ಆವೃತ್ತಿಗಳು
Kannada

ಸೋನು ಹಠಕ್ಕೆ ಸೋಲದವರೇ ಇಲ್ಲ...

ಟೀಮ್​ ವೈ.ಎಸ್​. ಕನ್ನಡ

YourStory Kannada
27th May 2016
Add to
Shares
4
Comments
Share This
Add to
Shares
4
Comments
Share

ಸೋನು ನಿಗಂ. ಇವ್ರ ಹಾಡಿಗೆ ಮರುಳಾಗದವರಿಲ್ಲ. ಒಮ್ಮೆ ಕೇಳಿದ್ರೆ ಮತ್ತೆ ಮತ್ತೆ ಕೇಳಬೇಕೆನ್ನಿಸೋ ಧ್ವನಿ ಅವರದ್ದು. ಕೇವಲ ಹಾಡೋದ್ರಲ್ಲಿ ಮಾತ್ರವಲ್ಲದೆ ಮತ್ತಷ್ಟು ಕಲೆಗಳನ್ನ ಹೊಂದಿರೋ ಒಬ್ಬ ಅದ್ಬುತ ಮನುಷ್ಯ ಸಕಲಕಲಾವಲ್ಲಭ ಅಂದ್ರೆ ತಪ್ಪಾಗಲ್ಲ . ಹಾಡೋದರ ಜೊತೆ ಜೊತೆಗೆ ಸೋನು ನಿಗಂ ಆಗಾಗ ಜನರ ಮಧ್ಯೆ ಬೆರೆತು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತಾರೆ. ಒಂದಲ್ಲ ಒಂದು ಸುದ್ದಿ ಮಾಡಿ ಜನರಿಗೆ ಹತ್ತಿರವಾಗಿ ಮತ್ತು ಸೋನು ಸಿಂಪಲ್ ಮನುಷ್ಯ ಅನ್ನೋದನ್ನ ನಿರೂಪಿಸುತ್ತಲೇ ಇದ್ದಾರೆ. ಸದ್ಯ ಈಗ ಸೋನುನಿಗಂ ಅವರನ್ನ ನೆನಪಿಸಿಕೊಳ್ಳಲು ಕಾರಣ ಏನಂದ್ರೆ ಸೋನು ರಸ್ತೆಗಿಳಿದು ಹಾಡಿದ್ದಾರೆ..!

image


ಎಲ್ಲರಿಗೂ ಸಹಾಯ ಹಸ್ತ ಚಾಚೋ ಸೋನು

ಮೊನ್ನೆ ಮೊನ್ನೆಯಷ್ಟೆ ಸೊನು ನಿಗಂ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರೋ ಸಿಕ್ಸ್ ಫ್ಯಾಕ್ ಬ್ಯಾಂಡ್ ಅನ್ನೋ ಮಂಗಳಮುಖಿಯ ರಾಕ್ ಬ್ಯಾಂಡ್ ಗೆ ಬ್ರಾಂಡ್ ಅಂಬಾಸಿಡರ್ ಆಗೋದರ ಮೂಲಕ ಮಂಗಳ ಮುಖಿಯರಿಗೆ ಸಹಾಯ ಹಸ್ತ ಚಾಚಿದ್ರು. ಅಷ್ಟೇ ಅಲ್ಲದೆ ಅಲ್ಲಿರೋ ಆರು ಮಂಗಳ ಮುಖಿಯರಿಗೆ ಮ್ಯೂಸಿಕ್ ಟ್ರೈನಿಂಗ್ ಕೂಡ ನೀಡಿದ್ರು. ಈ ರೀತಿಯಲ್ಲಿ ಸಮಾಜದಲ್ಲಿರೋ ಎಲ್ಲಾ ವರ್ಗದ ಜನರಿಗೂ ಸೋನು ಹತ್ತಿರವಾಗಿದ್ರು.

ಇದನ್ನು ಓದಿ: ಪ್ರಯೋಗಕ್ಕೆ ಮುನ್ನುಡಿ ಬರೆದ "ಬೊಂಬೆಯಾಟ"

ರೋಡ್ ಸೈಡ್ ಉಸ್ತಾದ್ ಆದ ಸೋನುನಿಗಂ

ವೃತ್ತಿ ಬದುಕಿನಲ್ಲಿ ಸಾಧನೆ ಮಾಡೋ ತವಕದಲ್ಲಿ ಅದೆಷ್ಟೋ ಚಿಕ್ಕ ಪುಟ್ಟ ಖುಷಿಯನ್ನ ಅನಿಭವಿಸೋದನ್ನೇ ಮರೆತು ಹೋಗಿರುತ್ತೇವೆ. ಎಲ್ಲವನ್ನೂ ಗಳಿಸಿದ ನಂತ್ರ ಅಯ್ಯೋ ಇಂತಹ ಖುಷಿಯನ್ನ ನಾವು ಅನಿಭವಿಸಲ್ಲೇ ಇಲ್ಲ ಅನ್ನೋ ಚಿಂತೆ ಕಾಡೋದಕ್ಕೆ ಶುರುವಾಗುತ್ತೆ. ಇಂತಹ ಕೊರಗು ಇರಬಾರದು, ಎಲ್ಲರಲ್ಲೂ ಬೆರೆತು ಎಲ್ಲರಂತಾಗಬೇಕು ಅನ್ನೋ ಉದ್ದೇಶದಿಂದ ಸೋನು ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಅದೇ ದ ರೋಡ್ ಸೈಡ್ ಉಸ್ತಾದ್. ಸದಾ ಸ್ಟೇಜ್ ಮೇಲೆ ಸ್ಟುಡಿಯೋ ದಲ್ಲಿ ಹಾಡನ್ನ ಹಾಡೋ ಸೋನು ನಿಗಂ ಪ್ರತಿ ನಿತ್ಯವೂ ಹೊಸದನ್ನ ಕಲಿಯೋದಕ್ಕೆ ಇಷ್ಟ ಪಡ್ತಾರಂತೆ.

image


 ಇತ್ತೀಚಿಗಷ್ಟೆ ಬೀಯಿಂಗ್ ಇಂಡಿಯನ್ ಅನ್ನೋ ಯೂಟ್ಯೂಬ್ ಚಾನಲ್ ಜೊತೆ ಸೇರಿ ಸೋನು ವೇಷ ಮರೆಸಿಕೊಂಡು ಮುಂಬೈನ ಹೆಚ್ಚು ಜನ ಇರೋ ಸ್ಥಳವನ್ನ ಆಯ್ಕೆ ಮಾಡಿಕೊಂಡು ರಸ್ತೆ ಬದಿಯಲ್ಲಿ ಕೂತು ಹಾರ್ಮುನಿಯಂ ಹಿಡಿದು ಹಾಡೋದಕ್ಕೆ ಶುರು ಮಾಡಿದ್ದರು. ಬೆಳ್ಳಿಗ್ಗೆಯಿಂದ ಸಂಜೆ ವರೆಗೂ ಹಾಡಲು ಕುಂತ ಸೋನು ನಿಗಂ ಅವ್ರನ್ನ ಯಾರು ಕೂಡ ಗುರುತಿಸಲು ಸಾಧ್ಯವಾಗಿಲ್ಲ. ಮುಂಬೈನ ಎರಡು ಸ್ಥಳದಲ್ಲಿ ಬಿಕ್ಷುವಿನ ರೀತಿ ವೇಷ ಧರಿಸಿ ಹಾಡೋದಕ್ಕೆ ಶುರು ಮಾಡಿದ್ದರು. ಕೆಲವರು ಇವ್ರ ಕಡೆ ಗಮನವೇ ಹರಿಸಲಿಲ್ಲ ಇನ್ನ ಕೆಲವರು ಗಂಟೆಗಳ ಕಾಲ ನಿಂತು ಹಾಡನ್ನ ಹೇಳಿ ಸಂತೊಷ ಪಟ್ಟರು ಇನ್ನೂ ವಿಶೇಷ ಅಂದ್ರೆ ಯುವಕನೊಬ್ಬ ಇವರ ಹಾಡನ್ನ ಮೆಚ್ಚಿ ತನ್ನ ಮೊಬೈಲ್ ನಲ್ಲಿ ಹಾಡನ್ನ ರೆಕಾರ್ಡ್ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಕೊನೆಯಲ್ಲಿ ನೀವು ಊಟ ಮಾಡಿದ್ದೀರ ಎಂದು ಕೇಳುತ್ತಾ ಕೈ ಕುಲುಕಿ ಅಲ್ಲಿಂದ ಎದ್ದು ಹೋಗಿದ್ದಾನೆ. ನಂತರ ಕೈ ನೋಡಿಕೊಂಡರೆ ಸೋನು ನಿಗಂ ಕೈನಲ್ಲಿ 12 ರುಪಾಯಿಗಳನ್ನ ಇಟ್ಟು ಹೋಗಿದ್ದಾನೆ. ಇದರಿಂದ ಖುಷಿಯಾಗಿರೋ ಸೋನು ನಿಗಂ ಆ ಹನ್ನೆರೆಡು ರೂಪಾಯಿಗಳನ್ನ ಪ್ರೇಮ್ ಹಾಕಿಸಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಯುವಕನ ಹುಣವನ್ನ ಮೆಚ್ಚಿರೋ ಸೋನು ನಿಗಂ ಆದಷ್ಟು ಬೇಗ ಅವ್ರನ್ನ ಬೇಟಿ ಮಾಡುವುದಾಗಿ ತಿಳಿಸಿದ್ದಾರೆ. ಈ ರೀತಿಯ ವಿಭಿನ್ನ ಪ್ರಯತ್ನ ಹೊಸದು ಎನ್ನಿಸಿದ್ರು ಇದ್ರಿಂದ ಸಾಕಷ್ಟು ವಿಚಾರವನ್ನ ವನ್ನ ಕಲಿತಿದ್ದೇನೆ. ಪ್ರತಿ ನಿತ್ಯ ಕಲಿಯೋದು ಕಲಿಸೋದು ತುಂಬಾ ಇರುತ್ತೆ ಇವತ್ತು ರಸ್ತೆ ಬದಿಯ ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಸೋನು ನಿಗಂ ಅಂದ್ರೆನೆ ಹಾಗೆ ಬಿ ಸಿಂಪಲ್, ಅನ್ನೋ ಗುಣ ಇರೋರು. ಕೇವಲ ಹಾಡೋದು ಹಾಡಿಸೋದು ಮಾತ್ರವಲ್ಲದೆ ಸೂನು ಸೂಪರ್ ಆಗಿ ಮಿಮಿಕ್ರಿ ಮಾಡ್ತಾರೆ. ಸಖತ್ ಸಿಂಪಲ್ ಅನ್ನಿಸೋ ಸೋನು ಅವ್ರ ಈ ಕೆಲಸ ಮೆಚ್ಚಬೇಕಾಗಿದ್ದೆ ಬೀಯಿಂಗ್ ಇಂಡಿಯನ್.

ಇದನ್ನು ಓದಿ:

1. ಬಾಲ ಕಾರ್ಮಿಕನಾಗಿದ್ದವನು ಇಂದು ದೇಶವೇ ಹೆಮ್ಮೆ ಪಡುವಂತಹ ಕಲಾವಿದ

2. ಆರಂಭವಾಗಿದ್ದು 2 ಲಕ್ಷದಿಂದ.. ಈಗ 2 ಕೋಟಿಯ ವಹಿವಾಟು..!

3. ಹಿರಿಯ ಐಎಎಸ್​​ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags