ಆವೃತ್ತಿಗಳು
Kannada

ಕಾರ್ಪೊರೇಟ್ ಕೆಲಸ ಬಿಟ್ಟು ಕ್ಯಾಮರಾ ಹಿಡಿದ ಕೈಗಳು!!!

ಟೀಮ್​​. ವೈ.ಎಸ್​​.

YourStory Kannada
19th Sep 2015
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಎಲ್ಲರಿಗೂ ಒಂದು ಕನಸು ಅಂತ ಇದ್ದೇ ಇರುತ್ತೆ. ಕೆಲವರಿಗೆ ಡಾಕ್ಟರ್ ಆಗೋ ಕನಸು, ಕೆಲವರಿಗೆ ಸಿನಿಮಾ ತಾರೆಗಳಾಗೋ ಆಸೆ, ಇನ್ನೂ ಕೆಲವರಿಗೆ ಟೀಚರ್, ಎಂಜಿನಿಯರ್ ಆಗೋ ಕನಸು. ಆದ್ರೆ ಈ ಕನಸುಗಳನ್ನು ನನಸು ಮಾಡಿಕೊಳ್ಳಲು ತುಂಬಾ ಶ್ರಮವಹಿಸಬೇಕು. ಕನಸಿನ ಬೆನ್ನೇರಿ ಹೋಗಿ ಛಲ ಬಿಡದ ತ್ರಿವಿಕ್ರಮರಂತೆ ಹೋರಾಡಿದರೆ ಮಾತ್ರ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಆದರೆ ಬಾಲ್ಯದ ಕನಸಿನಂತೆಎಂಜಿನಿಯರ್​​ಗಳಾಗಿದ್ದ ಇಲ್ಲೊಂದು ಜೋಡಿ, ಮತ್ತೊಂದು ಕನಸು ಕಂಡು ಅದನ್ನೂ ನನಸು ಮಾಡಿಕೊಂಡಿದೆ. ಅರೆ ಯಾರಪ್ಪಾ ಆ ಮಹಾನುಭಾವರು ಅಂತೀರಾ? ಹಾಗೇ ಓದುತ್ತಾ ಹೋಗಿ...

ಶರಣರಾಜ್ ಮತ್ತು ಚಂದ್ರು..!

ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಮತ್ತೆಲ್ಲೋ ಕೆಲಸಕ್ಕೆ ಸೇರಿದ್ದ ಈ ಯುವಕರನ್ನು ಒಂದು ಮಾಡಿದ್ದು ಕ್ಯಾಮರಾ ಹಾಗೂ ಫೋಟೋಗ್ರಫಿ. ಹೌದು, ಕೈ ತುಂಬಾ ಸಂಬಳ ಸಿಗುತ್ತಿದ್ದ ಕೆಲಸಗಳನ್ನು ಬಿಟ್ಟು ಕ್ಯಾಮರಾ ಹಿಡಿದು ಫೋಕಸ್ ಸ್ಟುಡಿಯೋಸ್ ಆರಂಭಿಸಿದ್ದ ಈ ಜೋಡಿ ಈಗ ಚೆನ್ನೈನ ಅತ್ಯುತ್ತಮ ಮದುವೆ ಫೋಟೋಗ್ರಫರ್​​ಗಳು ಅನ್ನೋ ಖ್ಯಾತಿ ಪಡೆದಿದೆ. ಒಂದು ಮದುವೆ ಸಮಾರಂಭದ ಫೋಟೋಗ್ರಫಿಗೆ ಕೇವಲ 15 ಸಾವಿರ ರೂಪಾಯಿ ಪಡೆಯುವ ಮೂಲಕ ಸ್ಟುಡಿಯೋ ಪ್ರಾರಂಭಿಸಿದ ಚಂದ್ರು ಮತ್ತು ಶರಣ್​​ರಾಜ್​​ ​​ ಇವತ್ತು ಬರೊಬ್ಬರಿ 1.25 ರಿಂದ 15 ಲಕ್ಷ ರೂಪಾಯಿವರೆಗೂ ಹಣ ಪಡೆಯುತ್ತಾರೆ.

ಚಂದ್ರುವಿನ ಪಯಣ

ಫೋಕಸ್​​ ಸ್ಟುಡಿಯೋದ ಮದುವೆ ಫೋಟೋ

ಫೋಕಸ್​​ ಸ್ಟುಡಿಯೋದ ಮದುವೆ ಫೋಟೋ


ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಚಂದ್ರು ತಂದೆ ಪ್ರಕಾಶಂರಾಜು ಕಾರ್ ಮೆಕಾನಿಕ್. ತಾಯಿ ತೆನಿಮೊಳಿ. ಹತ್ತನೇ ತರಗತಿಯಲ್ಲಿರುವಾಗ ಚಂದ್ರು ಮೊದಲ ಬಾರಿಗೆ ಅಡೋಬ್ ಫೋಟೋಶಾಪ್ ಸಾಫ್ಟ್​​ವೇರ್​​ನ್ನು ನೋಡಿ, ಫೋಟೋಗ್ರಫಿ ಸೆಳೆತಕ್ಕೊಳಗಾದರು. ತಕ್ಷಣ ಫೋಟೋಶಾಪ್, ಡಿಸೈನಿಂಗ್ ತಂತ್ರಗಾರಿಕೆಗಳ ಕುರಿತು ಪುಸ್ತಕಗಳನ್ನು ಖರೀದಿಸಿ ಓದತೊಡಗಿದರು. ಅಲ್ಲದೇ ಗೆಳೆಯನ ಕಂಪ್ಯೂಟರ್​​ನಲ್ಲೇ ಹಲವು ದಿನಗಳ ಕಾಲ ಕಲಿತು, ಒಳ್ಳೆಯ ಡಿಸೈನರ್ ಆಗಿ ಶಾಲಾ ದಿನಗಳಲ್ಲೇ ಗುರುತಿಸಿಕೊಂಡಿದ್ದರು. ಜೊತೆಗೆ ಶಿಕ್ಷಣವನ್ನೂ ಮುಂದುವರಿಸಿದ ಚಂದ್ರು ಸೇಲಂನ ಎಂಜಿನಿಯರಿಂಗ್ ಕಾಲೇಜ್​​ನಲ್ಲಿ ಮೆಕಾನಿಕಲ್ಎಂಜಿನಿಯರಿಂಗ್ ಪದವಿಪಡೆದರು. ಬಳಿಕ ಕೆಲ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ ಚಂದ್ರು ಅದರೊಂದಿಗೆ ಮನಸಿನಲ್ಲಿಯೇ ತಮ್ಮಫೋಟೋಗ್ರಫಿ ಕನಸನ್ನು ಪೋಷಿಸುತ್ತಿದ್ದರು. ಕ್ರಮೇಣ ತಮ್ಮಕಾರ್ಪೊರೇಟ್ ಜೀವನಕ್ಕೆ ಗುಡ್​ಬೈ ಹೇಳಿ ಸ್ಟುಡಿಯೋ ಒಂದರಲ್ಲಿ ಫೋಟೋಶಾಪ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದ ಚಂದ್ರು, ಡಿಜಿಟಲ್ ಕಂಪ್ಯೂಟರ್ ಅನಿಮೇಷನ್ ಕಲಿಯತೊಡಗಿದ್ರು.

ಅದೇ ಸಮಯದಲ್ಲಿ ರಿಲಯನ್ಸ್ ಮೀಡಿಯಾವರ್ಕ್ಸ್​​​ನಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಆರ್ಟಿಸ್ಟ್ ಕೆಲಸ ದೊರೆತ ಕಾರಣ ಚಂದ್ರು ಚೆನ್ನೈನಿಂದ ಮುಂಬೈಗೆ ಹಾರಿದರು. ಕೈ ತುಂಬಾ ಸಂಬಳ ಸಿಗುತ್ತಿದ್ದ ಕಾರಣ ಚಂದ್ರು ಆರ್ಥಿಕವಾಗಿಯೂ ಬೆಳೆದರು. ಇದೇ ಸಮಯದಲ್ಲಿ ಅವರಿಗೆ ಫೋಟೋಗ್ರಫಿ ಕುರಿತು ಮತ್ತೆ ಸೆಳೆತ ಆರಂಭವಾಯ್ತು. ತನ್ನ ಕನಸಿನ ಬೆನ್ನುಹತ್ತಲು ಇದೇ ಸಕಾಲ ಎಂಬುದನ್ನು ಅರಿತ ಅವರು ತಕ್ಷಣ ಆ ಕೆಲಸವನ್ನೂ ಬಿಟ್ಟು ಚೆನ್ನೈನಲ್ಲಿ ಮದುವೆ ಸಮಾರಂಭಗಳನ್ನು ಸೆರೆಹಿಡಿಯುವ ಫೋಟೋ ಸ್ಟುಡಿಯೋ ಪ್ರಾರಂಭಿಸಿದರು. ಚಂದ್ರು ಅವರ ಕ್ಷಮತೆ ಗುರುತಿಸಿದ ಅವರ ಗೆಳೆಯನೊಬ್ಬ ತನ್ನ ಮದುವೆ ಫೋಟೋಗ್ರಫಿ ಕೆಲಸವನ್ನು ಚಂದ್ರುಗೆ ಒಪ್ಪಿಸಿದರು. ಹೀಗೆ ತಮ್ಮ ಫೋಟೋಗ್ರಫಿ ವೃತ್ತಿ ಜೀವನ ಆರಂಭಿಸಿದರು ಚಂದ್ರು.

ಶರಣ್​​ರಾಜ್​​ ಮತ್ತು ಫೋಟೋಗ್ರಫಿ..!

ಶರಣ್​​ರಾಜ್​​ ಕಥೆ ಚಂದ್ರು ಕಥೆಗಿಂತ ಸ್ವಲ್ಪ ಭಿನ್ನ. ಎಲೆಕ್ಟ್ರಾನಿಕ್ಸ್ ಎಜಿನಿಯರ್ ಆಗಿದ್ದ ಶರಣ್ ಫೋಟೋಗ್ರಫಿ ಸೆಳೆತಕ್ಕೆ ಒಳಗಾಗಲು ಕಾರಣ ಅವರ ಸ್ನೇಹಿತನ ಡಿಎಸ್ಎಲ್ ಆರ್ ಕ್ಯಾಮರಾ. ಮೊದಲು ಖುಷಿಗೆ ಹಾಗೂ ಸಮಯ ಮುಂದೂಡಲು ಆರಂಭವಾದ ಫೋಟೋಗ್ರಫಿ ಕ್ರಮೇಣ ತಮ್ಮಜೀವನದ ಒಂದು ಭಾಗವಾಗಿ ಹೋಯ್ತು ಅಂತ ತಮ್ಮ ಪ್ಯಾಷನ್ ಬಗ್ಗೆ ಹೇಳಿಕೊಳ್ಳುತ್ತಾರೆ ಶರಣರಾಜ್. ವಿವಿಧ ಕ್ಯಾಮರಾಗಳ ಬಗ್ಗೆ ಸಾಕಷ್ಟು ಕಲಿತುಕೊಂಡಿರುವ ಶರಣ್ ಫೋಟೋ ಎಡಿಟಿಂಗ್ ತರಬೇತಿಯನ್ನೂಪಡೆದಿದ್ದಾರೆ. ಗೆಳತಿಯೊಬ್ಬಳ ಮದುವೆಯಲ್ಲಿ ಫೋಟೋಗಳನ್ನು ಸೆರೆಹಿಡಿದಿದ್ದ ಶರಣ್​​ರಾಜ್​​, ಎಲ್ಲರಿಂದ ಭೇಷ್ಎನಿಸಿಕೊಂಡಿದ್ದರು. ಹೀಗೆ ಕ್ರಮೇಣ ಅವರಿಗೆ ಚಂದ್ರು ಪರಿಚಯವಾಗಿ, ಇಬ್ಬರೂ ಫೋಕಸ್ ಸ್ಟುಡಿಯೋಸ್ ಆರಂಭಿಸಿದರು.

ಇದುವರೆಗೆ ಚಂದ್ರು ಮತ್ತು ಶರಣರಾಜ್ ಜೋಡಿ ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಹಲವಾರು ಮದುವೆಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ. ಅಷ್ಟೇ ಯಾಕೆ ಪ್ಯಾರಿಸ್, ಲಂಡನ್, ಬ್ಯಾಂಕಾಕ್ ಸಿಂಗಪೂರ ,ಸೇರಿದಂತೆ ವಿದೇಶಗಳಲ್ಲೂ ತಮ್ಮ ಕ್ಯಾಮರಾ ಕೈ ಚಳಕತೋರಿದ್ದಾರೆ. ಫೋಟೋಗ್ರಫಿ ಒಂದು ಕಲೆ, ನಾವದನ್ನು ಗೌರವಿಸುತ್ತೇವೆ ಹಾಗೇ ಹಲವು ಪ್ರಯೋಗಗಳನ್ನೂಮಾಡುತ್ತೇವೆ. ಆದರೆ ಅತ್ಯುತ್ತಮ ಫಲಿತಾಂಶ ಒಂದೇ ನಮ್ಮಗುರಿಯಾಗಿರುತ್ತೆ ಅಂತ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳುತ್ತಾರೆ ಚಂದ್ರು.

ಫೋಕಸ್​​ ಸ್ಟುಡಿಯೋ ತಂಡ

ಫೋಕಸ್​​ ಸ್ಟುಡಿಯೋ ತಂಡ


ಸದ್ಯ ಫೋಕಸ್ ಸ್ಟುಡಿಯೋಸ್​​ನಲ್ಲಿ 10 ಜನರ ತಂಡ ಕೆಲಸಮಾಡುತ್ತಿದ್ದು, ಇದುವರೆಗೆ 150ಕ್ಕೂ ಹೆಚ್ಚು ಮದುವೆ ಸಮಾರಂಭಗಳನ್ನು ಸೆರೆಹಿದಿದ್ದಾರೆ. ಈ ಮೂಲಕ ಚೆನ್ನೈನ ಅತ್ಯುತ್ತಮ ಫೋಟೋಗ್ರಫರ್​ಗಳಲ್ಲಿ ಅತ್ಯುತ್ತಮರು ಎನಿಸಿಕೊಂಡಿರುವ ಖ್ಯಾತಿ ಚಂದ್ರು ಮತ್ತು ಶರಣ್​​ರಾಜ್​​ಗೆ ಸಲ್ಲುತ್ತದೆ. ಮಾರುಕಟ್ಟೆಗೆ ಬರುವ ಲೇಟೆಸ್ಟ್ ಕ್ಯಾಮರಾಗಳು, ಹಾಗೂ ಉಪಕರಣಗಳು ಸೇರಿದಂತೆ ಸಂಕಲನ ಹಾಗೂ ಫೋಟೋಶಾಪ್​​ನಲ್ಲೂ ಅತ್ಯುತ್ತಮ ಸಾಫ್ಟ್​​ವೇರ್​​ಗಳನ್ನು ಬಳಸಿಕೊಳ್ಳುವ ಕಾರಣ ಫೋಕಸ್​​​ ಸ್ಟು ಡಿಯೋ ತಾಂತ್ರಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿದೆ. ಅಲ್ಲದೇ ಕಲಾತ್ಮಕ ಹಾಗೂ ಕ್ಯಾಂಡಿಡ್​​ ಫೋಟೋಗ್ರಫಿ ಮೂಲಕ ಚೆನ್ನೈ ಮಾತ್ರವಲ್ಲ ಭಾರತದಲ್ಲೇ ಹೊಸ ಅಲೆ ಸೃಷ್ಟಿಸಿದೆ ಈ ಜೋಡಿ.

3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags