ಆವೃತ್ತಿಗಳು
Kannada

ಸಾಹರ್ ಜಮಾನ್- ಕಲೆಯ ರಚನೆ ಮತ್ತು ತಯಾರಿಕೆ ಸುಲಭಸಾಧ್ಯ

ಟೀಮ್​​ ವೈ.ಎಸ್​. ಕನ್ನಡ

YourStory Kannada
2nd Dec 2015
Add to
Shares
1
Comments
Share This
Add to
Shares
1
Comments
Share

ಕಲಾ ಪತ್ರಕರ್ತೆ, ಕಲಾ ಮೇಲ್ವಿಚಾರಕಿ, ಟೆಲಿವಿಷನ್ ಆಂಕರ್ ಮತ್ತು ಚಮಕ್ ಪಟ್ಟಿ ಬ್ರಾಂಡ್‍ನ ವಿನ್ಯಾಸಕಿ ಸಾಹರ್ ಜಮಾನ್ ಹಲವು ವಿಷಯಗಳಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 14 ವರ್ಷಗಳ ಕಾಲ ಆಕೆ ಪತ್ರಕರ್ತೆಯಾಗಿದ್ದುಕೊಂಡು ಭಾರತದ ಕಲಾ ಮಾರುಕಟ್ಟೆ, ಆಧುನಿಕ ಮತ್ತು ಸಮಕಾಲೀನ ಕಲಾವಿದರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಜತೆಗೆ ಆಕೆ ತಾಯಿಯೂ ಹೌದು.

ಭಾರತದ ಖ್ಯಾತ ಕಲಾವಿದರಾದ ಎಂ.ಎಫ್.ಹುಸೇನ್, ಎಸ್ ಎಚ್ ರಾಜಾ, ಸೌಜಾರಿಂದ ಹಿಡಿದು ಸಮಕಾಲೀಕನ ಚಿತ್ರಕಾರರಾದ ಸುಭೋದ್ ಗುಪ್ತಾ ಮತ್ತು ಜಿತೀಶ್ ಕಲ್ಲಟ್‍ರನ್ನು ಸಂದರ್ಶನ ಮಾಡಿರೋ ಖ್ಯಾತಿ ಸಾಹರ್‍ರದ್ದು. ಸರ್ಕಸ್‍ನಂತಹ ರಾಜಕೀಯ ಸುದ್ದಿಯಿಂದ ಪಾರಾಗಲು ಮತ್ತು ತನ್ನ ಸೃಜನಶೀಲತೆಗೆ ಒತ್ತುಕೊಡಲು ಸಾಹರ್ ತನ್ನದೇ ಮನೆ ಅಲಂಕಾರಿಕ ಮತ್ತು ಆಭರಣಗಳ ಬ್ರಾಂಡ್ ಚಮಕ್ ಪಟ್ಟಿಯನ್ನು ಶುರುಮಾಡಿದರು.

image


ಚಮಕ್ ಪಟ್ಟಿಯಲ್ಲಿ ತನ್ನದೇ ಕೈಕುಸುರಿಯಿಂದ ಮಾಡಿದ ಪ್ರತಿಫಲನ ಸ್ಟಿಕ್ಕರ್‍ಗಳ ಜತೆ ಬೇಕಾದ ವಿನ್ಯಾಸದೊಂದಿಗೆ ಸಾಹರ್ ಆಟವಾಡ್ತಾರೆ. ಈ ಸ್ಟಿಕ್ಕರ್‍ಗಳ ಜತೆ ಸಾಹರ್ ಅಲಂಕಾರಿಕ ವಸ್ತುಗಳ ಉದ್ಯಮ ಶುರುವಾಯಿತು. ತನ್ನ ಕುಟುಂಬ ಮತ್ತು ಸ್ನೇಹಿತರಿಂದಸಿಕ್ಕ ಬೆಂಬಲದಿಂದ ಟೇಬಲ್ ಟಾಪ್, ಮರದ ಪೀಠೋಪಕರಣಗಳು, ಆಭರಣಗಳು ಮತ್ತು ಗಾಜಿನ ವಸ್ತುಗಳನ್ನು ಹೊಂದಿ ಉದ್ಯಮವನ್ನು ವಿಸ್ತರಿಸಿದರು.

ಕಲೆಯ ಬಗ್ಗೆ ಬರೆಯುತ್ತಲೇ ಸಾಹರ್ ಏಷ್ಯಾದ ಮೊದಲ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದಂತಹ ವೆಬ್ ಚಾನಲ್ ಹುನಾರ್ ಟಿವಿಯನ್ನು ಪ್ರಾರಂಭಿಸುತ್ತಾರೆ. ಸಾಮಾನ್ಯರಿಗೂ ಕಲೆಯ ಬಗ್ಗೆ ವಿಷಯಗಳು ತಲುಪಲಿ ಅನ್ನೋದುಚಾನಲ್ ಪ್ರಾರಂಭದ ಹಿಂದಿನ ಸದುದ್ದೇಶ. ಕಲೆಯ ಬಗೆಗಿನ ಬರವಣಿಗೆಯ ಉತ್ಸಾಹದ ಜತೆ ಭಾರತೀಯ ಸಮಕಾಲೀನ ಕಲೆಯ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ.

ಆಧುನಿಕ ಕಲಾ ಗುರುಗಳಾದ ಸೌಜಾ, ರಾಜಾ, ತೈಯಬ್ ಮೆಹ್ತಾರ ಉನ್ನತ ಕೃತಿಗಳ ಬಗ್ಗೆ ಗಮನ ಸೆಳೆದು ಅವುಗಳ ಬಗ್ಗೆ ಅರಿವು ಮೂಡಿಸಬೇಕೆನ್ನೋದು ಸಾಹರ್ ಬಯಕೆ. ಇದರ ಜತೆ ಪ್ರದರ್ಶನಗಳ ಮೇಲ್ವಿಚಾರಣೆ ವಹಿಸಿಕೊಂಡರೂ ಅದು ಸಾಮಾಜಿಕ ಕಾಳಜಿ ಉಳ್ಳದ್ದಾಗಿರಬೇಕು ಎಂದು ಆಕೆಯ ಮಾತು.

ಲೇಖಕರು: ಡೋಲಾ ಸಮತಾ

ಅನುವಾದಕರು: ಆರ್‍.ಪಿ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags