಜಯವೇಲ್ ಕುಟುಂಬ ನೆಲ್ಲೂರಿನಲ್ಲಿ ಉತ್ತಮ ಆರ್ಥಿಕತೆಯನ್ನು ಹೊಂದಿತ್ತು. ಆದ್ರೆ ಕೃಷಿ ಕೈ ಕೊಟ್ಟಿತ್ತು. ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುವ ಸ್ಥಿತಿ. ಹೀಗೆ ಹೊಟ್ಟೆ ತುಂಬಿಸುವ ಕಾಯಕವನ್ನು ಭಿಕ್ಷೆ ಬೇಡುವ ಮೂಲಕ ಆರಂಭಿಸಿದ್ರು. ಅದಕ್ಕಾಗಿ ಆರಿಸಿಕೊಂಡಿದ್ದು ಚೆನ್ನೈ ನಗರವನ್ನು. ಜಯವೇಲು ಕುಟುಂಬ ಭಿಕ್ಷೆಯಿಂದ ಬಂದ ಹಣದಿಂದ ಜೀವನ ಸಾಗಿಸಲು ಆರಂಭಿಸಿತು. ಫುಟ್​ಪಾತ್​ನಲ್ಲಿ ರಾತ್ರಿ ಕಳೆಯಿತು. ಮಳೆ, ಗಾಳಿ ಯಾವುದು ಬಂದ್ರೂ ಫುಟ್​ಪಾತ್​ನಿಂದ ಹೊರ ಹೋಗುವ ಸ್ಥಿತಿ ಇರಲಿಲ್ಲ. ಕೆಲವೊಂದು ಬಾರಿ ಮಳೆ ಜೋರಾದಾಗ ಯಾವದೋ ಒಂದು ಅಂಗಡಿ ಮುಂದೆ ದಿನ ಕಳೆಯುವ ಪರಿಸ್ಥಿತಿಯೂ ಹಲವು ಬಾರಿ ಎದುರಾಗಿತ್ತು. ಅದೆಷ್ಟೇ ಮಳೆ ನೀರು ಹರಿದ್ರೂ ಜಯವೇಲು ಕುಟುಂಬದ ಪರಿಸ್ಥಿತಿ ಮಾತ್ರ ಬದಲಾಗಿರಲಿಲ್ಲ.

ಈ ಮಧ್ಯೆ ವಿಧಿ ಕೂಡ ಸಾಕಷ್ಟು ಆಟ ಆಡಿತ್ತು. ಜಯವೇಲು ತಂದೆ ಇಹಲೋಕ ತ್ಯಜಿಸಿದ್ರು. ಅಮ್ಮ ಕುಡಿತದ ದಾಸರಾಗಿ ಬಿಟ್ಟಿದ್ದರು. ಭಿಕ್ಷೆ ಬೇಡಿ ಗಳಿಸಿದ್ದೆಲ್ಲವೂ ಕುಡಿತಕ್ಕೆ ಮೀಸಲಾಗಿರುತ್ತಿತ್ತು. ಆದ್ರೆ ಎಲ್ಲೋ ಒಂದು ಕಡೆ ಅದೃಷ್ಟವೂ ಬದಲಾವಣೆಗೆ ಸಾಥ್ ನೀಡುತ್ತದೆ. ಜಯವೇಲು, ಉಮಾ ಮುಥುರಾಮನ್​ರನ್ನು ಭೇಟಿ ಆಗಿದ್ದೇ ಟರ್ನಿಂಗ್ ಪಾಯಿಂಟ್ ಆಯಿತು. ನಿಧಾನವಾಗಿ ಜಯವೇಲು ಬದುಕಿಗೆ ತಿರುವು ಸಿಗಲು ಆರಂಭವಾಯಿತು.

ಇದನ್ನು ಓದಿ: ಬಿಹಾರದ ಯುವಕನಿಗೆ "ಶರದ್​"ಕಾಲ..!

ಉಮಾ, ತನ್ನ ಗಂಡ ಮುಥುರಾಮನ್ ಜೊತೆಗೂಡಿ ಜಯವೇಲುಗೆ ಸಹಾಯ ಮಾಡಲು ಮುಂದಾದ್ರು. ಈ ದಂಪತಿ "ಬೀದಿ ಬದಿಯ ಹೂಗಳು" (Pavement Flower) ಅನ್ನೋ ವಿಡಿಯೋ ಸ್ಟೋರಿಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಆರಂಭದಲ್ಲಿ ಜಯವೇಲು ಕುಟುಂಬ ಇದಕ್ಕೆ ಉಮಾ ಮತ್ತು ಮುಥುರಾಮನ್ ಪ್ಲಾನ್​ಗೆ ಸಾಥ್ ನೀಡಲಿಲ್ಲ. ಆದ್ರೆ ಆ ದಂಪತಿಗಳು ಜಯವೇಲು ನಿಧಾನವಾಗಿ ಜಯವೇಲು ಕುಟುಂಬದ ಮನ ಗೆದ್ದರು.

"ಆರಂಭದಲ್ಲಿ ನಾವು ಉಮಾ ಮತ್ತು ಮುಥರಾಮನ್​ರನ್ನು ಇಷ್ಟ ಪಡಲಿಲ್ಲ. ಹಲವು ಬಾರಿ ನಮಗೆ ಸಹಾಯ ಮಾಡುವ ನಾಟಕ ಮಾಡುವ ಜನರನ್ನು ನಾವು ಕಂಡಿದ್ದೇವೆ. ಹೀಗೇ ಅಂದುಕೊಂಡು ಉಮಾ ಮತ್ತವರ ಗಂಡನಿಗೆ ನೋವು ಕೂಡ ಕೊಟ್ಟೆವು. ಆದ್ರೆ ಸರಕಾರದಿಂದ ಬರುವ ಧನಸಹಾಯವನ್ನು ನಮಗೆ ಕೊಡಿಸಿದಾಗ ಮೊದಲ ಬಾರಿಗೆ ನಮಗೆ ನಂಬಿಕೆ ಹುಟ್ಟಿತು."
- ಜಯವೇಲು, ವಿದ್ಯಾರ್ಥಿ

ಉಮಾ ಮತ್ತು ಮುಥುರಾಮನ್ ಜಯವೇಲು ಕುಟುಂಬದ ನಂಬಿಕೆ ಪಡೆದುಕೊಂಡ ಮೇಲೆ ಜಯವೇಲುಗೆ ಶಿಕ್ಷಣ ಕೊಡಿಸಲು ಮುಂದಾಯಿತು. 1999ರಲ್ಲಿ ಸುಯಾಮ್ ಚಾರಿಟೇಬಲ್ ಟ್ರಸ್ಟ್ ಅನ್ನುವ ಎನ್​ಜಿಒ ಮೂಲಕ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಯಿತು. 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಜಯವೇಲು ಕೇಂಬ್ರಿಡ್ಜ್ ಯೂನಿವರ್ಸಿಟಿಯ ಎಂಟ್ರಾನ್ಸ್ ಟೆಸ್ಟ್​ನ್ನು ಕೂಡ ಸುಲಭವಾಗಿ ಪಾಸ್ ಮಾಡಿದ್ರು. ವೇಲ್ಸ್​ನ ಗ್ಲೆಂಡ್ವರ್ ಯೂನಿವರ್ಸಿಟಿಯಲ್ಲಿ ಫರ್ಫಾಮೆನ್ಸ್ ಎನ್​ಹಾನ್ಸ್​ಮೆಂಟ್ ಟೆಕ್ನಾಲಜಿ ಎಂಜಿನಿಯರಿಂಗ್​ನಲ್ಲಿ ಕಲಿಯೋದಿಕ್ಕೂ ಅವಕಾಶ ಸಿಕ್ಕಿತು.

ಜಯವೇಲು ಪಾಲಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಕ್ಕಿರೋದು ಭವಿಷ್ಯದ ಕನಸುಗಳಿಗೆ ಮೊದಲ ಹೆಜ್ಜೆಯಾಗಿದೆ. ಜಯವೇಲು ತನ್ನ ಶಿಕ್ಷಣ ಮುಗಿದ ಮೇಲೆ ಎನ್​ಜಿಒ ಒಂದನ್ನು ಸ್ಥಾಪಿಸಿ, ಅದರ ಮೂಲಕ ಹಲವು ಬೀದಿ ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಕೂಡ ಕಾಣ್ತಿದ್ದಾರೆ. ಜಯವೇಲು ಕನಸುಗಳೆಲ್ಲಾ ನನಸಾಗಲಿ ಅನ್ನೋದೇ ಎಲ್ಲರ ಹಾರೈಕೆ.

ಇದನ್ನು ಓದಿ:

1. ಟೋಲ್​ಗಳಲ್ಲಿ ಇನ್ನುಮುಂದೆ ಪೇಟಿಎಂ ಹವಾ..!

2. ತೊಟ್ಟಿ ಸೇರುವ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಫ್ರಾನ್ಸ್‌ ಸರ್ಕಾರ..!

3. ಫ್ಯಾಷನ್ ಲೋಕದಲ್ಲಿ ಹೊಸ ಭಾಷ್ಯ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ..

    Share on
    close