ಆವೃತ್ತಿಗಳು
Kannada

ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

ಟೀಮ್​ ವೈ.ಎಸ್​.ಕನ್ನಡ

16th May 2016
Add to
Shares
21
Comments
Share This
Add to
Shares
21
Comments
Share

ಸಾಮಾಜಿಕ ಜಾಲತಾಣಗಳು ಇವತ್ತು ಮನುಷ್ಯನಿಗೆ ಅನ್ನ, ನೀರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಬೆಳಗ್ಗೆ ಎದ್ದು ದೇವರ ಫೋಟೋ ನೋಡ್ತೀವೋ ಇಲ್ವೋ ಗೊತ್ತಿಲ್ಲ, ಆದ್ರೆ ಫೇಸ್​ಬುಕ್​,ಟ್ವೀಟರ್​​ ನೋಡದೇ ಇದ್ರೆ ಸಮಧಾನವೇ ಆಗುವುದಿಲ್ಲ. ಮನುಷ್ಯನ ಈ ವೀಕ್​ನೆಸ್​ನ್ನು ಬಂಡವಾಳ ಮಾಡಿಕೊಂಡವರು ಹಲವರು. ಅದ್ರಲ್ಲೂ ಸಿನೆಮಾ ಮಂದಿಯಂತೂ ಫೇಸ್​ಬುಕ್​, ಯೂಟ್ಯೂಬ್​ ಮತ್ತು ಟ್ವೀಟರ್​ನ್ನು ಸರಿಯಾಗೇ ಬಳಸಿಕೊಳ್ತಿದ್ದಾರೆ.

image


ಸಿನಿಮಾಗಳನ್ನು ಯಶಸ್ವಿಗೊಳಿಸಲು ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರು ನೆಚ್ಚಿಕೊಂಡಿರುವ ಮಾರ್ಗ ಟ್ರೇಲರ್. ಸಿನಿಮಾಗಿಂತ ಮುಂಚೆಯೇ ಯೂಟ್ಯೂಟ್​ನ ಮತ್ತು ಸಾಮಾಜಿಕ ತಾಣಗಳಲ್ಲಿ ಬಿಡುಗಡೆಯಾಗುವ ಈ ಟ್ರೇಲರ್​ಗಳು ಸಿನಿಮಾಗೆ ಚಿತ್ರರಸಿಕರನ್ನು ಸೆಳೆಯುವಲ್ಲಿ ಟ್ರೆಂಡ್ ಆಗಿದೆ. ಈ ಟ್ರೆಂಡ್ ಇದೀಗ ರಂಗಭೂಮಿಗೆ ವಿಸ್ತರಿಸಿದ್ದು ನಾಟಕಗಳ ಪ್ರಚಾರಕ್ಕಾಗಿ ಕೆಲ ತಂಡಗಳು ಟ್ರೇಲರ್ ಮಾಡಿ ವಾಟ್ಸ್ ಆ್ಯಪ್ ಮತ್ತು ಫೇಸ್​ಬುಕ್​ಗಳಲ್ಲಿ ಅಪ್​ಲೋಡ್ ಮಾಡುತ್ತಿವೆ.

"ಒಂದು ನಾಟಕದ ಬಗ್ಗೆ ಹೇಳಬೇಕೆಂದರೆ ಒಂದು ಪುಟಗಳಷ್ಟು ಬರೆದು ಕೊಡಬೇಕು ಅದರ ಬದಲಿಗೆ ಒಂದೆರಡು ನಿಮಿಷಗಳಲ್ಲಿ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿ ಬಿಟ್ಟರೆ ಅದು ಹೆಚ್ಚು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ. ನಮ್ಮ ನಾಟಕದ 25 ನೇ ಪ್ರದರ್ಶನವಾದ್ದರಿಂದ ದತ್ತಾತ್ರೆಯ ಕೊಟ್ಟೆ ಹಕ್ಲು ಎಂಬುವವರು ಈ ಟ್ರೇಲರ್ ಮಾಡಿಕೊಟ್ಟರು ಇದು ಸಾಕಷ್ಟು ಯಶಸ್ವಿಯಾಗಿದೆ. 26 ಗಂಟೆಗಳಲ್ಲಿ 1026 ಮಂದಿ ಇದನ್ನು ವೀಕ್ಷಿಸಿದ್ದಾರೆ."
              ಕಿರಣ್ ವಟಿ, ರಂಗ ನಿರ್ದೇಶಕ

ರಂಗ ಪ್ರಯೋಗಗಳು ಪ್ರೇಕ್ಷಕರಿಲ್ಲದೇ ದಿನೇ ದಿನೇ ಸೊರುಗುತ್ತಿವೆ ಎಂಬ ಆತಂಕ ಎಲ್ಲರಲ್ಲೂ ಮೂಡಿದೆ. ಅದರಲ್ಲೂ ಸಿನಿಮಾ ಟಿವಿ ಸಿರಿಯಲ್​ಗಳ ಹಾವಳಿಗಳ ನಡುವೆ ಒಂದು ನಾಟಕಕ್ಕೆ 250ರಿಂದ 300 ಜನ ಸೇರುವುದೇ ದೊಡ್ಡ ವಿಷಯವಾಗಿದೆ. ಇಂತಹ ಸಮಯದಲ್ಲಿ ರಂಗಭೂಮಿಯ ಬಗ್ಗೆ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸುವ ಮತ್ತು ನಾಟಕಗಳ ವೀಕ್ಷಣೆಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಯಶಸ್ವಿಯಾಗುವತ್ತ ತಂಡಗಳು ಶ್ರಮಿಸುತ್ತಿವೆ.

image


ಮೈಸೂರಿನಲ್ಲಿ ಪ್ರಥಮ ಪ್ರಯೋಗ

ನಾಟಕಗಳ ಬಗ್ಗೆ ಟ್ರೇಲರ್ ತಯಾರಿಸಿ ಅದನ್ನು ಯಶಸ್ವಿಗೊಳಿಸಿದ್ದು ಮೊದಲು ಮೈಸೂರಿನಲ್ಲಿ. ಮೈಸೂರಿನ ಹವ್ಯಾಸಿ ರಂಗತಂಡಗಳಲ್ಲಿ ಒಂದಾದ ರಂಗವಲ್ಲಿ,ಸಿನಿಮಾ ಪ್ರಚಾರಕ್ಕಾಗಿ ಬಳಸುವ ಟ್ರೇಲರ್​ನ್ನು ನಾಟಕಗಳಿಗೆ ಮಾಡುವ ಪ್ರಯೋಗ ಮಾಡಿದರು. ಇವರ ಈ ಪ್ರಯೋಗಕ್ಕೆ ಜನರು ಹಾಗೆಯೇ ಸ್ಪಂದಿಸಿದರು ರಂಗವಲ್ಲಿ ತಂಡದ ಈ ಪ್ರಯೋಗ ಯಶಸ್ವಿಯಾಯಿತು.

ಸಿನಿಮಾಗಳ ಬಿಡುಗಡೆಯಾಗುವುದಕ್ಕೂ ಮುನ್ನ ಟ್ರೇಲರ್​​ಗಳನ್ನು ಶೂಟ್ ಮಾಡಿ ಸಿನಿಮಾ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಅದನ್ನೇ ಮೈಸೂರಿನ ಈ ರಂಗ ತಂಡ ನಾಟಕಗಳ ಪ್ರಚಾರಕ್ಕೂ ಅಳವಡಿಸಿಕೊಂಡರೆ ಹೇಗೆ ಎಂದು ಯೋಚಿಸಿ ಅವರ ತಂಡದ ಜೀಕೆ ಮಾಸ್ತರರ ಪ್ರಣಯ ಪ್ರಸಂಗ, ಸಂಸಾರದಲ್ಲಿ ಸನಿದಪ, ತಟ್ಟೆ ಇಡ್ಲಿ ರಾದ್ಧಾಂತ ನಾಟಕಗಳ ಕೆಲ ದೃಶ್ಯಗಳನ್ನು ಚಿತ್ರೀಕರಿಸಿ ಒಂದು, ಎರಡು ನಿಮಿಷಗಳ ಟ್ರೇಲರ್ ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸ್ಆ್ಯಪ್​ಗಳ ಮೂಲಕ ಹರಿ ಬಿಡಲಾಯಿತು. ಇದು ನಾಟಕಕ್ಕೆ ವಿಭಿನ್ನ ರೀತಿಯಲ್ಲಿ ಪ್ರಚಾರ ಸಿಕ್ಕಿ ಅವರ ಪ್ರದರ್ಶನಗಳು ಸಾಕಷ್ಟು ಯಶಸ್ವಿಯಾಯಿತು.

"ಜನಗಳಿಗೆ ಹತ್ತಿರವಾಗಲು ಟ್ರೇಲರ್ ಸೂಕ್ತ ಎನಿಸಿತು. ಹ್ಯಾಂಡ್​ಬಿಲ್ ಹಂಚುವುದು, ಫ್ಲೆಕ್ಸ್ ಕಟ್ಟುವುದು ಸೇರಿದಂತೆ ಎಲ್ಲವೂ ಇಂದಿಗೂ ಇವೆ. ಆದರೆ ಟ್ರೇಲರ್ ಅವೆಲ್ಲಕ್ಕಿಂತಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆರಂಭದಲ್ಲಿ ನಾಟಕದ ಟ್ರೇಲರ್ ಮಾಡಿದಾಗ ಒಳ್ಳೆ ಪ್ರತಿಕ್ರಿಯೆ ಬಂತು. ಹೀಗಾಗಿ ಇದನ್ನು ನಮ್ಮ ತಂಡದ ಎಲ್ಲಾ ನಾಟಕಗಳಿಗೂ ಅಳವಡಿಸಿಕೊಂಡಿದ್ದೇವೆ."
                      -ರವಿ, ರಂಗಕರ್ಮಿ, ಮೈಸೂರು

ಬೆಂಗಳೂರಿಗೆ ಬಂದ ಪ್ರಯೋಗ..!

ಮೈಸೂರಿನಲ್ಲಿ ಯಶಸ್ವಿಯಾದ ಈ ಪ್ರಯೋಗವನ್ನು ಬೆಂಗಳೂರಿನ ರಂಗ ತಂಡಗಳು ಅಳವಡಿಸಿಕೊಳ್ಳುವತ್ತ ಹೆಜ್ಜೆ ಹಾಕಿವೆ. ಬೆಂಗಳೂರಿನಲ್ಲಿ ಸಾಕಷ್ಟು ರಂಗತಂಡಗಳಿದ್ದು ನಿರಂತರವಾಗಿ ರಂಗಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಪ್ರೇಕ್ಷಕರ ಕೊರತೆ ಎಲ್ಲ ತಂಡಗಳಿಗೂ ಕಾಡುತ್ತದೆ ಅದಕ್ಕಾಗಿ ಬೆಂಗಳೂರಿನ ವಟಿ ಕುಟೀರ ಎಂಬ ಹವ್ಯಾಸಿ ರಂಗ ತಂಡ ತಮ್ಮ ನಾಟಕ ‘ಶ್ರದ್ಧಾ ಮತ್ತು ಸ್ಟೇನ್​ಲೆಸ್ ಸ್ಟೀಲ್ ಪಾತ್ರೆಗಳು’ ನಾಟಕದ ಟ್ರೇಲರ್ ಒಂದನ್ನು ಸಿದ್ದಪಡಿಸಿ ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿದೆ. ಈ ಹಿಂದೆಯೂ ಇದೇ ತಂಡ ಮಾಯಾಮೃಗ ಎಂಬ ನಾಟಕದ ಟ್ರೇಲರ್ ಅನ್ನು ಮಾಡಿದ್ದರೂ ಅದು ಇಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ವಟಿ ಕುಟಿರದ ಈ ಟ್ರೇಲರ್ ವೈರಲ್ ಆಗಿ ಬೆಂಗಳೂರಿನ ರಂಗಾಸಕ್ತರನ್ನು ಸೆಳೆಯುವ ಮೂಲಕ ನಾಟಕದ ಬಗ್ಗೆ ಕುತೂಹಲ ಮೂಡಿಸಿದೆ.

ಈ ಟ್ರೇಲರ್ ಸಂಸ್ಕೃತಿ ರಂಗಭೂಮಿಗೆ ಒಂದು ಹೊಸ ಪ್ರಯತ್ನ. ರಂಗಭೂಮಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರೇಕ್ಷಕರನ್ನು ದ್ವಿಗುಣಗೊಳಿಸಿ ಹೆಚ್ಚೆಚ್ಚು ರಂಗಪ್ರಯೋಗಗಳಾಗಲು ಸಹಾಯವಾಗುತ್ತದೆ.

ಇದನ್ನು ಓದಿ:

1. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!

2. ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

3."ಬೇಬಿ ಸೆನ್ಸರಿ"ಯಲ್ಲಿದೆ ನಿಮ್ಮ ಮಗುವಿನ ಬೆಳವಣಿಗೆಯ ಸೀಕ್ರೆಟ್​​..!


Add to
Shares
21
Comments
Share This
Add to
Shares
21
Comments
Share
Report an issue
Authors

Related Tags