ಆವೃತ್ತಿಗಳು
Kannada

ಸ್ಟಾರ್​ಗಳಿಗೆ ಲುಕ್​ ಕೊಡುವ ಗಟ್ಟಿಗಿತ್ತಿ- ಪಾತರಗಿತ್ತಿಗೂ ಬಣ್ಣ ಹಚ್ಚೋ ಪವಿತ್ರರೆಡ್ಡಿ

ಟೀಮ್​ ವೈ.ಎಸ್​. ಕನ್ನಡ

9th Oct 2016
Add to
Shares
2
Comments
Share This
Add to
Shares
2
Comments
Share

ಚಿತ್ರರಂಗವನ್ನ ಚೆಂದಗಾಣಿಸುವುದರಲ್ಲಿ ಕ್ಯಾಮೆರಾ ಮ್ಯಾನ್​ಗಳು ಒಂದುಷ್ಟು ಕೆಲಸವನ್ನ ಮಾಡಿದ್ರೆ ಇನ್ನೊಂದಿಷ್ಟು ಕೆಲಸವನ್ನ ಡಿಸೈನರ್ಸ್ ಮಾಡ್ತಾರೆ. ಅದು ನೂರಕ್ಕೆ ನೂರರಷ್ಟು ಸತ್ಯ. ವಿಶೇಷ ಅಂದ್ರೆ ಕನ್ನಡ ಚಿತ್ರರಂಗದಲ್ಲಿರುವ ಸ್ಟಾರ್ಟ್​ಅಪ್ ಸ್ಟಾರ್ ಗಳಿಗೆ ಡಿಸೈನರ್ಸ್ ಮತ್ತು ಸ್ಟೈಲಿಷ್ಟ್​ಗಳು ಹೆಣ್ಣು ಮಕ್ಕಳು. ಈ ವಿಚಾರದಲ್ಲಿ ಹೆಣ್​ಮಕ್ಳೇ ಸ್ಟ್ರಾಂಗು ಅನ್ನೋದನ್ನ ಪ್ರೂವ್ ಮಾಡಿದ್ದಾರೆ, ಮಾಡ್ತಾನೂ ಇದ್ದಾರೆ. ಅದಕ್ಕೂ ಪ್ರತ್ಯಕ್ಷ ಮತ್ತು ಬೆಸ್ಟ್​ ಎಕ್ಸಾಪಲ್​ ಅಂದ್ರೆ ಡಿಸೈನರ್ ಪವಿತ್ರರೆಡ್ಡಿ.

image


ಶಾರ್ಟ್ ಪಿರಿಯೆಡ್​ನಲ್ಲಿ ಸಖತ್ ಸಕ್ಸಸ್

ಪವಿತ್ರ ,2010ಕ್ಕೂ ಮುಂಚೆಯೇ ತಮ್ಮ ಟ್ಯಾಲೆಂಟ್​ನಿಂದ ಗುರುತಿಸಿಕೊಂಡವವರು. ಕಾಲೇಜ್ ಡೇಸ್​​ನಲ್ಲಿ ನಟಿ ಪೂಜಾಗಾಂಧಿಗೆ ಕಾಸ್ಟ್ಯೂಮ್​ ಡಿಸೈನ್ ಮಾಡಿ ಸೈ ಅನ್ನಿಸಿಕೊಂಡವರು. ಅದನ್ನ ಕಂಡ ಕ್ಯಾಮೆರಾಮ್ಯಾನ್ ಮಹೇಂದ್ರ ಸಿಂಹ ಇವ್ರನ್ನ ಯಕ್ಷಚಿತ್ರಕ್ಕೆ ರೆಫರ್ ಮಾಡಿದ್ದರು. ಅಲ್ಲಿಂದ ಶುರುವಾದ ಪವಿತ್ರ ರೆಡ್ಡಿಯವರ ಡಿಸೈನಿಂಗ್ ಪಯಣ ಇಲ್ಲಿ ತನಕ ನಿಂತಿಲ್ಲ. ಮೊದಲ ಚಿತ್ರದಲ್ಲೇ ನಟ, ಯೋಗಿಗೆ ಸ್ಟೈಲಿಷ್ ಆಗಿ ಕೆಲಸ ಮಾಡಿದ ನಂತ್ರ ಸಿನಿಮಾಗಳು, ಪವಿತ್ರ ಅವ್ರನ್ನ ಹುಡುಕುತ್ತಾ ಬಂದವು. ಸಾಕಷ್ಟು ಕಾಂಪಿಟೇಷನ್ ಮಧ್ಯೆಯಲ್ಲಿ ಶಾರ್ಟ್ ಪಿರಿಯಡ್​ನಲ್ಲಿ ತಮ್ಮನ್ನ ತನ್ನ ಕೆಲಸದಿಂದ ಗುರುತಿಸಿಕೊಂಡ ಕೀರ್ತಿ ಪವಿತ್ರ ರೆಡ್ಡಿಗೆ ಸಲ್ಲುತ್ತದೆ.

image


25 ಚಿತ್ರಗಳು ಕಲರ್​ಫುಲ್..!​​

ಸದ್ಯ 25 ಚಿತ್ರಗಳನ್ನ ಕಂಪ್ಲೀಟ್ ಮಾಡಿರೋ ಪವಿತ್ರ ತಮ್ಮ ಕೆಲಸದ ಮೇಲೆ ಖುಷಿ ಇದೆ. ಚಿಕ್ಕ ವಯಸ್ಸಿನಲ್ಲೆ ಇಷ್ಟೆಲ್ಲಾ ಸಾಧನೆ ಮಾಡಿರೋ ಪವಿತ್ರ, ಯೋಗಿಯಿಂದ ಹಿಡಿದು ಯಶ್, ಶಿವರಾಜ್ ಕುಮಾರ್ ,ರಾಧಿಕಾ ಪಂಡಿತ್​ ಇನ್ನೂ ಅನೇಕರಿಗೆ ಇಂದಿಗೂ ಸ್ಟೈಲಿಷ್. ಡಿಸೈನರ್ ಕೆಲಸ ಅಂದ್ರೆ ಸಖತ್​ ಚಾಲೆಜಿಂಗ್​ ಆಗಿರುತ್ತದೆ. ಪ್ರತಿ ಸಿನಿಮಾದಲ್ಲೂ ಬದಲಾವಣೆ ಅಗತ್ಯವಾಗಿರುತ್ತದೆ. ಏನಾದ್ರು ಹೊಸತನ್ನ ನೀಡಬೇಕಾಗಿರುತ್ತದೆ. ಅಷ್ಟೇ ಅಲ್ಲದೆ ಸಿನಿಮಾದ ಕ್ಯಾರೆಕ್ಟರ್​ಗೆ ತಕ್ಕಂತ ಕಲರ್​ಗಳನ್ನ ಮತ್ತು ಇಂಪ್ರೇಸಿವ್ ಕಾಸ್ಟ್ಯೂಮ್ಸ್​ನ್ನ ಉಪಯೋಗಿಸಬೇಕಾಗುತ್ತದೆ. ಇಷ್ಟೆಲ್ಲ ಚಾಲೆಂಜಿಗ್ ಮಧ್ಯೆ ಪವಿತ್ರ ತಮ್ಮ ಕೆಲಸದಿಂದಲೇ ಗುರುತಿಸಿಕೊಂಡಿರೋದು ನಿಜಕ್ಕೂ ಖುಷಿಯ ಸಂಗತಿ.

ಇದನ್ನು ಓದಿ: ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್​ ಆ್ಯಪ್​ನಲ್ಲಿ ಸಿಗುತ್ತೆ ಉತ್ತರ

ಸ್ಟಾರ್​ಗಳಿಗೆ ಅಚ್ಚುಮೆಚ್ಚಿನ ಡಿಸೈನರ್

ಪವಿತ್ರರೆಡ್ಡಿ ಡಿಸೈನ್ ಮಾಡಿದ್ದ ಕಾಸ್ಟ್ಯೂಮ್ಸ್​​ ಸಖತ್ ಫೇಮಸ್​ ಆಗಿದ್ದು ಅದ್ದೂರಿ ಚಿತ್ರದ ಮೂಲಕ. ಅದ್ದೂರಿ ಸಿನಿಮಾದಲ್ಲಿ ನಟಿ ರಾಧಿಕಾ ಪಂಡಿತ್​ ಅವರನ್ನ ಕಂಪ್ಲೀಟ್​ ಚೇಂಜ್ ಆಗಿ ತೋರಿಸಲಾಯ್ತು. ಅದು ಪವಿತ್ರ ರೆಡ್ಡಿಗೆ ತುಂಬಾ ಹೆಸರು ತಂದುಕೊಟ್ಟಿತ್ತು. ಅದಷ್ಟೇ ಅಲ್ಲದೆ ಸಿದ್ಲಿಂಗು ಸಿನಿಮಾದಲ್ಲಿ ರಮ್ಯಅವ್ರಿಗೆ ಮಾಡಿದ ಡಿಸೈನಿಂಗ್ ,ಗೂಗ್ಲಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್​ ಯಶ್​ ಅವರಿಗೆ ಮಾಡಿದ ಕಾಸ್ಟ್ಯೂಮ್ಸ್ ಸಖತ್​ ಕ್ಲಿಕ್​ ಆಯ್ತು. ಅಷ್ಟೇ ಅಲ್ಲದೆ ರಾಧಿಕಾ ಪಂಡಿತ್, ಯಶ್​ ಅವರಿಗೆ ಪರ್ಸನ್​ ಡಿಸೈನರ್​ ಆಗಿರುವ ಪವಿತ್ರ, ಸೈಮಾ,ಫಿಲ್ಮಂ ಫೇರ್​ಗಳಿಗೂ ಸ್ಟಾರ್​ಗಳಿಗೆ ಕಾಸ್ಟ್ಯೂಮ್​ ಡಿಸೈನ್ ಮಾಡಿದ್ದಾರೆ. ಇನ್ನೂ ವಿಶೇಷ ಅಂದ್ರೆ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಹೀರೋಯಿನ್​ ಆಗಿರೋ ನಟಿ ರಚಿತರಾಮ್​ ಅವರಿಗೊಂದು ಕೂಡ ಪವಿತ್ರ ರೆಡ್ಡಿಯವರೇ ಕಾಸ್ಟ್ಯೂಮ್​ ಡಿಸೈನರ್.

image


ಚಾಲೆಜಿಂಗ್​ ಜಾಬ್​ 

ಡಿಸೈನಿಂಗ್ ಮಾಡೋದು ಮತ್ತು ಸ್ಟೈಲಿಷ್ ಮಾಡೋದು ಸುಲಭವಾದ ಕೆಲಸವಲ್ಲ ಅನ್ನೋದು ಪವಿತ್ರ ಅವರ ಮಾತು. ಯಾಕಂದ್ರೆ ಕೆಲವೊಮ್ಮೆ ನಾಳೆ ಶೂಟಿಂಗ್ ಶುರು ಅನ್ನೋ ಟೈಂನಲ್ಲಿ ಕಾಸ್ಟ್ಯೂಮ್ಸ್ ಬೇಕು ಅಂತ ಕೇಳುವವರೂ ಇರ್ತಾರೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಡಿಸೈನ್ ಮಾಡಿದ್ದು ಕ್ಯಾಮೆರಾ ಫ್ರೆಂಡ್ಲಿ ಆಗಿರೋದಿಲ್ಲ. ಆಗ ತಕ್ಷಣ ಬೇರೆ ಡಿಸೈನ್ ಮಾಡಬೇಕಾಗುತ್ತದೆ. ಇನ್ನೂ ಬೇರೆ ಸಿನಿಮಾಗಳಲ್ಲಿ ಇರೋ ರೀತಿಯಲ್ಲಿ ಯಾವುದೇ ಕಾಸ್ಟ್ಯೂಮ್ಸ್ ರಿಪೀಟ್​ ಆಗಬಾರದು. ಇಷ್ಟೆಲ್ಲ ಒಂದು ತೊಂದರೆಯಾದ್ರೆ ಇನ್ನೊಂದು ದೊಡ್ಡ ಚಾಲೆಂಜ್​ ಅಂದ್ರೆ ಟ್ರಯಲ್​ ಕೊಡೋದು. ಸದಾ ಬ್ಯೂಸಿ ಇರೋ ಸ್ಟಾರ್ ಗಳ ಫ್ರೀ ಟೈಂ ನೋಡಿಕೊಂಡು ಅವ್ರಿಗೆ ಕಾಸ್ಟ್ಯೂಮ್​ಗಳನ್ನ ಟ್ರಯಲ್ ನೀಡಬೇಕಾಗುತ್ತೆ. ಕಲರ್​ ಒಪ್ಪಿಸುವುದರ ಜೊತೆಗೆ ಫಿಟ್ಟಿಂಗ್​ ಅನ್ನ ಪಕ್ಕಾ ಮಾಡಿಸಬೇಕಾಗುತ್ತದೆ. ಇನ್ನೂ ಸ್ಯಾಂಡಲ್​ವುಡ್ ಗೆ ಸಿಂಡ್ರಲಾ ರೀತಿಯ ಗೌನ್​ ಪರಿಚಯ ಮಾಡಿದ ಖ್ಯಾತಿ ಪವಿತ್ರರೆಡ್ಡಿ ಅವರಿಗೆ ಸಲ್ಲುತ್ತದೆ. ಅದ್ದೂರಿ,ಬಹದ್ದೂರ್​ ಮತ್ತು ಭರ್ಜರಿ ಸಿನಿಮಾಗಳ ನಾಯಕಿಯರಿಗೆ ಪ್ರಿನ್ಸೆಸ್​ ಗೌನ್ ಗಳನ್ನ ಡಿಸೈನ್ ಮಾಡಿ ಇಡೀ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಕ್ರೆಡಿಟ್​ ಇವರಿಗೆ ಸಿಗುತ್ತದೆ. ಒಟ್ಟಾರೆ ಶಾರ್ಟ್ ಪಿರಿಯೆಡ್​ನಲ್ಲಿ ಸೂಪರ್ ಸಕ್ಸಸ್ ಪಡೆದುಕೊಂಡಿರುವ ಪವಿತ್ರ ರೆಡ್ಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಿಗೆ ಹಾಗೂ ಸ್ಟಾರ್​ಗಳಿಗೆ ಡಿಸೈನ್ಸ್ ಮಾಡುವಂತಾಗಲಿ. ನಮ್ಮ ಇಂಡಸ್ಟ್ರೀ ಮಾತ್ರವಲ್ಲದೆ ಅಕ್ಕ ಪಕ್ಕ ಇಂಡಸ್ಟ್ರೀಯಲ್ಲೂ ತಮ್ಮನ್ನ ಗುರುತಿಸಿಕೊಳ್ಳಲಿ ಅನ್ನೋದು ನಮ್ಮಆಶಯ.

ಇದನ್ನು ಓದಿ

1.ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..! 

2. ಎಲ್ಲರಿಗೂ ಮಾದರಿ, ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ!

3. ಕೇವಲ ಟ್ಯಾಕ್ಸಿಯಲ್ಲಿ ಮಾತ್ರ ಅಲ್ಲ… ಬೈಕ್​ನಲ್ಲೂ ನಿಮ್ಮನ್ನು ಪಿಕ್ಅಪ್ ಮಾಡ್ತಾರೆ..!


Add to
Shares
2
Comments
Share This
Add to
Shares
2
Comments
Share
Report an issue
Authors

Related Tags