ಮೋದಿ ಇಮೇಜ್ ಮತ್ತು ನೋಟು ನಿಷೇಧ..

ಆಶುತೋಷ್, ಎಎಪಿ ಮುಖಂಡ 

12th Dec 2016
  • +0
Share on
close
  • +0
Share on
close
Share on
close

80ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಜನಸಾಮಾನ್ಯರು ಬವಣೆ ಅನುಭವಿಸ್ತಿದ್ದಾರೆ, ಆರ್ಥಿಕತೆ ಅಲುಗಾಡ್ತಿದೆ, ಬ್ಯಾಂಕ್ ವ್ಯವಸ್ಥೆ ಕುಸಿಯುವ ಹಂತದಲ್ಲಿದೆ, ಆರ್ಥಿಕ ತಜ್ಞರು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸ್ತಿದ್ದಾರೆ. ಕಪ್ಪು ಹಣವನ್ನು ನಮ್ಮ ವ್ಯವಸ್ಥೆಯಿಂದ ತೊಡೆದುಹಾಕುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೂ ಪ್ರಧಾನಿ ಮೋದಿ ಮಾತ್ರ ನೋಟು ನಿಷೇಧದ ಬಗ್ಗೆ ಕ್ಷಮೆ ಕೇಳುವ ಮನಸ್ಥಿತಿಯಲ್ಲೇ ಇಲ್ಲ. ಇದು ಮೋದಿ ಅವರ ಅಧಿಕಾರಾವಧಿಯ ಅತ್ಯಂತ ಆಸಕ್ತಿಕರ ನಿರ್ಧಾರಗಳಲ್ಲೊಂದು. ನೋಟು ನಿಷೇಧದ ಹಿಂದಿನ ಲಾಜಿಕ್ ಕಪ್ಪುಹಣ ನಿರ್ಮೂಲನೆಯಾಗಿದ್ದಲ್ಲಿ, ಅದರ ಸುಳಿವಾದ್ರೂ ಲಭ್ಯವಾಗಬೇಕಿತ್ತು. ಪ್ರಧಾನಿ ಮೋದಿ ಈ ಸಮಯವನ್ನೇ ಯಾಕೆ ಆಯ್ಕೆ ಮಾಡಿಕೊಂಡ್ರು? ಸೂಕ್ತ ತಯಾರಿ ಯಾಕೆ ಮಾಡಿಕೊಂಡಿರಲಿಲ್ಲ ಅನ್ನೋದೇ ಎಲ್ಲರ ಪ್ರಶ್ನೆ. ನೋಟು ನಿಷೇಧ ನಿರ್ಧಾರ ಹೊರಬಿದ್ದು ತಿಂಗಳು ಕಳೆದಿದ್ರೂ ಸಾರ್ವಜನಿಕರ ಸಂಕಷ್ಟ ಕೊನೆಯಾಗಿಲ್ಲ.

image


ಈ ಸಮಯದಲ್ಲೇ ನೋಟು ಅಮಾನ್ಯಗೊಳಿಸಿರುವುದರ ಹಿಂದೆ ಪಿತೂರಿ ಇದೆ ಎಂಬ ಮಾತುಗಳೂ ಕೇಳಿಬಂದಿವೆ. ಮೋದಿ ಎರಡು ಕೈಗಾರಿಕೆಗಳಿಂದ ಹಣ ಪಡೆದಿದ್ದಾರೆ ಅನ್ನೋ ವಿಷಯವನ್ನು ಮರೆಮಾಚಲು ಮಾಡಿ ಪ್ರಯತ್ನ ಇದು ಎನ್ನಲಾಗ್ತಿದೆ. ಇನ್ನೊಂದೆಡೆ ಅವರನ್ನು ಕಾಳಧನಿಕರ ಪಟ್ಟಿಗೆ ಸೇರಿಸುವ ಮುನ್ನವೇ ವಿರೋಧಿಗಳನ್ನು ಮತ್ತು ಎದುರಾಳಿಗಳನ್ನು ಹಣಿಯುವ ಪ್ರಯತ್ನ ಅನ್ನೋ ಮಾತುಗಳೂ ಕೇಳಿಬಂದಿವೆ. ಉತ್ತರ ಪ್ರದೇಶ ಬಿಜೆಪಿ ಲೋಕಸಭಾ ಇಲೆಕ್ಷನ್ ನಲ್ಲಿ 73 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಯುಪಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಎಲೆಕ್ಷನ್ ಮೇಲೆ ಪ್ರಭಾವ ಬೀರಲಿ ಅನ್ನೋ ಕಾರಣಕ್ಕೆ ನೋಟು ನಿಷೇಧ ಮಾಡಲಾಗಿದೆ ಎನ್ನಲಾಗ್ತಿದೆ. ತಮ್ಮ ಅಧಿಕಾರಾವಧಿಯ ಅರ್ಧಸಮಯವನ್ನು ಈಗಾಗ್ಲೇ ಪೂರೈಸಿರುವ ಮೋದಿ, ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಹಾಗಾಗಿ ಅದನ್ನೆಲ್ಲ ಮರೆಮಾಚಿ ಮತ್ತೆ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆಂದು ಬಣ್ಣಿಸಲಾಗುತ್ತಿದೆ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಪ್ಪುಹಣ ವಾಪಸ್ ತರುವುದಾಗಿ ಹೇಳಿದ್ದ ಮೋದಿ, ಅಧಿಕಾರಕ್ಕೆ ಬಂದು ಇಷ್ಟುದಿನಗಳಾದ್ರೂ ಆ ಬಗ್ಗೆ ಗಂಭೀರ ಪ್ರಯತ್ನ ನಡೆಸಿರುವ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಸಫಲರಾಗಿರಲಿಲ್ಲ. ಜೊತೆಗೆ ಆರ್ಥಿಕತೆ ಕೂಡ ಅಭಿವೃದ್ಧಿಯ ಪಥದಲ್ಲಿಲ್ಲ, 2019ರಲ್ಲಿ ಎರಡನೇ ಅವಧಿಗೆ ಅಧಿಕಾರ ಬಯಸಿ ವೋಟು ಕೇಳಲು ನೋಟು ನಿಷೇಧವೊಂದು ಅಸ್ತ್ರವಾಗಲಿದೆ. ಆದ್ರೆ ಇದುವರೆಗೂ ಈ ಎಲ್ಲಾ ಸಾಧ್ಯಾಸಾಧ್ಯತೆಗಳಿಗೆ ನಿಖರ ಉತ್ತರ ಸಿಕ್ಕಿಲ್ಲ. ಆದ್ರೆ ಒಂದು ಮಾತಂತೂ ನಿಜ, ನರೇಂದ್ರ ಮೋದಿ ಕೂಡ ಇಂದಿರಾ ಗಾಂಧಿ ಅವರಂತೆಯೇ ನಡೆದುಕೊಂಡಿದ್ದಾರೆ. ಮೋದಿ ಅವರಂತೆ ಇಂದಿರಾ ಗಾಂಧಿ ಕೂಡ ರಾಜಕೀಯದಲ್ಲಿ ಬಹಳ ನಿರ್ಣಾಯಕ ಪಾತ್ರ ವಹಿಸಿದ್ದರು. ಇಂದಿರಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದಾಗ ಎಲ್ಲರೂ ಅವರನ್ನು ಮೂಕ ಗೊಂಬೆ ಎಂದೇ ಕರೆದಿದ್ದರು. ವಿರೋಧ ಪಕ್ಷದ ನಾಯಕರಾದ ರಾಮ್ ಮನೋಹರ್ ಲೋಹಿಯಾ ಮಾತ್ರವಲ್ಲ, ಕಾಂಗ್ರೆಸ್ನ ಹಿರಿಯ ನಾಯಕರು ಕೂಡ ಅದೇ ರೀತಿಯ ಅಭಿಪ್ರಾಯ ಹೊಂದಿದ್ದರು. ``ಆರಂಭದಲ್ಲಿ ಇಂದಿರಾ ಗಾಂಧಿ ಬಹಳ ಮನಮಿಡಿಯುವಂತಿದ್ದರು, ಸಂಸದ ಸ್ಥಾನಕ್ಕೆ ಅಸಮರ್ಥೆ'' ಅಂತಾ ಪ್ರಧಾನಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಝಾ ಅವರೇ ಹೇಳಿದ್ದರು. ನೆಹರೂ ಕುಟುಂಬದ ರಾಜಕೀಯ ಪರಂಪರೆ ಹಿನ್ನೆಲೆಯಲ್ಲಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರಲಿಲ್ಲ, ಅವರು ಒಂದು ಪ್ರಾದೇಶಿಕ ಕೂಟವನ್ನು ನಿಯಂತ್ರಿಸುತ್ತಾರೆಂದು ಭಾವಿಸಲಾಗಿತ್ತು.

ಆದ್ರೆ ಮೋದಿ ಅವರಿಗೆ ಇಂತಹ ಯಾವುದೇ ಸಮಸ್ಯೆಗಳಿಲ್ಲ. ಗುಜರಾತ್ ಸಿಎಂ ಆದಾಗಿನಿಂದ್ಲೂ ಮೋದಿ ಅವರಿಗೆ ಅವರೇ ನಾಯಕರು. ಪಕ್ಷದ ನಾಯಕರು ಮತ್ತು ಆರ್​ಎಸ್ಎಸ್​ ಮುಖಂಡರ ಅಸಮಾಧಾನದ ನಡುವೆಯೂ ಅವರು ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡರು. ಅವರ ವರ್ತನೆ ಕೂಡ ಮೂಕ ಗೊಂಬೆಗಿಂತ ಭಿನ್ನವಾಗಿರಲಿಲ್ಲ. ಮೋದಿ ಅವರನ್ನು ಯಾವಾಗಲೂ ಪ್ರಬಲ ಹಾಗೂ ನಿರ್ಣಾಯಕ ನಾಯಕರೆಂದು ಬಿಂಬಿಸಲಾಗಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹೋರಾಡಲು ಅವರು ಇಷ್ಟಪಡುತ್ತಾರೆ ಎಂಬ ಮಾತಿದೆ.

ಹಿಂದೊಮ್ಮೆ ಅವರು ಭಾರತದ ರಾಜಕೀಯದಲ್ಲಿ ಒಬ್ಬ ವಿಲನ್ ಎಂದೇ ಗುರುತಿಸಿಕೊಂಡಿದ್ರು. ಹಲವು ಪಾಶ್ಚಿಮಾತ್ಯ ದೇಶಗಳಲ್ಲಿ ಅವರಿಗೆ ವೀಸಾ ನಿರಾಕರಿಸಲಾಗಿತ್ತು. ಆದ್ರೆ ಅದನ್ನೆಲ್ಲ ಮೆಟ್ಟಿನಿಂತ ಅವರು ಜನರ ಪ್ರೀತಿಪಾತ್ರರು, ಅಭಿವೃದ್ಧಿಯ ಹರಿಕಾರ ಎಂಬ ಇಮೇಜ್ ತಂದುಕೊಂಡಿದ್ದಾರೆ. ಆದ್ರೆ ಪ್ರಧಾನಿಯಾಗಿ ಅವರ ಕಾರ್ಯವೈಖರಿ ಅಷ್ಟು ಅದ್ಭುತವಾಗೇನಿಲ್ಲ, ಎರಡನೇ ಅವಧಿಗೂ ಪ್ರಧಾನಿ ಗಾದಿ ಏರುವಷ್ಟು ತೃಪ್ತಿಕರವಾಗಿಲ್ಲ. ಇಂದಿರಾ ಗಾಂಧಿ ಅವರಂತೆ ಭವಿಷ್ಯದ ಅಪಾಯವನ್ನು ಊಹಿಸಿಕೊಂಡು ನೋಟು ನಿಷೇಧದ ಆಟವಾಡಿದ್ದಾರೆ.

60 ದಶಕದಲ್ಲಿ ನೀಲಂ ಸಂಜೀವ್ ರೆಡ್ಡಿ ಭಾರತದ ರಾಷ್ಟ್ರಪತಿಯಾದಲ್ಲಿ ತಮ್ಮ ಪ್ರಧಾನಿ ಹುದ್ದೆಗೆ ಕುತ್ತು ಬರಬಹುದೆಂಬ ಸುಳಿವು ಇಂದಿರಾ ಗಾಂಧಿ ಅವರಿಗೆ ಸಿಕ್ಕಿತ್ತು. ಹಾಗಾಗಿ ಅಲ್ಲಿ ಹೊಸ ಅಸ್ತ್ರ ಬಳಸಿದ ಅವರು ರಿಪಬ್ಲಿಕ್ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವಂತೆ ಸಹೋದ್ಯೋಗಿಗಳಿಗೆ ಸೂಚಿಸಿದ್ರು, ಸ್ವತಂತ್ರ ಅಭ್ಯರ್ಥಿಯಾಗಿದ್ದ ವಿವಿ ಗಿರಿ ಅವರನ್ನು ಬೆಂಬಲಿಸಿದ್ರು. ಇದು ಪಕ್ಷ ಹಾಗೂ ನಾಯಕರ ವಿರುದ್ಧವಾಗಿ ಇಂದಿರಾ ಗಾಂಧಿ ಅವರ ಹೋರಾಟವಾಗಿತ್ತು. ರಾಜಕಾರಣಿಯೊಬ್ಬರು ತೆಗೆದುಕೊಂಡ ಅತ್ಯಂತ ದಿಟ್ಟ ನಿರ್ಧಾರವೂ ಹೌದು. ಮೊದಲ ಅವಧಿಯಲ್ಲಿ ವಿವಿ ಗಿರಿ ಅವರ ಸೋಲಿನಿಂದ ಇಂದಿರಾ ಕಂಗೆಟ್ಟಿದ್ದರು. ಇದರಿಂದ ಎದುರಾಗುವ ಕಠಿಣ ಹೋರಾಟಕ್ಕೂ ತಾವು ಸಿದ್ಧ ಎಂದಿದ್ದರು. ಅಂತಿಮವಾಗಿ ಗಿರಿ ವಿಜಯಿಯಾದ್ರು, ಅದರಿಂದ ಕಾಂಗ್ರೆಸ್ ಪಕ್ಷವೂ ಇಬ್ಭಾಗವಾಯ್ತು. ಇಂದಿರಾ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನವೂ ನಡೆದಿತ್ತು. ಆದ್ರೆ ಕಾಂಗ್ರೆಸ್ ಸಂಸದೀಯ ಪಕ್ಷದ ಮೆಜಾರಿಟಿ ಮತಗಳನ್ನು ಗೆದ್ದ ಇಂದಿತಾ, ಸಂಸತ್ನಲ್ಲಿ ಅವಿಶ್ವಾಸ ಗೊತ್ತುವಳಿ ವಿರುದ್ಧವೂ ವಿಜಯಿಯಾದ್ರು. ಎಲ್ಲರೂ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಚುರುಕಾಗಿದ್ದೇನೆಂದು ಸಾಬೀತು ಮಾಡಿದ್ರು.

ಇಂದಿರಾ ಗಾಂಧಿ ತಮ್ಮ ಹಿರಿಯ ನಾಯಕರೊಂದಿಗಿನ ಜಟಾಪಟಿಗೆ ಸೈದ್ಧಾಂತಿಕ ಬಣ್ಣ ನೀಡಿದ್ರು. ಮೊರಾರ್ಜಿ ದೇಸಾಯಿ, ಎಸ್.ನಿಜಲಿಂಗಪ್ಪ, ಕೆ.ಕಾಮರಾಜ್, ಎಸ್.ಕೆ.ಪಾಟೀಲ್, ಅತುಲ್ಯ ಘೋಶ್ ಎಲ್ಲರೂ ಬಲಪಂಥೀಯರಾಗಿದ್ದರು. ಆದ್ರೆ ಜವಾಹರಲಾಲ್ ನೆಹರೂ ಅವರ ಮಗಳಾಗಿರುವುದರಿಂದ ಬುದ್ಧಿಜೀವಿಗಳು ತಮ್ಮ ಬೆಂಬಲಿಗರು ಅನ್ನೋದು ಇಂದಿರಾ ಗಾಂಧಿ ಅವರಿಗೆ ಗೊತ್ತಿತ್ತು. ಅದು ಶೀತಲ ಸಮರದ ಸಮಯ. ಇಡೀ ಜಗತ್ತೇ ಎರಡು ಹೋಳಾಗಿತ್ತು. ಸೋವಿಯತ್ ಯೂನಿಯನ್ ನೇತೃತ್ವದ ಎಡಪಂಥೀಯ ಬಣ ಅತ್ಯಂತ ಶಕ್ತಿಶಾಲಿಯಾಗಿತ್ತು. ಭಾರತದಲ್ಲೂ ಎಡಪಂಥೀಯ ಪ್ರಾಬಲ್ಯವಿತ್ತು. ಆಕೆ ಸಮಾಜವಾದದ ಮಾರ್ಗವನ್ನು ಅನುಸರಿಸಿದ್ರು. ಬ್ಯಾಂಕ್ಗಳ ರಾಷ್ಟ್ರೀಕರಣ ಮತ್ತು ವಿಶೇಷಾಧಿಕಾರ ನಿರ್ಮೂಲನೆ ಬಗ್ಗೆ ಗಮನಹರಿಸಿದ್ರು. ಇದರ ಹೊರತಾಗಿಯೂ ಅವರನ್ನು ಕೆಳಗಿಳಿಸುವ ತಂತ್ರಗಳು ಕೊನೆಯಾಗಲಿಲ್ಲ. ಅವರು ಅಧಿಕಾರಾವಧಿ ಕೊನೆಯಾಗುವವರೆಗೆ ಕಾಯದೆ ಸಂಸತ್ತನ್ನೇ ವಿಸರ್ಜಿಸಿ ಚುನಾವಣೆ ಎದುರಿಸಿದ್ದಲ್ಲದೆ, ಗೆಲುವನ್ನೂ ಸಾಧಿಸಿದ್ರು. ``ಅವರು ಇಂದಿರಾಳನ್ನು ತೊಲಗಿಸಿ ಎನ್ನುತ್ತಾರೆ, ನಾನು ಬಡತನ ತೊಲಗಿಸಿ ಎನ್ನುತ್ತೇನೆ'' ಅನ್ನೋದು ಅವರ ಸ್ಲೋಗನ್ ಆಗಿತ್ತು. ಈಗ ಆಕೆಯನ್ನು ಒಬ್ಬ ಸಾಮ್ರಾಜ್ಞಿಯೆಂದು ಬಣ್ಣಿಸಲಾಗುತ್ತದೆ. ಅನಿಶ್ಚಿತತೆಯ ಯುಗಾಂತ್ಯವಾಗಿದೆ, ಆಕೆ ತಮ್ಮದೇ ಗಮ್ಯ ಬೋಧಕರಾಗಿದ್ದರು.

ಮೋದಿ ಕೂಡ ಅದೇ ತಂತ್ರವನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ತಾವು ಕಪ್ಪುಹಣದ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿಯೂ, ವಿಪಕ್ಷಗಳು ತಮ್ಮೊಂದಿಗೆ ಜಟಾಪಟಿಗಿಳಿದಿರುವುದಾಗಿಯೂ ಬಿಂಬಿಸಿಕೊಳ್ಳುತ್ತಿದ್ದಾರೆ. ತಾವು ಭ್ರಷ್ಟಾಚಾರ ಕಿತ್ತೊಗೆಯಲು ಪ್ರಯತ್ನಿಸಿದ್ರೆ, ಪ್ರತಿಪಕ್ಷಗಳನು ತಮ್ಮನ್ನೇ ಕಿತ್ತೊಗೆಯಲು ಯತ್ನಿಸುತ್ತಿವೆ ಎಂಬಂತೆ ಬಿಂಬಿಸುತ್ತಿದ್ದಾರೆ. ಆದ್ರೆ ಇಂದಿರಾ ಗಾಂಧಿ ಅವರಿಗಿಂತ ಮೋದಿ ಅದೃಷ್ಟವಂತರು, ಯಾಕಂದ್ರೆ ಪಕ್ಷ ಅವರ ಬೆಂಬಲಕ್ಕಿದೆ. ಅವರ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ. ನೋಟು ನಿಷೇಧ ನಿರ್ಧಾರ ಹೊರಬೀಳುತ್ತಿದ್ದಂತೆ ಸಂಸತ್ನ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳು ಅವರ ವಿರುದ್ಧ ಹೋರಾಟ ಮಾಡಿದ್ದವು. ಆದ್ರೆ ಬಿಜೆಪಿಯ ಹಿರಿಯ ನಾಯಕರು ಮಾತ್ರ ಮೋದಿ ಅವರನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಸದ್ಯಕ್ಕಂತೂ ಅದರ ಬಗ್ಗೆ ಮೋದಿ ತಲೆಕೆಡಿಕೊಳ್ಳಬೇಕಾಗಿಯೇ ಇಲ್ಲ. ಆದ್ರೆ ಈ ತಂತ್ರ ಬಹಳ ದಿನ ನಡೆಯಲಾರದು. 50 ದಿನಗಳಲ್ಲಿ ಎಲ್ಲವನ್ನೂ ಸರಿ ಮಾಡುವುದಾಗಿ ಮೋದಿ ಅಭಯ ನೀಡಿದ್ದಾರೆ. ಇದನ್ನು ರಾಷ್ಟ್ರೀಯ ಪುನರುತ್ಪಾದನೆಯೆಂದೇ ಕರೆದುಕೊಂಡಿದ್ದಾರೆ. ತಮ್ಮೆಲ್ಲ ತಪ್ಪುಗಳನ್ನು ಚಾಣಾಕ್ಷತೆಯಿಂದ ನೋಟು ನಿಷೇಧದಲ್ಲಿ ಮುಚ್ಚಿಹಾಕಿ ರಾಷ್ಟ್ರೀಯ ಹೆಮ್ಮೆಯಾಗಿ ಬದಲಾಗಿದ್ದಾರೆ. ಈಗ ನಗದು ರಹಿತ ಸಮಾಜದ ಬಗ್ಗೆ ಮಾತನಾಡುತ್ತ ಮತ್ತೊಂದು ಕನಸಿನ ಮಾರಾಟ ಆರಂಭಿಸಿದ್ದಾರೆ.

ಕನಸಿನಲ್ಲಿ ಪ್ರಾಮಾಣಿಕತೆ ಮತ್ತು ಧೈರ್ಯ ಇದ್ದಲ್ಲಿ ಮಾತ್ರ ಅದನ್ನು ಮಾರಾಟ ಮಾಡಬಹುದು ಎಂಬುದನ್ನು ಮೋದಿ ಅರ್ಥಮಾಡಿಕೊಳ್ಳುವಲ್ಲಿ ಎಡವಿದ್ದಾರೆ. ನೋಟು ನಿಷೇಧ ವಿಫಲವಾಗಿದೆ. ಅದು ಮತ್ತೊಂದು ಸಮಾನಾಂತರ ವ್ಯವಸ್ಥೆಯನ್ನು ಕಲ್ಪಿಸಿದೆ. ಭ್ರಷ್ಟ ಬ್ಯಾಂಕ್ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಸೇನೆಯೇ ಹುಟ್ಟಿಕೊಂಡಿದೆ. ಭ್ರಷ್ಟ ರಾಜಕಾರಣಿಗಳು ಮತ್ತವರ ಚೇಲಾಗಳಿಗೆ ನೇರವಾಗಿಯೇ ಕಪ್ಪುಹಣವನ್ನು ಬಿಳಿ ಮಾಡಿಕೊಡುವ ವ್ಯವಸ್ಥೆಯಿದೆ. ಇದನ್ನೆಲ್ಲ ನೋಡಿಕೊಂಡು ಸರ್ಕಾರ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಮೋದಿ ಭ್ರಷ್ಟಾಚಾರ ವಿರೋಧಿಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಅವರ ಪಕ್ಷ ಶೇ.80 ಪಂಡ್ನ ಮೂಲವನ್ನು ಬಹಿರಂಗಪಡಿಸುತ್ತಿಲ್ಲ. ಅವರ ಬಳಿ ಲೋಕಪಾಲರ ನೇಮಕ ಸಾಧ್ಯವಾಗುತ್ತಿಲ್ಲ, ಖುದ್ದು ಸುಪ್ರೀಂ ಕೋರ್ಟ್ ಅದನ್ನು ಪ್ರಶ್ನಿಸಿದೆ. ಸಂಸತ್ತನ್ನು ಎದುರಿಸಲು ಅವರು ಧೈರ್ಯ ತೋರಿಲ್ಲ, ಸದನದ ಹೊರಗಡೆ ಮಾತ್ರ ಮಾತನಾಡುತ್ತಿದ್ದಾರೆ. ಅವರ ಬೆಂಬಲಿಗರು ಗಂಟೆಗಟ್ಟಲೆ ಬ್ಯಾಂಕ್ ಎದುರು ಕ್ಯೂನಲ್ಲಿ ನಿಂತಿರುವ ಜನಸಾಮಾನ್ಯರಿಗೆ ಅಪಹಾಸ್ಯ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಅವರು ಜನರ ನಂಬಿಕೆ ಮತ್ತು ಬೆಂಬಲ ಗಳಿಸಿದ್ದರಿಂದ ಯಶಸ್ವಿಯಾದ್ರು. ದುರದೃಷ್ಟವಶಾತ್ ಮೋದಿ ವಿಶ್ವಾಸ ದ್ರೋಹಕ್ಕೆ ಶಿಕ್ಷಿಸಲ್ಪಡುತ್ತಾರೆ.

ವಿ.ಸೂ: ಇದಕ್ಕೂ 'ಯುವರ್ ಸ್ಟೋರಿ'ಗೂ ಯಾವುದೇ ಸಂಬಂಧವಿಲ್ಲ, ಇದು ಲೇಖಕರ ಅಭಿಪ್ರಾಯ. 

ಇದನ್ನೂ ಓದಿ...

"ಗನ್​"ನ ಜೊತೆ "ಪೆನ್​" ಕಡೆಗೂ ಒಲವು..!

ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್ 

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India