ಆವೃತ್ತಿಗಳು
Kannada

ಜಲಚರ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಈ ಟೀಮ್​..!

ಟೀಮ್​ ವೈ.ಎಸ್​. ಕನ್ನಡ

YourStory Kannada
4th Jul 2017
Add to
Shares
2
Comments
Share This
Add to
Shares
2
Comments
Share

ಸಮುದ್ರ ಅಂದ್ರೆ ಯಾರಿಗಿಷ್ಟ ಇಲ್ಲಾ ಹೇಳಿ..?ನೀರಿನಲ್ಲಿ ಮಿಂದು ಮಜಾ ಮಾಡಬೇಕು ಅಂತಂದ್ರೆ ಎಲ್ಲರಿಗೂ ಸಖತ್ ಇಷ್ಟ ಆಗುತ್ತದೆ. ನೀರಿನಲ್ಲಿ ಎಂಜಾಯ್ ಮಾಡುವ ನಮಗೆ ನೀರಿನಲ್ಲಿರುವ ಜಲಚರಗಳ ಬಗ್ಗೆ ಅರಿವು ಕೂಡ ಇರುವುದಿಲ್ಲ. ಮಜಾ ಮಾಡುವುದಕ್ಕೆ ಹೋಗುವ ಜನರು ಸುಮ್ಮನೆಯಂತು ಬರುವುದಿಲ್ಲ. ಅಲ್ಲೇ ತಂದ ತಿಂಡಿ ಊಟದ ವಸ್ತುಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನ ಅಲ್ಲೆ ಎಸೆದು ಬರುತ್ತಾರೆ. ಅದರಿಂದ ನೀರಿನಲ್ಲಿರುವ ಜಲಚರಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ಸರ್ವೆ ಪ್ರಕಾರ 2050ರ ಹೊತ್ತಿಗೆ ಸಮುದ್ರದಲ್ಲಿ ಜಲಚರಗಳಿಗಿಂತಲೂ ಪ್ಲಾಸ್ಟಿಕ್ ಹೆಚ್ಚಾಗಿರುತ್ತದೆ ಅನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇಂತಹ ಸ್ಥಿತಿ ಬರಬಾರದು ಅನ್ನುವ ನಿಟ್ಟಿನಲ್ಲಿ ಜಲಚರಗಳ ಸಂರಕ್ಷಣೆಗಾಗಿ ಚೆನೈ ನಲ್ಲಿ ತಂಡವೊಂದು ಹುಟ್ಟಿಕೊಂಡಿದೆ. 

image


ಜಲ ಸಂರಕ್ಷಣೆಗೆ ಚೆನೈ ಟ್ರೆಕ್ಕಿಂಗ್ ಕ್ಲಬ್

ಜಲಚರಗಳ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಸಿಟಿಸಿ ತಂಡ. ಇಂತಹದೊಂದು ವಿಭಿನ್ನ ಆಲೋಚನೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ತಂಡಕ್ಕೆ ಬಂದಿದೆ. ಏಳು ವರ್ಷಗಳ ಹಿಂದೆ ಈ ತಂಡ ಚೆನೈ ಕೋಸ್ಟಲ್ ಕ್ಲೀನ್ಅಪ್, ಅನ್ನುವ ಅಭಿಯಾನವನ್ನ ಆರಂಭ ಮಾಡಿದೆ. ಆರಂಭದಲ್ಲಿ ಸ್ವಯಂ ಸೇವಕರಿಂದ ಈ ಅಭಿಯಾನ ಆರಂಭವಾಗಿದ್ದು, ಇಂದು ಬೃಹತ್ತಾಗಿ ಬೆಳೆದು ನಿಂತು ಪ್ರತಿ ಮನೆಯಲ್ಲೂ ಈ ಆಂದೋಲನಕ್ಕೆ ಕೈ ಜೋಡಿಸುತ್ತಿದ್ದಾರೆ. 

ಇದನ್ನು ಓದಿ: ಕೆಆರ್​ಎಸ್​ ಬತ್ತಿ ಹೋಗಬಹುದು, ಆದರೆ "ಕಾಮೇಗೌಡರ ಕಟ್ಟೆ" ಬತ್ತುವುದಿಲ್ಲ..!

ಬೃಹತ್ ಮಟ್ಟದಲ್ಲಿ ನಡೆಯುತ್ತೆ ಜಲಚರಗಳ ಸಂರಕ್ಷಣೆ

2010ರಲ್ಲಿ ಆರಂಭವಾದ ಈ ತಂಡದಲ್ಲಿ ಕೇವಲ 500 ಜನ ಸ್ವಯಂ ಸೇವಕರು ಮಾತ್ರ ಭಾಗಿಯಾಗಿದ್ದರು. ಈಗ 8ನೇ ಆವೃತಿಯ ಅಭಿಯಾನ ನಡೆಯುತ್ತಿದ್ದು ಆರು ಸಾವಿರಕ್ಕೂ ಹೆಚ್ಚಿನ ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. 6ಸಾವಿರ ಜನರಲ್ಲಿ 130 ತಂಡಗಳು ಐಟಿ ಕಂಪನಿಗಳಿಂದ ಬರುತ್ತವೆ. ಅದಷ್ಟೇ ಅಲ್ಲದೆ ಸ್ಪೋರ್ಟ್ ಅಸೋಶಿಯೆಷನ್ ನಿಂದಲೂ ಸಾಕಷ್ಟು ತಂಡಗಳು ಇದರಲ್ಲಿ ಬಾಗಿಯಾಗುತ್ತವೆ. 

image


ಹೇಗೆ ನಡೆಯುತ್ತೆ ಜಲಚರಗಳ ಸಂರಕ್ಷಣೆ..?

ಜಲಚರಗಳ ಸಂರಕ್ಷಣೆ ಅಂದ್ರೆ ನೀರಿನಲ್ಲಿ ವಾಸಮಾಡುವ ಪ್ರಾಣಿಗಳನ್ನ ಅಥವಾ ಜಲಚರಗಳನ್ನ ರಕ್ಷಣೆ ಮಾಡುವುದಲ್ಲ. ಚೆನೈನಲ್ಲಿರುವ ಸಾಗರ ಸಮುದ್ರಗಳ ಬಳಿ ಇರುವ ಪ್ಲಾಸ್ಟಿಕ್ ,ಗಾಜು,ಬಟ್ಟೆಗಳು ಮತ್ತು ಪಾದರಕ್ಷೆಗಳನ್ನ ಆಯ್ದು ತರಲಾಗುತ್ತದೆ. ನೀರಿನಲ್ಲಿ ಇಂತಹ ವಸ್ತುಗಳು ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಚೆನೈ ಮಾತ್ರವಲ್ಲದೆ, ಪಾಂಡಿಚೆರಿ, ಹೈದ್ರಾಬಾದ್, ಕೊಯಮತ್ತೂರು,ವಿಶಾಖಪಟ್ಟಣಂ,ಕನ್ಯಾಕುಮಾರಿ ಹೀಗೆ ಅಕ್ಕ ಪಕ್ಕದ ಸಿಟಿಗಳಲ್ಲೂ ಈ ತಂಡ ಸಂಚಾರ ಮಾಡಿ ಅಲ್ಲಿಯ ಸಮುದ್ರ ಅಂಚಗಳನ್ನೂ ಕೂಡ ಸ್ವಚ್ಚ ಮಾಡುತ್ತಿದೆ. ಇವರುಗಳಿಗೆ ಸಮುದ್ರದ ಸುತ್ತಾ-ಮುತ್ತಾ ಇರುವ ಮೀನುಗಾರರ ಕುಟುಂಬಸ್ಥರು ಕೂಡ ಕೈ ಜೋಡಿಸುತ್ತಾರೆ. ಒಮ್ಮೆಲೆ 5ಟನ್ ಅಷ್ಟು ಪ್ಲಾಸ್ಟಿಕ್ ಸಂಗ್ರಹಣೆಯನ್ನು ಈ ತಂಡ ಮಾಡಿದ್ದು ಶೇಕಡ 90ರಷ್ಟು ಪ್ಲಾಸ್ಟಿಕ್ ಗಳನ್ನ ರೀ ಯ್ಯೂಸ್ ಮಾಡಿದ್ದಾರೆ ಅನ್ನೋದು ಸಂತೋಷದ ವಿಚಾರ. ನಿಮ್ಮ ಊರಿನಲ್ಲೂ ಸಾಗರ ಸಮುದ್ರ ಇದ್ದು ನೀವು ಕೂಡ ಚೆನೈ ಟ್ರೆಕ್ಕಿಂಗ್ ಕ್ಲಬ್ ನ ಸಹಾಯದಿಂದ ಹೊಸ ತಂಡವನ್ನ ಕಟ್ಟಿಕೊಳ್ಳಬಹುದು ಅಂತಹ ಆಸೆ ಇದ್ದರೆ ಇವರನ್ನ ತಲುಪಬಹುದು, contact@thebetterindia.com, peter.vangeit@gmail.com.

ಇದನ್ನು ಓದಿ

1. ಸಾಂಪ್ರದಾಯಿಕ ದೋಸೆ ತಿನ್ನಲು ಇಲ್ಲಿ ಬೇಟಿ ನೀಡಿ

2. ಗ್ರಾಮೀಣ ಕ್ರೀಡಾಪಟುಗಳ ಜೀವನ ರೂಪಿಸುವ ಸಿದ್ಧಾರ್ಥ್- ಒಂದೂವರೆ ಲಕ್ಷ ಪ್ರತಿಭೆಗಳ ಬದಕು ಕಟ್ಟಿಕೊಡುವ ಸ್ಟೈರ್ಸ್

3. ತೆಂಗಿನ ಕೊಯ್ಲಿನ ಚಿಂತೆ ಬಿಟ್ಟುಬಿಡಿ- ಅಪ್ಪಚ್ಚನ್​ ಅನ್ವೇಷಣೆಯ ಬಗ್ಗೆ ತಿಳಿದುಕೊಳ್ಳಿ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags