ಆವೃತ್ತಿಗಳು
Kannada

ಬದಲಾಗುತ್ತಿದೆ ಭಾರತ- ಇ-ಮೇಲ್​ ತಂತ್ರಜ್ಞಾನದಲ್ಲಿ ಅಭಿವೃದ್ಧಿಯತ್ತ ಚಿತ್ತ

ಟೀಮ್​ ವೈ.ಎಸ್​. ಕನ್ನಡ

1st Sep 2016
Add to
Shares
3
Comments
Share This
Add to
Shares
3
Comments
Share

ಇದು ಡಿಜಿಟಲ್‌ ಯುಗ. ಬಹುತೇಕ ಎಲ್ಲಾ ಕಾರ್ಯಗಳು ನಡೆಯೋದು ಡಿಜಿಟಲೈಸ್ಡ್‌ ಮರ್ಗದಲ್ಲೇ. ಸ್ಮಾರ್ಟ್‌ಫೋನ್‌, ಇಂಟರ್‌ನೆಟ್‌, ಕಂಪ್ಯೂಟರ್‌ಗಳು ಕೆಲಸಗಳನ್ನು ಸುಲಭ ಮಾಡಿವೆ. ಆದ್ರೆ ಇವುಗಳನ್ನು ಉಪಯೋಗ ಮಾಡಲು ಕೊಂಚ ಇಂಗ್ಲೀಷ್‌ ಜ್ಞಾನ ಇರಲೇಬೇಕು. ಇ-ಮೇಲ್‌ ಮಾಡೋದಿಕ್ಕಂತೂ ಇಂಗ್ಲೀಷ್‌ ಸ್ಪೆಲ್ಲಿಂಗ್‌ಗಳು ಚೆನ್ನಾಗಿ ಗೊತ್ತಿರಬೇಕು. ಇಮೇಲ್‌-ಐಡಿ ಕ್ರಿಯೇಟ್‌ ಮಾಡಲು ಇಂಗ್ಲೀಷ್‌ ಬಿಟ್ರೆ ಬೇರೆ ದಾರಿ ಕಾಣುವುದಿಲ್ಲ. ಆದ್ರೆ ಇನ್ನು ಮುಂದೆ ನೀವು ಹಿಂದಿ ಅಥವಾ ದೇವನಗರಿ ಲಿಪಿಯಲ್ಲೂ ಇ-ಮೇಲ್‌ ಐಡಿಯನ್ನು ಕ್ರಿಯೇಟ್‌ ಮಾಡಬಹುದು. ಆದ್ರೆ ಸದ್ಯಕ್ಕೆ ಅದು ಚಾರ್ಜೇಬಲ್‌ ಆಗಿರೋದ್ರಿಂದ ಕೊಂಚ ದುಬಾರಿ ಆಗಿದೆ.

image


ದೆಹಲಿ ಮೂಲದ ಡಾಟಾ ಎಕ್ಸ್‌ಜೆನ್‌ ಕಂಪನಿ ಇಂಗ್ಲೀಷ್‌ ಅಕ್ಷರಗಳಲ್ಲಿರುವ ಇ-ಮೇಲ್‌ ಐಡಿಯನ್ನು ಹಿಂದಿ ಅಥವಾ ದೇವನಗರಿ ಅಕ್ಷರಗಳಲ್ಲಿ ಕ್ರಿಯೇಟ್‌ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿದಿದೆ. gmail, ಔಟ್‌ಲುಕ್‌ ಮತ್ತು ಯಾಹೂ ಮೇಲ್‌ಗಳಲ್ಲಿ ಹಿಂದಿ ಮತ್ತು ದೇವನಗರಿ ಭಾಷೆಯನ್ನು ಶೀಘ್ರದಲ್ಲೇ ಉಚಿತವಾಗಿ ನೀಡುವ ಭರವಸೆಯನ್ನು ಕೂಡ ಡಾಟಾ ಎಕ್ಸ್‌ಜೆನ್‌ ಕಂಪನಿ ನೀಡಿದೆ.

"ಹಿಂದಿ ಅಥವಾ ದೇವನಗರಿ ಲಿಪಿಯಲ್ಲಿ ಇ- ಮೇಲ್‌ ಐಡಿ ಕ್ರೀಯೇಟ್‌ ಮಾಡಲು ನಮ್ಮ ಭಾರತ್‌ ಡೊಮೈನ್‌ ಅನ್ನು ಸಂಪರ್ಕಿಸಬೇಕು. ಈಗಾಗಲೇ ಕೆಲವು ಐಡಿಗಳು ನಮ್ಮ ಡೊಮೈನ್‌ನಲ್ಲಿ ಕ್ರಿಯೇಟ್‌ ಆಗಿದೆ. ಈ ಭಾಷೆಗಳಲ್ಲಿ ಐಡಿಗಳನ್ನು ಕ್ರಿಯೇಟ್‌ ಮಾಡಲು ಬಯಸುವವರು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ, ಇ-ಮೇಲ್‌ ಸರ್ವೀಸ್‌ ಪ್ಯಾಕೇಜ್‌ಗಳನ್ನು ಖರೀದಿಸಬೇಕಿದೆ. "
- ಅಜಯ್‌ ದತ್ತಾ, ಡಾಟಾ ಎಕ್ಸ್‌ಜೆನ್‌ ಸಂಸ್ಥಾಪಕ

ಹಿಂದಿ ಅಥವಾ ದೇವನಗರಿಯಲ್ಲಿ ಕಳುಹಿಸುವಂತಹ ಇ-ಮೇಲ್‌ಗಳನ್ನು ಓದುವುದು ಹೇಗಪ್ಪಾ ಅನ್ನೋ ತನಲೆನೋವಿಗೂ ಪರಿಹಾರ ಸಿಕ್ಕಿದೆ. ಈ ಭಾಷೆಗಳಲ್ಲಿ ಕಳುಹಿಸುವ ಇ-ಮೇಲ್‌ಗಳು ಈಗ ಇರುವ ಇಂಗ್ಲೀಷ್‌ ಲಿಪಿ ಆಧಾರಿತ ಸರ್ವೀಸ್‌ ಪ್ರೊವೈಡರ್‌ಗಳ ಬಳಿ ಒದಲು ಯೋಗ್ಯವಾಗಿದೆ. ಇಷ್ಟೇ ಅಲ್ಲದೆ ಇಂಗ್ಲೀಷ್‌ ಲಿಪಿ ಆಧಾರಿತ ಇ-ಮೇಲ್‌ ಐಡಿ ಬಳಕೆದಾರರು ಹಿಂದಿ ಅಥವಾ ದೇವನಗರಿ ಲಿಪಿ ಆಧಾರಿತ ಇ-ಮೇಲ್‌ ಬಳಕೆದಾರರಿಗೆ ಇ-ಮೇಲ್‌ ಅನ್ನು ಕೂಡ ಕಳುಹಿಸಬಹುದು. ಶೀಘ್ರದಲ್ಲೇ ಭಾರತ್‌ ಡೊಮೈನ್‌ ಹಿಂದಿ ಲಿಪಿ ಆಧಾರಿತ ಬಳಕೆದಾರರಿಗೆ ಫ್ರೀ ಇ-ಮೇಲ್‌ ಐಡಿಯನ್ನು ಕ್ಇರೇಟ್‌ ಮಾಡಿಕೊಳ್ಳಲು ಅವಕಾಶ ನೀಡುವ ಭರವಸೆಯನ್ನು ಕೂಡ ನೀಡಿದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ಕೂಡ ನಡೆಯುತ್ತಿದೆ.

ಇದನ್ನು ಓದಿ: ಶೂನ್ಯ ಹೂಡಿಕೆಯೊಂದಿಗೆ ಉದ್ಯಮ ಆರಂಭಿಸುವುದು ಹೇಗೆ?

ಡಿಜಿಟಲ್‌ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ಸರ್ಕಾರ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ಈ ಹಿಂದಿ ಮತ್ತು ದೇವನಗರಿ ಭಾಷೆಯ ಲಿಪಿಯ ಅನ್ವೇಷಣೆ ಡಿಜಿಲೀಕರಣದ ಯೋಚನೆಯನ್ನು ಸುಲಭ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡಬಹುದು. ಈಗಾಗಲೇ ಇಂಗ್ಲೀಷ್‌ ಲಿಪಿ ಆಧಾರಿತ ಇ-ಮೇಲ್‌ ಸೇವೆ ನೀಡುವ ಕಂಪನಿಗಳು, ಈ ಹೊಸ ಪ್ರಯತ್ನಕ್ಕೆ ಚಿಕ್ಕ ಪ್ರೋತ್ಸಾಹವನ್ನು ನೀಡುವ ಭರವಸೆಯನ್ನು ನೀಡಿವೆ. ಈಗಾಗಲೇ ಗೂಗಲ್‌ ಭಾಷೆ ಸಂಹವನಕ್ಕೆ ಅಡ್ಡಿಯಾಗಬಾರದು ಅಂತ ತನ್ನ ಬ್ಲಾಗ್‌ನಲ್ಲಿ ಘೋಷಿಸಿಕೊಂಡಿದೆ. ಬಳಕೆದಾರರಿಗೆ ಅನುಕೂಲಕರವಾಗುವ ಭಾಷೆಗಳಲ್ಲಿ ಇ-ಮೇಲ್‌ ಐಡಿ ಕ್ರಿಯೇಟ್‌ ಮಾಡಿಕೊಳ್ಳುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರುವ ಯೋಜನೆ ಮಾಡುತ್ತಿದೆ. ಈಗಾಗಲೇ gmail 13 ಭಾಷೆಗಳಲ್ಲಿ ಇ-ಮೇಲ್‌ ಸರ್ವೀಸ್‌ ನೀಡುತ್ತಿದೆ. ಅಫ್ರಿಕಾನ್ಸ್‌, ಚೈನೀಸ್‌, ಜಾರ್ಜಿಯನ್‌,ಕ್ಮೇರ್‌, ಲಾವೊ, ಮಂಗೋಲಿಯನ್‌, ನೇಪಾಳಿ, ಸಿಂಹಳ ಮತ್ತು ಝುಲು ಭಾಷೆಗಳಲ್ಲಿ ಈಗಾಗಲೇ ಲಿಪಿ ಆಧಾರಿತ ಇ-ಮೇಲ್‌ ಸರ್ವೀಸ್‌ ವ್ಯವಸ್ಥೆಗಳು ಲಭ್ಯವಿದೆ.

ಮೈಕ್ರೋಸಾಫ್ಟ್‌ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪ್ರಾಂತೀಯ ಭಾಷೆಗಳಲ್ಲಿ ಡೊಮೈನ್‌ ಸರ್ವೀಸ್‌ಗಳನ್ನು ನೀಡುವ ಕುರಿತು ಆಲೋಚನೆ ನಡೆಸಿದೆ. ಇ-ಮೇಲ್‌ ಬಳಕೆದಾರರಿಗೆ ಅತಿ ಸುಲಭವಾಗಿ ಉಪಯೋಗವಾಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುವ ಕೆಲಸಗಳು ನಡೆಯುತ್ತಿದೆ. ಸದ್ಯಕ್ಕೆ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ 11, ಮೈಕ್ರೋಸಾಫ್ಟ್‌ ಎಡ್ಜ್‌ ಮತ್ತು ಎಂ.ಎಸ್‌. ಔಟ್‌ಲುಕ್‌ 2016 ಎಲ್ಲಾ ಭಾರತೀಯ ಭಾಷೆಗಳಿಗೆ ಅನುಕೂಲಕರವಾಗುವ ತಂತ್ರಜ್ಞಾನವನ್ನು ಹೊಂದಿದೆ. ಒಟ್ಟಿನಲ್ಲಿ ಡಿಜಿಟಲೀಕರಣ ದಿನಕಳೆದಂತೆ ಹೆಚ್ಚು ಪ್ರಭಾವಶಾಲಿ ಆಗುತ್ತಿರುವುದಂತೂ ಸುಳ್ಳಲ್ಲ.

ಇದನ್ನು ಓದಿ:

1, ಭಾರತದಲ್ಲಿ ನೀರಿನ ಸಮಸ್ಯೆ ಯಾರಿಗೆ ಶಾಪ..?

2. ಸ್ಲಮ್ ಮಕ್ಕಳೇ ನಡೆಸುತ್ತಿರುವ ಪತ್ರಿಕೆ ''ಬಾಲಕ್​ನಾಮಾ''

3. ಕ್ಯಾನ್ಸರ್ ಪೀಡಿತ ಮಗುವಿಗಾಗಿ ಒಲಿಂಪಿಕ್ಸ್ ಪದಕ ಮಾರಿದ ಕ್ರೀಡಾಪಟು..

Add to
Shares
3
Comments
Share This
Add to
Shares
3
Comments
Share
Report an issue
Authors

Related Tags