ಆವೃತ್ತಿಗಳು
Kannada

ವಾಸ್ತುಶಿಲ್ಪ ಪತ್ರಿಕೋದ್ಯಮ ಅಭಿವೃದ್ಧಿಗೆ ಕಂಕಣಬದ್ಧರಾದ ಅಪೂರ್ವ ಬೋಸ್ ದತ್ತಾ

ಟೀಮ್​ ವೈ.ಎಸ್​​.

10th Oct 2015
Add to
Shares
0
Comments
Share This
Add to
Shares
0
Comments
Share

ವಾಸ್ತುಶಿಲ್ಪ ಪತ್ರಿಕೋದ್ಯಮವು ಇನ್ನೂ ಮುಂಚೂಣಿಗೆ ಬಾರದ ಕ್ಷೇತ್ರವಾಗಿದೆ. ಆದರೂ ಅದಕ್ಕೆ ನಿರ್ದಿಷ್ಟವಾದ ಓದುಗರ ಸಂಖ್ಯೆ ಇದೆ. ಇಂತಹ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಅಪೂರ್ವ ಬೋಸ್ ದತ್ತಾ. ಬೆಂಗಳೂರಿನಲ್ಲಿ ವಾಸ್ತುಶಿಲ್ಪಿಯಾಗಿರುವ ದತ್ತಾ, ಈ ಕ್ಷೇತ್ರದಲ್ಲಿ ದಶಕದಿಂದ ದುಡಿಯುತ್ತಿದ್ದಾರೆ. ವಿವಿಧ ಪ್ರಯತ್ನಗಳ ಮೂಲಕ ವಾಸ್ತುಶಿಲ್ಪ ಪತ್ರಿಕೋದ್ಯಮಕ್ಕೆ ಒಂದು ಸ್ಥಾನ ಮಾನ ದೊರಕಿಸಿಕೊಡಲು ಅವರು ಪ್ರಯತ್ನಿಸುತ್ತಲೇ ಇದ್ದಾರೆ.

ಚಂಡೀಗಢದಲ್ಲಿ ಹುಟ್ಟಿ ಬೆಳೆದ ಬೆಂಗಾಳಿ ಕುಟುಂಬದ ಈ ಕುಡಿ, ವಾಸ್ತುಶಿಲ್ಪ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಚಂಡೀಗಢದ ವಾಸ್ತುಶಿಲ್ಪ ಕಾಲೇಜಿನಲ್ಲಿ ಕಾಲೇಜಿನಲ್ಲಿ ಪದವಿ ಪಡೆದ ಅಪೂರ್ವ, ಬಳಿಕ ವಾಸ್ತುಶಿಲ್ಪ ಪತ್ರಿಕೋದ್ಯಮಕ್ಕೆ ಧುಮುಕಿದರು. ಪ್ರಖ್ಯಾತ ವಾಸ್ತುಶಿಲ್ಪ ನಿಯತಕಾಲಿಕವೊಂದರಲ್ಲಿ ವೃತ್ತಿ ಆರಂಭಿಸಿದರು. ಈ ಮಧ್ಯೆ ಬ್ರಿಟನ್​​ನಿಂದ ಹವ್ಯಾಸಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದರು.

image


ಹಲವು ವರ್ಷಗಳಿಂದ ಉಪನ್ಯಾಸ, ಬರವಣಿಗೆ ಮತ್ತು ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ನೀಡುತ್ತಾ, ಈ ಕ್ಷೇತ್ರಕ್ಕೆ ವ್ಯಾಪಕ ಪ್ರಚಾರ ನೀಡುತ್ತಿದ್ದಾರೆ. ಯುವರ್​​ಸ್ಟೋರಿಯು, ವಾಸ್ತುಶಿಲ್ಪ ಪತ್ರಿಕೋದ್ಯಮದಲ್ಲಿ ಅವರ ಪ್ರಯಾಣದ ಬಗ್ಗೆ ಅವರನ್ನು ಮಾತನಾಡಿಸಿದೆ.

ಹೊಸ ಪ್ರೀತಿ ಶುರುವಾಗಿದ್ದು ಹೇಗೆ?

ಬಿ-ಆರ್ಕ್ ಪದವಿಯ ಅಂತಿಮ ವರ್ಷದಲ್ಲಿದ್ದಾಗ ವಾಸ್ತುಶಿಲ್ಪ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಹುಟ್ಟಿತು. ಇದನ್ನು ಸಂಪೂರ್ಣವಾಗಿ ಸ್ವೀಕರಿಸಿದ ಬಳಿಕ ನನಗೆ ಇದರ ನೈಜಸ್ವರೂಪ ಅರ್ಥವಾಯಿತು. ಒಂದಾದ ಮೇಲೊಂದು ವಿಷಯ ಮಂಡನೆಯಾದ ಬಳಿಕ ನಾನು ಇದನ್ನು ಆಯ್ಕೆಯಾಗಿ ಆರಿಸಿಕೊಂಡೆ. ಆದರೆ, ಈ ಕ್ಷೇತ್ರವನ್ನು ತುಂಬಾ ನಗಣ್ಯವಾಗಿ ಕಾಣಲಾಗುತ್ತಿದೆ. ಹೀಗಾಗಿ, ಜೀವನೋಪಾಯಕ್ಕಾಗಿ ನಾನು ರೆಸ್ಟೋರೇಷನ್ ಮತ್ತು ಒಳಾಂಗಣ ವಿನ್ಯಾಸವನ್ನು ಆಯ್ದುಕೊಂಡಿದ್ದೇನೆ. ನನಗೊತ್ತಿರೋ ಪ್ರಕಾರ ಸಧ್ಯಕ್ಕಂತೂ ವಾಸ್ತುಶಿಲ್ಪ ಪತ್ರಿಕೋದ್ಯಮದಲ್ಲಿ ಯಾವುದೇ ಉದ್ಯೋಗಗಳಿಲ್ಲ, ಎನ್ನುತ್ತಾರೆ ಅಪೂರ್ವ.

ವಾಸ್ತುಶಿಲ್ಪಿಗಳು ಬರೆಯುತ್ತಾರೆ. ಆದರೆ, ವಾಸ್ತುಶಿಲ್ಪಕ್ಕೆಂದೇ ಯಾವುದೇ ಪತ್ರಿಕೆ ಇರಲಿಲ್ಲ. ಹೀಗಾಗಿ ಆರಂಭದಲ್ಲಿ ತನ್ನ ವೃತ್ತಿ ಮತ್ತು ಆಯ್ಕೆಯ ಬಗ್ಗೆ ಜನರಿಗೆ ವಿವರಿಸುವುದೇ ದೊಡ್ಡ ಕಷ್ಟವಾಗಿತ್ತು. ಭಾರತದಲ್ಲಿ ಪ್ರಸಿದ್ಧಿ ಪಡೆಯದ ಆದರೆ ವಿದೇಶಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ವಾಸ್ತುಶಿಲ್ಪ ಪತ್ರಿಕೋದ್ಯಮವನ್ನು ಆರಿಸಿಕೊಂಡಾಗ ಬಹಳಷ್ಟು ಜನರು ಅಚ್ಚರಿ ಪಟ್ಟಿದ್ದರು. ಎಕ್ಸೈಟ್ ಆಗಿದ್ದರು. ಆದರೆ ಭಾರತದಲ್ಲಿ ಅದರಲ್ಲೂ ವಾಸ್ತುಶಿಲ್ಪಿಗಳಲ್ಲದವರಲ್ಲಿ ಇದನ್ನು ವಿವರಿಸುವುದು ಸವಾಲಾಗಿ ಕಾಡಿತ್ತು. ಎನ್ನುತ್ತಾರೆ ಅಪೂರ್ವ.

ಅಪೂರ್ವ ತನ್ನ ಹೃದಯ ಹೇಳಿದ್ದನ್ನು ಕೇಳಿದಳು. ನಿಧಾನಕ್ಕೆ ಆಕೆಯ ಕನಸು ಈಡೇರತೊಡಗಿತು. ಆರ್ಕಿಟೆಕ್ಟ್ ಅಂಡ್ ಡಿಸೈನ್ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತು.

image


ಈ ಪತ್ರಿಕೆಯಲ್ಲಿ ನನಗೆ ಆಳವಾದ ಅನುಭವ ಮತ್ತು ತಳಹದಿ ಸಿಕ್ಕದೇ ಹೋಗಿದ್ದಲ್ಲಿ, ಈ ವೃತ್ತಿಯನ್ನು ನಾನು ಮತ್ತಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲವೇನೋ? ಈ ಪತ್ರಿಕೆಯಿಂದಾಗಿ ನಾನು ಮತ್ತಷ್ಟು ಕೆಲಸ ಮಾಡಲು ಬೇಕಾದ ಶಕ್ತಿಯನ್ನು ಸಂಪಾದಿಸಿಕೊಂಡೆ, ಎಂದು ಅಪೂರ್ವ ಹೆಮ್ಮೆ ಪಡುತ್ತಾರೆ.

ವಿಷಯ ಹೊಸತೇ ಆಗಿರಬಹುದು, ಆದರೆ ಇದು ಈಗ ಅದರಲ್ಲೂ ವಿದೇಶಗಳಲ್ಲಿನ ವಾಸ್ತುಶಿಲ್ಪ ವಿದ್ಯಾರ್ಥಿಗಳಲ್ಲಿ ಭಾರೀ ಆಸಕ್ತಿ ಕೆರಳಿಸುತ್ತಿದೆ. ಜನಪ್ರಿಯವಾಗುತ್ತಿದೆ.

ಚಂಡೀಗಢದಿಂದಾಚೆಗಿನ ಪಯಣ

ಅಪೂರ್ವರ ಹೆತ್ತವರು ಅತ್ಯುನ್ನತ ಶಿಕ್ಷಣ ಪಡೆದವರಾಗಿದ್ದರು, ಮಕ್ಕಳನ್ನು ಅವರಂತೆಯೇ ಬೆಳೆಸಿದ್ದರು. ಅಪೂರ್ವರ ತಂದೆ ಸರ್ಜನ್. ತಾಯಿ ಭೌತಶಾಸ್ತ್ರದಲ್ಲಿ ಪಿಹೆಚ್​ಡಿ ಮಾಡಿದ್ದರು. ಅವರು ತಮ್ಮ ಸಮಯದ ಅಭಾವದ ಮಧ್ಯೆಯೇ ತಮ್ಮ ಮಕ್ಕಳನ್ನು ಸವ್ಯಸಾಚಿಗಳಾಗಿ ಬೆಳೆಸಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಸಿದ್ದರು. ನನ್ನ ಪೋಷಕರು ಅಲ್​ರೌಂಡರ್​​ಗಳಾಗಿದ್ದಾರೆ. ಹೀಗಾಗಿ, ನಾನು ಮತ್ತು ನನ್ನ ಒಡಹುಟ್ಟಿದವರನ್ನು ಎಲ್ಲರನ್ನೂ ಅವರವರ ಆಸಕ್ತಿ, ಹವ್ಯಾಸಗಳಿಗೆ ಅನುಗುಣವಾಗಿ ಬೆಳೆಸಿದ್ದಾರೆ.

ಚಂಡೀಗಢದ ಕಾರ್ಮೆಲ್ ಕಾನ್ವೆಂಟ್ ಶಾಲೆಯನ್ನು ಅಪೂರ್ವ ತನ್ನ ಇನ್ನೊಂದು ಕುಟುಂಬವೆಂದೇ ಭಾವಿಸುತ್ತಾಳೆ. ಆ ಶಾಲೆಯು ಅಪೂರ್ವರ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ನಾನು ಒಂದು ಕುಟುಂಬದಿಂದ ಮತ್ತೊಂದು ಕುಟುಂಬಕ್ಕೆ ಹೋಗುತ್ತಿದ್ದೆ. ಅಲ್ಲಿನ ಶಿಕ್ಷಕರು ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು. ಹುರಿದುಂಬಿಸುತ್ತಿದ್ದರು ಮತ್ತು ನಮ್ಮನ್ನು ರೂಪಿಸುತ್ತಿದ್ದರು. ನಾನು ಇವತ್ತಿಗೂ ಅಲ್ಲಿನ ಹಲವು ಶಿಕ್ಷಕರ ಜೊತೆ ಸಂಪರ್ಕದಲ್ಲಿದ್ದೇನೆ, ಎನ್ನುತ್ತಾ ಕಣ್ಣಲ್ಲೇ ಕೃತಜ್ಱತೆ ಸಲ್ಲಿಸುತ್ತಾರೆ ಅಪೂರ್ವ.

ಮದುವೆಯಾದ ಬಳಿಕ, ಅಪೂರ್ವ ಇಂಗ್ಲಂಡ್ಗೆ ತೆರಳಿದ್ದರು. ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾದರು. ಬೆಂಗಳೂರಿನಲ್ಲೇ ವಾಸಿಸುತ್ತಿರುವ ಅಪೂರ್ವ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಿಗೆ ವಾಸ್ತುಶಿಲ್ಪದ ಬಗ್ಗೆ ಬರೆಯುತ್ತಿದ್ದಾರೆ.

ಲೇಖಕರಾಗಿ ಅಪೂರ್ವ

ಅಪ್ಪನ ವೃತ್ತಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅಪೂರ್ವ, ಅಪ್ಪನಂತೆಯೇ ವೈದ್ಯರಾಗಬೇಕು ಎಂದು ಕೊಂಡಿದ್ದರು. ಅಪ್ಪನಿಗೆ ಸಿಗುತ್ತಿದ್ದ ಗೌರವ, ಪ್ರಶಸ್ತಿಗಳೆಲ್ಲಾ ನನ್ನಲ್ಲಿ ಅಚ್ಚರಿ ಸೃಷ್ಟಿಸಿದ್ದವು. ಅದನ್ನೆಲ್ಲಾ ನೋಡಿ ನಾನೂ ವೈದ್ಯರಾಗಬೇಕು ಎಂದುಕೊಂಡಿದ್ದೆ. ಆದರೆ, ಹತ್ತನೇ ತರಗತಿ ಪಾಸ್ ಆದಮೇಲೆ ಅಪ್ಪ ನನ್ನ ಜೊತೆ ಕೂತು ಮಾತನಾಡಿದ್ದರು. ಅದು ನಾನು ನನ್ನ ಜೀವನವನ್ನು ಆರಿಸಿಕೊಳ್ಳಬೇಕಾದ ಸಂದರ್ಭವಾಗಿತ್ತು. ಕಾರಣ ಹನ್ನೊಂದನೇ ತರಗತಿಯ ಪಠ್ಯ ಆಯ್ಕೆ ನನ್ನ ಬದುಕನ್ನು ನಿರ್ಧರಿಸಲಿತ್ತು. ಅಪ್ಪ, ತನ್ನದೇ ಉದಾಹರಣೆ ಮೂಲಕ ನಾನು ವೈದ್ಯವೃತ್ತಿ ಸ್ವೀಕರಿಸುವುದು ಬೇಡ ಎಂದು ತಿಳಿ ಹೇಳಿದರು.

ಅವರಿಗೆ ವೈದ್ಯವೃತ್ತಿ ಎಷ್ಟು ಕಠಿಣ ಕೆಲಸ ಎನ್ನುವುದರ ಅರಿವಿತ್ತು. ಕೇವಲ ಎಂಬಿಬಿಎಸ್ ಪದವಿ ಪಡೆದ ತಕ್ಷಣ ಯಾವುದೇ ವೈದ್ಯರು ತಮ್ಮ ಜೀವನದಲ್ಲಿ ಸೆಟ್ಲ್ ಆಗಲು ಸಾಧ್ಯವಿಲ್ಲ ಎನ್ನುವುದೂ ತಿಳಿದಿತ್ತು. ಹೀಗಾಗಿ, ನಾನು ವೈದ್ಯಕೀಯದಿಂದ ವಿಮುಖಳಾದೆ. ವಾಸ್ತುಶಿಲ್ಪ ಆರಿಸಿಕೊಂಡೆ.

ಬರವಣಿಗೆ ಅಪೂರ್ವರಿಗೆ ಸುಲಭದ ಕೆಲಸವಾಗಿತ್ತು. ಚಿಕ್ಕವಳಿದ್ದಾಗಲೇ ಅವರು ತುಂಬಾ ಬರೆಯುತ್ತಿದ್ದರು. ಆದರೆ, ಆಗ ಅದು ಹವ್ಯಾಸವಾಗಿತ್ತು. ಅದೀಗ ವೃತ್ತಿಯಾಗಿ ಪರಿವರ್ತನೆಯಾಗಿದೆ. ವಾಸ್ತುಶಿಲ್ಪ ಪತ್ರಿಕೋದ್ಯಮದಲ್ಲಿ ಮಾಡಿರುವ ಕೆಲಸದಿಂದಾಗಿ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ, ಸನ್ಮಾನಗಳು ಸಿಕ್ಕಿವೆ.

ಭಾರತದಲ್ಲಿ ವಾಸ್ತುಶಿಲ್ಪ ಪತ್ರಿಕೋದ್ಯಮ

ಅಪೂರ್ವರ ಪ್ರಕಾರ, ಈ ಕ್ಷೇತ್ರ ಈಗ ಬೆಳೆಯಲಾರಂಭಿಸಿದೆ. ಹಲವು ವರ್ಷಗಳಿಂದ ಇದರ ಬೆಳವಣಿಗೆ ಉತ್ತಮವಾಗಿದೆ ಮತ್ತು ಧನಾತ್ಮಕವಾಗಿದೆ. ನೂರಾರು ವಿದ್ಯಾರ್ಥಿಗಳು ಮತ್ತು ವಾಸ್ತುಶಿಲ್ಪಿಗಳು ಈ ಉದ್ಯಮ ಸೇರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತಾರೆ ಅಪೂರ್ವ.

ಭಾರತದಲ್ಲಿ 11-12 ವಾಸ್ತುಶಿಲ್ಪ ಕಾಲೇಜುಗಳಲ್ಲಿ ವಾಸ್ತುಶಿಲ್ಪ ಪತ್ರಿಕೋದ್ಯಮವು ಐಚ್ಛಿಕ ವಿಷಯವಾಗಿ ಬೋಧಿಸಲ್ಪಡುತ್ತಿದೆ. ಆದರೆ, ಈ ಪಠ್ಯಕ್ರಮವನ್ನು ಕಡ್ಡಾಯವಾಗಿ ಮಾಡಲು ಸಾಕಷ್ಟು ಶ್ರಮಿಸಬೇಕಾಗಿದೆ. ಇದನ್ನು ಬೋಧಿಸುವ ತಜ್ಱ ಉಪನ್ಯಾಸಕರನ್ನು ಸಂಪರ್ಕಿಸಬೇಕಾಗಿದೆ. ಇದು ಕೇವಲ ಫ್ಯಾಷನ್ ವಿಷಯವಾಗಿ ಇರಬಾರದು. ಎನ್ನುತ್ತಾರೆ ಅಪೂರ್ವ.

ಈ ಬಗ್ಗೆ ಸತತವಾಗಿ ಬರೆಯುತ್ತಾ, ವಿವಿಧ ಸಂದರ್ಭಗಳಲ್ಲಿ ಈ ಬಗ್ಗೆ ಮಾತನಾಡುತ್ತಾ, ಬೇರೆ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡುತ್ತಾ, ಅಪೂರ್ವ ಅವರು ಈ ಕ್ಷೇತ್ರದ ಬೆಳವಣಿಗಾಗಿ ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಲೇ ಇದ್ದಾರೆ.

ಈ ವಿಷಯ ತುಂಬಾ ಆಳವಾದದ್ದು. ಅದನ್ನು ಬೋಧಿಸಲು ಅಳವಾದ ಅಧ್ಯಯನ ಬೇಕು. ನಾನು ಈಗಾಗಲೇ ಭಾರತೀಯ ವಾಸ್ತುಶಿಲ್ಪ ಪರಿಷತ್ ಹಾಗೂ ಇತರ ವಾಸ್ತುಶಿಲ್ಪ ಸಂಬಂಧಿತ ಸಂಘಟನೆಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಅವರು ಪ್ರೋತ್ಸಾಹಿಸುತ್ತಿದ್ದಾರೆ, ಮತ್ತು ಹೆಚ್ಚಿನ ವಿದ್ಯಾರ್ಥಿಗಳಿಗೆ ಅದನ್ನು ತಲುಪಿಸುವ ಅಗತ್ಯವನ್ನು ಮನಗೊಂಡಿದ್ದಾರೆ. ಇದನ್ನು ಮುಖ್ಯವಾಹಿನಿ ಪಠ್ಯವಾಗಿ ಜಾರಿಗೆ ತರಲು ಕಠಿಣ ಪರಿಶ್ರಮ ಹಾಕಬೇಕಾಗಿದೆ.

ಆಸಕ್ತರಿಗೆ ಸಲಹೆಗಳು

ಹೆಚ್ಚು ಜನಪ್ರಿಯತೆ ಇರದ ಕ್ಷೇತ್ರವೊಂದನ್ನು ಆರಿಸಿಕೊಳ್ಳಬೇಕಾದರೆ, ಅವರಿ ಆ ವೃತ್ತಿಯ ಬಗ್ಗೆ ತೀವ್ರ ಆಸಕ್ತಿ ಇರಬೇಕು. ಕಠಿಣ ಪರಿಸ್ತಿತಿಯಲ್ಲೂ ಬದುಕನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು. ಇದಕ್ಕೆ ಹೊರತಾಗಿ, ಉತ್ತಮ ಸಂವಹನ ಕಲೆ, ಸಂಪರ್ಕ ಕಾಲ, ವಾಸ್ತುಶಿಲ್ಪದ ಬಗ್ಗೆ ಅಧ್ಯಯನ, ವಾಸ್ತುಶಿಲ್ಪವನ್ನು ವಿವರಿಸುವ ಕಲೆ, ಹೆಚ್ಚುವರಿ ಅಧ್ಯಯನ ಮೊದಲಾದ ವಿಚಾರಗಳು ಸಿದ್ಧಿಸಿರಬೇಕು. ಮುಖ್ಯವಾಗಿ ವೃತ್ತಿಪರತೆ ಇರಬೇಕು, ನೀವು ವೃತ್ತಿಪರರಾಗಿರದೇ ಇದ್ದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎನ್ನುವುದು ಅಪೂರ್ವ ಅಭಿಪ್ರಾಯ.

ಮುದ್ರಣ ಮತ್ತು ಡಿಜಿಟಲ್ ಮಾಧ್ಯಮ

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ವಾಸ್ತುಶಿಲ್ಪ/ಒಳಾಂಗಣ ವಿನ್ಯಾಸ/ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿತ ನಿಯತಕಾಲಿಕೆಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಡಿಜಿಟಲ್ ಮಾಧ್ಯವು ತಕ್ಷಣವೇ ಮತ್ತಷ್ಟು ಆಸಕ್ತಿದಾಯಕವಾಗಿ ಜನರನ್ನು ತಲುಪುವ ವ್ಯವಸ್ಥೆ ಹೊಂದಿದ್ದರೂ, ಈಗಲೂ ಮುದ್ರಣ ಮಾಧ್ಯವೇ ಜನರ ಆಯ್ಕೆಯಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಓದಲು ಸಾಕಷ್ಟು ವಿಷಯಗಳು ಸಿಗಬಹುದು, ಆದರೂ ಈಗಲೂ ನನಗೆ ಮುದ್ರಿತ ಪ್ರತಿಯೇ ಹೆಚ್ಚು ಇಷ್ಟವಾಗುತ್ತದೆ ಎಂದು ಅಪೂರ್ವ ಹೇಳುತ್ತಾರೆ.

ಸ್ಪೂರ್ತಿ

ಅವರ ವೃತ್ತಿ ಜೀವನ, ವಿಷಯಾಸಕ್ತಿ ಮತ್ತು ಎಲ್ಲೆಡೆಯಿಂದ ಲಭಿಸುತ್ತಿರುವ ಅಪ್ರತಿಮ ಪ್ರೋತ್ಸಾಹವೇ ಈ ವೃತ್ತಿಯಲ್ಲಿ ಮುಂದುವರಿಯಲು ಅಪೂರ್ವರಿಗೆ ಪ್ರೇರಣಾಶಕ್ತಿಯಾಗಿವೆ. ಹಲವು ಪ್ರಶಸ್ತಿ ಮತ್ತು ಗೌರವಗಳು ನನಗೆ ಅತಿಯಾದ ಖುಷಿ ತಂದುಕೊಡುತ್ತವೆ ಮತ್ತು ಇನ್ನಷ್ಟು ಉತ್ಸಾಹದಿಂದ ವೃತ್ತಿಯನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತವೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಪಾತ್ರರ ಹಾರೈಕೆಗಳೇ ನನಗೆ ಹೆಚ್ಚು ಇಷ್ಟ, ಎಂದು ಮಾತು ಮುಗಿಸುತ್ತಾರೆ ಅಪೂರ್ವ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags