ಆವೃತ್ತಿಗಳು
Kannada

ದೂರವಾಣಿ ಕರೆ ಮಾಡಿದ ತಕ್ಷಣ ವೈದ್ಯಕೀಯ ಸೇವೆ : ಇದು ಕ್ಯೂರ್​-ಫೈ..!

ಟೀಮ್​​ ವೈ.ಎಸ್​​. ಕನ್ನಡ

13th Dec 2015
Add to
Shares
2
Comments
Share This
Add to
Shares
2
Comments
Share

ಆರೋಗ್ಯಕ್ಷೇತ್ರ, ರೀಟೈಲ್ ಮತ್ತು ಶೇರು ಮಾರುಕಟ್ಟೆ ಸಂಶೋಧನೆ ಕ್ಷೇತ್ರದಲ್ಲಿ ಸತತ ಎಂಟು ವರ್ಷಗಳ ಸುದೀರ್ಘ ಅನುಭವ ಹೊಂದಿರುವ ರಾಘವ್ ಸೆಹಗಲ್ ಹೊಸ ತನದ ಕನಸು ಕಂಡಿದ್ದರು. 2013, ಜುಲೈ ತಿಂಗಳಲ್ಲಿ ಆರ್ ಎಕ್ಸ್ ವಾಲ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಪ್ರಮುಖವಾಗಿ ರೋಗಿಗಳ ಆರೋಗ್ಯ ಮಾಹಿತಿಯನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ದಾಖಲಿಸುವ ವ್ಯವಸ್ಥೆಯಾಗಿತ್ತು. 20 ಸಾವಿರ ಬಳಕೆದಾರರು ಇದ್ದರೂ ಕೂಡ ಈ ಬೆಳವಣಿಗೆ ರಾಘವ್ ಸೆಹಗಲ್ ಅವರಿಗೆ ತೃಪ್ತಿ ತಂದಿರಲಿಲ್ಲ. ಹೊಸ ಕನಸುಗಳ ಸಾಕಾರದತ್ತ ಅವರು ಆಕರ್ಷಿತರಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಜೊತೆಯಾದವರು ಮಾಯಾಂಕ್ ಅಗರ್​​ವಾಲ್. ಕ್ಯೂರ್ ಫೈ ಎಂಬ ಕಲ್ಪನೆಗೆ ಈ ಮೂಲಕ ಜೀವ ಬಂತು.

ಕ್ಯೂರ್​ ಫೈ ಅಂದರೇನು..?

ಆರೋಗ್ಯಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ರಾಘವ್ ಸೆಹಗಲ್ ಅವರಿಗೆ ಈ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳನ್ನು ಅನಾವರಣಗೊಳಿಸಿತು. ಮುಖ್ಯವಾಗಿ ಎಂಬಿಬಿಎಸ್ ಪದವಿ ಪಡೆದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ಮಾತ್ರ ನೀಡುತ್ತಾರೆ. ಇತರ ಪರಿಣಿತ ಚಿಕಿತ್ಸೆ ನೀಡಲು ಅಸಮರ್ಥರಾಗಿದ್ದಾರೆ ಎಂಬುದು ಸ್ಪಷ್ಟವಾಯಿತು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ವೈದ್ಯರತ್ತ ತೆರಳುವ ಬದಲು ಇದೇ ವೈದ್ಯರು ನೀಡುವ ಸಲಹೆ ನೇರವಾಗಿ ರೋಗಿಗಳಿಗೆ ನೀಡಿದರೆ ಹೇಗೆ ಎಂಬ ಬಗ್ಗೆ ಮನಸ್ಸು ಚಿಂತನೆ ಮಾಡಿತು. ತಂತ್ರಜ್ಞಾನದ ಬೆಂಬಲದಿಂದ ಈ ಸಮಸ್ಯೆ ಪರಿಹರಿಸಬಹುದು ಎಂಬ ನಂಬಿಕೆ ರಾಘವ್ ಸೆಹಗಲ್ ಅವರಿಗೆ ಮೂಡಿ ಬಂತು. ಇದು ಅಂತಿಮವಾಗಿ ಕ್ಯೂರ್ ಫೈ ಉದಯಿಸಲು ಕಾರಣವಾಯಿತು.

image


ರಾಘವ್ ಮಾತು..

ವೈದ್ಯಕೀಯ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ರಾಘವ್ ಸೆಹಗಲ್ ನಿಕಟವಾಗಿ ಅವಲೋಕಿಸಿದರು. ಶೇಕಡಾ 80ರಷ್ಟು ಪ್ರಕರಣಗಳು ಸಾಮಾನ್ಯ ವೈದ್ಯರ ಸಲಹೆ, ಸೂಚನೆಗೆ ಸಂಬಂಧಿಸಿದ್ದಾಗಿದೆ . ಅದರಲ್ಲೂ ಮುಖ್ಯವಾಗಿ ಈ ವಿಭಾಗದಲ್ಲಿ ಬರುವ ಶೇಕಡಾ 60 ರಿಂದ 70ರಷ್ಟು ವೈದ್ಯರನ್ನು ಭೇಟಿ ಮಾಡದೆ ಪರಿಹರಿಸಬಹುದು ಎಂಬ ವಿಶ್ವಾಸ , ಸತ್ಯ ಸೆಹಗಲ್ ಅವರ ಗಮನಕ್ಕೆ ಬಂತು. ಶೇಕಡಾ 80ರಷ್ಟಿರುವ ಜನರಲ್ ವೈದ್ಯರು ಅಂದರೆ ಪ್ರಾಥಮಿಕ ವೈದ್ಯರು ಒಟ್ಟು ಹೊರ ರೋಗಿಗಳ ಆದಾಯದಲ್ಲಿ ಶೇಕಡಾ 55ರಿಂದ 60 ಪಾಲು ಹೊಂದಿರುವುದು ಗಮನಾರ್ಹವಾಗಿತ್ತು.

ಸೂಕ್ತ ಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಲು ಇರುವ ಕೊರತೆ ಬಗ್ಗೆ ಸಮಗ್ರ ಸಂಶೋಧನೆ ಮಾಡಿದ ಸೆಹಗಲ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಇದಲ್ಲದೆ 6 ಬಿಲಿಯನ್ ಡಾಲರ್ ನಷ್ಟು ವ್ಯಾಪ್ತಿ ಹೊಂದಿರುವ ಆರೋಗ್ಯ ಕ್ಷೇತ್ರ ಒಂದು ಸಂಘಟನಾತಾಕ್ಮವಾಗಿ ಅಂದರೆ ಏಕೀಕೃತ ಬೆಳವಣಿಗೆ ದಾಖಲಿಸಿಲ್ಲ ಎಂಬ ಕಟು ಸತ್ಯ ಈ ಸಂದರ್ಭದಲ್ಲಿ ಅರಿವಿಗೆ ಬಂತು.

ಈ ಎಲ್ಲ ಸಂಶೋಧನೆ, ವಿಶ್ಲೇಷಣೆ ಅಂತಿಮವಾಗಿ ಕ್ಯೂರ್ ಫೈ ಸ್ಥಾಪನೆಗೆ ಕಾರಣವಾಯಿತು. ಆರಂಭಿಕ ಹಂತದಲ್ಲಿ ತಮ್ಮ ಬಳಿ ಇದ್ದ ಐವತ್ತು ಸಾವಿರ ಡಾಲರ್ ಗಳನ್ನು ಬಂಡವಾಳವಾಗಿ ನಿಕ್ಷೇಪ ಮಾಡಿದರು. ರೋಗಿಗಳ ವಿಶ್ವಾಸಗಳಿಸಲು ಪ್ರಾರಂಭದಲ್ಲಿ ಎಲ್ಲ ಕಸರತ್ತು ಮಾಡಬೇಕಾಯಿತು. ಆದರೂ ಸೆಹಗಲ್ ಮತ್ತು ತಂಡ ವಿಶ್ವಾಸ ಕಳೆದುಕೊಳ್ಳಲಿಲ್ಲ. ಇದೀಗ ದೂರವಾಣಿ ಮೂಲಕ 1300 ವೈದ್ಯಕೀಯ ಸಮಾಲೋಚನೆ ಮಾಡಲಾಗಿದೆ.

ತಮ್ಮ ವಿನೂತನ ಪ್ರಯತ್ನದ ಬಗ್ಗೆ ರಾಘವ್ ಸೆಹಗಲ್ ಈ ರೀತಿ ಬಣ್ಣಿಸುತ್ತಾರೆ. ಕೇವಲ ಒಂದು ನಿಮಿಷದೊಳಗೆ ಭಾರತದ ಅತ್ಯಾಧುನಿಕ ಆಸ್ಪತ್ರೆಯ ಪರಿಣಿತ ವೈದ್ಯರು ರೋಗಿಗೆ ವೈದ್ಯಕೀಯ ಸಲಹೆ ನೀಡುವುದನ್ನು ನಾವು ಖಾತರಿಪಡಿಸುತ್ತೇವೆ. ಆರಂಭದಲ್ಲಿ ದೂರವಾಣಿ ಮೂಲಕ ಈ ಸೇವೆ ಆರಂಭಿಸಲಾಯಿತು. ಬಳಿಕ ಆಪ್ ತಂತ್ರಜ್ಞಾನ ಅಳವಡಿಸಲಾಯಿತು. ಶೇಕಡಾ 98 ಬಳಕೆದಾರರಿಗೆ ನಮ್ಮ ಸೇವೆ ಸಂತೃಪ್ತಿ ನೀಡಿದೆ. ಅಲ್ಲದೆ ಶೇಕಡಾ 34 ಮಂದಿ ಮತ್ತೆ ಈ ಸೇವೆಗೆ ಬೇಡಿಕೆ ಸಲ್ಲಿಸಿದ್ದಾರೆ. ಅದರಲ್ಲೂ ಶೇಕಡಾ 76 ಮಂದಿಯ ದೂರು ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ್ದಾಗಿದೆ. ಜ್ವರ, ತಲೆ ನೋವು, ಕುತ್ತಿಗೆ ನೋವು ಹೀಗೆ ಸಾಮಾನ್ಯ ಕಾಯಿಲೆಗಳು. ಉಳಿದವು ಲೈಂಗಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿದ್ದವು ಎನ್ನುತ್ತಾರೆ ಸೆಹಗಲ್. ಶೇಕಡಾ 65 ಪ್ರಕರಣಗಳು ಅಂದರೆ ವಿಚಾರಣೆ ವಿಶೇಷ ವೈದ್ಯರ , ಪರಿಣಿತರೇ ಕಾಳಜಿ ವಹಿಸಬೇಕಾದ ಅಗತ್ಯ ಇತ್ತು. ಇದು ಕಾರ್ಯಾಚರಣೆ ಬಗ್ಗೆ ಸೆಹಗಲ್ ಹೇಳಿರುವ ಸಂಕ್ಷಿಪ್ತ ಮಾಹಿತಿ.

ವೈದ್ಯರು ಮತ್ತು ರೋಗಿಗಳ ಮಧ್ಯೆ ಸಂಬಂಧ ಸೇತು

ಸಾಮಾನ್ಯವಾಗಿ ಪರಿಣಿತ ವೈದ್ಯರನ್ನು ಪತ್ತೆ ಹಚ್ಚಲು ಬಹಳಷ್ಟು ಸಮಯ ಬೇಕಾಗುತ್ತದೆ. ಆದರೆ ಕ್ಯೂರ್ ಫೈ ತಂತ್ರಜ್ಞಾನ ಬಳಸಿದರೆ ಅತ್ಯಲ್ಪ ಅವಧಿಯಲ್ಲಿ ವೈದ್ಯರನ್ನು ಕಂಡು ಹಿಡಿಯಬಹುದು. ಸಾಮಾನ್ಯ ವೈದ್ಯರು ಅಂದರೆ ಜನರ್ ಫಿಸಿಶಿಯನ್ ಜೊತೆ ಮಾತುಕತೆ ನಡೆಸುವ ಮೂಲಕ ಪರಿಣಿತ ವೈದ್ಯರ ಮಾಹಿತಿ ಪಡೆಯಬಹುದು. ಈ ಸೌಲಭ್ಯ ಪಡೆಯುವಂತಾಗಲು ಆಪ್ ಅಳವಡಿಸಿಕೊಳ್ಳಬೇಕು. ಪಾಸ್ವರ್ಡ್​​ಬಳಸಬೇಕಾಗಿದೆ. ವೈದ್ಯರ ಮಾಹಿತಿ ಪಡೆಯಲು ಲಾಗಿನ್ ಮಾಡಿದ ಕೂಡಲೇ ತಂತ್ರಜ್ಞಾನ ತಂಡ, ಪರಿಣಿತ ವೈದ್ಯರ ಪಟ್ಟಿಯನ್ನೇ ರೋಗಿಗಳ ಮುಂದೆ ಅಂದರೆ ಮಾಹಿತಿ ಪಡೆಯಲು ಬಯಸುವವರ ಮುಂದೆ ಅನಾವರಣಗೊಳಿಸುತ್ತದೆ. ಒಂದೊಮ್ಮೆ ಆನ್ ಲೈನ್ ನಲ್ಲಿ ವೈದ್ಯರು ಸ್ಥಳೀಯವಾಗಿ ಲಭಿಸದಿದ್ದರೆ, ಇತರ ಪ್ರದೇಶಗಳ ವೈದ್ಯರ ಮಾಹಿತಿ ನೀಡುತ್ತದೆ.

ಪ್ರತಿ ತಿಂಗಳು ಮೂವತ್ತು ಸಾವಿರ ಮಂದಿಗೆ ವೈದ್ಯಕೀಯ ಸಮಾಲೋಚನೆ ನೀಡುವ ಸಾಮರ್ಥ್ಯ ಕ್ಯೂರ್ ಫೈ ಹೊಂದಿದೆ. ತಮ್ಮ ವೈದ್ಯಕೀಯ ಸೇವೆಯ ಬಗ್ಗೆ ಮಾತನಾಡುತ್ತ ಮಾಹಿತಿ ನೀಡಿದ ರಾಘವ್ ಸೆಹಗಲ್, ದೇಶದ 25 ಖ್ಯಾತ ಆಸ್ಪತ್ರೆಗಳ ಪರಿಣಿತ ವೈದ್ಯರು ರೋಗಿಗಳಿಗೆ ವೈದ್ಯಕೀಯ ಸಲಹೆ ನೀಡುತ್ತಾರೆ. ಇದು ಹೆಗ್ಗಳಿಕೆ ಎನ್ನುತ್ತಾರೆ ಸೆಹಗಲ್.

ಕ್ಯೂರ್ ಫೈ ಮಾಹಿತಿ

ವೈದ್ಯಕೀಯ ಮಾಹಿತಿ ಪಡೆಯಲು ಬಳಕೆದಾರರು ಕನಿಷ್ಠ ನೂರು ರೂಪಾಯಿ ಶುಲ್ಕ ಭರಿಸಬೇಕು. ಇದು ಕ್ಲೋಸ್ಡ್ ಮತ್ತು ಸುರಕ್ಷಿತ ವ್ಯವಹಾರವಾಗಿದೆ. ಈ ಮೂಲಕ ಅಕೌಂಟ್ ಆರಂಭಿಸಿದ ಬಳಿಕ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಅವಕಾಶ ಇದೆ. ರಿಯಾಯಿತಿ, ಇತರ ಸೌಲಭ್ಯಗಳ ಪ್ರಯೋಜನ ನೇರವಾಗಿ ಕ್ಯೂರ್ ಫೈ ಖಾತೆಗೆ ಜಮಾವಾಗುತ್ತದೆ. ಡಿಸೆಂಬರ್ 31ರ ವರೆಗೆ ಉಚಿತ ತಪಾಸಣೆ ಸೌಲಭ್ಯ ಕಲ್ಪಿಸಲಾಗಿದೆ. ಇದಲ್ಲದೆ ಸ್ನೇಹಿತರನ್ನು ಶಿಫಾರಸು ಮಾಡುವ ಮೂಲಕ ಅಂದರೆ ಆಮಂತ್ರಣ ಕೋಡ್ ನ್ನು ಹಂಚಿಕೊಳ್ಳುವ ಮೂಲಕ ನಗದು ಮರು ಪಾವತಿ ಸೌಲಭ್ಯ ಕೂಡ ಪಡೆಯಬಹುದು.

ವೈದ್ಯಕೀಯ ಸಮಾಲೋಚನೆ ಸೇವೆ ಸಂಬಂಧ ವೈದ್ಯರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆದರೆ ಬಳಕೆದಾರರು ಪ್ರತಿ ಐದು ನಿಮಿಷಕ್ಕೆ ನೂರು ರೂಪಾಯಿ ಪಾವತಿಸಬೇಕು. ಬಳಿಕ ಪ್ರತಿ ಹೆಚ್ಚುವರಿ ನಿಮಿಷಕ್ಕೆ ಹತ್ತು ರೂಪಾಯಿ ತೆರಬೇಕು.ಈ ಸಂಬಂಧಿತ ಶುಲ್ಕವನ್ನು ಕ್ಯೂರ್ ಫೈ ಅಕೌಂಟ್​​​ನಿಂದ ಕಡಿತ ಮಾಡಲಾಗುವುದು.

ಇದೀಗ ಸಂಸ್ಥೆಯನ್ನು ಜನಪ್ರಿಯಗೊಳಿಸಲು ಉಚಿತ ಕೊಡುಗೆ ನೀಡಲಾಗಿದೆ. ಶುಲ್ಕವಿಲ್ಲದೆ ಡಿಸೆಂಬರ್ 31ರ ವರೆಗೆ ಇದು ಜಾರಿಯಲ್ಲಿರುತ್ತದೆ. ಆ ಬಳಿಕ ಅಂದರೆ 2016ರ ಜನವರಿ ತಿಂಗಳಲ್ಲಿ ಪಾವತಿ ವ್ಯವಸ್ಥೆಯನ್ನು ಕ್ರಿಯಾ ಶೀಲಗೊಳಿಸಲು ಉದ್ದೇಶಿಸಲಾಗಿದೆ. ಇದು ರಾಘವ್ ಸೆಹಗಲ್ ಅವರ ಮಾತು.

ಸಂಸ್ಥೆ ಮುಂದಿನ ದಿನಗಳಲ್ಲಿ ಬೃಹತ್ ಗುರಿ ಹೊಂದಿದೆ. 2017ರ ಹೊತ್ತಿಗೆ 10 ಮಿಲಿಯನ್ ಆಪ್ ಅಪ್ಲಿಕೇಷನ್ ಡೌನ್ ಲೋಡ್ ಮತ್ತು 17. 5 ಮಿಲಿಯನ್ ಸಮಾಲೋಚನಾ ಟಾರ್ಗೆಟ್ ಮಾಡಲಾಗಿದೆ. ಇದರ ಜೊತೆ ಜೊತೆಗೆ ಕಾರ್ಯ ಕ್ಷೇತ್ರವನ್ನು ಪ್ರಮುಖ ನೂರು ನಗರಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಆದಾಯದಲ್ಲೂ 40 ರಿಂದ 50 ಮಿಲಿಯನ್ ಡಾಲರ್ ಆದಾಯ ಸಂಗ್ರಹದ ನಿರೀಕ್ಷೆಯಿದೆ.

ಆರೋಗ್ಯ ಕ್ಷೇತ್ರದ ಒಂದು ಪಕ್ಷಿ ನೋಟ

ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಆರೋಗ್ಯ ಸಂರಕ್ಷಣೆಗೆ ಮಾಡುತ್ತಿರುವ ಖರ್ಚೆ ಇದಕ್ಕೆ ಸಾಕ್ಷಿಯಾಗಿದೆ. 2012ರಲ್ಲಿ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯ ಪಾಲನೆಗಾಗಿ 61 ಡಾಲರ್ ಖರ್ಚು ಮಾಡುತ್ತಿದ್ದರೆ, ಪ್ರಸಕ್ತ ಹಣಕಾಸು ವರ್ಷ ಇದು 89 ಡಾಲರ್ ತಲುಪುವ ನಿರೀಕ್ಷೆ ಇದೆ. ಭಾರತದಲ್ಲಿ ಕೂಡ ಆರೋಗ್ಯ ಕ್ಷೇತ್ರ ವಿಶಾಲವಾಗಿ ಬೆಳೆಯುತ್ತಿದೆ. 2012- 13ನೇ ಸಾಲಿನಲ್ಲಿ ವಹಿವಾಟು 75 ಬಿಲಿಯನ್ ಡಾಲರ್ ಇದ್ದದ್ದು 2020ರ ಹೊತ್ತಿಗೆ 280 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಹೊಂದಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ಉದ್ಯೋಗಾವಕಾಶ ಮತ್ತು ಆದಾಯ ತರುವ ಕ್ಷೇತ್ರ ಎಂದೇ ಆರೋಗ್ಯ ವಲಯ ಪರಿಗಣಿಸಲಾಗಿದೆ.

ಹೂಡಿಕೆ ವಿಚಾರದಲ್ಲಿ ಕೂಡ ಆರೋಗ್ಯ ಕ್ಷೇತ್ರ ಹಿಂದೆ ಬಿದ್ದಿಲ್ಲ. 2013ನೇ ಸಾಲಿನಲ್ಲಿ 1.86 ಬಿಲಿಯನ್ ಡಾಲರ್ ಹೂಡಿಕೆ ದಾಖಲಿಸಿತ್ತು. 2014ರಲ್ಲಿ 309 ಮಿಲಿಯನ್ ಡಾಲರ್ ಹೂಡಿಕೆಯಾಗಿತ್ತು. 2015, ಜನವರಿಯಿಂದ ಜುಲೈ ವರಗೆ ಆರೋಗ್ಯ ಕ್ಷೇತ್ರ ವಿದೇಶಿ ನೇರ ಹೂಡಿಕೆಯಲ್ಲಿ ಕೂಡ ಮಹತ್ವದ ಸಾಧನೆ ಪ್ರದರ್ಶಿಸಿದೆ.

ತಂತ್ರಜ್ಞಾನದ ಸಮ್ಮಿಲನದೊಂದಿಗೆ ಆರೋಗ್ಯ ಕ್ಷೇತ್ರದ ವಿನೂತನ ಯೋಜನೆಗಳು ಜನರ ಮನೆ ಬಾಗಿಲಿಗೆ ಬಂದಿವೆ. ಸಾಮಾನ್ಯ ವೈದ್ಯರಿಂದ ಹಿಡಿದು ಪರಿಣಿತ ವೈದ್ಯರ ಸೇವೆ ದೊರೆಯುತ್ತದೆ. ಆದರೆ ಈ ಕ್ಷೇತ್ರದ ಸ್ಟಾರ್ಟ್ ಅಪ್​​ ವಾರ್​​ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

ಲೇಖಕರು: ಅಪರಾಜಿತ ಚೌಧರಿ

ಅನುವಾದಕರು: ಎಸ್​​ಡಿ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags