ಆವೃತ್ತಿಗಳು
Kannada

ಕನಸು ಕಟ್ಟಲು ಸಹಾಯ ಮಾಡಿದ ಕಡುಬಡತನ..!

ಟೀಮ್​​ ವೈ.ಎಸ್​​.

YourStory Kannada
22nd Oct 2015
Add to
Shares
7
Comments
Share This
Add to
Shares
7
Comments
Share

ಜೀವನದಲ್ಲಿ ಗುರಿ ಹಾಗೂ ನಿಖರತೆ ಒಂದಿದ್ದರೆ ಯಾರು ಏನೂ ಬೇಕಾದರೂ ಆಗಬಹುದು. ದೇಶದಲ್ಲಿ ಬಹಳಷ್ಟು ಮಂದಿ ಬಡತನದಿಂದ ಬಂದಿದ್ದರೂ, ಕಠಿಣ ಪರಿಶ್ರಮದಿಂದಾಗಿ ಸಿರಿವಂತರಾಗಿದ್ದಾರೆ. ಇಂತಹವರ ಪೈಕಿ, ಸರಕು ಸಾಗಾಣಿಕೆ ಉದ್ಯಮದಲ್ಲಿ ಬಹು ದೊಡ್ಡ ಹೆಸರು ಮಾಡಿರುವವರು ಸುಧೀರ್ ನಾಯರ್ ಒಬ್ಬರು.

ಬಡತನದಿಂದಾಗಿ ಕೇವಲ 16ನೇ ವಯಸ್ಸಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಸುಧೀರ್ ನಾಯಕ್ Eresource ಇನ್ಫೋಟೆಕ್ ಸಂಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಪ್ರತಿಕೂಲ ಪರಿಸ್ಥಿತಿಯಲ್ಲಿ ಹೊಸ ಹೊಸ ಅನ್ವೇಷಣೆ ಮಾಡುವ ಮೂಲಕ ಇಂದು ದೇಶದ ಅತಿ ದೊಡ್ಡ ಉದ್ಯಮಿಗಳ ಪೈಕಿ ಒಬ್ಬರಾಗಿದ್ದಾರೆ. ಆರಂಭದಲ್ಲಿ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸಿದ್ದ ಸುಧೀರ್ ನಾಯರ್ ಇಂದು 81 ದಶಲಕ್ಷ ಮಿಲಿಯನ್ ಆದಾಯ ಹೊಂದಿದ್ದಾರೆ.

image


ಸುಧೀರ್ ನಾಯರ್ ಹೆಸರಿನ ಮುಂದೆ ಯಾವುದೇ ನಾಮಾಂಕಿತವಿರಲಿಲ್ಲ. ಹೇಳಿಕೊಳ್ಳುವಂತಹ ಯಾವುದೇ ಪದನಾಮ ಇರಲಿಲ್ಲ. ಕೇವಲ ಅತ್ಯಂತ ಕಡುಬಡ ಕುಟುಂಬದಲ್ಲಿ ಹುಟ್ಟಿದ ಖ್ಯಾತಿ ಮಾತ್ರ ಇತ್ತು. ಮನೆಯಲ್ಲಿನ ಬಡತನ, ಬಾಳ ಬಂಡಿಯನ್ನು ಸಾಗಿಸುವ ಸಲುವಾಗಿ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು ಅನಿವಾರ್ಯವಾಗಿ ಕೆಲಸವನ್ನು ಹುಡುಕುವಂತಾಯಿತು. ಮುಂಬೈನಲ್ಲಿನ ಸಹರಾ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಸಹಾಯಕನಾಗಿ ವೃತ್ತಿ ಆರಂಭಿಸಿದರು.

ಬಡತನವಿದ್ದರೂ, ಜೀವನದಲ್ಲಿ ಏನಾದರೂ ಸಾಧಿಸಬೇಕು. ಬದುಕಲ್ಲಿ ಮುಂದೆ ಬರಬೇಕೆಂಬ ಅಚಲ ವಿಶ್ವಾಸದ ಜೊತೆಗೆ ಕೆಲಸದ ಮೇಲಿನ ಶ್ರದ್ಧೆ, ಕಲಿಯುವ ಆಸಕ್ತಿಯಿಂದಾಗಿ ಅತ್ಯಂತ ಉನ್ನತ ಮಟ್ಟಕ್ಕೇರುವ ಅವಕಾಶವೂ ಸಿಕ್ಕಿತ್ತು. ಕೆಲವೊಂದು ಸಂದರ್ಭದಲ್ಲಿ ಕಾರ್ಗೋ ಕಾಂಪ್ಲೆಕ್ಸ್ಗೆ ಬೇಕಾದ ದಾಖಲೆಗಳನ್ನು ಪರಿಚಯಿಸುವ ಮತ್ತು ಭಾಷಾಂತರಿಸುವ ಕೆಲಸ ಸಿಕ್ಕಿತ್ತು. ಸುಧೀರ್ ನಾಯರ್ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಲಿಲ್ಲ. ಇದರಲ್ಲಿ ಪರಿಣಿತರಾಗಿದ್ದ ನಾಯರ್, ಸರಕು ಸಾಗಾಣೆ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲು ಅವಕಾಶ ಮಾಡಿಕೊಟ್ಟಿತ್ತು.

ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆ, ನಿಷ್ಠೆ ಹಾಗೂ ಅದನ್ನು ಅರ್ಥೈಸಿಕೊಂಡು ಅತ್ಯಂತ ಕ್ಷಿಪ್ರವಾಗಿ ಮಾಡಿ ಮುಗಿಸುತ್ತಿದ್ದ ಸುಧೀರ್ ನಾಯರ್‌ಗೆ ಅವಕಾಶವೂ ಹೆಚ್ಚುತ್ತಾ ಹೋಯಿತು. ಭಾಷಾಂತರ ಮಾಡುವ ಜವಾಬ್ದಾರಿ ಸಿಗುತ್ತಿದ್ದಂತೆ, ಅವರ ಬದುಕೇ ಬದಲಾಗುತ್ತಾ ಹೋಯಿತು. ಭವಿಷ್ಯದಲ್ಲಿ ಇದು ಕಂಪ್ಯೂಟರ್ ಹಾಗೂ ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟಿತ್ತು.

ಯಾವುದೇ ಕೆಲಸವನ್ನಾದರೂ ನಯ ನಾಜೂಕಾಗಿ ಮಾಡಿ ಮುಗಿಸುತ್ತಿದ್ದ ಸುಧೀರ್ ನಾಯರ್, ಪ್ರೋಗ್ರಾಮ್‌ಗಳನ್ನು ಟೈಪ್ ಮಾಡುವ ಕೆಲಸಕ್ಕಾಗಿ ಹೊಸ ಸಾಫ್ಟ್ ವೇರ್‌ಗಳನ್ನು ಅನ್ವೇಷಣೆ ಮಾಡಿದರು. ಈ ಮೂಲಕ ಸ್ವತಂತ್ರ ಸಾಫ್ಟ್ ವೇರ್ ಸಂಕೇತಗಳನ್ನು ಆರಂಭಿಸಿದರು. ಈ ಕಾರ್ಯಕ್ಕಾಗಿ ಸಾಕಷ್ಟು ಅಧ್ಯಯನ ನಡೆಸಿದರು.

ಕೆಲವರು ಹೇಳುತ್ತಾರೆ ಅವಕಾಶ ಅನ್ನುವುದು ದೇವರ ರೂಪದಲ್ಲಿ ಬರುತ್ತದೆಯಂತೆ. ನನಗೂ ಕೂಡ ದೇವರು ಸಹರಾ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಬಿಲ್ ಟೈಪ್ ಮಾಡುವ ರೂಪದಲ್ಲಿ ಅವಕಾಶವನ್ನು ಕೊಟ್ಟ. ದಿನಪತ್ರಿಕೆಯನ್ನು ಹಂಚುವ ಮೂಲಕ ದಿವಂಗತ ಅಬ್ದುಲ್​​​ ಕಲಾಂ, ತಮ್ಮ ಬದುಕನ್ನು ಆರಂಭಿಸಿದರು. ನಾನು ಕೂಡ ಕಷ್ಟಕರವಾಗಿಯೇ ಜೀವನ ಆರಂಭಿಸಿದೆ. ಒಂದು ಬಾರಿ ನಾವು ನಮ್ಮ ಕೆಲಸದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡು ನಮ್ಮ ಶಕ್ತಿಯನ್ನು ಬಳಸಿಕೊಂಡು ಬೆಳೆದರೆ ಎಲ್ಲಾ ಸಾಧ್ಯವಾಗುತ್ತದೆ. ಮುಂದೆ ಸಾಗಲು ಸಾಧ್ಯವಾಗುತ್ತದೆ. ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ನನ್ನನ್ನು ಮತ್ತಷ್ಟು ಕೆಲಸ ಮಾಡುವಂತೆ ಹುರಿದುಂಬಿಸಿತು. ಹೊಸತನವನ್ನು ಹುಡುಕುವಂತೆ ಮಾಡಿತು. ಹಾಗಾಗಿ ನಾನು ನನ್ನ ಕೆಲಸವನ್ನು ಬಿಟ್ಟು ಹೊಸತನದತ್ತ ಸಾಗಿದೆ. ಜೀವನ ಹರಿಯುವ ನದಿ ಇದ್ದಂತೆ. ನಾನು ಅದನ್ನೇ ನಂಬಿದೆ. ಹೊಸತನ ಹುಡುಕಲು ಹೊರಟೆ ಮತ್ತು ಜಯಗಳಿಸಿದೆ. ನಂಬಿಕೆಗಳೇ ನನ್ನ ಬದುಕನ್ನು ರೂಪಿಸಿತ್ತು ಅಂತ ಹಳೆಯ ದಿನಗಳನ್ನು ಸುಧೀರ್ ನಾಯರ್ ಮೆಲುಕು ಹಾಕುತ್ತಾರೆ.

image


ಒಂದು ಕಾಲದಲ್ಲಿ ನಾನು ಬಡತನದಿಂದ ಬಂದಿದ್ದರಿಂದ ಅವಕಾಶಗಳ ಕೊರತೆ ಇತ್ತು. ಬದುಕು ಸಾಗಿಸುವುದು ಕಷ್ಟವಾಗಿತ್ತು. ಈಗ ಎಲ್ಲವೂ ಬದಲಾಗಿದೆ. ನನ್ನ ಅದೃಷ್ಠ ಹಾಗೂ ಮನೆಯವರ ಆಶೀರ್ವಾದದಿಂದಾಗಿ ಇವತ್ತು ಬಹು ಎತ್ತರಕ್ಕೆ ಬೆಳೆದಿದ್ದೇನೆ. ಇದರಿಂದಾಗಿ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿದೆ.

ಸರಕು ಸಾಗಣೆ ಕ್ಷೇತ್ರದಲ್ಲಿ ನಾನು ನಿಪುಣನಾಗದಿದ್ದರೂ, ಮಾರ್ಗದರ್ಶನ ಇಲ್ಲದಿದ್ದರೂ, ಸೋಲಲಿಲ್ಲ. ತಾಂತ್ರಿಕವಾಗಿ ಸಹಾಯವಾಗುವಂತಹ ಪುಸ್ತಕಗಳನ್ನು ಅಧ್ಯಯನ ನಡೆದಿದೆ. ನೂರಾರು ಗಂಟೆಗಳನ್ನು ಓದುವುದರಲ್ಲಿಯೇ ಕಾಲ ಕಳೆದೆ. ಪ್ರಯೋಗಗಳನ್ನು ನಡೆಸಿದೆ. ಅದರ ಪ್ರತಿಫಲವೇ ಈ Eresourceಇನ್ಫೋಟೆಕ್ ಸಂಸ್ಥೆ ಎಂದು ಹಳೆಯ ಘಟನೆಗಳನ್ನು ಸುಧೀರ್ ನಾಯರ್ ಮೆಲುಕು ಹಾಕುತ್ತಾರೆ.

ಹಾಗೇ ನೋಡಿದರೆ ಇಆರ್‌ಪಿಯನ್ನು ಸುಧೀರ್ ನಾಯರ್ ಪ್ರವೇಶಿಸಿದ್ದು ಅನಿರೀಕ್ಷಿತವಾಗಿಯೇ. ಮುಂಬಯಿನಲ್ಲಿ ಮಧ್ಯಾಹ್ನದ ನಂತರ ಕೆಲಸ ಆರಂಭಿಸುತ್ತಿದ್ದುದು ಮಾತ್ರವಲ್ಲದೇ ಕಂಪ್ಯೂಟರ್​​ನ ಸಣ್ಣ ಆವೃತ್ತಿಯನ್ನು ಅಭಿವೃದ್ದಿಗೊಳಿಸಿದರು. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಸುಧೀರ್ ನಾಯರ್‌ಗೆ 15 ವರ್ಷ ಅನುಭವವಿದೆ. ಸಾಫ್ಟ್ ವೇರ್ ಅಭಿವೃದ್ಧಿ ಹಾಗೂ ಸೀನಿಯರ್ ಎಂಟರ್ ಪ್ರೈಸಸ್ ಮ್ಯಾನೇಜರ್ ಕೆಲಸ ಬಿಟ್ಟಾಗ, ಅದು 400 ಮಿಲಿಯನ್ ಡಾಲರ್ ಕಂಪನಿ ಅದಾಗಿತ್ತು. ಇಡೀ ಪ್ರಕ್ರಿಯೆಯಲ್ಲಿ ಆದ ಅನುಭವವಂತೂ ಬೆಟ್ಟದಷ್ಟು.

ಮುಂಬೈನಲ್ಲಿ Eresource ಇನ್ಫೋಟೆಕ್ ಸಂಸ್ಥೆ ಆರಂಭವಾದಾಗ ಅದೊಂದು ಸಣ್ಣ ತಂಡವಾಗಿತ್ತು. ಆದರೆ, ಪ್ರತಿಭೆಗಳಿಗೆ ಅಲ್ಲಿ ಭರವೇ ಇರಲಿಲ್ಲ. ಕೇವಲ 100 ಸಿಬ್ಬಂದಿಗಳೊಂದಿಗೆ ಆರಂಭವಾದ ಈ ಸಂಸ್ಥೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಒಂದು ಸಣ್ಣ ಉದ್ಯಮದಿಂದ ಆರಂಭವಾದ ಸಂಸ್ಥೆ ಇಂದು ಜಾಗತಿಕ ಸಂಸ್ಥೆಯಾಗಿದೆ. ಇಂದು ಸಾವಿರಾರು ನೌಕರರೊಂದಿಗೆ 25,000ಕ್ಕೂ ಅಧಿಕ ಬಳಕೆದಾರರನ್ನು ಹೊಂದಿದೆ.

Eresource ಇನ್ಫೋಟೆಕ್ ಸಂಸ್ಥೆಗೆ ಭಾರತದಿಂದಲೇ ಹೆಚ್ಚು ಬಳಕೆದಾರರಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲಿ ಬಿಟ್ಟರೆ ಈಶಾನ್ಯ ರಾಜ್ಯಗಳಿಂದ ಹೆಚ್ಚಿನ ಬಳಕೆದಾರರಿದ್ದಾರೆ. ಇನ್ನು, ಮಧ್ಯಪ್ರಾಚ್ಯ ಹಾಗೂ ಇತರ ಏಷ್ಯಾ ರಾಷ್ಟ್ರಗಳಿಂದಲೂ ಬಳಕೆದಾರರಿದ್ದಾರೆ.

ವಾಣಿಜ್ಯ ಕ್ಷೇತ್ರದಲ್ಲಿ ಎರ್ ಸೋರ್ಸ್ ಇನ್ಫೋಟೆಕ್ ಇವತ್ತು ಬಹುದೊಡ್ಡ ಸಂಸ್ಥೆಯಾಗಿ ಮಾರ್ಪಟ್ಟಿದೆ. ಅಲ್ಲದೆ, ಈಗ ಎರ್​ಸೋರ್ಸ್ ExV2 ಎಂಬ ಸಾಫ್ಟ್ ವೇರ್ ನ್ನು ಬಳಕೆಗೆ ಬಿಟ್ಟಿದೆ. ಗ್ರಾಹಕರನ್ನು ಆಕರ್ಷಿಸುವುದು ಮಾತ್ರವಲ್ಲದೇ, ಅವರ ಆಸೆಯನ್ನು ಪೂರೈಸುವ ಕೆಲಸವನ್ನು ಎರ್ ಸೋರ್ಸ್ ಇನ್ಫೋಟೆಕ್ ಮಾಡುತ್ತಿದೆ. ಇದಕ್ಕಾಗಿ ಎರ್ ಸೋರ್ಸ್ ಇನ್ಫೋಟೆಕ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

Add to
Shares
7
Comments
Share This
Add to
Shares
7
Comments
Share
Report an issue
Authors

Related Tags