ಆವೃತ್ತಿಗಳು
Kannada

ಟಿವಿ ಯ ರಿಯಾಲಿಟೀ ಶೋಗಾಗಿ ಕೆಲಸ ಬಿಟ್ಟ McKinsey ಯ ಸಲಹೆಗಾರ : ಅರವಿಂದ್ ಅಯ್ಯಂಗಾರ್ ಯಶಸ್ವಿ ಪ್ರಯಾಣದ ಕಥೆ

ಟೀಮ್ ವೈಎಸ್​​ ​​​​

25th Jun 2015
Add to
Shares
2
Comments
Share This
Add to
Shares
2
Comments
Share

ಮುಂಬೈ ನ IIT ಯಲ್ಲಿ ಪದವಿ ಪಡೆದ ಅರವಿಂದ್ ಅಯ್ಯಂಗಾರ್ ಪ್ರತಿಷ್ಟಿತ McKinsey & Co ನಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಯಾಕೆ ಯಾರಾದರೂ ರಿಯಾಲಿಟೀ ಶೋ ನಲ್ಲಿ ಭಾಗವಹಿಸಲು ತನ್ನ ಕನಸಿನ ಕೆಲಸವನ್ನು ಬಿಡುತ್ತಾರೆ. 2007 ರಲ್ಲಿ ಅರವಿಂದ್ ರಿಯಾಲಿಟೀ ಶೋ ನಲ್ಲಿ 10000 ಸ್ಪರ್ಧಿಗಳಲ್ಲಿ ರನ್ನರ್ ಅಪ್ ಆಗಿದ್ದರು. ಇದು ಅವರ ಕೆಲಸವನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು ಆದರೆ ಅಯ್ಯಂಗಾರ್ ಯಾವಾಗಲೂ ಒಬ್ಬ ಕ್ರೀಡಾ ನಿರೂಪಕರಾಗಿ ಬೆಳೆಯಲು ಬಯಸಿದರು. ರಿಯಾಲಿಟೀ ಶೋ ನಲ್ಲಿ ಗೆದ್ದ ನಂತರ ಅವರು ಒಂದು ವರ್ಷಗಳ ಕಾಲ ESPN ನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದರು ನಂತರ MBA ಪದವಿ ಮಾಡಲು ಸ್ಟ್ಯಾನ್ಫರ್ಡ್ ಗೆ ತೆರಳಿದರು.

ಈ ದಿನ ಅರವಿಂದ್ ಸ್ಪೋರ್ಟ್ಜ಼್ ಇಂಟರ್ಯಾಕ್ಟಿವ್ ಮುಂಬೈ ಮೂಲದ ಕಂಪನಿಯನ್ನು ನಡೆಸುತ್ತಿದ್ದಾರೆ.

ಅವರ ಯಶಸ್ವಿ ಉದ್ಯಮದ ಬಗೆಗಿನ ಮಾಹಿತಿಗಳು ಅವರ ಮಾತಿನಿಂದಲೇ ಕೇಳೋಣ

image


1. ಕ್ರೀಡೆ ಮೇಲೆ ನಿಮಗೆ ಯಾವಾಗಲೂ ಅಪಾರವಾದ ಅಶಕ್ತಿ ಇದೆಯಾ?

ನಾನು ಬೆಂಗಳೂರಿನಲ್ಲಿ ಬೆಳೆದೆ ನನಗೆ ಕ್ರೀಡೆ ಮೇಲೆ ಅಪಾರ ಅಶಕ್ತಿ ನನಗೆ ಇವಾಗಲೂ ನೆನಪಿದೆ ನಾನು ನನ್ನ ಬಾಲ್ಯದ ದಿನಗಳಲ್ಲಿ ನನ್ನ ಸಹೋದರನ ಜೊತೆ ಕ್ರೀಡಾ ನಿರೂಪಣೆಯನ್ನು ಅಭ್ಯಾಸ ಮಾಡುತ್ತದೆ. ಈ ದಿನ ಎಲ್ಲರೂ ಕೇವಲ್ ಫ್ಯಾಂಟೆಸೀ ಗೇಮ್ಸ್ ಬಗ್ಗೆ ಮಾತನಾಡುತ್ತಾರೆ ಆದರೆ ನನಗೆ 1996 ರ ವರ್ಲ್ಡ್ ಕಪ್ ನೆನಪಾಗುತ್ತದೆ.

2. ನೀವು ಪದವಿ ವಿಧ್ಯಾಭ್ಯಾಸಕ್ಕೆ IIT ಗೆ ತೆರಳಿದರಿ ಆವಾಗ ಸ್ವಲ್ಪ ಸಮಯ ಕ್ರೀಡೆ ಇಂದ ದೂರವಿದ್ರಾ..?

ವಿಶೇಷವಾಗಿ ಭಾರತದಲ್ಲಿ ನೀವು ನಿಜವಾಗಲೂ ಕ್ರೀಡೆಯನ್ನು ಪ್ರೀತಿಸಿದರೆ ಹೇಗೆ ಆ ಕ್ರೀಡಾ ಆಶಕ್ತಿಯನ್ನು ಉಪಯೋಗಿಸಿಕೊಳ್ಳುವುದು ಎಂಬುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ನಾನು ಬೆಳೆಯುವ ಸಮಯದಲ್ಲಿ ನನಗೆ ಇದ್ದದ್ದು ಎರಡೇ ಅವಕಾಶಗಳು ಒಂದು ಡಾಕ್ಟರ್ ಆಗಬೇಕು ಇಲ್ಲ ಇಂಜಿನಿಯರ್ ಆಗಬೇಕು. ನನಗೆ ಕ್ರೀಡೆಯನ್ನು ಹೇಗೆ ವೃತ್ತಿಯಾಗೆ ತೆಗೆದುಕೊಳ್ಳುವುದು ಎಂಬುದರ ಬಗ್ಗೆ ಸುಳಿವೇ ಇರಲಿಲ್ಲ.

ನನ್ನ ತಂದೆ ಕೂಡ ಇಂಜಿನಿಯರ್ ಪದವಿಯನ್ನು IIT ಯಲ್ಲೇ ಪಡೆದದ್ದು. ಹಾಗೂ ನನ್ನ ಕುಟುಂಬದ ಹಲವು ಸದಸ್ಯರು ಕೂಡ IIT ಯಲ್ಲೇ ವಿಧ್ಯಾಭ್ಯಾಸ ಮಾಡಿದವರಾಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಒಳಗಿನ ಕಾರ್ಯಾಚರಣೆಗಳು ಮತ್ತು ವಿಶ್ಲೇಷಣೆ ಕುರಿತ ಕೆಲವು ವಿಷಯಗಳು ನನ್ನನ್ನು ಆಕರ್ಷಣೆ ಮಾಡುತ್ತಿದ್ದವು. ಇಂಜಿನಿಯರಿಂಗ್ ಗೆ ಹೋಗುವುದು ಒಂದು ಒಳ್ಳೆ ಆಯ್ಕೆ ಅನ್ನಿಸಿತ್ತು ಹಾಗೆಯೇ ನನಗೆ ಇನ್ನೂ ಕ್ರೀಡೆ ಮೇಲೆ ಅಪಾರ ಅಶಕ್ತಿ ಇತ್ತು ಯಾವಾಗ ಅವಕಾಶ ಸಿಗುತ್ತದೆ ಮತ್ತೆ ಕ್ರೀಡೆ ಗೆ ಹೋಗಬಹುದು ಎಂದು ನಿರ್ಧಾರ ಮಾಡಿದೆ.

3.ನಂತರ ನೀವು McKinsey ಯಲ್ಲಿ ಕೆಲಸಕ್ಕೆ ಸೇರಿಕೊಂಡಿರಿ, ಆದರೆ ರಿಯಾಲಿಟೀ ಶೋ ನಲ್ಲಿ ಮುಂದುವರೆಯಲು ಆ ಕೆಲಸವನ್ನು ಬಿಡಲು ಕಾರಣವೇನು?

ಎಷ್ಟೋ ಜನಗಳು ಕೇವಲ ರಿಯಾಲಿಟೀ ಶೋಗಾಗಿ ಕೆಲಸ ಬಿಡುವುದು ಒಂದು ಹುಚ್ಚುತನ ಎಂದು ಯೋಚಿಸುತ್ತಾರೆ . ಸ್ಪರ್ಧೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಮಂದಿರ ಬೇಡಿ ಕೂಡ ಒಬ್ಬ ತೀರ್ಪುಗಾರರಾಗಿದ್ದರು ಅವರು ನನ್ನನ್ನು ನೀವು ಒಳ್ಳೆ ಕಾಲೇಜ್ ನಲ್ಲಿ ವಿಧ್ಯಾಭ್ಯಾಸ ಮಾಡಿದ್ದೀರಿ ಹಾಗೆಯೇ ಒಳ್ಳೆ ಕೆಲಸ ಇದೆ ಆದರೂ ನೀವು ಏಕೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟ ಪಡುತ್ತೀರಾ ಎಂದು ಕೇಳಿದ್ದರು, ಅದಕ್ಕೆ ನನ್ನ ಉತ್ತರ ನನ್ನ ಕುಟುಂಬದಿಂದ ಹಾಗೂ McKinsey ಇಂದ ಒಳ್ಳೆ ಬೆಂಬಲ ಇದೆ. ನನ್ನ ಸುತ್ತ ಮುತ್ತ ಇರುವ ಜನಗಳಿಂದ ಇದು ನಿನ್ನ ಬಾಲ್ಯದಿಂದಲೂ ಇರುವ ದೊಡ್ಡ ಕನಸ್ಸು ಹೋಗು ಸಾಧಿಸು ಎಂಬ ಮಾತುಗಳು ನನಗೆ ಸಹಾಯ ಮಾಡುತ್ತಿವೆ ಎಂದು ಹೇಳಿದೆ. ಒಂದು ಶನಿವಾರ ನಾನು ನನ್ನ McKinsey ಯ ನನ್ನ ಎಂಗೇಜ್ಮೆಂಟ್ ಮ್ಯಾನೇಜರ್ ನ್ನು ಭೇಟಿ ಮಾಡಿ ನಾನು ESPN ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ರಿಯಾಲಿಟೀ ಶೋ ನಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದೆ ಅದಕ್ಕೆ ಹೋಗಿ ಭಾಗವಹಿಸಿ ನಮ್ಮ ಸಂಪೂರ್ಣ ಬೆಂಬಲ ಇದೆ ಎಂಬ ಮಾತುಗಳು ಅವರಿಂದ ಬಂದವು. ನಂತರ ನಾನು ಡೆಲ್ಲಿಯಿಂದ ಮುಂಬೈ ಗೆ ಪ್ರಯಾಣ ಬೆಳೆಸಿದೆ. ಆಡಿಶನ್ ಗಾಗಿ 8 ಗಂಟೆಗಳ ಕಾಲ ಕಾಯುತ್ತಾ ಕುಳಿತೆ. ಶೋ ನ ಕೊನೆಯ ಹಂತಕ್ಕೆ ಅರ್ಹತೆ ಪಡೆದೆ.

4. ಭಾರತದಲ್ಲಿ ವಿಭಿನ್ನ ವೃತ್ತಿ ಆಯ್ಕೆ ಮಾಡುವುದನ್ನು ನೀವು ನೋಡಿದ್ದೀರಾ?

ಭಾರತದಲ್ಲಿ ಹಲವು ಯುವಕರು ಇಂಜಿನಿಯರ್ ಹಾಗೂ ಡಾಕ್ಟರ್ ಆಗಲು ಬಯಸುತ್ತಾರೆ ಮತ್ತೆ ಕೆಲವರು ಏನಾದರೂ ಶೃಜನಶೀಲತೆಯಿಂದ ಕೂಡಿರುವ ಕೆಲಸವನ್ನು ಮಾಡಲು ಬಯಸುತ್ತಾರೆ. ಮನಸ್ಥಿತಿ ಪದೇ ಪದೇ ಬದಲಾಗುವುದು ಒಳ್ಳೆಯದೇ ಆದರೆ ಅವುಗಳು ವೃತ್ತಿ ಅವಕಾಶಗಳನ್ನು ನೋಡಿಕೊಂಡು ಬದಲಾಗಬೇಕು ಅಷ್ಟೇ. ನಿಮಗೆ ಫ್ಯಾಶನ್ ನಲ್ಲಿ ಅಶಕ್ತಿ ಇದ್ದರೆ ಅದಕ್ಕೂ ಹಲವು ಅವಕಾಶಗಳಿವೆ ಹಾಗೆಯೇ ನಿಮಗೆ ಸ್ಪೋರ್ಟ್ಸ್ ನಲ್ಲಿ ಅಶಕ್ತಿ ಇದ್ದರೆ ಫುಟ್‌ಬಾಲ್ ಲೀಗ್, ಕಬ್ಬಡಿ ಲೀಗ್ ಹಾಗೂ ಯುವ ಕ್ರಿಕೆಟ್ ಆಟಗಾರರಿಗೆ IPL ಹೀಗೆ ಹಲವು ಅವಕಾಶಗಳು ಇವೆ. ಪ್ರತಿಯೊಂದಕ್ಕೂ ಹಲವು ಅವಕಾಶಗಳು ಇರುತ್ತವೆ ಅವುಗಳನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು.

5. ನೀವು ESPN ನಲ್ಲಿ ಕೆಲಸ ಬಿಟ್ಟು ಸ್ಟ್ಯಾನ್ಫರ್ಡ್ ಗೆ ತೆರಳಲು ಕಾರಣವೇನು?

ESPN ಒಂದು ಅತ್ಯುತ್ತಮ ಸಂಸ್ಥೆ ಆದರೆ McKinsey ನನಗೆ ದೇಶದಲ್ಲಿ ಇರುವ ಹಲವು ಸಮಸ್ಯೆಗಳನ್ನು ಪರಿಹಾರ ಮಾಡುವ ಅಭಿಪ್ರಾಯ ಬರುವಂತೆ ಮಾಡಿತು. ಕೇವಲ ಕ್ರೀಡೆಯ ಬಗ್ಗೆ ಮಾತನಾಡಿದರೆ ಸಾಲದು . ನಾನೇ ಹೊಸದಾಗಿ ಏನಾದರೂ ಮಾಡಿ ಅದರಿಂದ ಕ್ರೀಡೆ ಮೇಲೆ ಪರಿಣಾಮ ಆಗುವಂತೆ ಮಾಡುವುದು ಮುಖ್ಯ.ಸ್ಟ್ಯಾನ್ಫರ್ಡ್ ಉದ್ಯಮಶೀಲತೆಯ ಬಗ್ಗೆ ಹಲವು ವಿಷಯಗಳನ್ನು ಕಲಿಸಿಕೊಟ್ಟಿದ್ದೆ , ಅದು ಕ್ರೀಡೆ ಮತ್ತು ವ್ಯಾಪಾರಕ್ಕೆ ಸಂಭದಪಟ್ಟ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ. ಸ್ಟ್ಯಾನ್ಫರ್ಡ್ ನಲ್ಲಿ ಬೇಸಿಗೆಯ ಸಮಯದಲ್ಲಿ ನಾನು ಎನ್ಬಿಎ ಜೊತೆ ನನ್ನ ಸಮಯವನ್ನು ಕಳೆದಿದ್ದೆ. ನಾನು ಎಲ್ಲದರ ಉಪಯೋಗ ಪಡೆದುಕೊಂಡು ಕ್ರೀಡೆಯ ಮೇಲೆ ದೊಡ್ಡ ಪರಿಣಾಮ ರಚಿಸಲು ನಾನು ಬಯಸಿದ್ದೆ.

6. GSB ಯ ನಂತರ ನೀವು ಮರಳಿ ಭಾರತಕ್ಕೆ ಬಂದು ಮುಂಬೈ ಮೂಲದ 100 ಜನರ ಸ್ಪೋರ್ಟ್ಜ಼್ ಇಂಟರ್ಯಾಕ್ಟಿವ್ ಕಂಪನಿಯನ್ನು ನಡೆಸುತ್ತಿದ್ದೀರಿ ಯಾವುದು ನೀವು ಮತ್ತೆ ಮರಳಿ ಭಾರತಕ್ಕೆ ಬರುವಂತೆ ಮಾಡಿದ್ದು?

ನಾನು ಸ್ಪೋರ್ಟ್ಜ಼್ ಇಂಟರ್ಯಾಕ್ಟಿವ್ ನ್ನು ಮುನ್ನೆಡೆಸಲು ಮರಳಿ ಬಂದೆ ಮತ್ತು ಡಾಟಾ , ನಮ್ಮ ವೆಬ್ ಸೈಟ್ ನ್ನು ಓದುವ ಅಭಿಮಾನಿಗಳ ಅನುಭವವನ್ನು ಫೋನ್ ಅಥವಾ ವೆಬ್ ಮೂಲಕ ಅಭಿವೃದ್ಧಿ ಪಡಿಸುವ ಸಲುವಾಗಿ ನಾನು ಮರಳಿ ಬಂದೆ. ಅದಕ್ಕೆ ಹಲವು ವಿಧಾನಗಳು ಇವೆ ಒಂದು ದೊಡ್ಡ ಪ್ರಸಾರಕರ ಜೊತೆ ಕೆಲಸ ಮಾಡುವುದು, ಮುಂದೆ ಬರುವ ಹೊಸ ಫುಟ್ಬಾಲ್ ಲೀಗ್ ಗಳಿಗೆ ಹೊಸ ಪ್ರಾಡಕ್ಟ್ ಒಂದನ್ನು ನಿರ್ಮಿಸಿ ಅದರ ಮೂಲಕ ಡಾಟಾ ಮತ್ತು ಅಭಿಮಾನಿಗಳ ಅನುಭವವನ್ನು ಅಭಿವೃದ್ದಿಗೊಳಿಸುವುದು. ನಾವು ನಮ್ಮನ್ನು ಎಲ್ಲೆಡೆ ತೊಡಗಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದೇವೆ.

7. ಯುವ ಉದ್ಯಮಿಗಳಿಗೆ ನಿಮ್ಮ ಸಲಹೆ ಏನು?

ನಿಮಗೆ ಏನಾದರೂ ಅಶಕ್ತಿ ಇದ್ದರೆ ಅದರ ಹಿಂದೆ ಹೋಗಿ ಯಾವಾಗಲೂ ಅದರ ಮೇಲೆ ಕಣ್ಣಿಡಿ. ಯಾವಾಗಲೂ ಸಿದ್ಧವಾಗಿರಿ ಸಾಧ್ಯವಾದಷ್ಟು ಸಮಯ ಕೆಲಸ ಮಾಡುವುದು ಯಶಸ್ಸಿಗೆ ಕೀಲಿಯಾಗಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕುವ ಮೊದಲು ಅದರ ಬಗ್ಗೆ ಬಹಳಷ್ಟು ಸಂಸೋಧನೆ ಮಾಡುವುದು ಮುಖ್ಯ. ಬೇರೆಯವರಿಗಿಂತ ಮೊದಲೇ ಸಿದ್ಧವಾಗಿರುವುದು ನಿಮಗೆ ಬಹಳ ಸಹಾಯ ಮಾಡುತ್ತದೆ ಹಾಗೆಯೇ ನೀವು ಎಲ್ಲರಿಗಿಂತ ಬುದ್ಧಿವಂತರಾಗಿರಲು ಸಾಧ್ಯವಿಲ್ಲ ಮತ್ತು ಯಾವುದು ನಿಮ್ಮ ನಿಯಂತ್ರಣ ದಲ್ಲಿ ಇರುವುದಿಲ್ಲ ಆದರೆ ಎಲ್ಲರಿಗಿಂತ ಮೊದಲೇ ಯಾವಾಗಲೂ ಸಿದ್ಧವಾಗಿರುವುದು ನಿಮ್ಮ ಯಶಸ್ಸಿಗೆ ಸಹಾಯ ಮಾಡುತ್ತದೆ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags