ಆವೃತ್ತಿಗಳು
Kannada

ಪ್ರತಿಭಾವಂತರನ್ನು ಪೋಷಿಸಿ..ಇಲ್ಲವಾದಲ್ಲಿ 30 ದಿನಗಳಲ್ಲೇ ಕೈತಪ್ಪಿ ಹೋಗ್ತಾರೆ..!

ಟೀಮ್​​ ವೈ.ಎಸ್​​.

YourStory Kannada
5th Nov 2015
2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಉದ್ಯಮಗಳು ಸದಾ ಪ್ರತಿಭಾವಂತರಿಗಾಗಿಯೇ ಹುಡುಕಾಟ ನಡೆಸುತ್ತವೆ. ಅವರನ್ನೇ ನೇಮಕ ಮಾಡಿಕೊಳ್ಳುತ್ತವೆ. ಕ್ರಿಯಾತ್ಮಕ ಪದವೀಧರರು, ಎಂಎನ್‍ಸಿ ಉದ್ಯೋಗಿಗಳು ಹಾಗೂ ಯುವ ಉದ್ದಿಮೆದಾರರಿಗಾಗಿ ಅನ್ವೇಷಣೆ ನಡೆಯುತ್ತಿರುತ್ತೆ. ಉದ್ಯಮ ಆರಂಭಿಸಿ 30-90 ದಿನಗಳೊಳಗೆ ನೌಕರರನ್ನು ಕಳೆದುಕೊಳ್ಳಬಾರದೆಂಬುದು ಬಹುತೇಕ ಎಲ್ಲರ ಉದ್ದೇಶ. ಹೀಗೆ ಆರಂಭದಲ್ಲೇ ಕೆಲಸ ಬಿಡುವುದಕ್ಕೆ ವೈಯಕ್ತಿಕ ಹಾಗೂ ವೃತ್ತಿಪರ ನಿಯತಾಂಕಗಳಿರುತ್ತವೆ. ವಿವಿಧೆಡೆಗಳಿಂದ ಉದ್ಯೋಗದ ಆಫರ್ ಇದ್ದಾಗ, ಹೊಸ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಇದ್ದಾಗ, ಸಂಸ್ಥೆಯ ನಿರೀಕ್ಷೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ ಇದ್ದಾಗ ನೌಕರರು ಆರಂಭದ ದಿನಗಳಲ್ಲೇ ಕೆಲಸಕ್ಕೆ ಗುಡ್‍ಬೈ ಹೇಳ್ತಾರೆ.

ಪ್ರತಿಭಾವಂತರನ್ನು ಉಳಿಸಿಕೊಳ್ಳಲು ಹೊಸದಾಗಿ ನೇಮಕವಾದ ಸಿಬ್ಬಂದಿಯ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಮೂಡಿಸುವುದು ನೇಮಕಾತಿ ತಂಡಕ್ಕೆ ಕಡ್ಡಾಯ. ಬಹುತೇಕ ಸಂಸ್ಥೆಗಳಲ್ಲಿರುವ ನೇರ ಮತ್ತು ಸಮತಟ್ಟಾದ ಸಾಂಸ್ಥಿಕ ರಚನೆ ಅಳವಡಿಕೆ ಕೊಂಚ ಸಡಿಲಗೊಳ್ಳಬೇಕು. ದಶಕಗಳ ಹಿಂದೆ ಐಟಿ ಸಂಸ್ಥೆಯೊಂದರಲ್ಲಿ ಮೊದಲ ದಿನದ ಕೆಲಸ ಅಂದ್ರೆ ದಾಖಲೆಗಳನ್ನು ಭರ್ತಿ ಮಾಡುವುದು ಮತ್ತು ಬಾಂಡ್‍ಗಳಿಗೆ ಸಹಿ ಹಾಕುವುದು. ಇದರಲ್ಲ ಅರ್ಧದಿನ ಕಳೆದು ಹೋಗುತ್ತಿತ್ತು. ಉಳಿದರ್ಧ ದಿನ ಕಂಪನಿಯ ಕಾರ್ಯಗಳಲ್ಲಿ ಕಳೆಯುತ್ತಿತ್ತು. ಸಿಬ್ಬಂದಿಗೆ ಕಂಪನಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸುಮಾರು ಒಂದು ತಿಂಗಳು ಕಾಲಾವಕಾಶ ಇರುತ್ತಿತ್ತು. ಅದಾದ ಮೇಲೆ ಮ್ಯಾನೇಜರ್ ಪ್ರಾಜೆಕ್ಟ್ ನಿರ್ವಹಣೆಯ ಜವಾಬ್ಧಾರಿಯನ್ನು ನೀಡ್ತಾ ಇದ್ರು. ಆದ್ರೆ ಈಗ ಸಮಯ ಸಂದರ್ಭ ಬದಲಾಗಿದೆ. ಈಗ ಹೊಸದಾಗಿ ನೇಮಕಗೊಂಡವರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಲಾಗ್ತಿದೆ. ಅವರನ್ನು ಓಲೈಸುವ ಪ್ರಯತ್ನವೂ ನಡೆಯುತ್ತಿದೆ.

image


ಸಹಸ್ರಾರು ಪೀಳಿಗೆಯ ಕೇಂದ್ರಿತ ಸಂಸ್ಥೆಗಳು ಹಾಲಿ ಇರುವ ಸಿಬ್ಬಂದಿ ಹಾಗೂ ಭವಿಷ್ಯದ ಪ್ರತಿಭೆಗಳ ನಡುವಣ ಸಂಪರ್ಕವನ್ನು ಅರ್ಥಮಾಡಿಕೊಳ್ಳಲು ಪ್ರವೇಶ ಪ್ರಕ್ರಿಯೆಯನ್ನು ವ್ಯಾಪಕಗೊಳಿಸಬೇಕು. ಚೆನ್ನಾಗಿ ವಿನ್ಯಾಸಗೊಂಡ ಹಾಗೂ ಪಾರದರ್ಶಕ ಪ್ರಕ್ರಿಯೆ ಪರಸ್ಪರ ಲಾಭದಾಯಕ. ನೌಕರರು ಕರ್ತವ್ಯಕ್ಕೆ ತಮ್ಮನ್ನು ಬೇಗ ಅಳವಡಿಸಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸಬಹುದು. ಹೊಸದಾಗಿ ನೇಮಕಗೊಂಡ ಉದ್ಯೋಗಿಗಳ ಪೋಷಣೆ ಮತ್ತು ಕಂಪನಿಯ ಸಂಸ್ಕೃತಿ - ಹೊಣೆಗಾರಿಕೆಯನ್ನು ಅವರಿಗೆ ಅರ್ಥಮಾಡಿಸಲು ಫ್ಲಿಪ್‍ಕಾರ್ಟ್, ಮಿಂತ್ರಾದಂತಹ ಕಂಪನಿಗಳು ಹೆಚ್ಚಿನ ಹಣವನ್ನು ವ್ಯಯ ಮಾಡುತ್ತಿವೆ. ಜ್ಞಾನವೃದ್ಧಿಸುವ ಹಾಗೂ ತಮಾಷೆಯಾದ ಪ್ರಕ್ರಿಯೆಗಳ ಮೂಲಕ ನೌಕರರ ಆತ್ಮವಿಶ್ವಾಸ ಹೆಚ್ಚಿಸುತ್ತಿವೆ. ಸಂಪೂರ್ಣ ವಿತರಣೆ ಪ್ರಕ್ರಿಯೆ ಅರ್ಥಮಾಡಿಕೊಳ್ಳಲು ಗೋದಾಮಿಗೆ ಭೇಟಿ, ಪ್ರೇರಣಾತ್ಮಕ ಸ್ವಾಗತ ಸಂದೇಶ, ಉದ್ಯಮದ ನೈಜ ಚಿತ್ರಣವನ್ನು ಅರ್ಥಮಾಡಿಸುವ ಮೂಲಕ ಎಂಪ್ಲಾಯೀ ಫ್ರೆಂಡ್ಲಿ ಎನಿಸಿಕೊಳ್ತಿವೆ.

ತೀವ್ರ ಪೈಪೋಟಿಯ ಮಾರುಕಟ್ಟೆಯಲ್ಲಿ ಪ್ರತಿಭಾವಂತರನ್ನು ಆಕರ್ಷಿಸಲು ಹಿತಾನುಭವ ಪ್ರವೇಶ ಮಾದರಿಯನ್ನು ತಯಾರಿಸುವ ಅಗತ್ಯವಿದೆ. ಶಾಂತವಾದ, ಮೋಜಿನ ಹಾಗೂ ಪ್ರಭಾವಶಾಲಿ ಪ್ರವೇಶ ಪ್ರಕ್ರಿಯೆಗೆ ಕೆಲ ಟಿಪ್ಸ್ ಇಲ್ಲಿದೆ.

1. ಆನ್ ಬೋರ್ಡಿಂಗ್ ಅನ್ನೋದು ನಿರಂತರ ಪ್ರಕ್ರಿಯೆ : ಇದನ್ನು ಮೊದಲ ದಿನ ಅಥವಾ ಮೊದಲ ವಾರದ ಕಾರ್ಯ ಎಂದು ಪರಿಗಣಿಸುವಂತಿಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಸಂಸ್ಥೆ ತಮ್ಮನ್ನು ಹೊಂದಲು ಉತ್ಸುಕವಾಗಿದೆ ಅನ್ನೋ ಭಾವನೆ ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿಯ ಮನಸ್ಸಿನಲ್ಲಿ ಮೂಡಬೇಕು.

2. ಗಿಫ್ಟ್ ಮತ್ತು ವೆಲ್‍ಕಮ್ ಕಿಟ್ : ಸಂಸ್ಥೆ ತಮ್ಮನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ ಎಂಬುದನ್ನು ಸಿಬ್ಬಂದಿಗೆ ಮನವರಿಕೆ ಮಾಡಿಕೊಡಲು ಗಿಫ್ಟ್ ಮತ್ತು ವೆಲ್‍ಕಮ್ ಕಿಟ್ ಕೊಡಬೇಕು. ಕಂಪನಿ ತಮ್ಮ ಎರಡನೇ ಮನೆ ಎಂಬ ಭಾವನೆ ಉದ್ಯೋಗಿಗಳಿಗೆ ಬರಬೇಕು.

3. ಸ್ನೇಹಿತರನ್ನು ನಿಗದಿಪಡಿಸಿ : ಸಂಸ್ಥೆಯ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಸ್ನೇಹಿತನ ಅಗತ್ಯವಿರುತ್ತದೆ. ಅಂತಹ ಒಬ್ಬ ಸಹೋದ್ಯೋಗಿಯನ್ನು ನಿಗದಿಪಡಿಸಬೇಕು.

4. ತಂಡಗಳು ಹಾಗೂ ಟೀಮ್ ಲೀಡರ್‍ಗಳ ಜೊತೆ ಸಭೆ ನಡೆಸಿ : ಸಹೋದ್ಯೋಗಿಗಳೊಂದಿಗೆ ಹೊಸದಾಗಿ ನೇಮಕಗೊಂಡ ಸಿಬ್ಬಂದಿ ಬೆರೆಯಲು, ಪ್ರತಿವಾರ ತಂಡದ ಸದಸ್ಯರು ಹಾಗೂ ಟೀಮ್ ಲೀಡರ್‍ಗಳ ಸಭೆ ಆಯೋಜಿಸಿ. ಎಚ್‍ಆರ್ ಮ್ಯಾನೇಜರ್ ಜೊತೆಗೂ ಸಭೆ ನಡೆಸುವುದರಿಂದ ಪರಸ್ಪರ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಳ್ಳಬಹುದು.

5. ಸಲಹೆಗಾರರನ್ನು ಗುರುತಿಸಿ : ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಉದ್ಯೋಗದ ವಾತಾವರಣವನ್ನು ಅರ್ಥಮಾಡಿಸಲು ಒಬ್ಬ ಸಲಹೆಗಾರರ ಅಗತ್ಯವಿದೆ. ಆರೋಗ್ಯಕರ ಚರ್ಚೆಯಿಂದಲೂ ಉತ್ಪಾದಕತೆಯನ್ನು ಹೆಚ್ಚಿಸಬಹುದು.

6. ಪ್ರತಿಭಾ ಪ್ರದರ್ಶನ : ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ತಮ್ಮ ಹವ್ಯಾಸಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡಬೇಕು. ಸಂಸ್ಥೆಯ ಕಾರ್ಯ, ಸಂಸ್ಕೃತಿ ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು 30 ದಿನಗಳ ಸಮಯವಿರುತ್ತದೆ. ಆ ಅನುಭವದ ಮೇಲೆ ಕಂಪನಿಯನ್ನು ತ್ಯಜಿಸಬೇಕೋ ಅಥವಾ ಕೆಲಸ ಮುಂದುವರಿಸಬೇಕೋ ಎಂಬುದನ್ನು ಸಿಬ್ಬಂದಿ ನಿರ್ಧರಿಸಬಹುದು.

ಸಂಸ್ಥೆಯನ್ನು ಸೇರಿ ಕೇವಲ ಐದೇ ದಿನಗಳಲ್ಲಿ ಕೆಲಸ ಬಿಡಬೇಕೆಂದು ನಿರ್ಧರಿಸಿದಲ್ಲಿ ಯಾವುದೇ ನೋಟಿಸ್ ಇಲ್ಲದೆ, ಮ್ಯಾನೇಜರ್‍ಗೆ ಮಾಹಿತಿ ಕೊಟ್ಟು ರಾಜೀನಾಮೆ ನೀಡಬಹುದು. ಹಾಗಾಗಿ ಆರಂಭಿಕ ಹಂತದಲ್ಲಿ ಕೆಲಸದ ಹೊರೆಯನ್ನು ಕಡಿಮೆ ಮಾಡಿದ್ರೆ ಪ್ರತಿಭಾವಂತ ಸಿಬ್ಬಂದಿಯನ್ನು ಕಂಪನಿಯಲ್ಲಿ ಉಳಿಸಿಕೊಳ್ಳಬಹುದು.

2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags