ಅಪ್ರಾಪ್ತ ಮಕ್ಕಳಿಗಾಗಿ ಹೊಸ ಆ್ಯಪ್- ಪೋಷಕರ ಚಿಂತೆ ದೂರ ಮಾಡಲಿದೆ ಫೇಸ್ಬುಕ್..!
ಟೀಮ್ ವೈ.ಎಸ್. ಕನ್ನಡ
Sunday June 04, 2017,
1 min Read
ಇವತ್ತಿನ ಸ್ಮಾರ್ಟ್ಫೋನ್ ಯುಗದಲ್ಲಿ ಎಲ್ಲವೂ ಮೊಬೈಲ್ ಮೂಲಕವೇ ನಡೆಯುತ್ತಿದೆ. ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳು ಯುವ ಜನತೆಯ ಗಮನ ಸೆಳೆದಿವೆ. ಮಕ್ಕಳು ಕೂಡ ಫೇಸ್ಬುಕ್ ಸೇರಿದಂತೆ ಇತರೆ ಜಾಲತಾಣಗಳಿಗೆ ಮನಸೋತಿದ್ದಾರೆ. ಆದ್ರೆ ಅಪ್ರಾಪ್ತ ವಯಸ್ಕರು ಫೇಸ್ಬುಕ್ ದಾಸರಾಗಿರುವುದರಿಂದ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಬೇಕಿದೆ. ಅಷ್ಟೇ ಅಲ್ಲ ಇಂಟರ್ನೆಟ್ ವ್ಯವಸ್ಥೆಯ ದುರ್ಬಳಕೆ ಕೂಡ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ತಡೆಯೊಡ್ಡಲು ಫೇಸ್ಬುಕ್ ಹೊಸ ಪ್ಲಾನ್ ಮಾಡಿಕೊಂಡಿದೆ. ಅಪ್ರಾಪ್ತ ಮಕ್ಕಳಿಗಾಗಿಯೇ ಒಂದು ಮೆಸೆಜಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇದನ್ನು ಪೋಷಕರು ಮಾನಿಟರ್ ಮಾಡಬಹುದಾಗಿದೆ.
“ ಈ ಹೊಸ ಆ್ಯಪ್ಗೆ ಟಾಕ್ ಅಂತ ಹೆಸರಿಡಲಾಗಿದೆ. ಇದು ಕೇವಲ ಬಾಲಕ ಮತ್ತು ಬಾಲಕಿಯರಿಗೆ ಮಾತ್ರ ಸೀಮಿತವಾಗಿದೆ. ಬೇರೆ ಯಾರಾದ್ರೂ, ಈ ಆ್ಯಪ್ ಒಳಗೆ ಎಂಟ್ರಿಕೊಟ್ರೆ, ಅದು ತಾನಾಗಿಯೇ ಮುಚ್ಚಿಕೊಳ್ಳುತ್ತದೆ. ”
ಫೇಸ್ಬುಕ್ನ ಮೆಸೆಂಜರ್ ಆ್ಯಪ್ಗಿಂತ ಈ ಆ್ಯಪ್ ವಿಭಿನ್ನವಾಗಿರಲಿದೆ. ಅಷ್ಟೇ ಅಲ್ಲ ಮಕ್ಕಳು ಬಳಕೆ ಮಾಡುತ್ತಿರುವ ಸೈಟ್ ಹಾಗೂ ಅದರ ಬಗ್ಗೆ ಮಾಹಿತಿಯನ್ನುಸ ಪೋಷಕರು ಸುಲಭವಾಗಿ ಪಡೆದುಕೊಳ್ಳಬಹುದು. ಈ ಆ್ಯಪ್ ಮೂಲಕ ಮಕ್ಕಳು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಗಮನ ಕೊಡಬಹುದಾಗಿದೆ.
ಫೇಸ್ಬುಕ್ನಈ ಆ್ಯಪ್ ಅನ್ನು 13ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಬಳಸಿಕೊಳ್ಳಬಹುದು. ಇದನ್ನು ಬಳಲು ಫೇಸ್ಬುಕ್ ಪ್ರೊಪೈಲ್ನ ಅವಶ್ಯಕತೆ ಕೂಡ ಇರುವುದಿಲ್ಲ. ಪೋಷಕರು ಮಕ್ಕಳ ಇಂಟರ್ನೆಟ್ ಬಳಕೆ ಬಗ್ಗೆ ಗಮನ ಇಡಬಹುದಾಗಿದ್ದರಿಂದ ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಅನ್ನುವ ಆರೋಪವೂ ಮತ್ತೊಂದು ಕಡೆಯಲ್ಲಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ ಸ್ಮಾರ್ಟ್ಫೋನ್ ದುನಿಯಾದಲ್ಲಿ ಜ್ಞಾನ ಹೆಚ್ಚಾದಂತೆ ಮಕ್ಕಳು ತಪ್ಪುದಾರಿಗೆ ಹೋಗುವ ಭಯ ಕಾಡುತ್ತಿರುವುದು ಸುಳ್ಳಲ್ಲ. ಇಂಟರ್ನೆಟ್ ಅನ್ನು ವೈಯಕ್ತಿಕ ಅಭಿವೃದ್ಧಿಗಾಗಿ ಬಳಸಿಕೊಂಡರೆ ಅದು ಉತ್ತಮ. ಆದ್ರೆ ಅದರ ಬಳಕೆ ಬೇರೆ ಕಡೆಯೇ ಹೆಚ್ಚಾಗಿರುವುದರಿಂದ ಮಕ್ಕಳ ಬಗ್ಗೆ ಕಾಳಜಿಯೂ ಅವಶ್ಯಕವಾಗಿದೆ.
1. ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್- ಡಬ್ಸ್ಮಾಶ್ನಲ್ಲಿ ಇವರು ಸೂಪರ್..!
2. ಕಾಫಿ ಟೇಸ್ಟ್ಗೆ ಜಿಎಸ್ಟಿ ಕಿಕ್- ಪಿಜ್ಹಾಗೆ ಎದುರಾಗಲಿದೆ ತೆರಿಗೆ ಭಾರ
3. ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ಗಳಿಗೆ ಹೊಸ ಟಚ್- ಗೂಗಲ್ನಿಂದ "ಆ್ಯಂಡ್ರಾಯ್ಡ್ ಗೊ" ಬಿಡುಗಡೆ..!