ಆವೃತ್ತಿಗಳು
Kannada

ಸಿಲಿಕಾನ್ ಸಿಟಿಯಲ್ಲಿ ರೈಫಲ್, ಪಿಸ್ತೂಲ್ ಕಲಿಯೋ ಅವಕಾಶ..!

ಆರಾಧ್ಯ

14th Mar 2016
Add to
Shares
1
Comments
Share This
Add to
Shares
1
Comments
Share

ಗನ್..! ಹೆಸರು ಕೇಳಿದ್ರೆ ಎಂತಹವರಗೂ ಒಂದು ಕ್ಷಣ ಎದೆ ಝಲ್ ಎನ್ನುತ್ತೆ.. ಜೀವನದಲ್ಲಿ ಒಂದು ಸಲ ಆದ್ರೂ ಈ ಗನ್ ಕೈಯಲ್ಲಿ ಹಿಡಿದು ಡಾನ್ ರೀತಿ ಲುಕ್ ಕೊಡಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ.. ಆದ್ರೆ ಇದರ ಬಳಕ್ಕೆ ಹಾಗೂ ಗನ್ ಹಿಡಿಯುವುದು ಹೇಗೆ ಅಂತ ಬಹುತೇಕರಿಗೆ ಗೊತ್ತಿರುವುದಿಲ್ಲ.. ಈ ಪಿಸ್ತೂಲು ಯಾವತ್ತಿಗೂ ಒಂದು ರೀತಿ ಕುತೂಹಲ ಹುಟ್ಟಿಸುತ್ತದೆ. ಎಲ್ಲೋ ಕೆಲವರಿಗೆ ಮಾತ್ರ ಇದರ ಬಗ್ಗೆ ಅರಿವು ಇರುತ್ತೆ.. ಇನ್ನು ಕೆಲವರು ಇದನ್ನ ಉಪಯೋಗಿಸ್ತಾರೆ.. ಅದ್ರಲ್ಲಿ ಎನ್​ಸಿಸಿಯವರು ಕೂಡ ಒಬ್ರು.. ಕ್ಯಾಂಪ್​ಗಳಿಗೆ ಹೋದಾಗ ಅಲ್ಲಿ ಒಂದೆರಡು ರೌಂಡ್ ಫೈರ್ ಮಾಡುವ ಅವಕಾಶ ಸಿಕ್ಕಿರುತ್ತೆಯಾದ್ರು, ಅಲ್ಲಿ ಸರಿಯಾದ ತರಬೇತಿ ಸಿಕ್ಕಿರುವುದಿಲ್ಲ.. ಆದ್ರೆ ಇನ್ನು ಮಂದೆ ಆ ಚಿಂತೆ ಬೇಡ.. ಹೀಗೆ ಎನ್​ಸಿಸಿಯಲ್ಲಿ ಇದ್ದವರಿಗೆ, ಇರದವರಿಗೆ, ಪಿಸ್ತೂಲ್ ಹಿಡಿದುಕೊಳ್ಳಬೇಕು ಅಂತಂದುಕೊಂಡಿರುವವರಿಗೆ, ಶೂಟಿಂಗ್ ತರಬೇತಿ ಪಡೆಯುವ ಆಸೆ ಇರುವವರಿಗೆ ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ಅಕಾಡೆಮಿ ಇದೆ. ಅದರ ಹೆಸರು ರಾಯನ್ ಸ್ಪೋರ್ಟ್ಸ್ ರೈಫಲ್ ಶೂಟಿಂಗ್ ಅಕಾಡೆಮಿ.

image


ರಾಯನ್ ನ್ಪೋರ್ಟ್ಸ್ ರೈಫಲ್ ಶೂಟಿಂಗ್ ಅಕಾಡೆಮಿಯಲ್ಲಿ 10 ಮೀಟರ್ ಏರ್ ರೈಫಲ್ ಮತ್ತು ಪಿಸ್ತೂಲ್ 4.5mm ಕ್ಯಾಲಿಬರ್ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್ ಗಳ ತರಬೇತಿಯನ್ನ, ಅನುಭವಿ ಕೋಚ್ ಗಳು ನೀಡ್ತಾರೆ.. ರೈಫಲ್ ಕೋಚ್ ಕೊಡುವ ಮೊದಲು ಮಾನಸಿಕ, ಶಾರೀರಿಕ ಹಾಗೂ ಯೋಗ ತರಬೇತಿಯನ್ನ ನೀಡ್ತಾರೆ.. ನಂತರ ವೆಪನ್ ತಾಂತ್ರಿಕ ಮಾಹಿತಿ ಹಾಗೂ ನಿರ್ವಹಣೆ, ಶೂಟಿಂಗ್ ಈವೆಂಟ್ ಪರಿಚಯ ಹೀಗೆ ಪ್ರತಿಯೊಂದ ತರಬೇತಿಯನ್ನ ಈ ಅಕಾಡಮಿಯಲ್ಲಿ ನೀಡ್ತಾರೆ..

ಇದನ್ನು ಓದಿ: ಕ್ಷೌರಿಕ ರೋಲ್ಸ್ ರಾಯ್ಸ್ ಮಾಲೀಕನಾದ ಕಥೆ

ಈ ಅಕಾಡೆಮಿಗೆ ಒಮ್ಮೆ ಭೇಟಿ ಕೊಟ್ರೆ, ರೈಫಲ್ ಶೂಟಿಂಗ್ ಗೆ ಎಷ್ಟು ಮಹತ್ವವಿದೆ ಎಂದು ತಿಳಿಯುತ್ತೆ.. ಈ ಅಕಾಡೆಮಿಯಲ್ಲಿ ವಿದ್ಯುನ್ಮಾನ ಗುರಿ ಯಂತ್ರಗಳು ಮತ್ತು 0,177 ಏರ್ ಶಸ್ತ್ರಾಸ್ತ್ರಗಳ ಇದ್ದು, ವೃತ್ತಿಪರರು ಹಾಗೂ ಪ್ರತಿಭಾವಂತ ಕೋಚ್ ಗಳು ಸಾಮಾನ್ಯ ಶೂಟಿಂಗ್ ತರಬೇತಿಯನ್ನ ನೀಡ್ತಾರೆ.. ಅಷ್ಟೇ ಅಲ್ಲದೇ ಈ ಅಕಾಡೆಮಿಯಲ್ಲಿ ಹಲವಾರು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ, ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಬಹಳ ವ್ಯವಸ್ಥಿತ ರೀತಿಯಲ್ಲಿ ತರಬೇತಿಯನ್ನ ನೀಡಿದ್ದಾರೆ..

ಇನ್ನು ಸಾಮಾನ್ಯ ಜನರು ಕೂಡ ರೈಫಲ್ ತರಬೇತಿಯನ್ನ ಪಡೆಯಬಹುದು.. ಇಲ್ಲಿ ಬೇರೆ ಬೇರೆ ತರಹದ ಕೋರ್ಸುಗಳಿವೆ.. ವಾರದ ಕೋರ್ಸ್, ತಿಂಗಳ ಕೋರ್ಸ್, ವರ್ಷದ ಕೋರ್ಸ್.. ಪ್ರತಿದಿನದ ಕ್ಲಾಸ್, ಶನಿವಾರ ಹಾಗೂ ಭಾನುವಾರದ ಕ್ಲಾಸ್, ಪ್ರತಿದಿನದ ಕ್ಲಾಸ್ 30 ದಿನ ತರಬೇತಿಯನ್ನ ನೀಡ್ತಾರೆ.. ಆ ಕ್ಲಾಸ್ ಅನ್ನು 45 ದಿನದಲ್ಲಿ ಕಂಪ್ಲೀಟ್ ಮಾಡೋ ಅವಕಾಶವಿರುತ್ತೆ.. ಇದಕ್ಕೆ ಮೂರು ಸಾವಿರ ಶುಲ್ಕವನ್ನ ನಿಗದಿ ಮಾಡಿದ್ದಾರೆ.. ಇನ್ನು ವಾರಾಂತ್ಯದ ಕ್ಲಾಸ್ ಗಳು ಮೂರು ತಿಂಗಳ ವರೆಗೂ ಇರುತ್ತೆ.. ತಮಗೆ ಯಾವುದು ಅನುಕೂಲವೋ, ಆ ವಿಭಾಗಕ್ಕೆ ಸೇರಿಕೊಳ್ಳಬಹುದು.. ಈಗ ಸದ್ಯಕ್ಕೆ ತರಗತಿಯಲ್ಲಿ 30ಕ್ಕೂ ಹೆಚ್ಚು ಜನ್ರು ತರಬೇತಿಯನ್ನ ಪಡೆಯುತ್ತಿದ್ದಾರೆ..

image


ಇನ್ನು ಐಪಿಎಸ್ ಕಲಿಯುವವರಿಗೆ ವಿಶೇಷ ಶೂಟಿಂಗ್ ತರಬೇತಿ ಇರುತ್ತದೆ. ಸೇನೆಯಲ್ಲಿರುವವರಿಗಂತೂ ಬೇರೆ ಬೇರೆ ತರಹದ ಗನ್ ಶೂಟಿಂಗ್ ತರಬೇತಿ ಇರುತ್ತದೆ. ಅದು ಬಿಟ್ಟರೆ ಶೂಟಿಂಗ್ ಒಂದು ಕ್ರೀಡೆಯೂ ಹೌದು. ಶೂಟಿಂಗ್ ಸ್ಪರ್ಧೆಯನ್ನು ಜನ ಮುಗಿಬಿದ್ದು ನೋಡದಿದ್ದರೂ ಒಲಿಂಪಿಕ್ಸ್ ಬಂದಾಗ ಶೂಟಿಂಗ್ ನೆನಪಾಗುತ್ತದೆ. ಶೂಟಿಂಗಿನಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ನಮ್ಮ ದೇಶದಲ್ಲಿದ್ದಾರೆ. ಅವರಂತೆಯೇ ನಿಮಗೂ ಶೂಟಿಂಗ್ ಪರಿಣತರಾಗಬೇಕು, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಅನ್ನೋ ಆಸೆ ಇದ್ದರೆ.. ರಾಯನ್ ಶೂಟಿಂಗ್ ಅಕಾಡೆಮಿಯಲ್ಲಿ ಶೂಟಿಂಗ್ ತರಬೇತಿ ಪಡೆಯಬಹುದು. ತರಬೇತಿ ಪಡೆದ ನಂತರ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಪರಿಣತಿ ಸಾಧಿಸಿದರೆ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಬಹುದು.

ಸಿನಿಮಾ ನೋಡಿ ಬೆಳೆದವರಿಗೆ ಪೊಲೀಸರು ಪಿಸ್ತೂಲ್ ಹಿಡ್ಕೊಂಡು ಶೂಟ್ ಮಾಡುವುದು ಥ್ರಿಲ್ ಉಂಟು ಮಾಡುವ ಸಂಗತಿ. ಬೆಳೆದಂತೆ ಶೂಟಿಂಗ್ ಕಾಂಪಿಟಿಷನ್ ನೋಡಿದವರಿಗೆ ತಾವೂ ಪಿಸ್ತೂಲ್ ಹಿಡಿದು ಶೂಟಿಂಗ್ ಮಾಡುವ ಕನಸು ಬಿದ್ದಿರುತ್ತೆ.. ಅತಂಹವರಿಗೆ ಈ ಅಕಾಡಮಿ ಬಹಳ ಉಪಯೋಗಕಾರಿಯಾಗುತ್ತೆ.. 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆಯರು, ಪುರುಷರು ಬಂದು ವೆಪನ್ ತರಬೇತಿಯನ್ನ ಪಡೆಯಬಹುದು.. 

ಇದನ್ನು ಓದಿ:

1. ಆರೋಗ್ಯಕರ ಜೀವನಶೈಲಿ ಗೆ ಸಹಾಯ ಮಾಡುತ್ತಿರುವ ಬೆಂಗಳೂರು ಮೂಲದ ನ್ಯೂಟ್ರಿಷಿಯನ್ ಕಂಪನಿ

2. ಜೂನಿಯರ್ಸ್​ಗೆ ಸಹಾಯ ಮಾಡಲೆಂದು ಹುಟ್ಟಿದ ಫ್ರಾಟ್ಮಾರ್ಟ್

3. ಮೇಕ್ ಇನ್ ಇಂಡಿಯಾ : ಮೇಕ್ ಇನ್ ಕರ್ನಾಟಕ.. ರಾಜ್ಯಕ್ಕೆ ಸಿಕ್ಕಿದೆ 9700 ಕೋಟಿ ರೂ. ಬಂಪರ್ ಹೂಡಿಕೆ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags