ಆವೃತ್ತಿಗಳು
Kannada

ಸಾಫ್ಟ್​​ವೇರ್​​​ ಇಂಜಿನಿಯರ್ ಹುಟ್ಟುಹಾಕಿದ ದೇಸಿ ಸ್ಟೈಲ್​​ನ ಬಿರಿಯಾನಿ ಅಡ್ಡ..!

ಜೀವನ್

22nd Sep 2015
Add to
Shares
4
Comments
Share This
Add to
Shares
4
Comments
Share

ಹಸಿವು ಅನ್ನೋದು ಅದ್ಭುತ ಐಡಿಯಾಗಳನ್ನು ಹುಟ್ಟು ಹಾಕುತ್ತೆ.. ಹಸಿವು ಅನ್ನೋದು ಹೊಸ ಹೊಟ್ಟೆ ಪಾಡಿಗೆ ದಾರಿಯನ್ನೂ ಮಾಡಿಕೊಡುತ್ತದೆ. ಹಸಿದವನಿಗೆ ಅನ್ನ ಹಾಕೋದು ಅಂದ್ರೆ ಅದು ದೇವರ ಕೆಲಸಕ್ಕಿಂತಲೂ ಒಂದು ಹಿಡಿಯಷ್ಟು ಹೆಚ್ಚೇ. ಆದ್ರೆ ಇನ್ನೊಬ್ಬರ ಹಸಿವು ನೀಗಿಸಲು ಕೈ ತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಹೊಸ ಉದ್ಯೋಗವನ್ನು ಆರಂಭಿಸಿದ ಸಾಹಸಿಗರ ಕಥೆ ಇದು.

ಹೆಸರು ಉದಯ್ ತೇಜ. ಸಾಫ್ಟ್​​ವೇರ್ ಇಂಜಿನಿಯರ್ .. ಪ್ರತಿಷ್ಠಿತ ಡೆಲ್ ಕಂಪನಿಯಲ್ಲಿ ಸತತ 7 ವರ್ಷಗಳ ಕಾಲ ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದರು. ಆದ್ರೆ ಮನಸ್ಸಿಗೆ ತೃಪ್ತಿ ಅನ್ನೋದೇ ಇರಲಿಲ್ಲ. ಬೇರೇನಾದ್ರೂ ಮಾಡ್ಬೇಕು ಅಂತ ಮನಸ್ಸು ಹೇಳುತ್ತಾ ಇತ್ತು. ಉದಯ್ ತೇಜ ಜೊತೆ ಒಂದಷ್ಟು ಗೆಳೆಯರು ಕೂಡ ಇದ್ರು. ಪ್ರತಿದಿನ ಕೆಲಸ ಮುಗಿಸಿದ ಮೇಲೆ ಗೆಳೆಯರೆಲ್ಲ ಸೇರ್ಕೊಂಡು ಹೊಸ ಬ್ಯುಸಿನೆಸ್ ಐಡಿಯಾ ಬಗ್ಗೆ ಯೋಚನೆ ಮಾಡಿದ್ರು.. ಅದೊಂದು ದಿನ ಬಿರಿಯಾನಿ ಅಡ್ಡ ಹುಟ್ಟೇ ಬಿಡ್ತು.

image


ಅಂದಹಾಗೇ ಬಿರಿಯಾನಿ ಅಡ್ಡ ಹುಟ್ಟು ಹಾಕಿದ್ದು ಐವರು ಗೆಳೆಯರ ತಂಡ. ಈ ಗೆಳೆಯರ ಬಳಗ ರೂಪಗೊಂಡಿದ್ದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ. ಅಂದು ಕಾಲೇಜ್ ಬಿಟ್ಟು ಮನೆಗೆ ಬಂದಮೇಲೆ ಮಾಡೋದಿಕ್ಕೆ ಕೆಲಸ ಏನೂ ಇರಲಿಲ್ಲ. ಹೀಗಾಗಿ ಈ ಗೆಳೆಯರು ಅಡುಗೆ ಮಾಡೋದನ್ನ ಅಭ್ಯಾಸ ಮಾಡಿಕೊಂಡಿದ್ದರು. ಐವರು ಗೆಳೆಯರ ಪೈಕಿ ಉದಯ್ ತೇಜ ಎಕ್ಸ್​​ಪರ್ಟ್ ಕುಕ್. ಉದಯ್ ಕೈ ರುಚಿ ಅಂದೇ ಫೇಮಸ್ ಆಗಿತ್ತು. ಆದ್ರೆ ಕಾಲ ಹೇಳಿದ ಹಾಗೇ ಕೇಳಲೇ ಬೇಕು ಅನ್ನೋದು ನಿಯಮ. ಎಲ್ಲರೂ ಓದು ಮುಗಿಸಿದ ಮೇಲೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿಕೊಂಡ್ರು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜಾಬ್.. ಕೈಯಲ್ಲಿ ದುಡ್ಡಿದ್ರೂ ಮನಸ್ಸಿನಲ್ಲಿ ನೆಮ್ಮದಿ ಇರಲಿಲ್ಲ. 7 ವರ್ಷಗಳ ದುಡಿಮೆ ಬಳಿಕ ಉದಯ್ ತೇಜ ತನ್ನ ಸಾಫ್ಟ್​​ವೇರ್ ನೌಕರಿಗೆ ಗುಡ್ ಬೈ ಹೇಳಿದ್ರು.. ಆದ್ರೆ ಗೆಳೆಯರು ಮಾತ್ರ ಉದಯ್ ಕೈ ಬಿಡಲಿಲ್ಲ. ಕೆಲಸ ಬಿಟ್ಟ ಮೇಲೆ ಬಿರಿಯಾನಿ ಅಂಗಡಿ ಮಾಡೋ ಬಗ್ಗೆ ಯೋಚನೆ ಮಾಡಿದ್ರು. ಗೆಳೆಯರಿಂದ ಬೆಂಬಲವೂ ಸಿಕ್ತು. ಎರಡು ವರ್ಷಗಳ ಹಿಂದೆ ಅಂದ್ರೆ 2013ರ ಜುಲೈನಲ್ಲಿ ಬಿಯಾನಿ ಅಡ್ಡ ಕಾರ್ಯ ಆರಂಭಿಸಿತು.

ನಾಟಿ ಶೈಲಿಯ ಬಿರಿಯಾನಿ ಸ್ಪೆಷಲ್..!

ಬಿರಿಯಾನಿ ಅಡ್ಡ ಉಳಿದ ಬಿರಿಯಾನಿಗಳಂತಲ್ಲ.. ಇಲ್ಲಿ ತಯಾರಗೋ ಬಿರಿಯಾನಿ ಫುಲ್ ನಾಟಿ ಶೈಲಿಯಲ್ಲೇ ಇರುತ್ತದೆ. ಮಾಂಸ ಪ್ರೀಯರಿಗಂತೂ ನಾಟಿ ಕೋಳಿ ಬಿರಿಯಾನಿ ಅಂದ್ರೆ ಸಾಕು ಬಾಯಲ್ಲಿ ನೀರುರೂತ್ತೆ. ಉಳಿದೆಲ್ಲಾ ಬಿರಿಯಾನಿಗಳದ್ದು ಒಂದು ತೂಕವಾದ್ರೆ ನಾಟಿ ಕೋಳಿ ಬಿರಿಯಾನಿಯದ್ದು ಮತ್ತೊಂದು ತೂಕ. ಆದ್ರೆ ಬೆಂಗಳೂರಿನಲ್ಲಿ ನಾಟಿ ಕೋಳಿ ಬಿರಿಯಾನಿಯನ್ನು ತಿನ್ನಬೇಕಾದ್ರೆ ಕಿಲೋಮೀಟರ್ ಗಟ್ಟಲೆ ಹೋಗ್ಬೇಕು. ಇದನ್ನೇ ಮಾರ್ಕೆಟಿಂಗ್ ಸ್ಟ್ರಾಟಜಿಯಾಗಿ ಬದಲಿಸಿಕೊಂಡಿದ್ದು ಬಿರಿಯಾನಿ ಅಡ್ಡದ ಉದಯ್ ತೇಜ ಮತ್ತು ಫ್ರೆಂಡ್ಸ್. ಆರಂಭದಲ್ಲಿ ಚಂದ್ರಾ ಲೇ ಔಟ್​​ನಲ್ಲಿ ಬಿರಿಯಾನಿ ಅಡ್ಡ ಕಾರ್ಯ ಆರಂಭಿಸಿತ್ತು. ಮೊದಲ ಬಾರಿಗೆ ಹೊಸ ಉದ್ಯಮಕ್ಕೆ ಕೈ ಹಾಕುವಾಗ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಉದಯ್ ತೇಜ ಅಂಡ್ ಫ್ರೆಂಡ್ಸ್​​ಗೂ ಅದಿತ್ತು. ಅಡ್ಡ ಆರಂಭದ ಬಗ್ಗೆ ಯೋಚನೆ ಮಾಡಿದ ಮೇಲೆ ಮಿತ್ರರಾದ ರಾಜೇಶ್ ಮತ್ತು ಸತೀಶ್ ಕೈ ಜೋಡಿಸಿದ್ದರು. ಆದ್ರೆ ಗೆಳೆಯರು ಸೇರಿಕೊಂಡು ಆರಂಭಿಸಿದ್ದ ನಾಟಿ ಕೋಳಿ ಸ್ಪೆಷಲ್ ಬಿರಿಯಾನಿ ಅಡ್ಡ ಕೆಲವೇ ತಿಂಗಳುಗಳಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಿತು. ಸದ್ಯಕ್ಕೆ ಬಿರಿಯಾನಿ ಅಡ್ಡ 4 ಬ್ರಾಂಚ್​​ಗಳನ್ನು ಹೊಂದಿದೆ. ಎಲ್ಲಾ ಬ್ರಾಂಚ್​ಗಳಲ್ಲೂ ಫುಲ್ ರಶ್. ವೀಕೆಂಡ್ ಬಂತು ಅಂದ್ರೆ ನಿಲ್ಲೋದಿಕ್ಕೂ ಜಾಗ ಇರೋದಿಲ್ಲ.

ಒಲೆಯಲ್ಲೇ ರೆಡಿಯಾಗುತ್ತೆ ಬಿರಿಯಾನಿ..!

ಬಿರಿಯಾನಿ ಅಡ್ಡದ ಒಲೆ

ಬಿರಿಯಾನಿ ಅಡ್ಡದ ಒಲೆ


ಬಿರಿಯಾನಿ ಅಡ್ಡದ ನಾಲ್ಕೂ ಬ್ರಾಂಚ್​​ಗಳಲ್ಲಿ ಅಡುಗೆ ಕೆಲಸ ನಡೆಯೋದಿಲ್ಲ. ಚಂದ್ರಾ ಲೇಔಟ್​ನಲ್ಲಿ ತಯಾರಾಗುವ ಬಿರಿಯಾನಿ ಎಲ್ಲಾ ಬ್ರಾಂಚ್​​ಗಳಿಗೂ ಆನ್​ಟೈಮ್​​ನಲ್ಲಿ ತಲುಪುತ್ತೆ. ಅಂದಹಾಗೇ ಬಿರಿಯಾನಿ ರೆಡಿಯಾಗೋದು ಪಕ್ಕಾ ದೇಸಿ ಸ್ಟೈಲ್​ನಲ್ಲಿ..ಅದ್ರಲ್ಲೂ ಹಳ್ಳಿ ಸೊಗಡಿನಲ್ಲಿ. ಕಟ್ಟಿಗೆಯ ಒಲೆಯಲ್ಲಿ ಇವತ್ತಿಗೂ ಬಿರಿಯಾನಿ ಅಡ್ಡದ ರುಚಿ ರುಚಿಯಾದ ಬಿರಿಯಾನಿ ಸಜ್ಜಾಗಿ ಬಿಡುತ್ತದೆ. ಚಂದ್ರಾಲೇ ಔಟ್​​ನ ಬಿರಿಯಾನಿ ಅಡ್ಡವಂತೂ ಫುಲ್ ದೇಸಿ ಸ್ಟೈಲ್​ನಲ್ಲೇ ಇದೆ. ನೆಲಮಹಡಿಯಲ್ಲಿರುವ ಸೌದೆ ಒಲೆಯಲ್ಲಿ ಬಿರಿಯಾನಿ ಸಜ್ಜಾದ್ರೆ, ಕುಳಿತು ತಿನ್ನೋದಿಕ್ಕೆ ತೆಂಗಿನ ಮರದ ಕುರ್ಚಿಗಳಿವೆ. ಗೋಡೆಗಳಲ್ಲಿ ಪೈಂಟಿಂಗ್​​ಗಳಿವೆ. ಇದು ಅಡ್ಡಾದ ಅಟ್​ಮೋಸ್ಪಿಯರ್​​ನ್ನು ಮತ್ತಷ್ಟು ದೇಸಿಯನ್ನಾಗಿಸಿದೆ. ಹೊಟೇಲ್ ಪಕ್ಕಾ ದೇಸಿ ಸ್ಟೈಲ್​​ನಲ್ಲಿದ್ರೂ ಗ್ರಾಹಕರು ಮಾತ್ರ ಬಿರಿಯಾನಿ ಅಡ್ಡವನ್ನು ಹುಡುಕಿಕೊಂಡು ಬರುತ್ತಾರೆ. ಗ್ರಾಹಕರು ನಮ್ಮ ಬಿರಿಯಾನಿ ತಿಂದು ಬತ್ತೊಮ್ಮೆ ನಮ್ಮ ಅಡ್ಡಾಕ್ಕೆ ಬಂದ್ರೆ ಅದಕ್ಕಿಂತ ಮಿಗಿಲಾದ ಖುಷಿ ಬೇರೊಂದಿಲ್ಲ ಅಂತಾರೆ ಅಡ್ಡಾದ ಸಂಸ್ಥಾಪಕ ಉದಯ್ ತೇಜ.

ಬಿರಿಯಾನಿ ಅಡ್ಡ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಪ್ರತಿದಿನ ಏನಿಲ್ಲ ಅಂದ್ರೂ 30 ಸಾವಿರದಿಂದ 45 ಸಾವಿರ ರೂಪಾಯಿ ತನಕ ವ್ಯಾಪಾರ ನಡೆಯುತ್ತದೆ. ವೀಕೆಂಡ್​​ನಲ್ಲಿ ​​ ಆದಾಯದ ಪ್ರಮಾಣ ಏರಿಕೆಯಾಗುತ್ತದೆ. ಸದ್ಯ ನಾಲ್ಕೇ ನಾಲ್ಕು ಬ್ರಾಂಚ್​​ಗಳಿದ್ರೂ ಕೈ ತುಂಬಾ ಕೆಲಸಗಳಿವೆ. ಬೆಂಗಳೂರಿನ ವಿವಧ ಕಡೆ ಮತ್ತು ನಗರದ ಹೊರಭಾಗದಲ್ಲೂ ಬಿರಿಯಾನಿ ಅಡ್ಡಾದ ಬ್ರಾಂಚ್ ಸ್ಥಾಪಿಸಲು ಪ್ಲಾನ್ ಇದೆ. ಆದ್ರೆ ಇನ್ವೆಸ್ಟರ್​​ಗಳ ಕೊರತೆ ಉದಯ್ ತೇಜಾಗೆ ಕಾಡುತ್ತಿದೆ. ಒಂದುವೇಳೆ ಯಾರಾದ್ರೂ ಹಣ ಹಾಕಿದ್ರೆ ಬಿರಿಯಾನಿ ಅಡ್ಡಾದ ಬ್ಯುಸಿನೆಸ್ ಮತ್ತಷ್ಟು ಇಂಪ್ರೂವ್ ಆಗುತ್ತೆ ಅಂತಾರೆ ಉದಯ್.

ಬಿರಿಯಾನಿ ಅಡ್ಡ

ಬಿರಿಯಾನಿ ಅಡ್ಡ


ಇನ್ನು ಬಿರಿಯಾನಿ ಅಡ್ಡಾದಲ್ಲಿ ಪರಿಣಿತ ಬಾಣಸಿಗರೇ ಇದ್ದಾರೆ. ಮಾಂಸದ ಆಯ್ಕೆಯಿಂದ ಹಿಡಿದು ಸರಿಯಾದ ಸಮಯಕ್ಕೆ ಸರಿಯಾದ ಜಾಗಕ್ಕೆ ತಲುಪಿಸುವ ವ್ಯವಸ್ಥೆಯನ್ನು ಇವರೇ ಮಾಡುತ್ತಾರೆ. ಬಿರಿಯಾನಿ ಅಡ್ಡಾದಲ್ಲಿ ಕುಳಿತು ತಿನ್ನುವವರ ಸಂಖ್ಯೆಗಿಂತ ಪಾರ್ಸೆಲ್ ತೆಗೆದುಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಈ ಬಿರಿಯಾನಿಗೆ ಡಿಮ್ಯಾಂಡ್ ಹೆಚ್ಚಿದೆ. ಇನ್ನು ಬಿರಿಯಾನಿ ಅಡ್ಡದವ್ರೇ ಬ್ರಾಂಚ್​​ಗಳ ಸುತ್ತಮುತ್ತಾ ಇರುವ ಅಂದ್ರೆ 3-4 ಕಿಲೋಮೀಟರ್​​ಗಳ ತನಕ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಪ್ರತಿಷ್ಠಿತ ಫುಡ್ ಫಂಡಾ, ಟೈನಿ ಹಾಲ್, ಝೊಮೊಟೊದಂತಹ ವೆಬ್ ಸೈಟ್ ಮತ್ತು ಆ್ಯಪ್​​ಗ ಳಲ್ಲೂ ಬಿರಿಯಾನಿ ಅಡ್ಡ ರಾರಾಜಿಸುತ್ತಿದೆ.

ಸಾಫ್ಟ್​​ವೇರ್ ಇಂಜಿನಿಯರ್ ಆ ಕೆಲಸ ಸಾಕು.. ಬೇರೇನಾದ್ರೂ ಮಾಡೋಣ ಅಂತ ನಿರ್ಧಾರ ಮಾಡಿದ್ದರಿಂದ ರುಚಿ ರುಚಿಯಾದ ಬಿರಿಯಾನಿ ಇವತ್ತು ರೆಡಿಯಾಗುತ್ತಿದೆ. ಅಡ್ಡಾದ ಬಿರಿಯಾನಿಯ ರೇಟ್ ಕೂಡ ಹೆಚ್ಚೇನು ಇಲ್ಲ.. ಹೀಗಾಗಿ ಇನ್ನೇಕೆ ತಡ ಮಾಡ್ತಿದ್ದಾರಾ.. ಫ್ರೀ ಯಾಗಿದ್ದಾಗ ಒಂದ್ಸಾರಿ ಬಿರಿಯಾನಿ ಅಡ್ಡಾದ ಬಿರಿಯಾನಿ ಸವಿದು ಬನ್ನಿ..

Add to
Shares
4
Comments
Share This
Add to
Shares
4
Comments
Share
Report an issue
Authors

Related Tags