ಆವೃತ್ತಿಗಳು
Kannada

ಸಾಮರ್ಥ್ಯ ಎಂಬ ‘ಮೊಬೈಲ್ ತರಬೇತಿ ಸಂಸ್ಥೆ’ ನಡೆದುಬಂದ ದಾರಿ

ಟೀಮ್​​ ವೈ.ಎಸ್​. ಕನ್ನಡ

YourStory Kannada
6th Dec 2015
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಮೃಗಾಂಕ್ ತ್ರಿಪಾಠಿ. ವೃತ್ತಿಯಲ್ಲಿ ಉದ್ಯಮಿ. ಹೊಸತೇನಾದರೂ ಮಾಡಬೇಕು ಅನ್ನೋ ಛಲವಿರುವ ಉತ್ಸಾಹಿ. ಅದರಲ್ಲೂ ಎಲ್ಲದರಕ್ಕಿಂತಲೂ ಭಿನ್ನವಾಗಿ ಏನಾದರೂ ಮಾಡಬೇಕು ಅನ್ನೋ ತುಡಿತ..ಈ ಉತ್ಸಾಹವೇ ತಂತ್ರಜ್ಞಾನದಲ್ಲಿ ನವೀನ ಆವಿಷ್ಕಾರಕ್ಕೆ ನಾಂದಿಯಾಯಿತು.. ಸಾಧನೆಗೆ ಮೆಟ್ಟಿಲಾಯಿತು..

ಉದ್ಯಮ ಜಗತ್ತಿಗೆ ಕಾಲಿಡುತ್ತಲೇ ಮೃಗಾಂಕ್​​ರಿಂದ ಆವಿಷ್ಕಾರಗೊಂಡಿದ್ದು, ವಾಯ್ಸ್​​ಟೇಪ್ ಟೆಕ್ನಾಲಜಿ. ಕೇವಲ ಧ್ವನಿಯನ್ನು ಆಧರಿಸಿ ಗ್ರಾಹಕರಿಗೆ ಮಾಹಿತಿ ನೀಡುವ ಸೌಲಭ್ಯ. ಮೊಬೈಲ್ ಬಗ್ಗೆ ತಿಳಿಯದ ಅನಕ್ಷರಸ್ಥರೂ ಕೂಡಾ ಸುಲಭವಾಗಿ ಮೊಬೈಲ್ ಉಪಯೋಗಿಸುವಂತೆ ಮಾಡುವುದು ಮೃಗಾಂಕ್ ಉದ್ದೇಶವಾಗಿತ್ತು. ಏರ್​​ಟೆಲ್, ವೊಡಾಫೋನ್, ಟಾಟಾ ಡೊಕೊಮೊ ಇವೆಲ್ಲವೂ ವಾಯ್ಸ್​​ಟೇಪ್ ಟೆಕ್ನಾಲಜಿಯನ್ನು ಸಮರ್ಥವಾಗಿ ಬಳಸಿಕೊಂಡವು. ವ್ಯಾಲ್ಯೂ ಆಡೆಡ್ ಸರ್ವೀಸ್ ಮೂಲಕ ಜನರನ್ನು ತಲುಪುವುದು ಸುಲಭವೆಂಬ ಸತ್ಯವನ್ನು ಈ ಮೊಬೈಲ್ ಕಂಪೆನಿಗಳು ಅರಿತುಕೊಂಡವು

ಮೊಬೈಲ್​​ನಿಂದ ಎಲ್ಲಿದ್ದರೂ ಯಾರಾದರೂ ಸರಿ ಯಾವುದನ್ನಾದರೂ ಸುಲಭವಾಗಿ ಕಲಿಯಬಹುದು ಎಂಬುದನ್ನು ನಾನು ತಿಳಿದುಕೊಂಡೆ ಅಂತಾರೆ ಮೃಗಾಂಕ್ ತ್ರಿಪಾಠಿ. ಹೀಗಾಗಿ ಉದ್ಯಮ, ಸಂಸ್ಥೆಗಳಿಗೆ ನೆರವಾಗುವಂತೆ ಮೊಬೈಲ್​​ನಿಂದ ಏನನ್ನಾದರೂ ಮಾಡಬೇಕು ಎಂಬ ಯೋಚನೆ ತ್ರಿಪಾಠಿಯಲ್ಲಿ ಹುಟ್ಟಿಕೊಂಡಿತು..

ಉದ್ಯಮಿ ತ್ರಿಪಾಠಿ ಒಂದು ಬಾರಿ ಎಲ್ & ಟಿ ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವ್ರಿಗೆ ಕಂಪೆನಿಯೊಂದು ಹೊಸ ಉದ್ಯೋಗಿಗಳನ್ನು ಸೇವೆಗೆ ಬಳಸಿಕೊಂಡು ಅವರನ್ನು ಕೆಲಸದಲ್ಲಿ ನುರಿತರನ್ನಾಗಿ ಮಾಡಲು ಸಾಕಷ್ಟು ಸಮಯದ ತರಬೇತಿಯ ಅಗತ್ಯವಿದೆ. ಮತ್ತು ಇದು ತುಂಬಾ ವೆಚ್ಚದಾಯಕ ಎಂಬುದು ಗಮನಕ್ಕೆ ಬಂತು. ಇದರ ಫಲವಾಗಿಯೇ ಹೊಸಬರನ್ನು ಕರೆಸಿ ಅವರನ್ನು ವಿವಿಧ ಕಂಪೆನಿಗಳಿಗೆ ತರಬೇತಿ ನೀಡಿ ಕಳುಹಿಸಿಕೊಡುವ ಕ್ಯಾಪಬಿಲಿಟಿ ಅನ್ನೋ ಸಂಸ್ಥೆ ಹುಟ್ಟಿಕೊಂಡಿತು..

image


ಹೊಸಬರನ್ನು ಕರೆಸಿಕೊಳ್ಳುವ ಸಂಸ್ಥೆ ಅವರನ್ನು ಆಯಾ ವಿಭಾಗಗಳಲ್ಲಿ ನುರಿತರನ್ನಾಗಿ ಮಾಡಲು ಕನಿಷ್ಠ ಆರೇಳು ತಿಂಗಳ ತರಬೇತಿಯನ್ನು ನೀಡಬೇಕಾಗುತ್ತದೆ. ಇದಕ್ಕೆ ತಗಲುವ ಸಮಯ ಹಾಗೂ ವೆಚ್ಚ ಎರಡನ್ನೂ ಕಂಪೆನಿ ಭರಿಸಬೇಕಾಗುತ್ತದೆ. ಆದ್ರೆ ಕ್ಯಾಪಬಿಲಿಟಿ ಸಂಸ್ಥೆ ಕಡಿಮೆ ಸಮಯದ ಅವಧಿಯಲ್ಲಿ ಸುಲಭವಾಗಿ ಹೊಸಬರಿಗೆ ತರಬೇತಿ ನೀಡುವಂತೆ ಯೋಜನೆ ರೂಪಿಸಿತು. ಮೊಬೈಲ್ ಮೂಲಕವೇ ಯಶಸ್ವಿಯಾಗಿ ಈ ತರಬೇತಿಯನ್ನು ನೀಡಿರುವುದು ವಿಶೇಷ. ಈ ಯೋಜನೆಯಿಂದಾಗಿ ಕೆಂಪೆನಿಗಳು ತರಬೇತಿಗಾಗಿ ನೀಡುವ 80 ಶೇಕಡಾದಷ್ಟು ಖರ್ಚು ಉಳಿತಾಯವಾಗುವಂತಾಯ್ತು...

ಕ್ಯಾಪಬಿಟಿಲಿ ಸಂಸ್ಥೆ ಮೊಬೈಲ್ನಲ್ಲಿ ಮೆಸೇಜ್, ಫೋಟೋ, ವಿಡೀಯೋಗಳ ಸಹಾಯದಿಂದ ಸಂವಹನಕ್ಕೆ ವೇದಿಕೆ ಕಲ್ಪಿಸಿತು..ಬಳಕೆದಾರರಿಗೆ ತರಬೇತಿಯ ಬಗ್ಗೆ ಇರುವ ಪ್ರಶ್ನೆಗಳು, ಅನುಮಾನಗಳನ್ನು ಕೂಡಾ ಪರಿಹರಿಸಿಕೊಳ್ಳಲು ಇಲ್ಲಿ ಅವಕಾಶವಿತ್ತು. ಹೀಗಾಗಿ ಇದು ಹಲವು ಸಂಸ್ಥೆಗಳಿಗೆ ಅನುಕೂಲಕರವಾಗಿ ಪರಿಣಮಿಸಿತು..ಕಡಿಮೆ ವೆಚ್ಚ, ಉತ್ತಮ ತರಬೇತಿ ಪಡೆದುಕೊಂಡಂತಹಾ ಉದ್ಯೋಗಿಗಳು ಅನ್ನೋ ಕಾರಣಕ್ಕೆ ವಿವಿಧ ಕಂಪೆನಿಗಳು ಈ ಯೋಜನೆಗೆ ಸಹಮತ ಸೂಚಿಸಿದವು. ತರಬೇತಿದಾರರನ್ನು ತಮ್ಮ ಕಂಪೆನಿಗಳಿಗೆ ನಿಯೋಜಿಸಿಕೊಂಡವು..

ಹಾಗಂತ ಈ ರೀತಿಯ ಡಿಜಿಟಲ್ ತರಬೇತಿ ಇದು ಮೊದಲ ಬಾರಿಯೇನಲ್ಲ. ಆದ್ರೆ ಈ ರೀತಿ ಮೊಬೈಲ್ ಟೆಕ್ನಾಲಜಿಯ ಸಹಾಯದಿಂದ ತರಬೇತಿ ಒದಗಿಸಿರುವುದು ಮೊದಲ ಸಾರಿ. ಹಾಗಾಗಿಯೇ ಕ್ಯಾಪಬಿಲಿಟಿ ಸಂಸ್ಥೆಗೆ ಒಂದೇ ವರ್ಷದಲ್ಲಿ ಸುಮಾರು 7 ಕೋಟಿಯಷ್ಟು ವ್ಯವಹಾರ ನಡೆಸಲು ಸಾಧ್ಯವಾಯಿತು

ಈಗ ಏರ್​​ಟೆಲ್, ಇಂಡಸ್ ಟವರ್ಸ್, ಶಾಪ್​​ಕ್ಲೂಸ್, ಫ್ಲಿಫ್​​ಕಾರ್ಟ್ ಮೊದಲಾದ ಸಂಸ್ಥೆಗಳು ಈ ಕ್ಯಾಪಬಿಲಿಟಿ ಸಂಸ್ಥೆಗೆ ಗ್ರಾಹಕರಾಗಿದ್ದಾರೆ. ಕ್ಯಾಪಬಿಲಿಟಿ ಸಂಸ್ಥೆಯಿಂದ ಬಂದಿರುವ ಬಳಕೆದಾರರನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಕ್ಯಾಪಬಿಲಿಟಿ ಸಂಸ್ಥೆ ಯಶಸ್ವಿಯಾದ ಬಳಿ ಸಣ್ಣಪುಟ್ಟ ಉದ್ದಿಮೆದಾರರಿಗೆ, ಸಂಸ್ಥೆಗಳಿಗೆ ನೆರವಾಗಲೆಂದೇ ಪ್ರತ್ಯೇಕ ತರಬೇತಿಯ ಮೊಬೈಲ್ ಆ್ಯಪ್ ಸಿದ್ಧಗೊಂಡಿತು. ಕಡಿಮೆ ಡಾಟಾ ಸಾಮರ್ಥ್ಯ, ಹ್ಯಾಂಡ್ಸೆಟ್ ಮಾದರಿ ಇವೆಲ್ಲ ಕೊರತೆಗಳನ್ನೂ ಮೀರಿ ಗ್ರಾಹರಿಕೆ ಅಗತ್ಯ ಮಾಹಿತಿಗಳನ್ನು ನೀಡುವಲ್ಲಿ ಈ ಸಂಸ್ಥೆ ಯಶಸ್ವಿಯಾಯಿತು.. ಮೊಬೈಲ್ ಮಾದರಿ ಯಶಸ್ವಿಯಾದ ಬಳಿಕ ವೆಬ್ ವರ್ಷನ್ ಆರಂಭಗೊಂಡಿತು. ಇದಕ್ಕೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಸೇರ್ಪಡೆಗೊಂಡರು.

ಆದ್ರೆ ಈ ರೀತಿ ತರಬೇತಿ ಹೊಂದಿದವರನ್ನು ಬಳಸುವ ಕಂಪೆನಿ ಕ್ಯಾಪಬಿಲಿಟಿ ಸಂಸ್ಥೆಗೆ ನಿಯಮದ ಅನುಸಾರದಂತೆ ನಿರ್ಧಿಷ್ಟ ಮೊತ್ತವನ್ನೂ ಪಾವತಿಸಬೇಕಾಗುತ್ತದೆ. ಸಣ್ಣ ಸಂಸ್ಥೆಗಳಿಗೆ ಕಡಿಮೆ ಮೊತ್ತ ಮತ್ತು ದೊಡ್ಡ ಸಂಸ್ಥೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಮೊತ್ತವನ್ನು ನಿಗದಿಪಡಿಸಲಾಗಿದೆ.

ಓರೇಕಲ್, ಪೀಪಲ್ ಸ್ಟ್ರಾಂಗ್, ಸ್ಯಾಪ್ ಮೊದಲಾದವುಗಳು ಕ್ಯಾಪಬಿಲಿಟಿ ಸಂಸ್ಥೆಯೊಂದಿಗೆ ಕೈ ಜೋಡಿಸಿವೆ. ಕ್ಯಾಪಬಿಲಿಟಿ ಸಂಸ್ಥೆಯಿಂದ ನಾವು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು, ತರಬೇತಿಗೆ ಇನ್ನಷ್ಟು ಅಂಶಗಳನ್ನು ಅಳವಡಿಸಲು ಯೋಜನೆ ನಡೆಸಲಾಗುತ್ತಿದೆ ಅಂತಾರೆ ಮೃಗಾಂಕ್ ತ್ರಿಪಾಠಿ. ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಸಣ್ಣ ಯೋಜನೆಯ ಮೂಲಕ ಕ್ಯಾಪಬಿಲಿಟಿ ಸಂಸ್ಥಯನ್ನು ಹುಟ್ಟು ಹಾಕಿರುವ ಮೃಗಾಂಕ್ ಈ ಮೂಲಕ ಗೆಲುವನ್ನು ಪಡೆದುಕೊಂಡಿದ್ದಾರೆ.

ಲೇಖಕರು: ಜುಬಿನ್​ ಮೆಹ್ತಾ

ಅನುವಾದಕರು: ವಿನುತಾ

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags