ಆವೃತ್ತಿಗಳು
Kannada

ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..!

ಟೀಮ್​​ ವೈ.ಎಸ್​. ಕನ್ನಡ

26th Feb 2017
Add to
Shares
17
Comments
Share This
Add to
Shares
17
Comments
Share

ಕೆಲವೊಮ್ಮೆ ನಮ್ಮ ಯೋಚನೆಗಳು ಒಂದಾಗಿರುತ್ತದೆ. ಆದ್ರೆ ಅದೃಷ್ಟವೇ ಬೇರೆ ಆಗಿರುತ್ತದೆ. ಇದು ಕೂಡ ಅದೇ ತರಹದ ಕಥೆಯಾಗಿದೆ. ರೈತನೊಬ್ಬ ಸಹಾಯಕ ಪೊಲೀಸ್ ಕಮಿಷನರ್ ಆಗಿ ಸಾಧನೆ ಮಾಡಿದ ಸ್ಟೋರಿ ಇದು. ಇವರ ಹೆಸರು ಆರ್. ದಿಘವ್ಕರ್. ಮುಂಬೈ ಪೊಲೀಸ್ ಡಿಪಾರ್ಟ್ ಮೆಂಟ್​​ನಲ್ಲಿ ಅಡಿಷನಲ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತನಾಗಿ ಬದುಕು ಆರಂಭಿಸಿದ್ರೂ ಸರ್ಕಾರಿ ಸೇವೆ ಸಲ್ಲಿಸಬೇಕು ಅನ್ನುವ ಆಸೆ ಮಾತ್ರ ದಿಘವ್​​ಕರ್​ಗೆ ದೊಡ್ಡದಿತ್ತು.

image


“ ನಾನು ಹುಟ್ಟಿದ್ದು ನಾಶಿಕ್ ಬಳಿಯ ಲಿಟಾನಿಯಾ ಅನ್ನುವ ಚಿಕ್ಕ ಗ್ರಾಮದಲ್ಲಿ. ನಮ್ಮ ಗ್ರಾಮದಲ್ಲಿ ಇದ್ದಿದ್ದು ಒಂದು ಚಿಕ್ಕ ಶಾಲೆ. ಪುರುಷರ ಪ್ರಧಾನ ಕೆಲಸ ಅಂದ್ರೆ ಕೃಷಿ ಮಾಡುವುದು. ಆದ್ರೆ ಚಿಕ್ಕವಯಸ್ಸಿನಲ್ಲೇ ನನಗೆ ಸರ್ಕಾರಿ ಕೆಲಸ ಮಾಡಬೇಕು ಅನ್ನುವ ಕನಸು ಇತ್ತು. ಒಂದು ಬಾರಿ ನಮ್ಮ ಮನೆಯ ಮೇಲೆ ವಿಮಾನವೊಂದು ಹೋಗುತ್ತಿತ್ತು, ಅಮ್ಮನ ಬಳಿ ಅದು ಯಾರದು ಎಂದು ಕೇಳಿದೆ. ಅಮ್ಮ ನನ್ನ ಸಮಧಾನಕ್ಕಾಗಿ ಅದು ಸರ್ಕಾರದ ವಿಮಾನ ಅಂತ ಹೇಳಿದ್ರು. ಆವತ್ತಿನಿಂದ ನಾನು ಕೂಡ ಸರ್ಕಾರಿ ಕೆಲಸ ಪಡೆಯಬೇಕು ಅನ್ನುವ ಕನಸು ಕಾಣಲು ಆರಂಭಿಸಿದೆ. ನಾನು ಹಗಲು-ರಾತ್ರಿ ಅಧ್ಯಯನ ಮಾಡುತ್ತಿದ್ದೆ. SSC ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲಿಗನಾದೆ. ಕಾಲೇಜು ಸೇರಿದೆ. ಮನೆಯಿಂದ ಕಾಲೇಜು 23 ಕಿಲೋಮೀಟರ್ ದೂರವಿದ್ದರೂ, ಒಂದೇ ಒಂದು ದಿನವೂ ಕಾಲೇಜ್​​ಗೆ ಚಕ್ಕರ್ ಹೊಡೆದಿರಲಿಲ್ಲ. ಪಿಯುಸಿಯಲ್ಲಿ ಶೇಕಡಾ 86 ರಷ್ಟು ಅಂಕ ಪಡೆದ್ರೂ ನಮ್ಮ ಗ್ರಾಮಕ್ಕೆ ಹತ್ತಿರವಿದ್ದ ಕಾಲೇಜ್​ನಲ್ಲಿ ನನಗೆ ಓದಲು ಅವಕಾಶ ಸಿಗಲಿಲ್ಲ. ನನ್ನ ತಂದೆ ಓದು ಬಿಟ್ಟು ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದ್ರು. ”
- ಆರ್. ದಿಘವ್​​ಕರ್, ಎಸಿಪಿ ಮುಂಬೈ

16ನೇ ವರ್ಷಕ್ಕೆ ನಾನು ಸಂಪೂರ್ಣ ಕೃಷಿಕನಾಗಿದ್ದೆ. ಆದ್ರೆ ಓದಿನ ಬಗ್ಗೆ ಕನಸು ದೊಡ್ಡದಾಗಿತ್ತು. ಅಮ್ಮನ ಕೈಯಿಂದ 350 ರೂಪಾಯಿ ಪಡೆದುಕೊಂಡು ದೂರಶಿಕ್ಷಣ ಪ್ರೋಗ್ರಾಂ ಯೋಜನೆ ಅಡಿಯಲ್ಲಿ ಓದು ಮುಂದುವರೆಸಿದೆ. ಹಗಲು ಹೊತ್ತಿನಲ್ಲಿ ಕೃಷಿ ಕೆಲಸ. ರಾತ್ರಿ ಓದು. ಪದವಿ ಪಡೆಯಲು ನಾನು ಸಾಕಷ್ಟು ಶ್ರಮ ಪಟ್ಟೆ. 18ನೇ ವರ್ಷದಲ್ಲಿ ನಾನು ಪದವಿ ಪಡೆದುಕೊಂಡೆ. ನನಗೆ ಓದಿಗಾಗಿ ಖರ್ಚಾಗಿದ್ದು ಕೇವಲ 1250 ರೂಪಾಯಿ. ಪೊಲೀಸ್ ಸರ್ವೀಸ್ ಎಕ್ಸಾಂ ಮತ್ತು ಕಂಬೈನ್ಡ್ ಡಿಫೆನ್ಸ್ ಪರೀಕ್ಷೆಯಲ್ಲೂ ಪಾಸ್ ಆಗಿದ್ದೆ. 1987ರಲ್ಲಿ ನನ್ನ 22ನೇ ವಯಸ್ಸಿನಲ್ಲಿ ಮುಂಬೈ ಪೊಲೀಸ್ ಡಿಪಾರ್ಟ್ ಮೆಂಟ್​​ನಲ್ಲಿ ಅಸಿಸ್ಟಂಟ್ ಕಮಿಷನ್ ಆಗಿ ಆಯ್ಕೆಯಾಗಿದೆ. ಆ ದಿನ ನನ್ನ ಪಾಲಿಗೆ ಅತ್ಯಂತ ಶ್ರೇಷ್ಠ ದಿನವಾಗಿತ್ತು.

ಇದನ್ನು ಓದಿ: ನಿಮ್ಮ ಕಾರು ಎಲ್ಲೇ ಹೋಗಲಿ, ಯಾರೇ ಡ್ರೈವ್ ಮಾಡಲಿ ಚಿಂತೆ ಬೇಡ- "ಕಾರ್ನೊಟ್" ಡಿವೈಸ್ ಮೂಲಕ ಎಲ್ಲವೂ ನಿಮಗೆ ತಿಳಿಯುತ್ತೆ..!

ದಿಘವ್​​ಕರ್ ಕೆಲಸಕ್ಕೆ ಸೇರಿಕೊಂಡ ಮೇಲೂ ಓದುವುದನ್ನು ನಿಲ್ಲಿಸಲಿಲ್ಲ. 1993ರ ಮುಂಬೈ ಬಾಂಬ್ ಸ್ಪೋಟದ ಬಳಿಕ ಪ್ರತಿದಿನ 18 ಗಂಟೆಗಳ ಕಾಲ ಕೆಲಸ ಮಾಡಿದ್ದರೂ ಓದುವುದನ್ನು ಮಾತ್ರ ಬಿಟ್ಟಿರಲಿಲ್ಲ.

“ ನಾನು 2000ದಲ್ಲಿ IPS ಆಫೀಸರ್ ಆದೆ. ಕೃಷಿಕನಾಗಿ, 1250ರೂಪಾಯಿಗಿಂತ ಒಂದು ರೂಪಾಯಿಯನ್ನು ಹೆಚ್ಚು ಖರ್ಚು ಮಾಡದೆ IPS ಪರೀಕ್ಷೆ ಪಾಸ್ ಮಾಡಿದೆ. ನಾನು ನನ್ನ ಗ್ರಾಮದಲ್ಲಿ ಶಾಲೆಯೊಂದನ್ನು ಸ್ಥಾಪಿಸಿದ್ದೇನೆ. ಡ್ರೀಮ್ ಹೌಸಿಂಗ್ ಸೊಸೈಟಿ ಮೂಲಕ 10,000 ಕಾನ್ಸ್​​ಟೇಬಲ್​​ಗಳಿಗೆ ಮನೆ ಕಟ್ಟಿಸಿಕೊಡುವ ಕನಸಿದೆ. ”
- ಆರ್. ದಿಘವ್​​ಕರ್, ಎಸಿಪಿ ಮುಂಬೈ

ಹಲವು ಜನರು ಪೊಲೀಸರನ್ನು ಬೇಕಾದಂತೆ ದೂರುತ್ತಾರೆ. ಆದ್ರೆ ನಾವು ನಮ್ಮ ಕೆಲಸ ಮಾಡುತ್ತೇವೆ ಅನ್ನೋದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮನೆಗಳ ಹಬ್ಬ ಮತ್ತು ಇತರೆ ಸಮಾರಂಭಗಳನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ವರ್ಷದ 365 ದಿನವೂ ಕೆಲಸ ಮಾಡಬೇಕಾಗಿರುತ್ತದೆ. ಒತ್ತಡಗಳು ಕೂಡ ಇರುತ್ತದೆ. ಜನರು ನಮ್ಮ ಕಷ್ಟದ ಬಗ್ಗೆ ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಏನು ಅಂದುಕೊಳ್ಳುತ್ತಾರೋ ಹಾಗೇ ಯೋಚನೆ ಮಾಡುತ್ತಾರೆ.

ಧಿಘವ್​​ಕರ್ ಸಾಧನೆ ಮತ್ತು ಅವರ ಶ್ರಮ ಎಲ್ಲರಿಗೂ ಸ್ಪೂರ್ತಿ. ಕೃಷಿಕನಾಗಿದ್ದರೂ ಹಠ ಮತ್ತು ಶ್ರಮದಿಂದ ಎಲ್ಲವನ್ನು ಗೆಲ್ಲಬಹುದು ಅನ್ನೋದನ್ನ ಧಿಘವ್​​ಕರ್ ಬದುಕಿನ ಅನುಭವಗಳಿಂದ ತಿಳಿದುಕೊಳ್ಳಬಹುದು.

ಇದನ್ನು ಓದಿ:

1. ಕೊಹ್ಲಿ, ಧೋನಿಗಿಂತ ಇವರು ಕಡಿಮೆಯಲ್ಲ- ವಿಶ್ವಚಾಂಪಿಯನ್ನರಾದರೂ ಜೀವನದಲ್ಲಿ ನೆಮ್ಮದಿ ಕಂಡಿಲ್ಲ..!

2. ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

3. ಆಮೆಗಳನ್ನು ಉಳಿಸಿ- ಇದು ನೌಕಾದಳದ ಅಭಿಯಾನ..!

Add to
Shares
17
Comments
Share This
Add to
Shares
17
Comments
Share
Report an issue
Authors

Related Tags