ಆವೃತ್ತಿಗಳು
Kannada

ನಂಬಿಕೆ ಮತ್ತು ಪ್ರಾರ್ಥನೆಯಿಂದ ಬದುಕು ಬದಲಾಯ್ತು..!

ಟೀಮ್​​ ವೈ.ಎಸ್​​.

26th Oct 2015
Add to
Shares
0
Comments
Share This
Add to
Shares
0
Comments
Share

ಉಜ್ವಲ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಕಿಯಾಗಿದ್ದಾರೆ ಮಾಲತಿ ಬೋಜ್ವಾನಿ. ಸಲಹೆಗಾರ್ತಿ ಹಾಗೂ ತತ್ವಶಾಸ್ತ್ರದ ಬಗ್ಗೆ ತರಬೇತಿ ನೀಡುವ ಇವರು, ತಮ್ಮ ಜೀವನದ ಪ್ರತಿಕೂಲ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಮುಂದೆ ಅಡಿ ಇಡಲು ಜನರಿಗೆ ಸ್ಫೂರ್ತಿ ಹಾಗೂ ಶಕ್ತಿ ತುಂಬುವ ಕೆಲಸವನ್ನು ಮಾಲತಿ ನಿರ್ವಹಿಸುತ್ತಿದ್ದಾರೆ.

ವೈಯಕ್ತಿಕ ಸವಾಲುಗಳಿಂದಾಚೆಗೆ..

ಇಂಡೋನೇಶಿಯಾದಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಮಾಲತಿ ಫ್ಯಾಶನ್ ಡಿಸೈನಿಂಗ್ ಮತ್ತು ಜೆಮೊಲಾಜಿ ಅಧ್ಯಯನ ನಡೆಸಿದರು. ನಂತರ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ಕುಟುಂಬ ವ್ಯವಹಾರದಲ್ಲಿ ಕೈ ಜೋಡಿಸಿದರು.ಚಿಕ್ಕ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೊಳಗಾದರು. ಆದರೆ ಅವರ ಮದುವೆ ನಂತರದ ಜೀವನ ಸುಖಕರವಾಗಿರಲಿಲ್ಲ. ಹಾಗಾಗಿ ತಮ್ಮ 26ನೇ ವಯಸ್ಸಿನಲ್ಲಿ ಪತಿಯಿಂದ ಬೇರೆಯಾದ ಮಾಲತಿಗೆ, ಮಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯ್ತು.

image


ಮೊದಲ ಬಾರಿ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿದ ಅವರು, ಟೋನಿ ರಾಬಿನ್ಸ್ ಸೆಮಿನಾರ್ ಗೆ ಹಾಜರಾಗಿದ್ದರು. LGAT (ಲಾರ್ಜ್ ಗ್ರೂಪ್ ಜಾಗೃತಿ ತರಬೇತಿ) ಶಾಖೆ HPM (ಮಾನವ ಸಾಮರ್ಥ್ಯ ಹೋರಾಟ)ಯಲ್ಲಿ ತರಬೇತಿ ಪಡೆದರು. ಈ ತರಬೇತಿಯಿಂದ ಜವಾಬ್ದಾರಿಯನ್ನು ಕಲಿತ ಅವರಿಗೆ ಅಲ್ಲಿ ತರಬೇತುದಾರರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಜೀವನದಲ್ಲಿ ಹೊಸ ಸ್ಪೂರ್ತಿ ತುಂಬಲು ಇದು ಸಹಕಾರಿಯಾಯ್ತು.

ಇಂಟರ್ ನ್ಯಾಷನಲ್ ಕೋಚ್ ಫೆಡರೇಷನ್​​ನಲ್ಲಿ ಮಾಲತಿ ಸಲಹೆಗಾರ್ತಿಯಾಗಿ ತರಬೇತಿ ಪಡೆದರು. ನಂತರ ಉದ್ಯಮವನ್ನು ಸ್ಥಾಪಿಸಲು ನಿರ್ಧರಿಸಿದ ಅವರು, ಇದು ಸುಲಭದ ಕೆಲಸ ಎಂದುಕೊಂಡಿದ್ದರು. ಆರಂಭದಲ್ಲಿ ಮಾರುಕಟ್ಟೆಯ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಮೂರು ವರ್ಷಗಳ ನಂತರ ಅಂದರೆ 2000ನೇ ಇಸವಿಯಲ್ಲಿ ಮಾಲತಿ ಸಾಕಷ್ಟು ಹಣಕಾಸಿನ ಸಮಸ್ಯೆಯನ್ನು ಎದುರಿಸಿದರು. ಅವರ ಸಂಬಂಧಿಕರು ಸಲಹೆಗಾರ್ತಿ ಕೆಲಸ ಬಿಟ್ಟು, ಉತ್ತಮ ಕೆಲಸ ಮಾಡುವಂತೆ ಸಲಹೆ ನೀಡಿದರು. ಮಾಲತಿ ಮಾತ್ರ ಛಲ ಬಿಡಲಿಲ್ಲ. ಈಗ ಗುರಿ ತಲುಪಿದ್ದಾರೆ.

ತಮ್ಮ ವೈಯಕ್ತಿಕ ಪರಿಸ್ಥಿತಿಯಿಂದ ಹೊರ ಬರಲು ಕಾರಣವಾಗಿದ್ದು, ನಿಷ್ಠುರ ನಿರ್ಧಾರ, ದೇವರ ಮೇಲಿನ ನಂಬಿಕೆ. ಮಾಲತಿ " 7 Recovery Steps to get over a break up" ಎಂಬ ಪುಸ್ತಕದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಾಲತಿ ಜನರಿಗೆ ಸ್ಫೂರ್ತಿಯಾಗಿದ್ದಾರೆ. ನಮ್ಮ ಸಂತೋಷ ಬಾಹ್ಯ ಬಲ ಅಥವಾ ವ್ಯಕ್ತಿಯಿಂದ ಬರಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿತಿದ್ದಾರೆ. " ನನ್ನನ್ನು ನಾನು ಹಾಗೂ ನನ್ನ ಉದ್ದೇಶಗಳನ್ನು ನಿಜವಾಗಿಯೂ ಪ್ರೀತಿಸಲು ಮತ್ತೆ ಕಲಿತೆ" ಎನ್ನುತ್ತಾರೆ ಮಾಲತಿ.

ಉದ್ಯಮಶೀಲ ಪ್ರಯಾಣ

ವರ್ಷಗಳಲ್ಲಿ ಮಾಲತಿ 500 ಜನರಿಗೆ ತರಬೇತಿ ನೀಡಿದ್ದಾರೆ. ಜೀವನದ ವಿಭಿನ್ನ ದಾರಿಯನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಮೂರುರಿಂದ ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಮಾತುಕತೆ ನಡೆಸಿ, ಒಬ್ಬ ವ್ಯಕ್ತಿ ಚೇತರಿಸಿಕೊಳ್ಳಲು ನೆರವಾಗುತ್ತಾರೆ ಮಾಲತಿ. ಅಂತರರಾಷ್ಟ್ರೀಯ ತರಬೇತಿ, ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವುದಲ್ಲದೆ, ಸಾಂಸ್ಥಿಕ ತರಬೇತಿ ಮತ್ತು ವೈಯಕ್ತಿಕ ಸಮಾಲೋಚನೆಯನ್ನು ಮಾಲತಿ ಉದ್ಯಮವಾಗಿಸಿಕೊಂಡಿದ್ದಾರೆ. ವಿವಿಧ ತರಬೇತಿಯನ್ನು ನೀಡಿರುವ ಅವರು ಥೈಲೆಂಡ್ ನಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಏಕದಿನದ ಕಾರ್ಯಾಗಾರ ನಡೆಸಿದ್ದಾರೆ.

ಮಾಲತಿ ಎರಡು ಪುಸ್ತಕಗಳ ಲೇಖಕಿ. ಅಂತರರಾಷ್ಟ್ರೀಯ ಮೆಚ್ಚುಗೆ ಪಡೆದ ‘Don’t Think of a Blue Ball’ ಪುಸ್ತಕ ಬಹಾಸಾ ಇಂಡೋನೇಷ್ಯಾಕ್ಕೆ ಅನುವಾದಗೊಂಡಿದೆ. ಮತ್ತೊಂದು ಪುಸ್ತಕ 'ಥ್ಯಾಂಕ್ ಫುಲ್ ನೆಸ್ ಅಪ್ರಿಸಿಯೇಷನ್ ಗ್ರಾಟಿಟ್ಯೂಡ್' ಮರು ಮುದ್ರಣಗೊಂಡಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡುವ ಯೋಚನೆ ಇದೆ.

ಗ್ರಾಹಕರನ್ನು ಸಂಪರ್ಕಿಸಲು ಹಾಗೂ ಅವರಿಗೆ ನೆರವಾಗುವ ಉದ್ದೇಶದಿಂದ ಮಾಲತಿ ತಮ್ಮದೆ ವೆಬ್ ಸೈಟ್ ಹಾಗೂ ಯೂಟ್ಯೂಬ್ ಆರಂಭಿಸಿದ್ದಾರೆ. ಯುವಕ,ಯುವತಿಯರು, ದೊಡ್ಡ ಸಂಸ್ಥೆಗಳು, ಉದ್ಯಮಿಗಳು, ಗೃಹಿಣಿಯರು ಮತ್ತು ಕಲಾವಿದರು ಸೇರಿದಂತೆ ವಿವಿಧ ಜನರೊಂದಿಗೆ ಕೆಲಸ ಮಾಡಿದ್ದಾರೆ. " ಭಾರತದಲ್ಲಿ ಚಿಕಿತ್ಸೆ ಅಥವಾ ಉತ್ತಮ ಜೀವನಕ್ಕೆ ನೀಡುವ ಸಲಹೆಯನ್ನು ಕಳಂಕ ಎಂದು ಪರಿಗಣಿಸಲಾಗುತ್ತದೆ. ಡಿಜಿಟಲ್ ಯುಗ ಇದಕ್ಕೆ ಸಹಕಾರಿ. ಆನ್​​ಲೈನ್ ಮಾಧ್ಯಮ ಸಲಹೆ ಪಡೆಯುವವರ ಬಗ್ಗೆ ಗೌಪ್ಯತೆ ಕಾಪಾಡುವ ಜೊತೆಗೆ ಮುಕ್ತವಾಗಿ ಸಮಸ್ಯೆ ಹಂಚಿಕೊಳ್ಳಲು ಸಹಕಾರಿ" ಎನ್ನುತ್ತಾರೆ ಮಾಲತಿ. ಆಸ್ಟ್ರೇಲಿಯಾದಲ್ಲಿ ಪಬ್ಲಿಷಿಂಗ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಮಗಳು ಇವರಿಗೆ ಶಕ್ತಿ. ಓಪ್ರಾ ವಿನ್ಫ್ರೇ ಮಾಲತಿಗೆ ಸ್ಫೂರ್ತಿಯಂತೆ.

image


ವ್ಯಕ್ತಿತ್ವ ವಿಕಸನಕ್ಕೆ ಮಾಲತಿ ಹೇಳುವ ಮೂರು ಹಂತಗಳು :

1. ತಪ್ಪು ಮತ್ತು ಪಶ್ಚಾತಾಪದಿಂದ ಹೊರಬನ್ನಿ. ಸಮಯ ಹಾಗೂ ಸಂಪನ್ಮೂಲ ಬಳಸಿಕೊಂಡು ನಮಗಾದಷ್ಟು ಒಳ್ಳೆ ಕೆಲಸ ಮಾಡೋಣ. ಸತ್ಯ ಯಾವಾಗಲು ಕಹಿಯಾಗಿರುತ್ತದೆ ನೆನಪಿರಲಿ.

2. ಎಲ್ಲದಕ್ಕೂ ಶ್ರಮ ಪಡಬೇಕು. ಇದು ಸುಲಭ ಎಂದು ಯಾವಾಗಲೂ ನಿರೀಕ್ಷಿಸಬೇಡಿ. ನಿಮ್ಮನ್ನು ಎಂದೂ ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ.

3." ನಾನು ಉತ್ತಮನಲ್ಲ ' ಅಥವಾ ' ನಾನು ಈ ಕೆಲಸ ಮಾಡಲು ಸಾಧ್ಯವಿಲ್ಲ' ಅಥವಾ `ಇದು ತುಂಬಾ ಕಷ್ಟ' ಎಂದು ಹೇಳಿಕೊಳ್ಳಬೇಡಿ. ಧನಾತ್ಮಕವಾಗಿ ಯೋಚಿಸಿ. ``ನಾನು ಉತ್ತಮ’’ ಎಂದು ಪದೇ ಪದೇ ದೊಡ್ಡ ಧ್ವನಿಯಲ್ಲಿ ಹೇಳಿಕೊಳ್ಳುತ್ತಿರಿ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags