ಆವೃತ್ತಿಗಳು
Kannada

ಅಪ್ರಾಪ್ತ ಮಕ್ಕಳಿಗಾಗಿ ಹೊಸ ಆ್ಯಪ್- ಪೋಷಕರ ಚಿಂತೆ ದೂರ ಮಾಡಲಿದೆ ಫೇಸ್​ಬುಕ್..!

ಟೀಮ್​ ವೈ.ಎಸ್​. ಕನ್ನಡ

YourStory Kannada
4th Jun 2017
Add to
Shares
6
Comments
Share This
Add to
Shares
6
Comments
Share

ಇವತ್ತಿನ ಸ್ಮಾರ್ಟ್​ಫೋನ್ ಯುಗದಲ್ಲಿ ಎಲ್ಲವೂ ಮೊಬೈಲ್ ಮೂಲಕವೇ ನಡೆಯುತ್ತಿದೆ. ಫೇಸ್​ಬುಕ್, ಟ್ವಿಟರ್​ನಂತಹ ಸಾಮಾಜಿಕ ಜಾಲತಾಣಗಳು ಯುವ ಜನತೆಯ ಗಮನ ಸೆಳೆದಿವೆ. ಮಕ್ಕಳು ಕೂಡ ಫೇಸ್​ಬುಕ್ ಸೇರಿದಂತೆ ಇತರೆ ಜಾಲತಾಣಗಳಿಗೆ ಮನಸೋತಿದ್ದಾರೆ. ಆದ್ರೆ ಅಪ್ರಾಪ್ತ ವಯಸ್ಕರು ಫೇಸ್​ಬುಕ್ ದಾಸರಾಗಿರುವುದರಿಂದ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಬೇಕಿದೆ. ಅಷ್ಟೇ ಅಲ್ಲ ಇಂಟರ್​ನೆಟ್ ವ್ಯವಸ್ಥೆಯ ದುರ್ಬಳಕೆ ಕೂಡ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ತಡೆಯೊಡ್ಡಲು ಫೇಸ್​​ಬುಕ್ ಹೊಸ ಪ್ಲಾನ್ ಮಾಡಿಕೊಂಡಿದೆ. ಅಪ್ರಾಪ್ತ ಮಕ್ಕಳಿಗಾಗಿಯೇ ಒಂದು ಮೆಸೆಜಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇದನ್ನು ಪೋಷಕರು ಮಾನಿಟರ್ ಮಾಡಬಹುದಾಗಿದೆ.

image


“ ಈ ಹೊಸ ಆ್ಯಪ್​ಗೆ ಟಾಕ್ ಅಂತ ಹೆಸರಿಡಲಾಗಿದೆ. ಇದು ಕೇವಲ ಬಾಲಕ ಮತ್ತು ಬಾಲಕಿಯರಿಗೆ ಮಾತ್ರ ಸೀಮಿತವಾಗಿದೆ. ಬೇರೆ ಯಾರಾದ್ರೂ, ಈ ಆ್ಯಪ್ ಒಳಗೆ ಎಂಟ್ರಿಕೊಟ್ರೆ, ಅದು ತಾನಾಗಿಯೇ ಮುಚ್ಚಿಕೊಳ್ಳುತ್ತದೆ. ”

ಫೇಸ್​ಬುಕ್​ನ ಮೆಸೆಂಜರ್ ಆ್ಯಪ್​ಗಿಂತ ಈ ಆ್ಯಪ್ ವಿಭಿನ್ನವಾಗಿರಲಿದೆ. ಅಷ್ಟೇ ಅಲ್ಲ ಮಕ್ಕಳು ಬಳಕೆ ಮಾಡುತ್ತಿರುವ ಸೈಟ್ ಹಾಗೂ ಅದರ ಬಗ್ಗೆ ಮಾಹಿತಿಯನ್ನುಸ ಪೋಷಕರು ಸುಲಭವಾಗಿ ಪಡೆದುಕೊಳ್ಳಬಹುದು. ಈ ಆ್ಯಪ್ ಮೂಲಕ ಮಕ್ಕಳು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಗಮನ ಕೊಡಬಹುದಾಗಿದೆ.

ಫೇಸ್​ಬುಕ್​ನಈ ಆ್ಯಪ್ ಅನ್ನು 13ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಬಳಸಿಕೊಳ್ಳಬಹುದು. ಇದನ್ನು ಬಳಲು ಫೇಸ್​ಬುಕ್ ಪ್ರೊಪೈಲ್​ನ ಅವಶ್ಯಕತೆ ಕೂಡ ಇರುವುದಿಲ್ಲ. ಪೋಷಕರು ಮಕ್ಕಳ ಇಂಟರ್​​ನೆಟ್ ಬಳಕೆ ಬಗ್ಗೆ ಗಮನ ಇಡಬಹುದಾಗಿದ್ದರಿಂದ ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಅನ್ನುವ ಆರೋಪವೂ ಮತ್ತೊಂದು ಕಡೆಯಲ್ಲಿ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಸ್ಮಾರ್ಟ್​ಫೋನ್ ದುನಿಯಾದಲ್ಲಿ ಜ್ಞಾನ ಹೆಚ್ಚಾದಂತೆ ಮಕ್ಕಳು ತಪ್ಪುದಾರಿಗೆ ಹೋಗುವ ಭಯ ಕಾಡುತ್ತಿರುವುದು ಸುಳ್ಳಲ್ಲ. ಇಂಟರ್​ನೆಟ್ ಅನ್ನು ವೈಯಕ್ತಿಕ ಅಭಿವೃದ್ಧಿಗಾಗಿ ಬಳಸಿಕೊಂಡರೆ ಅದು ಉತ್ತಮ. ಆದ್ರೆ ಅದರ ಬಳಕೆ ಬೇರೆ ಕಡೆಯೇ ಹೆಚ್ಚಾಗಿರುವುದರಿಂದ ಮಕ್ಕಳ ಬಗ್ಗೆ ಕಾಳಜಿಯೂ ಅವಶ್ಯಕವಾಗಿದೆ.

ಇದನ್ನು ಓದಿ:

1. ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..! 

2. ಕಾಫಿ ಟೇಸ್ಟ್​ಗೆ ಜಿಎಸ್​ಟಿ ಕಿಕ್​- ಪಿಜ್ಹಾಗೆ ಎದುರಾಗಲಿದೆ ತೆರಿಗೆ ಭಾರ 

3. ಎಂಟ್ರಿ ಲೆವೆಲ್ ಸ್ಮಾರ್ಟ್​ಫೋನ್​ಗಳಿಗೆ ಹೊಸ ಟಚ್- ಗೂಗಲ್​ನಿಂದ "ಆ್ಯಂಡ್ರಾಯ್ಡ್ ಗೊ" ಬಿಡುಗಡೆ..!

Add to
Shares
6
Comments
Share This
Add to
Shares
6
Comments
Share
Report an issue
Authors

Related Tags