ಆವೃತ್ತಿಗಳು
Kannada

ಹಳ್ಳಿ ಜನರಿಗೆ ದನಿಯಾದ ಕಮ್ಯುನಿಟಿ ರೇಡಿಯೋ.. !

ಟೀಮ್​ ವೈ.ಎಸ್​. ಕನ್ನಡ

21st Feb 2016
Add to
Shares
8
Comments
Share This
Add to
Shares
8
Comments
Share

ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಅಥವಾ ಸರ್ಕಾರಕ್ಕೆ ಮೊರೆಯಿಡುವುದಕ್ಕೆ ಸಮುದಾಯ ಬಾನುಲಿ ಸಾಕಷ್ಟು ಮಹತ್ವದ ಪಾತ್ರವಹಿಸುತ್ತದೆ. ಇನ್ನು ಸಮುದಾಯ ಬಾನುಲಿಯೆಂದರೆ ಒಂದು ನಿರ್ದಿಷ್ಟ ಸಮುದಾಯವು ತನ್ನ ಸಮಾಜದ ಒಳಿತಿಗಾಗಿ ರೇಡಿಯೋ ಮಾಧ್ಯಮವನ್ನು ತಾನೇ ಸೃಷ್ಠಿಸಿಕೊಳ್ಳುವ ಪ್ರಕ್ರಿಯೆ. ಹೀಗಾಗಿ ಸಮುದಾಯ ಬಾನುಲಿಗೆ ಜನರು ಈಗ ಕೇವಲ ಶ್ರೋತೃಗಳಲ್ಲದೇ ಗ್ರಾಹಕರೂ ಹೌದು. ಜೊತೆಗೆ ತಮ್ಮ ಸಮಸ್ಯೆಗಳನ್ನು ಬಿತ್ತರಿಸುವ, ಬಾನುಲಿಯಲ್ಲಿ ಭಾಗವಹಿಸುವ ಮೂಲಕ ಸಕ್ರಿಯವಾಗಿದ್ದಾರೆ.. ಸುತ್ತಮುತ್ತಲಿನ ಪರಿಸರದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಜನರ ಹಕ್ಕುಗಳಿಗೆ ಧ್ವನಿಯೆತ್ತುವಂತಹ ಗುರುತರ ಕೆಲಸಗಳನ್ನು ಸಮುದಾಯ ಬಾನುಲಿ ಹೊಂದಿದೆ. ಇದೀಗ ಕಾನೂನು, ಹಣಕಾಸು ಹಾಗೂ ಆಡಳಿತದ ಸಹಕಾರದ ಜೊತೆಗೆ ಸಮುದಾಯ ಬಾನುಲಿಯು ಜನರ ಸಂಸ್ಕೃತಿಯ ರಕ್ಷಕನಾಗಿ ಕೂಡಾ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಹಳ್ಳಿಗರನ್ನ ಕಮ್ಯುನಿಟಿ ರೇಡಿಯೋದಲ್ಲಿ ಒಳಪಡಿಸುವ ಪ್ರಯತ್ನಗಳನ್ನ ಇನ್ನಿಲ್ಲದ ನಿಭಾಯಿಸಲಾಗುತ್ತಿದೆ. ಉತ್ತರ ಭಾರತದ ಪ್ರಮುಖ ಹಳ್ಳಿಗಳಲ್ಲಿ ಕಮ್ಯುನಿಟಿ ರೇಡಿಯೋ ವಲಯಗಳನ್ನ ಈಗಾಗಲೇ ಸ್ಥಾಪಿಸಲಾಗಿದೆ. ಅದ್ರಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿಭಾಯಿಸುತ್ತಿರುವ ಕೇಂದ್ರ ಹರ್ಯಾಣದಲ್ಲಿರುವ ಕಮ್ಯುನಿಟಿ ರೇಡಿಯೋ.

ಇದನ್ನು ಓದಿ

ಮಂಗಳಮುಖಿಯರ ಮಂದಹಾಸ ಹೆಚ್ಚಿಸಿದ Bro4u.com

ಹರ್ಯಾಣದ ಮೆವಟ್ ಜಿಲ್ಲೆಯಲ್ಲಿ ಹಿಂದುಳಿದವರ ನೆರವಿಗಾಗಿ ಬಾನುಲಿ ಕೇಂದ್ರ ಸ್ಥಾಪಿಸಲಾಗಿದೆ. ಇಂತಹ ಒಂದು ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದು ದೆಹಲಿ ಮೂಲದ ಅರ್ಚನಾ ಕಪೂರ್. ಪಬ್ಲಿಷರ್, ಫಿಲ್ಮ್ ಮೇಕರ್, ಬರಹಗಾರ್ತಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅರ್ಚನಾ ಕಪೂರ್ ಪ್ರತೀ ದಿನ 70 ಕಿಲೋಮೀಟರ್ ಪ್ರಯಾಣ ಮಾಡಿ ತಮ್ಮ ಐದು ವರ್ಷಗಳ ಪ್ರಾಜೆಕ್ಟನ್ನ ಲಾಂಚ್ ಮಾಡಿದ್ದಾರೆ. ಭಾರತದಲ್ಲಿ ರೇಡಿಯೋ ಮಾಧ್ಯಮ ವಾಣಿಜ್ಯಕರಣವಾಗಿದ್ದು ಪ್ರಸಾರವಾಗುವ ಕಾರ್ಯಕ್ರಮವೆಲ್ಲಾ ಆದಾಯದ ಮೇಲೇ ಆಧಾರವಾಗಿರುತ್ತೆ. ಆದ್ರೆ ಮೆವಟ್ ಜಿಲ್ಲೆಯಲ್ಲಿರುವ ಈ ಕಮ್ಯುನಿಟಿ ರೇಡಿಯೋ ಮಾಹಿತಿ, ಉದ್ಯೋಗ ಸಂಬಂಧಿತ ಕಾರ್ಯಕ್ರಮಗಳನ್ನ ನೀಡುವ ಮೂಲಕ ಹಳ್ಳಿಜನರಿಗೆ ಬಲ ನೀಡಿದೆ. ಇಷ್ಟೆಲ್ಲಾ ಸಾಹಸ ನಡೆಸುತ್ತಿರುವ ಈ ಕಮ್ಯುನಿಟಿ ರೇಡಿಯೋದಲ್ಲಿ 11 ಮಂದಿ ಪೂರ್ಣ ಪ್ರಮಾಣದ ವರದಿಗಾರರು, ಮ್ಯಾನೇಜಿಂಗ್ ಟೀಂ ಹಾಗೂ ಜಾಹೀರಾತು ತಂಡಗಳನ್ನ ಹೊಂದಿದೆ. ಇವರಿಗೆಲ್ಲಾ ಉಳಿದುಕೊಳ್ಳಲು ಅದೇ ಹಳ್ಳಿಯಲ್ಲಿ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ.

image


ತನ್ನ ವಿಭಿನ್ನತೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿರುವ ಈ ಬಾನುಲಿ ಕೇಂದ್ರ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದೆ. ಸಂಸ್ಕತಿ ಹಾಗೂ ಸಂಪ್ರದಾಯಗಳಿಗೆ ಪ್ರತೀಕದಂತಿರುವ ಈ ಬಾನುಲಿ ಕೇಂದ್ರದಲ್ಲಿ ಸ್ಥಳೀಯ ಸೂಫಿ ಹಾಡುಗಾರರಿಗೂ ಅವಕಾಶ ನೀಡಲಾಗಿದೆ.

“ ಕಮ್ಯುನಿಟಿ ರೇಡಿಯೋ ಉತ್ಸಾಹಿ ಯುವಕರಿಂದ ಕೂಡಿದೆ. ಗ್ರಾಮೀಣ ಮಟ್ಟದ ರೇಡಿಯೋಕ್ಕಾಗಿ ಇವರೆಲ್ಲಾ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ಯುತ್ತಮ ಸ್ಟುಡಿಯೋ ವ್ಯವಸ್ಥೆಯನ್ನ ಇಲ್ಲಿ ಕಲ್ಪಿಸಲಾಗಿದೆ. ಕ್ರಿಯೇಟಿವ್ ಐಡಿಯಾಗಳನ್ನ ಪಡೆಯಲಾಗುತ್ತಿದ್ದ ಹಳ್ಳಿ ಜನರನ್ನ ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ ” 
                 ಅರ್ಚನಾ ಕಪೂರ್, ಬಾನುಲಿ ಕೇಂದ್ರದ ನಿರ್ದೇಶಕಿ

ಇಲ್ಲಿ ಕೆಲಸ ಮಾಡುತ್ತಿರುವ ವರದಿಗಾರರಿಗೆ ವಿಭಿನ್ನ ಮಾದರಿಯ ಜವಾಬ್ದಾರಿಗಳನ್ನ ಹಂಚಲಾಗಿದೆ. ಕೆಲವರು ಕಾರ್ಯಕ್ರಮದ ಕಡೆ ಗಮನ ನೀಡಿದ್ರೆ, ಇನ್ನು ಕೆಲವರು ಸುದ್ದಿ ಸಂಚಿಕೆಗೆಗಳನ್ನ ತಯಾರಿಸುವ ಕಡೆ ಗಮನ ಹೆಚ್ಚು ಗಮನ ಕೊಟ್ಟಿದ್ದಾರೆ. ಪಾರ್ಟ್ ಟೈಂ ಕೆಲಸವಾಗಿ ಕೆಲವು ವಿದ್ಯಾರ್ಥಿಗಳೂ ಇಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಇದಿಷ್ಟಲ್ಲದೆ ಗ್ರಾಮೀಣ ಮಟ್ಟದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳನ್ನೂ ಹೊರಗೆಳೆಯುವುದರಲ್ಲಿ ಈ ಬಾನುಲಿ ಕೇಂದ್ರ ಯಶಸ್ಸು ಕಂಡಿದೆ. ಇದಕ್ಕೊಂದು ಉದಾಹರಣೆ ಗೋಪಾಲ್ ಪುರಿಯಲ್ಲಿ ನಡೆದ ಘಟನೆ. ಇಲ್ಲಿನ ಮುಖ್ಯಸ್ಥ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದ್ದ ಅನುದಾನವನ್ನ ದುರುಪಯೋಗ ಪಡಿಸಿಕೊಂಡಿದ್ದ. ಇದ್ರ ಜಾಡು ಹತ್ತಿದ್ದ ರೇಡಿಯೋದ ವರದಿಗಾರರು ಪ್ರಕರಣವನ್ನ ಬಯಲಿಗೆಳೆದಿದ್ದರು. ಈ ಮೂಲಕ ಕಮ್ಯುನಿಟಿ ರೇಡಿಯೋ ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರವಾಗಿದೆ.

image


ಮೆವಟ್ ಗ್ರಾಮದಲ್ಲಿ ಮುಸ್ಲೀಂ ಸಮುದಾಯದವರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು ಹಿಂದುಳಿದವರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಅತೀ ಹೆಚ್ಚು ಬಡತನ ಹಾಗೂ ಅನಕ್ಷರತೆ ಕಾಡುತ್ತಿದೆ.. ಇದರ ಕಡೆ ಗಮನ ಕೊಟ್ಟ ಮೆವಟ್ ನ ಬಾನುಲಿ ಕೇಂದ್ರದ ವರದಿಗಾರರು ಇಲ್ಲಿನ ಚಿತ್ರಣವನ್ನ ಬಿತ್ತರಿಸಿದ್ರು. ಅಲ್ಲದೆ ಇಲ್ಲಿನ ಮಹಿಳಾ ಸಾಕ್ಷರತೆ ಹಾಗೂ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನ ಕಟ್ಟಿಕೊಟ್ಟಿದ್ದು ವಿಶೇಷ. ಹೀಗೆ ನಗರ ಪ್ರದೇಶಗಳನ್ನಷ್ಟೇ ಗುರಿಯಾಗಿಸಿಕೊಂಡು , ಆದಾಯದತ್ತಲೇ ಗುರಿ ಇಡುವ ರೇಡಿಯೋಗಳ ನಡುವೆ ಹರ್ಯಾಣದಲ್ಲಿರುವ ಈ ಬಾನುಲಿ ಕೇಂದ್ರ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಅನುವಾದಕರು – ಸ್ವಾತಿ, ಉಜಿರೆ 

ಇದನ್ನು ಓದಿ

1. ಕಲಾವಿದೆ, ಕ್ಯುರೇಟರ್ ಮತ್ತು ಉದ್ಯಮಿ : ಕಲೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಹುಮುಖ ಪ್ರತಿಭೆ

2. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

3. ಮೊಬೈಲ್​ನಲ್ಲೇ ಪಿಯುಸಿ ಪ್ರಶ್ನೆ ಪತ್ರಿಕೆ..!

Add to
Shares
8
Comments
Share This
Add to
Shares
8
Comments
Share
Report an issue
Authors

Related Tags