ಆವೃತ್ತಿಗಳು
Kannada

ಬೆಂಗಳೂರಿನ ಹೋಳಿಗೆ ವಿದೇಶದಲ್ಲಿ ಘಮಘಮ..!

ಆರಾಭಿ ಭಟ್ಟಾಚಾರ್ಯ

25th Mar 2016
Add to
Shares
9
Comments
Share This
Add to
Shares
9
Comments
Share

ಹೋಳಿಗೆ ಅಂದ್ರೆಯಾರಿಗೆ ಇಷ್ಟ ಇರಲ್ಲ ಹೇಳಿ. ಅದ್ರಲ್ಲೂ ರಾಜ್ಯದ ಜನತೆಗಂತು ಹಬ್ಬ ಅಂದ್ರೆ ಊಟದ ಮೆನುವಿನಲ್ಲಿ ಹೋಳಿಗೆ ಇರಲೇ ಬೇಕು. ಗಂಟೆ ಗಟ್ಟಲೆ ಕೂತು ಮಾಡೋ ಹೋಳಿಗೆ ಕೆಲಸಕ್ಕೆ ಬ್ರೇಕ್ ಹಾಕಿ ಸಾಕಷ್ಟು ಜನರು ರೆಡಿಮೇಡ್ ಹೋಳಿಗೆಯ ಮೊರೆ ಹೋಗಿದ್ದಾರೆ. ಸಿಲಿಕಾನ್ ಸಿಟಿಯಲ್ಲೂ ಹೋಳಿಗೆ ಪ್ರಿಯರೇನು ಕಡಿಮೆ ಇಲ್ಲ. ಅಷ್ಟೇ ಯಾಕೆ ರಾಜ್ಯದ ಮೂಲೆ ಮೂಲೆಯಲ್ಲೂ ಹೋಳಿಗೆ ಮೇಲೆ ಆಸೆ ಪಡೋ ಜನರು ಸಾಕಷ್ಟು ಇದ್ದಾರೆ. ಇತ್ತೀಚಿಗೆ ಬೇಕರಿ ಅಂಗಡಿಗಳಲ್ಲೂ ಹೋಳಿಗೆ ಸಿಗೋದು ಕಾಮನ್. ಆದ್ರೆ ವಾರಕ್ಕೇ ಏಳೂ ದಿನವೂ ಹೋಳಿಗೆ ಒಂದೇಕಡೆ ಸಿಗೋದು ಅಂದ್ರೆ ಹೋಳಿಗೆ ಮನೆಯಲ್ಲಿ ಮಾತ್ರ. ಅದು ಕೂಡ ಡಿಫರೆಂಟ್​​ ವಿಧದಲ್ಲಿ ಮತ್ತು ಡಿಫರೆಂಟ್​ ಸ್ಟೈಲ್​ನಲ್ಲಿ..!

image


ಇದನ್ನು ಓದಿ: ಹೊಸ ಜಮಾನದ ಥ್ರಿಲಿಂಗ್ ಗೇಮ್ಸ್ ಸ್ಮ್ಯಾಶ್ ನಲ್ಲಿ

ಹೋಳಿಗೆ ಮನೆಯಲ್ಲಿ ಹೋಳಿಗೆ ಬಿಟ್ಟು ಬೇರೇನೂ ಸಿಗೋದಿಲ್ಲ ಅನ್ನೋದು ಒಂದು ವಿಶೇಷ. ಆದ್ರೆ ಮತ್ತೊಂದು ವಿಶೇಷ ಇಲ್ಲಿ 20 ಕ್ಕೂ ಹೆಚ್ಚು ವೆರೈಟಿ ಒಬ್ಬಟ್ಟು ಸಿಗುತ್ತೆ. ನಮ್ಮರಾಜ್ಯದಲ್ಲಿ ತಯಾರಿಸೋ ಬೇರೆ ಬೇರೆ ರೀತಿಯಎಲ್ಲಾ ವಿಧಧ ಒಬ್ಬಟ್ಟು ಒಂದೇ ಸೂರಿನಡಿಯಲ್ಲಿ ಸಿಗುತ್ತೆ. ಅಷ್ಟಕ್ಕೂ ಈ ಹೋಳಿಗೆ ಮನೆ ಇರೋದು ಮಲ್ಲೇಶ್ವರಂ ನ 3 ನೇ ಕ್ರಾಸ್ ನಲ್ಲಿ. ಇತ್ತ ಹಾದು ಹೋಗುವವರು ಒಮ್ಮೆಯಾದ್ರು ಈ ಒಬ್ಬಟ್ಟಿನ ರುಚಿ ಸವಿಯದೇ ಹೋಗಲ್ಲ. ಯಾಕಂದ್ರೆ ಹಾದಿ ಹೋಕರನ್ನು ಈ ಒಬ್ಬಟ್ಟಿನ ಘಮಲು ಬಿಡದೆ ಸೆಳೆಯುತ್ತದೆ.

 ಬಾದಾಮ್​ ಹೋಳಿಗೆ, ಡ್ರೈಫ್ರೂಟ್ಸ್ ,ಅಂಜೂರ, ಖರ್ಜೂರ,ಕ್ಯಾರೆಟ್,ಖೋವಾ,ಒಣಕೊಬ್ಬರಿ,ಸಕ್ಕರೆ,ಕಡಲೆ, ಬೇಳೆ , ತೆಂಗಿನಕಾಯಿ, ತೊಗರಿಬೇಳೆ, ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಧವಾದ ಹೋಳಿಗೆ ಇಲ್ಲಿ ಲಭ್ಯವಾಗುತ್ತೆ. ಖರ್ಜೂರ ಮತ್ತು ಡ್ರೈಫ್ರೂಟ್ಸ್ ಒಬ್ಬಟ್ಟಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಕಾರಣ ಇದನ್ನ ಮಧುಮೇಹಿಗಳು ಕೂಡ ತಿನ್ನಬಹುದು. ಅಕ್ಕಿ ಹಿಟ್ಟಿನ ಹೋಳಿಗೆಯೂ ಇಲ್ಲಿ ಸಿಗುತ್ತೆ. ಆದ್ರೆಆರ್ಡರ್‍ ಇದ್ರೆ ಮಾತ್ರ.

image


ಎರಡು ವರ್ಷದ ಹಿಂದೆ ಹೋಳಿಗೆ ಮಾಡಿ ಮಾರಾಟ ಮಾಡ್ಬೇಕು ಅಂತ ನಿರ್ಧಾರ ಮಾಡಿದ ಜಯಕರ್ ಶೆಟ್ಟಿ ಮತ್ತು ಅವ್ರ ಪತ್ನಿ ಈ ವ್ಯಾಪಾರ ಇಷ್ಟರ ಮಟ್ಟಿಗೆ ಬೆಳೆಯುತ್ತೆ ಅಂತ ಎಂದಿಗೂ ಅಂದುಕೊಂಡಿರಲಿಲ್ಲ…

ಹೊರದೇಶದಲ್ಲೂ ಹೋಳಿಗೆ ಘಮಘಮ

ಈ ಹೋಳಿಗೆ ಇಲ್ಲಿ ಮಾತ್ರವಲ್ಲದೆ ಹೊರದೇಶದಲ್ಲೂ ತನ್ನರುಚಿಯನ್ನ ಹರಡಿದೆ. ಕರ್ನಾಟಕದ ಮೂಲೆ ಮೂಲೆಯಿಂದಲೂ ಹೋಳಿಗೆಯ ಆರ್ಡರ್ ಪಡೆಯುತ್ತಾರೆ. ಅಷ್ಟೇ ಅಲ್ಲದೆ ಆಷ್ಟ್ರೇಲಿಯಾ ಹಾಗೂ ಅಮೇರಿಕಾದಲ್ಲಿರೋ ಅನಿವಾಸಿ ಭಾರತೀಯರು ಕೂಡ ಇಲ್ಲಿಯ ಹೋಳಿಗೆ ಮನೆಯಿಂದ ಒಬ್ಬಟ್ಟನ್ನ ಪಾರ್ಸೆಲ್ ಮಾಡಿಸಿಕೊಳ್ತಾರೆ. ಇನ್ನೂ ಅಕ್ಕ ಪಕ್ಕ ರಾಜ್ಯಗಳಾದ ಆಂದ್ರ , ತಮಿಳುನಾಡು,ಕೇರಳದಲ್ಲಿ ಈ ಹೋಳಿಗೆಗೆ ಬಾರಿ ಬೇಡಿಕೆ ಇದೆ.

image


ಮೂಲತಃ ಕುಂದಾಪುರದವ್ರದ ಜಯಕರ್ ಶೆಟ್ಟಿ ಹಾಗೂ ಸುಜಾತ ಶೆಟ್ಟಿ ಆರಂಭದಲ್ಲಿ ಚಿಕ್ಕದಾಗಿ ಪ್ರಾರಂಭ ಮಾಡಿದ ಈ ಉದ್ದಿಮೆಯನ್ನ ಇವ್ರಿಬ್ರೆ ನಡೆಸಿಕೊಂಡು ಹೋಗುತ್ತಿದ್ರು. ನಂತ್ರದ ದಿನಗಳಲ್ಲಿ ಹೆಚ್ಚಿನ ಬೇಡಿಕೆ ನೋಡಿ ಈಗ ಇವ್ರ ಬಳಿ 8 ಜನರಿಗೆ ಕೆಲಸ ನೀಡಿದ್ದಾರೆ. ಅಷ್ಟೆ ಅಲ್ಲದೆ ಹೊಸದಾಗಿ ಮೂರು ಅಂಗಡಿಯನ್ನ ಓಪನ್ ಮಾಡಿದ್ದಾರೆ. ಪ್ರತಿನಿತ್ಯ 2000 ಹೋಳಿಗೆಯನ್ನ ಮಾರೋ ಇವ್ರುಗಳು 30 ಹೋಳಿಗೆಗಳಿಗಿಂತ ಹೆಚ್ಚಾಗಿ ಮಾತ್ರ ಆರ್ಡರ್ ಪಡೆಯುತ್ತಾರೆ. ಆಯಾ ಖಾದ್ಯಕ್ಕೆ ತಕ್ಕಂತೆ ಅದರ ಬೆಲೆ ಇದ್ದು 30 ರೂಪಾಯಿಯಿಂದ ಹೋಳಿಗೆಯ ಸಿಗುತ್ತೆ. ನೋಡಲು ಪುಟ್ಟದಾಗಿರೋ ಅಂಗಡಿಯಲ್ಲಿ ರುಚಿರುಚಿಯಾದ ಹೋಳಿಗೆ ತಿನ್ನಲುಜನರು ಸಾಲುಗಟ್ಟಿ ನಿಲ್ಲುತ್ತಾರೆ. ಸಂಜೆಯಂತೂ ಅಂಗಡಿಯ ಮುಂದೆ ಜನ ದಟ್ಟನೆ ನೋಡಿದ್ರೆ ಎಂತವ್ರಿಗೂ ಆಶ್ಚರ್ಯ ಆಗುತ್ತೆ. ನಿಮಗೂ ಒಮ್ಮೇ ಈ ಹೋಳಿಗೆಗಳ ರುಚಿ ನೋಡ್ಬೇಕು ಅಂದ್ರೆ ಮಲ್ಲೇಶ್ವರಂ ಗೆ ಒಂದ್ ವಿಸಿಟ್ ಹಾಕಿ..!

ಇದನ್ನು ಓದಿ:

1. ಮನೆ ಮಾಲೀಕರ ಆಪ್ತಮಿತ್ರ ಈ ಜೆನಿಫೈ

2. ಅನ್ನದಾತರಿಗೆ ಬೆನ್ನೆಲುಬಾದ ಸಾಫ್ಟ್​​ ವೇರ್ ಎಂಜಿನಿಯರ್ - ಸಾಲದ ಸುಳಿಗೆ ಸಿಲುಕಿದ್ದ ರೈತರಿಗೆ ಹೊಸ ಬದುಕು ಕಟ್ಟಿಕೊಟ್ಟ `ಆರ್ಗೆನಿಕ್ ಮಂಡ್ಯ'

3. ಫೇಸ್ ಬುಕ್ ಮೆಸೆಂಜರ್ ಗೆ ದಿಟ್ಟ ಉತ್ತರ ಕೊಟ್ಟ ಭಾರತದ ಐಐಎಂ-ಬಿ ಗ್ರ್ಯಾಜುಯೆಟ್ಸ್ ...

Add to
Shares
9
Comments
Share This
Add to
Shares
9
Comments
Share
Report an issue
Authors

Related Tags