ಆವೃತ್ತಿಗಳು
Kannada

ಸಂಕಷ್ಟದ ಸಮಯದಲ್ಲಿ ನೆರವು ನೀಡುವ ಹಾರುವ ಕಣ್ಣುಗಳು.. !

ಟೀಮ್​​ ವೈ.ಎಸ್​​. ಕನ್ನಡ

YourStory Kannada
13th Dec 2015
Add to
Shares
0
Comments
Share This
Add to
Shares
0
Comments
Share

ಚೆನ್ನೈನಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದ ಉಂಟಾದ ಪ್ರವಾಹ ಅಲ್ಲಿನ ಜನ ಜೀವನವನ್ನೇ ನುಂಗಿಹಾಕಿದೆ. ಅದೆಷ್ಟೋ ಜನ ಬದುಕು ಕಳೆದುಕೊಂಡಿದ್ರೆ, ಹಲವಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಇನ್ನು ಕೆಲವರು ಮಾತ್ರ ಅದೃಷ್ಟದ ಬಲದಿಂದ ಜೀವವುಳಿಸಿಕೊಂಡಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾರ್ಯಾಚರಣೆಗೆ ನೆರವು ನೀಡುವುದು ತಂತ್ರಜ್ಞಾನ. 2013ರಲ್ಲಿ ಸಂಭವಿಸಿದ ಉತ್ತರಖಂಡ್ ನ ಪ್ರವಾಹ ಹಾಗೂ ನೇಪಾಳದಲ್ಲಿ ಸಂಭವಿಸಿದ ಭೂಕಂಪನದಂತಹ ಅವಘಡಗಳ ವೇಳೆಯೂ ರಕ್ಷಣಾ ಕಾರ್ಯದಲ್ಲಿ ಟೆಕ್ನಾಲಜಿ ಮಹತ್ವದ ಪಾತ್ರವಹಿಸಿತ್ತು.

ತುರ್ತು ಪರಿಸ್ಥಿತಿಯ ಸ್ವಯಂ ಸೇವಕ.. !

ಇತ್ತೀಚೆಗೆ ಸಂಭವಿಸಿದ ಕೆಲವು ಅವಘಡಗಳಲ್ಲಿ ಕಾರ್ಯಾಚರಣೆಗಿಳಿದ ರಕ್ಷಣಾಪಡೆಗಳಿಗೆ ನೆರವು ನೀಡಿದ್ದು ಯುದ್ಧವಿಮಾನಗಳು.. ಆದ್ರೆ ಕೆಲವು ಸಾಮಾನ್ಯ ಹೆಲಿಕಾಪ್ಟರ್ ಗಳಿಗೆ ಎಲ್ಲಾ ಕಡೆ ಲ್ಯಾಂಡ್ ಆಗಲು ಸಾಧ್ಯವಾಗೋದಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಳಕೆಯಾಗುತ್ತಿರುವುದು ಡ್ರೋನ್ ಕ್ಯಾಮರಾಗಳು ( UAVs) . ಸ್ಯಾಟ್ ಲೈಟ್ ನ ಮೂಲಕ ನಿರ್ದಿಷ್ಟ ಪ್ರದೇಶ ಅಥವಾ ವಸ್ತುವಿನ ಚಿತ್ರವನ್ನ ನಿಖರವಾಗಿ ತೆಗೆಯಲು ಅಸಾಧ್ಯವಾದಾಗಲೂ, ಡ್ರೋನ್ ಗಳನ್ನ ಬಳಸಿ ಸ್ಪಷ್ಟವಾದ ಚಿತ್ರಣವನ್ನ ಪಡೆಯಬಹುದಾಗಿದೆ. ಇಂತಹ ಪರಿಣಾಮಕಾರಿ ಡ್ರೋನ್ ಗಳ ಪೂರೈಕೆಯಲ್ಲಿ ಗಮನ ಸೆಳೆದಿರೋದು ಮುಂಬೈ ಏರ್ ಪಿಕ್ಸ್ ಡ್ರೋನ್ ಸೊಲ್ಯೂಷನ್ಸ್ ಹಾಗೂ ಐಡಿಯಾ ಫಾರ್ಗ್ ಕಂಪನಿಗಳು…

image


“ ವಿಪತ್ತುಗಳ ನಿರ್ವಹಣೆಯಲ್ಲಿ ಡ್ರೋನ್ ಗಳ ಪಾತ್ರ ಬಹಳ ಮುಖ್ಯ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಇವುಗಳನ್ನ ಸುಲಭವಾಗಿ ಬಳಸಿಕೊಳ್ಳಬಹುದು. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಇದು ಸಾಕಷ್ಟು ನೆರವಾಗುತ್ತದೆ ”

- ಶಿನಿಲ್ ಶೇಖರ್, ಏರ್ ಪಿಕ್ಸ್ ಡ್ರೋನ್ ಸೊಲ್ಯೂಷನ್ಸ್ ಸಹಸಂಸ್ಥಾಪಕ

ಎತ್ತರದ ಪ್ರದೇಶಗಳಲ್ಲೂ ಡ್ರೋನ್ ಹಾರಾಡುವುದರಿಂದ ಇದನ್ನ ಬಳಸಿಕೊಂಡು ಮಾಹಿತಿಗಳನ್ನ ಸಂಗ್ರಹಿಸಬಹುದು. ಅಲ್ಲದೆ ರಕ್ಷಣಾ ಪಡೆ ತಲುಪುವುದಕ್ಕೂ ಅಸಾಧ್ಯವಾಗಿರುವ ಪ್ರದೇಶಗಳಿಗೆ ಡ್ರೋನ್ ಗಳನ್ನ ಕಳುಹಿಸಿ ಪರಿಸ್ಥಿತಿಗೆ ಸ್ಪಂದಿಸಬಹುದು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಡ್ರೋನ್ ಕಾರ್ಯಚರಣೆ ನಡೆಸಿದ ರೀತಿಯನ್ನು ನೆನಪಿಸಿಕೊಳ್ಳುತ್ತಾರೆ ಐಡಿಯಾ ಫಾರ್ಗ್ ಸಹ ಸಂಸ್ಥಾಪಕಿ ಅಂಕಿತ್ ಮೆಹ್ತಾ..

“ 2013ರಲ್ಲಿ ಉತ್ತರಖಂಡದಲ್ಲಿ ಪ್ರವಾಹ ಸಂಭವಿಸಿದಾಗ ನಾವು ಎರಡು UAVs ತಂಡಗಳನ್ನ ಅಲ್ಲಿ ಕಾರ್ಯಚರಣೆಗೆ ಕಳುಹಿಸಿದ್ದೆವು. ಅಲ್ಲಿನ ಸ್ಥಳೀಯ ಏಜೆನ್ಸಿಗಳಿಗೆ ತಕ್ಷಣ ಸ್ಪಂದಿಸಲು ಬೇಕಾದ ಸೌಕರ್ಯಗಳು ಇಲ್ಲದೇ ಇದ್ದಿದ್ರಿಂದಾಗಿ ಐಡಿಯಾ ಫಾರ್ಗ್ ಅವರ ನೆರವಿಗೆ ಧಾವಿಸಿತ್ತು. ನಾವು ಅಲ್ಲಿನ ಪ್ರತೀ ಚಿತ್ರಣವನ್ನೂ ತೆರೆದುಕೊಟ್ಟೆವು. ಅಲ್ಲದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳಕ್ಕೂ ಸ್ವಯಂಸೇವಕರಾಗಿ ಸಾಥ್ ಕೊಟ್ಟಿದ್ದೆವು ” ಅಂತ ಆ ದಿನಗಳನ್ನ ಅವರು ನೆನಪಿಸಿಕೊಳ್ಳುತ್ತಾರೆ.

ಇನ್ನು ಡ್ರೋನ್ ಮೂಲಕ ಪ್ರವಾಹ ಪೀಡಿತವಾಗಿದ್ದ ವಿವಿಧ ಸ್ಥಳಗಳ ಸರ್ವೆ ನಡೆಸಿ, ಅಲ್ಲಿನ ಪರಿಸ್ಥಿತಿಯನ್ನ ತಿಳಿಯಲಾಗಿತ್ತು. ಆ ಮೂಲಕ ಅಂದು ಹಲವರ ಜೀವ ರಕ್ಷಿಸಲಾಗಿದ್ದು, ಡ್ರೋನ್ ಟೆಕ್ನಾಲಜಿ ರಕ್ಷಣಾ ಪಡೆಗೆ ಇನ್ನಷ್ಟು ಬಲ ನೀಡಿತ್ತು.

ಇನ್ನು 2014ರಲ್ಲಿ ಪುಣೆಯ ಮಲೀನ್ ಎಂಬ ಸ್ಥಳದಲ್ಲಿ ಸಂಭವಿಸಿದ ಭಾರೀ ಭೂಕುಸಿತದ ವೇಳೆಯೂ NDRF ಪಡೆಗೆ ನೆರವು ನೀಡಿದ್ದು ಐಡಿಯಾ ಫಾರ್ಗ್.. ಅಂದು ರಕ್ಷಣಾ ಪಡೆ ವಿವಿಧ ಸಲಕರಣೆಗಳನ್ನ ಬಳಸಿಕೊಂಡರೂ ಅವರು ಹೆಚ್ಚು ನಂಬಿಕೆ ಇಟ್ಟಿದ್ದು ಡ್ರೋನ್ ಮೇಲೆ. ಇದ್ರ ಪರಿಣಾಮ ಸುಮಾರು 200ಕ್ಕೂ ಹೆಚ್ಚು ಜನರು ರಕ್ಷಿಸಲ್ಪಟ್ಟಿದ್ದರು. ಹಾಗಂತ ಡ್ರೋನ್ ಗಳು ಕೇವಲ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ನಡೆಯುವ ರಕ್ಷಣಾ ಕಾರ್ಯಕ್ಕೆ ಮಾತ್ರ ಬಳಕೆಯಾಗುತ್ತಿಲ್ಲ. ಸದ್ಯ ಮುಂಬೈನ ಅಗ್ನಿಶಾಮಕ ದಳದಲ್ಲೂ ಡ್ರೋನ್ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಸರ್ಕಾರದ ನಿರ್ದೇಶನದಂತೆ ತುರ್ತು ಪರಿಸ್ಥಿತಿಯಲ್ಲಿ ಡ್ರೋನ್ ನಿರ್ವಹಿಸಲು ಒಂದು ತಂಡವನ್ನು ಸಿದ್ಧಪಡಿಸಲಾಗಿದ್ದು, ಅವರಿಗೆ ಸೂಕ್ತ ತರಬೇತಿಗಳನ್ನ ನೀಡಲಾಗಿದೆ .

ಡ್ರೋನ್ ಬಳಕೆಗೂ ಇದೆ ಅಡ್ಡಿ – ಆತಂಕ..!

ಸಂಕಷ್ಟದ ಸಂದರ್ಭಗಳಲ್ಲಿ ಡ್ರೋನ್ ಗಳ ಪಾತ್ರ ಮಹತ್ವದ್ದಾಗಿದ್ರೂ, ಇವುಗಳ ಬಳಕೆಗೂ ಇತಿಮಿತಿಗಳಿವೆ. ಮಳೆ ಬೀಳುವ ಸಂದರ್ಭದಲ್ಲಿ ಡ್ರೋನ್ ನಲ್ಲಿ ತೆಗೆದಿರುವ ಫೋಟೋಗಳು ಸ್ಪಷ್ಟವಾಗಿ ಕಾಣದೆ ಇರುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಲ್ಲದೆ ಡ್ರೋನ್ ಸಂಗ್ರಹಿಸಿರುವ ಮಾಹಿತಿಯನ್ನ ತಿಳಿಯಲು ಕೆಲವೊಮ್ಮೆ 3ಡಿ ತಂತ್ರಜ್ಞಾನದ ಮೊರೆಹೋಗುವುದು ಅನಿವಾರ್ಯ. ಇನ್ನು ಡ್ರೋನ್ ಸರ್ವೀಸ್ ನಲ್ಲಿ ಕೆಲವು ಕಂಪನೆಗಳೂ ಮಿತಿಯನ್ನ ಹೊಂದಿದ್ದು, ತಂತ್ರಜ್ಞಾನದಲ್ಲಿ ಇನ್ನೂ ಸಾಕಷ್ಟು ಸುಧಾರಣೆ ತಂದುಕೊಳ್ಳಬೇಕಾದ ಹಂತದಲ್ಲಿವೆ.

ಅದ್ರಲ್ಲೂ ಚೆನ್ನೈನಲ್ಲಿ ಸಂಭವಿಸಿದ ಪ್ರವಾಹ ವೇಳೆ ಏರ್ ಪಿಕ್ಸ್ ಕಂಪೆನಿಯು ಕೇವಲ ನಿಗದಿಪಡಿಸಲಾದ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸಿತ್ತು. ಇನ್ನು ಐಡಿಯಾ ಫಾರ್ಗ್ ಕಂಪನಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾತ್ರ ನಡೆಸಿದ್ರೆ, ನೆಟ್ರಾ ಇನ್ನಷ್ಟು ವ್ಯಾಪ್ತಿಯ ಪ್ರದೇಶಗಳನ್ನ ತಲುಪುವ ಲೆಕ್ಕಾಚಾರದಲ್ಲಿತ್ತು. ಸಾಲದಕ್ಕೆ ವಿಪತ್ತುಗಳು ಸಂಭವಿಸಿದಾಗ ಬಹಳಷ್ಟು ಸಂದರ್ಭದಲ್ಲಿ ಡ್ರೋನ್ ಗಳು ಸಂಪರ್ಕ ಸಾಧಿಸಲು ಕಷ್ಟಪಡಬೇಕಾಗುತ್ತವೆ. ಇದ್ರಿಂದ ರಕ್ಷಣಾ ಹಾಗೂ ಭದ್ರತಾ ಪಡೆಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿಯೇ ಹೆಚ್ಚು. ಹೀಗಾಗಿ ಟೆಲಿಕಾಂ ಕಂಪೆನಿಗಳು ಮೊಬೈಲ್ ಟವರ್ ಮೂಲಕವೇ ಡ್ರೋನ್ ಗೂ ಸಿಗ್ನಲ್ ವ್ಯವಸ್ಥೆ ಕಲ್ಪಿಸಿದ್ರೆ ಇವುಗಳ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತೆ. ಈ ಬಗ್ಗೆ ಸರ್ಕಾರವೂ ಇನ್ನಷ್ಟು ಗಂಭೀರವಾಗಿ ಯೋಚಿಸಿ ಡ್ರೋನ್ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸಲು ನೆರವು ನೀಡಬೇಕಿದೆ. ಏನೇ ಆದ್ರೂ ಆಪತ್ತಿನ ಸಮಯದಲ್ಲೂ ನೆರವು ನೀಡುವ ನಿಜವಾದ ಹೀಗೋ ಡ್ರೋನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಲೇಖಕರು – ಅಥಿರಾ ಎ ನಾಯರ್

ಅನುವಾದಕರು – ಬಿ ಆರ್ ಪಿ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags