ಆವೃತ್ತಿಗಳು
Kannada

ಇನ್ವೆಸ್ಟ್ ಕರ್ನಾಟಕ ಮತ್ತು ಸ್ಟಾರ್ಟ್ಅಪ್​ಗಳು ಸಾಮಾಜಿಕ ಪರಿಣಾಮ ಬೀರಬೇಕು: ಟಾಟಾ ಬಿರ್ಲಾ

ಟೀಮ್​ ವೈ.ಎಸ್​.ಕನ್ನಡ

YourStory Kannada
3rd Feb 2016
Add to
Shares
0
Comments
Share This
Add to
Shares
0
Comments
Share

“ನೀತಿಗಳನ್ನು ಕೇವಲ ಘೋಷಣೆ ಮಾಡಿದರೆ ಸಾಲದು, ಅದನ್ನು ಕ್ರಮಬದ್ಧವಾಗಿ ಮಾಡಬೇಕು”, ಟಾಟಾ ಗ್ರೂಪ್​ನ ರತನ್​ ಟಾಟಾ ಅವರ ಮನದಾಳದ ಮಾತು ಇದು. ಇನ್ವೆಸ್ಟ್ ಕರ್ನಾಟಕದಲ್ಲಿ ಯುವರ್ ಸ್ಟೋರಿಯೊಂದಿಗೆ ಮಾತನಾಡ್ತಾ ಅವರು ಹೀಗೆ ಹೇಳಿದ್ರು. ಸ್ಟಾರ್ಟ್ಅಪ್ ಮತ್ತು ಉದ್ದಿಮೆಗಳಿಗೆ ಸಹಾಯ ಮಾಡಲು ನೀತಿಗಳನ್ನು ಮೀರಿ ಮುನ್ನಡೆಯಬೇಕು ಎಂದರು ಟಾಟಾ.

image


ಮೂರು ದಿನಗಳ ಕಾರ್ಯಕ್ರಮದಿಂದ ಕರ್ನಾಟಕ ಒಂದು ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ ಮಾಡಿದೆ. ಪ್ರಾತಿನಿಧ್ಯ ಕ್ಷೇತ್ರಗಳಾದ ಏರೋಸ್ಪೇಸ್, ಡಿಫೆನ್ಸ್, ಆರೋಗ್ಯ, ಜೈವಿಕ ತಂತ್ರಜ್ಞಾನ ಮತ್ತು ಉತ್ಪಾದನೆ ಮಧ್ಯೆ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಸ್ಟಾರ್ಟ್ಅಪ್ಗಳು. 

“ದೇಶದಲ್ಲಿ ಸ್ಟಾರ್ಟ್ಅಪ್ ಅನ್ನೋ ಪದ ಖ್ಯಾತಿ ಗಳಿಸೋ ಮೊದಲೇ ಸಣ್ಣ ಗಾತ್ರದ ಕಂಪನಿಗಳು ರಾಜ್ಯದಲ್ಲಿ ಅದಾಗಲೇ ಕಾರ್ಯನಿರ್ವಹಿಸುತ್ತಿದ್ದವು” ಎನ್ನುತ್ತಾರೆ ಅವರು. ಇವರು ಸುಮಾರು 25 ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ತೋರಿಸೋ ಕಂಪನಿಗಳ ಮೇಲೆ ಕರ್ನಾಟಕ ಗಮನಹರಿಸಬೇಕು ಎಂದು ಇದೇ ಸಮಯದಲ್ಲಿ ಮಾತು ಸೇರಿಸಿದರು. “ವಸ್ತುಗಳು ಬೆಂಗಳೂರು ಕೇಂದ್ರೀಕೃತವಾಗಬಾರದು” ಅನ್ನೋದು ಅವರ ಅಭಿಪ್ರಾಯ. ಯುವ ಉದ್ಯಮಿಗಳಿಗೆ ರತನ್ ಟಾಟಾ ನಿಜವಾಗಿಯೂ ಒಂದು ಮಟ್ಟವನ್ನು ಗೊತ್ತುಪಡಿಸಿದ್ದಾರೆ. ಇನ್ವೆಸ್ಟ್ ಕರ್ನಾಟಕ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಪರಸ್ಪರ ಪೂರಕವಾಗಿರಬೇಕು ಎನ್ನುತ್ತಾರೆ ಅವರು.

ಐಟಿ ದಿಗ್ಗಜ ಇನ್ಫೋಸಿಸ್​ನ ಮಾಜಿ ಸಿಇಒ ಕ್ರಿಸ್ ಗೋಪಾಲಕೃಷ್ಣನ್ ನಂಬುವಂತೆ, ರಾಜ್ಯದಲ್ಲಿರೋ ಪ್ರತಿಭಾವಂತರಿಂದಲೇ ಕರ್ನಾಟಕಕ್ಕೆ ಹೂಡಿಕೆ ಬರುತ್ತಿದೆ. “ನಾನು ಮಾತನಾಡಿದ ಪ್ರತಿಯೊಬ್ಬ ಜಾಗತಿಕ ಮುಖಂಡನೂ ಕರ್ನಾಟಕಕ್ಕೆ ಬರಬೇಕೆಂದು ಆಸೆಪಡುತ್ತಾನೆ” ಎಂದರು.

ಆದ್ರೆ ಅವಕಾಶಗಳು ಐಟಿ ಮತ್ತು ಸ್ಟಾರ್ಟ್ಅಪ್ ಉದ್ಯಮಗಳನ್ನು ಮೀರಿ ನಿಂತಿವೆ ಅನ್ನೋದು ಇತರರ ಅಭಿಪ್ರಾಯ.

ಆದಿತ್ಯ ಬಿರ್ಲಾ ಚೇರ್ಮನ್ ಕುಮಾರ ಮಂಗಲಂ ಬಿರ್ಲಾ ಯುವರ್ ಸ್ಟೋರಿ ಜೊತೆ ಮಾತನಾಡಿ ಕರ್ನಾಟಕದಲ್ಲಿ ಉತ್ಪಾದನೆ, ಚಿಲ್ಲರೆ ವ್ಯಾಪಾರ, ಸಿಮೆಂಟ್ ಮತ್ತು ಸ್ಟಾರ್ಟ್ಅಪ್ ಕಡೆಗೆ ಗಮನ ಕೊಡುವುದಾಗಿ ತಿಳಿಸಿದ್ರು.

“ಕರ್ನಾಟಕದೊಂದಿಗೆ ನಮ್ಮ ಸಂಬಂದ 50 ವರ್ಷದಿಂದಲೂ ಇದೆ” ಎಂದರು ಕುಮಾರಮಂಗಲಂ. ಕರ್ನಾಟಕದಲ್ಲಿ ಇದಕ್ಕೂ ಹೆಚ್ಚಿನ ಹೂಡಿಕೆ ಮಾಡುವಿರಾ ಎಂಬ ಪ್ರಶ್ನೆಗೆ, “ನಾವಿನ್ನೂ ಮಾತುಕತೆ ಹಂತದಲ್ಲಿದ್ದೇವೆ, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ” ಎಂದರು.

ರಾಜ್ಯದ ಡಿಜಿಟಲ್ ಸ್ಟಾರ್ಟ್ಅಪ್ ತಂತ್ರಜ್ಞಾನವನ್ನು ಅತಿ ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದೂ ಹೇಳಿದರು ಬಿರ್ಲಾ. “ನಾವು ಈಗಾಗಲೇ ಬೆಂಗಳೂರಿನ ಒಂದು ಇ-ಕಾಮರ್ಸ್ ಮತ್ತು ಡಿಜಿಟಲ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೇವೆ. ನಾವು ರಾಜ್ಯದಲ್ಲಿ ಸ್ಟಾರ್ಟ್ಅಪ್ಗಳ ಅತ್ಯುತ್ತಮ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದರು.

ಕೇವಲ ಒಂದೆರಡು ನಗರಗಳನ್ನು ಬಿಟ್ಟು ಕರ್ನಾಟಕ ಇಡೀ ರಾಜ್ಯದ ಬಗ್ಗೆ ಗಮನ ಹರಿಸೋ ಮೂಲಕ ಈಗ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ ಎಂದು ಇನ್ವೆಸ್ಟ್ ಕರ್ನಾಟಕ ಸಂದರ್ಭದಲ್ಲಿ ಬಿರ್ಲಾ ಹೇಳಿದರು.

“ಭಾರತದಲ್ಲೇ ತಯಾರಿಸಿ ಎಂಬ ಯೋಜನೆಗೆ ಪ್ರಸ್ತುತ ಕೇಂದ್ರ ಸರ್ಕಾರ ಒತ್ತುಕೊಟ್ಟಿರೋದ್ರಿಂದ, ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ. ನನ್ನ ಅನಿಸಿಕೆಯಂತೆ ಉತ್ಪಾದನಾ ವಲಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟರೆ ಭಾರತದ ತೀಕ್ಷ್ಣ ಪ್ರಗತಿ ಸಾಧ್ಯ” ಎಂದು ಹೇಳಿದರು ಬಿರ್ಲಾ.

ಸಭೆ ಕೋಣೆಯಲ್ಲಿದ್ದ ಕಾರ್ಯನೀತಿ ರೂಪಿಸುವರಿಗೆ ಈ ಹೇಳಿಕೆಗಳು ಅಚ್ಚುಮೆಚ್ಚಿನದ್ದಾಗಿತ್ತು.

ಸಿಎಂ ಸಿದ್ದರಾಮಯ್ಯ ತಮ್ಮ ಮಾತಿನಲ್ಲಿ ಈ ಬಾರಿಯ ಇನ್ವೆಸ್ಟ್ ಕರ್ನಾಟಕದ ಗುರಿಯ ಬಗ್ಗೆ ಸ್ಪಷ್ಟತೆಯಿಂದ ಇದ್ದರು.

“ರಾಜ್ಯ ಸದಾ ಪ್ರಗತಿ ಮತ್ತು ವಿಸ್ತರಣೆಯನ್ನು ಕಂಡಿದೆ. ಈ ವರ್ಷದ ಇನ್ವೆಸ್ಟ್ ಕರ್ನಾಟಕದಲ್ಲಿ ನಮ್ಮ ಗಮನ ಕೇವಲ ಬೆಂಗಳೂರಿಗೆ ಮಾತ್ರ ಅಲ್ಲ. ಇಡೀ ರಾಜ್ಯಕ್ಕೆ ಗಮನ ಹರಿಸುತ್ತಿದ್ದೇವೆ” ಎಂದು ಸಿಎಂ ಸಿದ್ದರಾಮಯ್ಯ ಒತ್ತಿ ಹೇಳಿದರು.

ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಇಲ್ಲಿನ ಅವಕಾಶಗಳ ಬಗ್ಗೆ ವೇದಿಕೆಯಲ್ಲಿ ಉತ್ಸುಕತೆಯಿಂದ ಮಾತನಾಡಿದರು. “ಕರ್ನಾಟಕ, ಭಾರತದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರೋ ಆರ್ಥಿಕತೆ ಹೊಂದಿದ್ದು, ಸ್ಟಾರ್ಟ್ಅಪ್ ಮತ್ತು ನಾವಿನ್ಯತೆಗೆ ಇದು ಜಾಗತಿಕ ರಾಜಧಾನಿಯಾಗಿದೆ” ಎಂದರು.

ರಾಜ್ಯ ಕೆಲವು ತಂತ್ರಜ್ಞಾನ ಸೇವೆಗಳ ಶಕ್ತಿಕೇಂದ್ರವಾಗಿದೆ. ಕರ್ನಾಟಕದಲ್ಲಿ 3.8 ದಶಲಕ್ಷ ಜನರಿದ್ದು, ಅದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 1.3 ದಶಲಕ್ಷ ಜನರು ನೇರವಾಗಿ ಕೆಲಸ ಮಾಡ್ತಿದ್ದಾರೆ ಮತ್ತು ಈ ಬೆಳವಣಿಗೆಯಿಂದಾಗಿ 2 ದಶಲಕ್ಷಕ್ಕೂ ಹೆಚ್ಚು ಜನರು ಪರೋಕ್ಷವಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇನ್ನು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉತ್ಪಾದನಾ ಕ್ಷೇತ್ರದಲ್ಲಿದ್ದಾರೆ.

ಈ ಸ್ಪರ್ಧಾತ್ಮಕ ಸಂಯುಕ್ತತೆ ದೇಶಕ್ಕೆ ಆರ್ಥಿಕ ಬೆಳವಣಿಗೆಯನ್ನು ತರುತ್ತದೆ. ಪಾರದರ್ಶಕತೆಯ ಸ್ಥಿರವಾದ ದಾಖಲೆ ಹೊಂದುವ ರಾಜ್ಯ ಸ್ಪರ್ಧೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿದರು ವಿತ್ತ ಸಚಿವ ಅರುಣ್ ಜೇಟ್ಲಿ.

ಉದ್ಯಮದ ಮಾತಿಗೆ ಬಂದಾಗ ಕರ್ನಾಟಕ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತದೆ. ಆದ್ರೆ ಕಳೆದ ಮೂರು ವರ್ಷದಲ್ಲಿ ಬೆಂಗಳೂರು ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಮತ್ತು ಟ್ರಾಫಿಕ್ ದಟ್ಟಣೆಯಿಂದ ಬಳಲುತ್ತಿದೆ. ಇಷ್ಟಾದರೂ ದಿನಕ್ಕೆ ಮೂರು ಸ್ಟಾರ್ಟ್ಅಪ್ಗಳು ಬೆಂಗಳೂರಿನಲ್ಲಿ ಹುಟ್ಟಿಕೊಳ್ತಿವೆ. ಕರ್ನಾಟಕದ ಎರಡನೇ ಹಂತದ ನಗರಗಳಲ್ಲಿ ಸುಮಾರು 500 ಸ್ಟಾರ್ಟ್ಅಪ್ಗಳು ಇವೆ.

ಕೇವಲ ಬೆಂಗಳೂರಿನ ಬಗ್ಗೆ ಮಾತ್ರ ಗಮನ ಹರಿಸೋದನ್ನು ಬಿಟ್ಟು ರಾಜ್ಯ ಸರ್ಕಾರ ಇತರೆ ಜಿಲ್ಲೆಗಳ ಹೂಡಿಕೆಯ ಬಗ್ಗೆಯೂ ತಮ್ಮ ಗಮನ ವರ್ಗಾಯಿಸುವುದಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಕರ್ನಾಟಕದಲ್ಲಿ ಸಮತೋಲಿತ ಬೆಳವಣಿಗೆ ಕಾಣಲು ಸಾಧ್ಯವಿದೆ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags