ಆವೃತ್ತಿಗಳು
Kannada

ಆಟ, ನಟನೆ ಎಲ್ಲದಕ್ಕೂ ಸೈ- ನಿವೃತ್ತಿ ನಂತರ ಬ್ಯುಸಿನೆಸ್​ಗೂ ಜೈ..!

ಟೀಮ್​ ವೈ.ಎಸ್​. ಕನ್ನಡ

26th Oct 2016
Add to
Shares
15
Comments
Share This
Add to
Shares
15
Comments
Share

ನೀವು ಇವರನ್ನು ದೇಶಭಕ್ತರಾಗಿ ನೋಡಿದ್ದೀರಿ. ಗಡಿಯಲ್ಲಿ ವೀರ ಯೋಧರಂತೆ ಹೋರಾಡುವುದನ್ನು ಕಂಡಿದ್ದೀರಿ. ದುಷ್ಮನ್​ಗಳನ್ನು ಹೊಡೆದುರುಳಿಸುವುದನ್ನೂ ನೋಡಿದ್ದೀರಿ. ಡಾಕ್ಟರ್, ವಿಲನ್, ಗಾಯಕ, ಹೀಗೆ ಹಲವು ಕ್ಯಾರೆಕ್ಟರ್​ಗಳಲ್ಲಿ ಕಂಡಿದ್ದಿರಿ. ಇವರೆಲ್ಲರೂ ನಮ್ಮ ಪಾಲಿಗೆ ಸೂಪರ್ ಸ್ಟಾರ್​ಗಳು. ತೆರೆಯಲ್ಲಿ ಮಿಂಚಿದ ಸೆಲೆಬ್ರಿಟಿಗಳು ಇವರು. ಇನ್ನು ಕೆಲವರು ಮೈದಾನದಲ್ಲಿ ಆಟ ಆಡಿ ಭಾರತದ ತ್ರಿವರ್ಣ ಧ್ವಜವನ್ನು ಹಾರುವಂತೆ ಮಾಡಿದವರು. ಆದ್ರೆ ಇವರಿಗೂ ಉದ್ಯಮದಲ್ಲಿ ಆಸಕ್ತಿ ಇದ್ದೇ ಇದೆ. ಸೆಲೆಬ್ರಿಟಿಗಳ ಉದ್ಯಮದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ.

image


ಶಿಲ್ಪಾ ಶೆಟ್ಟಿ

ಚೆಲುವಿಗೆ ಹೆಸರಾದವರೇ ಶಿಲ್ಪಾ ಶೆಟ್ಟಿ. ತಮ್ಮ ಸೌಂದರ್ಯದ ಹಿಂದೆ ಯೋಗದ ಕಮಾಲ್ ಇದೆ ಅನ್ನೋದನ್ನ ಮನಬಿಚ್ಚಿ ಹೇಳುತ್ತಾರೆ. ಫಿಟ್ನೆಸ್​ಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡುತ್ತಾರೆ. ಉದ್ಯಮದಲ್ಲೂ ಶಿಲ್ಪಾ ಶೆಟ್ಟಿ ಕೈಯಾಡಿಸಿದ್ದಾರೆ. ಐಪಿಎಲ್ ಫ್ರಾಂಚೈಸಿ "ರಾಜಸ್ಥಾನ ರಾಯಲ್ಸ್​"ನಲ್ಲಿ ಶಿಲ್ಪಾ ಶೆಟ್ಟಿ ಷೇರುಗಳನ್ನು ಹೊಂದಿದ್ದರು. ಈಗ ಶಿಲ್ಪಾ ಸ್ಪಾ ಬ್ಯುಸಿನೆಸ್ ಕಡೆಗೆ ಗಮನ ಇಟ್ಟಿದ್ದಾರೆ. ಜ್ಯುವೆಲ್ಲರಿ ವ್ಯವಹಾರಕ್ಕೂ ಶಿಲ್ಪಾ ಕೈ ಇಟ್ಟಿದ್ದರು. 2014ರಲ್ಲಿ ಶಿಲ್ಪಾ , "Essential Sports and Media" ಅನ್ನೋ ಕಂಪನಿಯನ್ನು ಸ್ಥಾಪಿಸಿ ಅದರ ಮೂಲಕ ದಿಶ್ಕಿಯೂನ್ ಅನ್ನೋ ಚಲನಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದರು.

ಸುನೀಲ್ ಶೆಟ್ಟಿ

ಬಾಲಿವುಡ್​ನಲ್ಲಿ ಸುನೀಲ್ ಶೆಟ್ಟಿಯನ್ನು ಆ್ಯಕ್ಷನ್ ಮ್ಯಾನ್ ಅಂತಲೇ ಕರೆಯುತ್ತಾರೆ. ಆದ್ರೆ ಈ ನಟನಿಗೆ ಉದ್ಯಮದ ಕಡೆ ಎಲ್ಲಿಲ್ಲದ ಆಸಕ್ತಿ. ಈಗಾಗಲೇ ಹೊಟೇಲ್ ಉದ್ಯಮಗಳಲ್ಲಿ ಸುನೀಲ್ ಶೆಟ್ಟಿ ಯಶಸ್ಸು ಕಂಡಿದ್ದಾರೆ. ಚಿತ್ರ ನಿರ್ಮಾಣವನ್ನು ಕೂಡ ಮಾಡಿದ್ದಾರೆ. ಫ್ಯಾಷನ್ ಮತ್ತು ಇಂಟೀರಿಯರ್ ಡಿಸೈನಿಂಗ್​ಗಳಲ್ಲೂ ಸುನೀಲ್ ಶೆಟ್ಟಿ ಹೂಡಿಕೆ ಮಾಡಿದ್ದಾರೆ ಅನ್ನುವುದು ರಹಸ್ಯವಾಗಿ ಉಳಿದಿಲ್ಲ.

ಸುಶ್ಮಿತಾ ಸೇನ್

ಮಾಜಿ ಭುವನ ಸುಂದರಿ ಈಗ ಮಹಿಳಾ ಉದ್ಯಮಿ. ದುಬೈನಲ್ಲಿ ಸುಶ್ಮಿತಾ ರಿಟೈಲ್ ಜ್ಯುವೆಲ್ಲರಿ ಸ್ಟೋರ್​ಗಳನ್ನು ಇಟ್ಟುಕೊಂಡು ಉದ್ಯಮ ನಡೆಸುತ್ತಿದ್ದಾರೆ. ಈಗಾಗಲೇ ಸೆನ್ಸಝೈನ್ ಅನ್ನೋ ಕಂಪನಿಯನ್ನು ಕೂಡ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಹೊಟೇಲ್ ಮತ್ತು ಸ್ಪಾಗಳನ್ನು ಆರಂಭಿಸುವ ಕನಸುಗಳು ಕೂಡ ಸುಶ್​ಗಿದೆ.

ಜಾನ್ ಅಬ್ರಾಹಂ

ಬಾಲಿವುಡ್​ನ ಮಸ್ಹಲ್​ ಮ್ಯಾನ್ ಅನ್ನೋ ಖ್ಯಾತಿ ಜಾನ್ ಅಬ್ರಾಹಂಗಿದೆ. ಫಿಟ್ನೆಸ್ ಅಂದ್ರ ಜಾನ್ ಅಬ್ರಾಹಂ, ಜಾನ್ ಅಬ್ರಾಹಂ ಅಂದ್ರೆ ಫಿಟ್ನೆಸ್ ಅನ್ನೋ ಮಟ್ಟಿಗೆ ಯುವಜನತೆಗೆ ಕ್ರೇಜ್ ಹೊಂದಿದ್ದಾರೆ. ಜಾನ್ ಈಗಾಗಲೇ ತಮ್ಮ ಉದ್ಯಮದ ಮೂಲಕ ಸಾಕಷ್ಟು ಪ್ರಸಿದ್ಧಿಗಳಿಸಿದ್ದಾರೆ. ಜಾನ್ ಈಗಾಗಲೇ ಬ್ರಿಟಿಷ್ ಬಾಕ್ಸಿಂಗ್ ಲೆಜೆಂಡ್ ಡೇವಿಡ್ ಹೇ ಜೊತೆ ಸೇರಿಕೊಂಡು "ದಿ ಆರ್ಟ್ ಆಫ್ ಬಾಕ್ಸಿಂಗ್" ಅನ್ನೋ ಸಂಸ್ಥೆಯನ್ನು ಕೂಡ ನಡೆಸುತ್ತಿದ್ದಾರೆ.

ಲಾರಾ ದತ್ತಾ

ಮಾಜಿ ವಿಶ್ವಸುಂದರಿ ಲಾರಾದತ್ತಾ ಬಗ್ಗೆ ಎಲ್ಲರಿಗೂ ಗೊತ್ತು. ಲಾರಾ ದತ್ತಾ ಉದ್ಯಮದಲ್ಲೂ ತನ್ನ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಲಾರಾ "ಬೀಗಿ ಬಸಂತಿ" ಅನ್ನೋ ಸೀರೆ ಕಲೆಕ್ಷನ್ ಸೆಂಟರ್​ನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಫಿಟ್ನೆಸ್ ಬಗ್ಗೆ ಡಿವಿಡಿಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ವೀರೆಂದ್ರ ಸೆಹ್ವಾಗ್

ಕ್ರಿಕೆಟ್ ಮೈದಾನದಲ್ಲಿ ವೀರೆಂದ್ರ ಸೆಹ್ವಾಗ್ ಬೌಲರ್​ಗಳನ್ನು ಬೌಂಡರಿ, ಸಿಕ್ಸರ್​ಗಳ ಮೂಲಕ ಬೆಂಡೆತ್ತಿದ್ದರು. ಆದ್ರೆ ಕ್ರಿಕೆಟ್​ನಿಂದ ನಿವೃತ್ತಿಯಾದ ಮೇಲೆ ವೀರೂ ಉದ್ಯಮದ ಕಡೆ ಚಿತ್ತ ನೆಟ್ಟಿದ್ದಾರೆ. ಇತ್ತೀಚೆಗೆ ಸೆಹ್ವಾಗ್ ಹರ್ಯಾಣದ ಜಜ್ಜಾರ್​ನಲ್ಲಿ "ಸೆಹ್ವಾಗ್ ಇಂಟರ್​ನ್ಯಾಷನಲ್ ಸ್ಕೂಲ್" ಅನ್ನೋ ಆರಂಭಿಸಿದ್ದಾರೆ. ಈ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

ಇದನ್ನು ಓದಿ: 14ರ ಹರೆಯದಲ್ಲೇ ವಿಮಾನ ತಯಾರಿಸುವ ಸಾಹಸದಲ್ಲಿ ಜೂನಿಯರ್ ಐನ್ ಸ್ಟೀನ್...!

ಜಹೀರ್ ಖಾನ್

ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಹುರಿದು ಮುಕ್ಕಿದ್ದು ಗೊತ್ತೇ ಇದೆ. ಆದ್ರೆ ಈಗ ಜ್ಯಾಕ್ ಒಬ್ಬ ಉದ್ಯಮಿ. ಪುಣೆಯಲ್ಲಿ ಜ್ಯಾಕ್" ZK" ಅನ್ನೋ ರೆಸ್ಟೋರೆಂಟ್​ನ್ನು ಆರಂಭಿಸಿದ್ದಾರೆ. "ZK" ಯುವಕರ ಪಾಲಿಗೆ ಕ್ರೇಜ್ ಆಗಿ ಬೆಳೆದಿದೆ. ಅಷ್ಟೇ ಅಲ್ಲ ಜಹೀರ್ ಖಾನ್ ಹಾಸ್ಪಿಟಾಲಿಟಿ ಉದ್ಯಮವನ್ನು ಕೂಡ ಮುನ್ನಡೆಸುತ್ತಿದ್ದಾರೆ.

ಸಾನಿಯಾ ಮಿರ್ಜಾ

ಟೆನಿಸ್ ಲೋಕದ ಮೂಗುತಿ ಸುಂದರಿ ಭಾರತಕ್ಕೆ ಅದೆಷ್ಟೋ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಟೆನಿಸ್ ಕೋರ್ಟ್​ನಲ್ಲಿ ತನ್ನ ಆಟದ ಮೂಲಕ ಮಿಂಚಿದ್ದಾರೆ. ಈ ಹೈದ್ರಾಬಾದ್ ಬೆಡಗಿಗೆ ಉದ್ಯಮದಲ್ಲೂ ಆಸಕ್ತಿ ಇದೆ. ಹೀಗಾಗಿ ಹೈದ್ರಾಬಾದ್​ನಲ್ಲಿ "Ristretto Coffee Shop" ಅನ್ನೋ ಕೆಫೆ ಶಾಪ್ ಒಂದನ್ನು ಆರಂಭಿಸಿದ್ದಾರೆ. ವಿಶಾಖಪಟ್ಟಣ ಮತ್ತು ದಕ್ಷಿಣ ಭಾರತದ ಇತರೆ ಕಡೆಗಳಿಗೆ ತನ್ನ ಉದ್ಯಮವನ್ನು ವಿಸ್ತರಿಸುವ ಕನಸನ್ನು ಕೂಡ ಸಾನಿಯಾ ಮಿರ್ಜಾ ಹೊಂದಿದ್ದಾರೆ. ಭಾರತದಲ್ಲಿ ಟೆನಿಸ್​ನ್ನು ಅಭಿವೃದ್ಧಿ ಪಡಿಸಲು ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯನ್ನು ಸ್ಥಾಪಿಸುವ ಯೋಜನೆ ಕೂಡ ಮಾಡಿಕೊಂಡಿದ್ದಾರೆ.

ಭಾರತದ ಈ ಸೆಲೆಬ್ರಿಟಿಗಳ ಜೊತೆ ಇತರೆ ಕ್ರೀಡಾಪಟುಗಳು ಮತ್ತು ಸಿನಿಸ್ಟಾರ್ಗಳು ಉದ್ಯಮದಲ್ಲಿ ತನ್ನ ಆದೃಷ್ಟ ಪರೀಕ್ಷೆ ನಡೆಸಿದ್ದಾರೆ. ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯಿಂದ ಹಿಡಿದು ಸಲ್ಮಾನ್, ಶಾರೂಕ್ ತನಕ ಎಲ್ಲರೂ ಉದ್ಯಮಿಗಳೇ. ಒಟ್ಟಿನಲ್ಲಿ ಉದ್ಯಮ ಅನ್ನೋದು ಎಲ್ಲರಿಗೂ ಹವ್ಯಾಸವಾಗಿ ಬಿಟ್ಟಿದೆ.

ಇದನ್ನು ಓದಿ:

1. 76ರ ಅಜ್ಜಿಯ ಕೈ ರುಚಿ- ಮೈ ಅಮ್ಮಾಸ್ ಹೋಮ್​ ಮೇಡ್ ಮ್ಯಾಜಿಕ್​..!

2. ಒಂದು ಕೈ ಇಲ್ಲದಿದ್ದರೇನಂತೆ ಬದುಕುವ ಛಲವಿದೆಯಲ್ಲ..

3. ಸ್ಟಾರ್​ಗಳಿಗೆ ಲುಕ್​ ಕೊಡುವ ಗಟ್ಟಿಗಿತ್ತಿ- ಪಾತರಗಿತ್ತಿಗೂ ಬಣ್ಣ ಹಚ್ಚೋ ಪವಿತ್ರರೆಡ್ಡಿ

Add to
Shares
15
Comments
Share This
Add to
Shares
15
Comments
Share
Report an issue
Authors

Related Tags