ಆವೃತ್ತಿಗಳು
Kannada

ದೇಶಕ್ಕೆ ನಿಜವಾಗ್ಲೂ ಅಚ್ಛೇ ದಿನ್ ಬಂದಿದ್ಯಾ.. ಅದೊಂದು ಭ್ರಮೆಯಾ.. !?

ಟೀಮ್​ ವೈ.ಎಸ್​. ಕನ್ನಡ

YourStory Kannada
30th May 2016
Add to
Shares
1
Comments
Share This
Add to
Shares
1
Comments
Share

ಪ್ರಧಾನಿ ನರೆಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದಿವೆ. ಈ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ತೆಗೆದುಕೊಂಡಿರುವ ಜನಪರ ನಿರ್ಧಾರಗಳು ಹಾಗೂ ಸರ್ಕಾರದ ಕಾರ್ಯವೈಖರಿಯನ್ನ ತೆರೆದಿಡುವ ಕೆಲಸ ನಡೆಯುತ್ತಿದೆ. ಇನ್ನು ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮೋದಿ ಸರ್ಕಾರದ ಗುಣಗಾನ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಠಣೆ ನಡೆಯುತ್ತಿದೆ. ಆದ್ರೆ ಎಂದಿನಂತೆ ಕೆಲವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇನ್ನು ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನ ತುಂಬಾ ಜನ ವಿಶ್ಲೇಷಣೆಗೆ ಒಳಪಡಿಸ್ತಿದ್ದಾರೆ. ನಾನು ಕಳೆದ ಹತ್ತುದಿನಗಳಿಂದ ದೆಹಲಿಯಿಂದ ದೂರವಿದ್ದೆ. ನಿನ್ನೆ ಮಧ್ಯಾಹ್ನವಷ್ಟೇ ನಾನು ದೆಹಲಿಗೆ ವಾಪಸ್ಸಾಗಿದ್ದೇನೆ. ಪೇಪರ್ ಗಳನ್ನ ನೋಡಿದ ಬಳಿಕವಷ್ಟೇ ಗೊತ್ತಾಯ್ತು ಮೋದಿ ಸರ್ಕಾರಕ್ಕೆ ಎರಡು ವರ್ಷಗಳು ತುಂಬಿದೆ ಅಂತ. 2014ರಲ್ಲಿ ನಡೆದ ಲೋಕಸಭಾ ಚುನಾವಣೆ ನನಗೆ ನಿನ್ನೆಯಷ್ಟೇ ನಡೆದ ಹಾಗೆ ಅನಿಸುತ್ತಿದೆ. ಆಬ್ ಕಿ ಬಾರ್ ಮೋದಿ ಸರ್ಕಾರ್ ಅನ್ನೋ ಹೋರ್ಡಿಂಗ್ಸ್ ಗಳನ್ನ ಮತ್ತೊಮ್ಮೆ ನೋಡುವ ಅವಕಾಶ ಸಿಕ್ಕರೂ ಅದ್ರಲ್ಲಿ ಅಚ್ಚರಿ ಏನಿಲ್ಲ. ಅಚ್ಛೆ ದಿನಗಳ ಜೊತೆಗೆ ಮೋದಿ ಸರ್ಕಾರ ನಡೆಯುತ್ತಿದ್ದು ಅದ್ರದ್ದೇ ಕ್ಯಾಂಪೆನ್ ಕೂಡ ನಡೆಯುತ್ತಿದೆ.

image


ಸರ್ಕಾರಕ್ಕೆ ಎರಡು ವರ್ಷ ಪೂರೈಸಿದ ದಿನ ಎಲ್ಲಾ ಪೇಪರ್ ಗಳಲ್ಲೂ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅಬ್ಕಿ ಬಾರ್ ಅನ್ನೋ ಹೆಡ್ ಲೈನ್ಸ್ ಇತ್ತು. ಅದೊಂದು ದೊಡ್ಡ ಕ್ಯಾಂಪೇನ್ ಆಗಿತ್ತು. ಆದ್ರೆ ಅದಕ್ಕಾಗಿ ದೊಡ್ಡ ಮಟ್ಟದ ಹಣವನ್ನ ಖರ್ಚು ಮಾಡಲಾಗ್ತಿದೆ. ಮೋದಿ ಅವರನ್ನ ಪ್ರತಿ ಬಿಂಬಿಸಲು ಭಾರೀ ಪ್ರಮಾಣದಲ್ಲಿ ಪೋಲು ಮಾಡಲಾಗ್ತಿದೆ. ಆದ್ರೆ ಅಭಿವೃದ್ಧಿಗಳು ಆಗುವ ಬದಲು ಕೇವಲ ಸ್ಲೋಗನ್ ಗಳು ಮಾತ್ರ ಬದಲಾಗ್ತಿವೆ. “ ಮೇರಾ ದೇಶ್ ಬದಲ್ ರಹಾಹೇ, ಆಗೇ ಬಡ್ ರಹಾ ಹೇ ” ಅನ್ನೋ ಸ್ಟೇಟ್ ಮೆಂಟ್ ಗಳು ರಾರಾಜಿಸುವುದು ಸಹಜವಾಗಿದೆ. ಇದು ಮೋದಿ ತನ್ನೊಂದಿದೆ ದೇಶವನ್ನೂ ಮುಂದಕ್ಕೆ ಎಳೆದೊಯ್ಯುತ್ತಿದ್ದೇನೆ ಅನ್ನೋ ಸಂದೇಶವನ್ನ ರವಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಎಲ್ಲಾ ಸರ್ಕಾರಗಳಿಗೆ ತಮ್ಮ ಸಾಧನೆಗಳನ್ನ ಪ್ರಮೋಟ್ ಮಾಡೋದಿಕ್ಕೆ ಅವಕಾಶಳಿವೆ. ಅಧಿಕಾರವೂ ಇದೆ. ಇದು ಸಹಜ ಕೂಡ. ಆದ್ರೆ ಮೋದಿ ಸರ್ಕಾರದ ಪಥವನ್ನ ನೋಡಿದ್ರೆ ಕಾಡುವ ಒಂದು ಪ್ರಶ್ನೆ ನಿಜಕ್ಕೂ ದೇಶ ಬದಲಾಗುತ್ತಿದ್ಯಾ, ನಿಜಕ್ಕೂ ನಾವು ಮುಂದುವರಿಯುತ್ತಿದ್ದೇವಾ ಅನ್ನೋದು.

2014ರಲ್ಲಿ ಜನರಿಗೋಸ್ಕರ ಅನ್ನೋ ತತ್ವದಡಿಯಲ್ಲಿ ಸರ್ಕಾರವನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು. ಇದ್ರೊಂದಿಗೆ ದೇಶದಲ್ಲಿ ಹಬ್ಬಿರುವ ಭ್ರಷ್ಟಾಚಾರವನ್ನೂ ತೊಡೆದುಹಾಕುವ ಬಗ್ಗೆ ಆರ್ಥಿಕ ಅಸಮಾನತೆಯನ್ನ ಹೋಗಲಾಡಿಸುವ ಬಗ್ಗೆ ನಂಬಲಾಗಿತ್ತು. ಆದ್ರೆ ಸದ್ಯದ ಪರಿಸ್ಥಿತಿಯನ್ನ ನೋಡಿದ್ರೆ ಸರ್ಕಾರ ಈ ಬಗ್ಗೆ ಯೋಚಿಸಿದ್ದನ್ನೂ ಕಾಣವುದು ಸ್ವಲ್ಪ ಕಷ್ಟ. ಇನ್ನು ಕೆಲವು ಮಾಧ್ಯಮಗಳು ಮೋದಿ ಸಾಧನೆಗಳನ್ನ ದೊಡ್ಡದಾಗಿ ಬಿಂಬಿಸುತ್ತಿವೆ. ಆದ್ರೆ ಮನಮೋಹನ್ ಸಿಂಗ್ ಬಳಿಕ ಅಧಿಕಾರಕ್ಕೆ ಬಂದ ಮೋದಿ ಎಷ್ಟರ ಮಟ್ಟಿಗೆ ಕ್ರಾಂತಿ ಉಂಟುಮಾಡಿದ್ದಾರೆ ಅನ್ನೋದ್ರ ಕಡೆಗೂ ಅವಲೋಕನ ಮಾಡುವುದು ಸೂಕ್ತ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಇತಿಹಾಸದಲ್ಲೇ ಅತೀ ಭ್ರಷ್ಟ ಸರ್ಕಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸಿದ್ರು. ಇಂತಹ ಸಂದರ್ಭದಲ್ಲಿ ಬಂದ ಮೋದಿ ಹೊಸ ಗಾಳಿಯ ಬಗ್ಗೆ ಭರವಸೆ ನೀಡಿದರು. ಜನರೂ ಕೂಡ ಅದನ್ನ ಮುಕ್ತವಾಗಿ ನಂಬಿದ್ದಾರೆ. ಆದ್ರೆ ಮೋದಿ ಕ್ಯಾಬಿನೆಟ್ ನಲ್ಲಿರುವ ಅರ್ಧ ಡಜನ್ ಗೂ ಹೆಚ್ಚು ಮಂದಿ ಸಚಿವರಿಗೆ ತಮ್ಮ ಗೊತ್ತುಗುರಿಗಳ ಅರಿವಿಲ್ಲ. ತಾವೇನು ಮಾಡ್ತಿದ್ದೀವಿ ಅನ್ನೋದ್ರ ಬಗ್ಗೆ ಅವರಿಗೆ ಯಾವ ಸುಳಿವೂ ಇಲ್ಲ. ಇನ್ನು ಮೋದಿ ಸರ್ಕಾರ ಲೋಕ್ ಪಾಲ್ ಬಿಲನ್ನ ಜಾರಿಗೆ ತರಲು ಹಿಂದೇಟು ಯಾಕೆ ಆಗ್ತಿದೆ ಅನ್ನೋದು ಅದೆಷ್ಟೋ ಜನರನ್ನ ಕಾಡುತ್ತಿರುವ ಪ್ರಶ್ನೆ. ಮನಮೋಹನ್ ಸಿಂಗ್ ಅವಧಿಯಲ್ಲೇ ಈ ಬಿಲ್ ಪಾಸ್ ಆಗಿದ್ರೂ ಕೂಡ ಇದನ್ನ ಕಾರ್ಯರೂಪಕ್ಕೆ ತರುವಲ್ಲಿ ಈಗಿನ ಸರ್ಕಾರ ಎಡವಿರೋದು ಸ್ಪಷ್ಟ.

ನರೇಂದ್ರ ಮೋದಿ ಸರ್ಕಾರ ಆರ್ಥಿಕ ಬೆಳವಣಿಗೆಯಲ್ಲಿ ನೆರೆಯ ಚೀನಾ ದೇಶಕ್ಕೆ ಪೈಪೋಟಿ ಒಡ್ಡುತ್ತಿದೆ ಅಂತ ಹೇಳಲಾಗ್ತಿದೆ. ಆದ್ರೆ ವಾಸ್ತವದಲ್ಲಿ ಅಂಕಿ ಅಂಶಗಳೇ ಹೇಳುತ್ತಿರುವ ಕಥೆ ಬೇರೆ. ಆರ್ ಬಿಐ ಗವರ್ನರ್ ರಘುರಾಮನ್ ರಾಜನ್ ಪ್ರಕಾರ ರೂಪಾಯಿ ಇತರೆ ಕರೆನ್ಸಿಗಳ ವಿರುದ್ಧ ದುರ್ಬಲವಾಗುತ್ತಲೇ ಇದೆ. ಇದು ಇನ್ನಷ್ಟು ಕುಸಿತಗಳಿಗೆ ಒಳಗಾಗುವ ಸಾಧ್ಯತೆಗಳೂ ಇದೆ ಅಂತ ಸ್ವತಃ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಭಾರತ ವಿದೇಶೀ ಹೂಡಿಕೆದಾರರಿಗೆ ಯಾವತ್ತಿಗೂ ಸೂಕ್ತವಲ್ಲ ಅನ್ನೋ ಮಾತು ಸ್ಪಷ್ಟವಾಗಿದೆ. ಪ್ರಧಾನಿ ಮೋದಿ ಕೈಗಾರಿಕೆಗಳ ಪರವಾಗೇ ಸದಾ ವಾದಿಸುತ್ತಿರುತ್ತಾರೆ. ಆದ್ರೆ ಅರುಣಾಚಲ ಪ್ರದೇಶ, ಉತ್ತರಖಂಡ್ ಹಾಗೂ ದೆಹಲಿಯನ್ನ ನೋಡಿದ್ರೆ ನಿಜ ಸ್ಥಿತಿ ಅರಿವಿಗೆ ಬರುತ್ತದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ಕಗ್ಗಂಟಾಗೇ ಉಳಿದಿದೆ. ಹೀಗೆ ಸಮಸ್ಯೆಗಳ ಆಗರವನ್ನೇ ಹೊತ್ತಿರುವ ದೇಶದ ಪರಿಸ್ಥಿತಿಯನ್ನ ಅಚ್ಛೆದಿನ್ ಪರವಾಗಿ ವಾದಿಸುವವರು ಒಮ್ಮೆ ಅವಲೋಕಿಸಬೇಕು.

ಲೇಖಕರು: ಅಶುತೋಷ್​, ಆಮ್​ ಆದ್ಮಿ ಪಕ್ಷದ ನಾಯಕ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags