ಆವೃತ್ತಿಗಳು
Kannada

ಮಂಗಳಮುಖಿಯರ ಮಂದಹಾಸ ಹೆಚ್ಚಿಸಿದ Bro4u.com

ರವಿ

16th Feb 2016
Add to
Shares
4
Comments
Share This
Add to
Shares
4
Comments
Share

ಬೆಂಗಳೂರಿನ ಯಾವುದೇ ಸರ್ಕಲ್ ಟ್ರಾಫಿಕ್ ಸಿಗ್ನಲ್​​ನಲ್ಲಿ ನಾವು ಸಾಮಾನ್ಯವಾಗಿ ಮಂಗಳಮುಖಿಯರನ್ನು ಕಾಣುತ್ತೇವೆ. ಭಿಕ್ಷಾಟನೆ ಮಾಡುತ್ತಾ ಅವರು ಓಡಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಕಂಪನಿಯ ವಿಭಿನ್ನ ಯೋಚನೆ ಮಂಗಳಮುಖಿಯರ ಜೀವನ ಶೈಲಿಯನ್ನು ಸಂಪೂರ್ಣ ಬದಲಿಸಿದೆ. ಈ ಮೂಲಕ ಒಂದು ಮಾದರಿಯಾಗಿ ನಿಂತಿದೆ Bro4u.com ಆನ್​ಲೈನ್ ಸೇವಾ ಕಂಪನಿ.

image


15 ಬಗೆಯ ಹಲವು ಸೇವೆಗಳನ್ನು ನೀಡುವ ವೆಬ್​​ತಾಣ Bro4u.com ಬೆಂಗಳೂರಿನ ಹುಡುಗರು ಆರಂಭಿಸಿರುವ ಈ ಸಂಸ್ಥೆ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ತನ್ನ ಅದ್ಭುತ ಸೇವೆಯಿಂದ ಈಗಾಗಲೇ ಬೆಂಗಳೂರು ಜನರ ಮನೆಮಾತಾಗಿರುವ Bro4u.com, ಮತ್ತೊಂದು ಹೊಸ ಹೆಜ್ಜೆಯಿಟ್ಟಿದೆ. ಜಗತ್ತಿನಲ್ಲಿ ಯಾರು ಯೋಚಿಸಿರದ ಹೊಸ ಐಡಿಯಾದೊಂದಿಗೆ ಪ್ರಚಾರ ಕಾರ್ಯ ಕೈಗೊಂಡಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನುಓದಿ

ಭಾರತದಲ್ಲೇ ಅತಿ ಹೆಚ್ಚು ದಂತ ಚಿಕಿತ್ಸಾಲಯಗಳನ್ನು ಹೊಂದಿರುವ ಮೈಡೆಂಟಿಸ್ಟ್ ಬೆಂಗಳೂರಿನಲ್ಲಿ 50 ಕ್ಲಿನಿಕ್‍ಗಳ ಗುರಿ

Bro4u.com ಹೇಗೆ ತನ್ನ ಉತ್ತಮ ಸೇವೆಯಿಂದ ಜನರಿಗೆ ಹತ್ತಿರವಾಗುತ್ತಿದೇಯೋ ಹಾಗೇ ಜನಸಾಮಾನ್ಯರನ್ನು ತಲುಪಲು, ಕಂಪನಿ ಪ್ರಚಾರಕ್ಕೆ ಹೊಸ ವಿಧಾನವನ್ನು ಅನುಸರಿಸುತ್ತಿದೆ. ಇಷ್ಟು ದಿನ ಬೀದಿಯಲ್ಲಿ, ಟ್ರಾಫಿಕ್ ಸಿಗ್ನಲ್​​ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಂಗಳಮುಖಿಯರು ಈಗ ಕೈತುಂಬಾ ಕೆಲಸ ಸಿಕ್ಕಿದ್ದು, ಟ್ರಾಫಿಕ್​​ನಲ್ಲಿ ಭಿಕ್ಷೆ ಬೇಡುವ ಬದಲು ಜನರಿಗೆ ಕರಪತ್ರ ನೀಡಿ Bro4u.com ಸಂಸ್ಥೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಾರ್ಯದಿಂದ ಹಲವು ಮಂಗಳ ಮುಖಿಯರಿಗೆ ಕೆಲಸ ಸಿಕ್ಕಂತಾಗಿದೆ.

"ನಾವು ನಮ್ಮ ಕಂಪನಿಯ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ಮಾಡಬೇಕು ಎಂದು ಯೋಚಿಸುತ್ತಿದ್ವಿ, ಆದರೆ ನಾವು ನಮ್ಮ ಟಾರ್ಗೆಟ್ ಹೇಗೆ ಮುಟ್ಟಬೇಕು ಎಂದು ತಿಳಿದಿರಲಿಲ್ಲ. ಮಧ್ಯಮ ವರ್ಗದ ಜನರು ತಲುಪಲು ಏನಾದ್ರು ಒಂದು ವಿಭಿನ್ನವಾದ ಪ್ಲಾನ್ ಮಾಡಬೇಕು ಎಂದು ಯೋಚಿಸುತ್ತಿರುವಾಗಲೇ, ಮಂಗಳಮುಖಿಯರು ಕಣ್ಣಿಗೆ ಬಿದ್ರು. ಟ್ರಾಫಿಕ್ ಸಿಗ್ನಲ್​​ಗಳಲ್ಲಿ ಬೆಳಿಗ್ಗೆಯಿಂದ ಸಾಯಂಕಾಲ ತನಕ ಭಿಕ್ಷೆ ಬೇಡುವ ಇವರಿಗೆ ಏನಾದ್ರು ಒಂದು ಕೆಲಸ ಕೊಡಬೇಕು ಅದರಿಂದ ಅವರಿಗೆ ಕೆಲಸ ಸಿಕ್ಕಂತಾಗಬೇಕು ನಮ್ಮ ಕೆಲಸ ಕೂಡ ಆಗಬೇಕು ಎಂದು ಯೋಚಿಸಿದ್ವಿ ಅದರ ಪರಿಣಾಮವೇ ಇಂದು ಅವರು ರಸ್ತೆಯಲ್ಲಿ ನಮ್ಮ ಕಂಪನಿಯ ಬ್ರೌಷರ್ ಟ್ರಾಫಿಕ್ ಸಿಗ್ನಲ್​​ನಲ್ಲಿ ಸಿಗುವ ಎಲ್ಲರಿಗೂ ಹಂಚುತ್ತಾರೆ ಅಂತಾರೆ Bro4u.com ಸಿಓಓ ರಜತ್​​ಗೌಡ".

"ಸಾಮಾನ್ಯವಾಗಿ ಬೈಕ್ ಕಾರಿನಲ್ಲಿ ಬರುವವರೆಲ್ಲ ಮಧ್ಯಮವರ್ಗದ ಜನರು. ಅವರ ಬಳಿ ಹಣ ಇರುತ್ತದೆ. ಆದರೆ ಸರಿಯಾದ ಸೇವೆ ನೀಡುವವರ ಪರಿಚಯವಿರಲ್ಲ. ಮನೆಗೆ ಬಂದು. ಸುಣ್ಣ-ಬಣ್ಣ, ಎಲೆಕ್ಟ್ರಿಕ್ ವರ್ಕ್, ಪ್ಲಂಬರ್ ಕೆಲಸ ಮಾಡುವವರು ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಅವರಿಗೆ ಏನ್ ಮಾಡಬೇಕು. ಇಂತಹ ಸೇವೆ ಒದಗಿಸುವ ತಾಣ ಯಾವುದು ಅಂತಾನು ಗೊತ್ತಿರುವುದಿಲ್ಲ. ಅವರಿಗೆ ನಮ್ಮ ವೆಬ್​ಸೈಟ್, ನಮ್ಮ ಆ್ಯಪ್ ಡೌನ್​ಲೋಡ್ ಮಾಡುವಂತೆ ಪ್ರೇರೆಪಿಸುವ ಸಲುವಾಗಿ ನಮ್ಮ ಕಂಪನಿಯ ಬ್ರೌಷರ್​​​ಗಳನ್ನು ಮಂಗಳಮುಖಿಯವರಿಂದ ಹಂಚಿಸುವ ಕೆಲಸ ಮಾಡಿಸುತ್ತಿದ್ದೇವೆ. ಇದರಿಂದ ಮಂಗಳಮುಖಿಯರು ಖಷಿಯಾದ್ರು. ಅವರಿಂದ ಬ್ರೌಷರ್ ಪಡೆದ ಜನರು ಕೂಡ ನಮ್ಮ ಕಂಪನಿಯ ಬಗ್ಗೆ ತಿಳಿದುಕೊಂಡ್ರು".

image


"ನಮ್ಮಗೆ ಕೆಲಸ ಮಾಡುವ ಆಸೆಯಿದೆ ಆದರೆ ನಮ್ಮಗೆ ಯಾರು ಕೆಲಸ ಕೊಡುವುದಿಲ್ಲ ಅದಕ್ಕಾಗಿ ನಾವು ಬೆಂಗಳೂರಿನ ಮುಖ್ಯ ರಸ್ತೆಯಲ್ಲಿ ಭಿಕ್ಷೆ ಬೇಡುತ್ತೇವೆ. ಯಾರು ಕೆಲಸ ಕೊಡದಿದ್ದಾಗ ಬದುಕುವುದಕ್ಕೆ ಇರುವ ಏಕೈಕ ದಾರಿ ಭಿಕ್ಷೆ ಬೇಡುವುದು. ಆದರೆ Bro4u.com ಕಂಪನಿಯವರು ನಮ್ಮಗೆ ತಮ್ಮ ಕಂಪನಿಯ ಕರಪತ್ರ ನೀಡಿ ಅವುಗಳನ್ನು ಜನರಿಗೆ ಹಂಚುವಂತೆ ಹೇಳಿದ್ರು. ಒಂದು ಸಾವಿರ ಕರಪತ್ರ ಹಂಚಿದ್ರೆ, 400 ರೂಪಾಯಿ ನೀಡುವ ಮೂಲಕ ನಮಗೂ ಒಂದು ಕೆಲಸಕೊಟ್ರು ಅಂತಾರೆ ಮಂಗಳಮುಖಿ ಅಕ್ಕೈಯ್ಯ".

"ನಾವು ಪ್ರಚಾರ ಮಾಡುವುದರ ಜೊತೆಗೆ ಅಲ್ಲಿ ಜನರಿಗೆ ಒಂದು ಆಫರ್ ಕೂಡ ನೀಡಿದ್ವಿ. ಯಾರು ಆ ಬ್ರೌಷರ್ ನೋಡಿ ಆ್ಯಪ್ ಡೌನ್​ಲೋಡ್ ಮಾಡ್ತಾರೋ ಅವರಿಗೆ ಬ್ರೌಷರ್​​ನಲ್ಲೇ ಪ್ರೋಮೋ ಕೋಡ್ ಕೊಡಲಾಗುತ್ತದೆ. ಅದರ ಪ್ರಕಾರ ಅವರಿಗೆ 100 ರೂಪಾಯಿಯ ಡಿಸ್ಕೌಂಟ್ ನೀಡುತ್ತೇವೆ. ಇದರಿಂದಾಗಿ ಹೆಚ್ಚು ಜನರು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ವ್ಯಾಪಾರ ಕೂಡ ಆರಂಭಿಸಿದ ಒಂದು ವರ್ಷದೊಳಗೆ ಅಚ್ಚುಕಟ್ಟಾಗಿ ನಡೆಯುತ್ತಿದೆಯೆಂದು ರಜತ್​ಗೌಡ ತುಂಬು ವಿಶ್ವಾಸದಿಂದ ಹೇಳುತ್ತಾರೆ".

ರಸ್ತೆ ಬದಿ ಭಿಕ್ಷೆ ಬೇಡುವ ಮಂಗಳಮುಖಿಯರಿಗೆ ಕೆಲಸ ನೀಡುವ ಮೂಲಕ Bro4u.com ಕಂಪನಿ ಒಂದು ಒಳ್ಳೆ ಕೆಲಸ ಮಾಡುತ್ತಿದೆ. ತಾನು ವ್ಯಾಪಾರ ಮಾಡುವ ಮೂಲಕ ಮಂಗಳಮುಖಿಯರನ್ನು ಮಂಗಳ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ. ಮಂಗಳಮುಖಿಯರಿಗೆ ಯಾರು ಕೆಲಸ ನೀಡುವುದಿಲ್ಲ ಹಾಗಾಗಿ ಅವರು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡ್ತಾರೆ. ಭಿಕ್ಷಾಟನೆಗೆ ಕಡಿವಾಣ ಹಾಕುವಲ್ಲಿ Bro4u ಸಂಸ್ಥೆಯ ಹೆಜ್ಜೆ ಶ್ಲಾಘನೀಯ. Bro4u ಮಾರ್ಗದಲ್ಲಿ ಅನೇಕ ಕಂಪನಿಗಳು ಮಂಗಳಮುಖಿಯರಿಗೆ ಕೆಲಸ ನೀಡಲು ಮುಂದಾದಲ್ಲಿ, ಮಂಗಳಮುಖಿಯರ ಮಂದಹಾಸದಲ್ಲಿ ಅವರು ಸಹ ಭಾಗಿಯಾಗಬಹುದು..

ಇದನ್ನು ಓದಿ

1. ಕಾರ್ ಪೂಲಿಂಗ್ ಗೊತ್ತು... ಬೈಕ್ ಪೂಲಿಂಗ್ ಗೊತ್ತಾ...?

2. "ಬೆಂಗಳೂರು"ನ್ನ ಅಂದಗಾಣಿಸಿದವರು..!

3. ಕನ್ನಡ ಪುಸ್ತಕಗಳಿಗೊಂದು ಶಾಪಿಂಗ್ ಸೈಟ್

Add to
Shares
4
Comments
Share This
Add to
Shares
4
Comments
Share
Report an issue
Authors

Related Tags