ಆವೃತ್ತಿಗಳು
Kannada

ಟ್ರೆಂಡಿಯಾಗಿದೆ, ಸಖತ್​ ಟೇಸ್ಟೀಯಾಗಿದೆ- ಸಮ್ಮರ್​ನಲ್ಲಿ ನೈಟ್ರೋಜನ್​ ಐಸ್​ಕ್ರೀಮ್​ನದ್ದೇ ಮಾತು...!

ಟೀಮ್​ ವೈ.ಎಸ್​. ಕನ್ನಡ

19th Apr 2017
Add to
Shares
15
Comments
Share This
Add to
Shares
15
Comments
Share

ಈಗಂತು ಬಿಸಿಲೋ ಬಿಸಿಲು. ರಣಬಿಸಿಲಿಗೆ ಬಳಲಿ ಬೆಂಡಾಗಿ ಹೋಗಿದ್ದೇವೆ. ದೇಹ, ಮನಸ್ಸು ಎರಡೂ ಕೂಡ ಫ್ರೆಶ್​ ಅನಿಸುವುದೇ ಇಲ್ಲ. ಎಲ್ಲಿ ನೋಡಿದ್ರು ಬಿಸಿ ಬಿಸಿ. ಇಂತಹ ಟೈಂ ನಲ್ಲಿ ತಣ್ಣಗಿರುವುದನ್ನು ತಿನ್ನುವುದೇ ಮಜಾ. ಅದಕ್ಕೆ ಅಂತಾನೇ ಬೆಂಗಳೂರಿನಲ್ಲಿ ಹೊಗೆ ಐಸ್ ಕ್ರೀಂ ಪಾರ್ಲರ್ ಪ್ರಾರಂಭ ಆಗಿದೆ. ಇಲ್ಲಿ ನೀವು ಐಸ್ ಕ್ರೀಮ್​ ತಿಂದ್ರೆ ಬಾಯಲ್ಲಿ ಮೂಗಲ್ಲಿ ಹೊಗೆ ಬರುತ್ತದೆ. ಅಯ್ಯೋ..! ಶಿವ ಅದು ಹೇಗೆ ಅಂತೀರಾ..? ಇದು ನೈಟ್ರೋಜನ್‌ ಐಸ್ ಕ್ರೀಂ. ಸಮ್ಮರ್‌ನಲ್ಲಿ ದೇಹವನ್ನ ಕೂಲ್ ಕೂಲ್ ಮಾಡಲು ಈ ಐಸ್‌ಕ್ರೀಂ ದಿ ಬೆಸ್ಟ್‌. ಇದನ್ನು ತಿಂದರೆ ದೇಹಕ್ಕೆ ತಂಪಿನ ಫೀಲ್‌ ಆಗುತ್ತದೆ. ನೋಡಲು ಒಂಥರಾ ಖುಷಿ ತಿನ್ನೋದಿಕ್ಕೆ ಮಜಾ....!

image


ಅಮೆರಿಕಾದಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿದ್ದ ಐಸ್ ಕ್ರೀಂ ಬೆಂಗಳೂರಿನಲ್ಲಿ

ಈ ಹೊಗೆ ಐಸ್​ಕ್ರೀಮ್​ಗೆ "ನೈಟ್ರೋಜನ್‌ ಐಸ್‌ಕ್ರೀಮ್​" ಅಂತಾ ಹೆಸರು. ಲಿಕ್ವಿಡ್‌ ನೈಟ್ರೋಜನ್​ನಿಂದ ಐಸ್‌ಕ್ರೀಮ್​ ತಯಾರಿಸುವ ವಿನೂತನ ಪಾರ್ಲರ್‌ ಇದು. ನಿಜ ಹೇಳ್ಬೇಕು ಅಂದ್ರೆ, ಬೆಂಗಳೂರಿನಂತಹ ಹೈಟೆಕ್‌ ಸಿಟಿಗೆ ಇದು ಹೊಸಬಗೆಯ ಐಸ್‌ಕ್ರೀಂ. ಆದ್ರೆ, ಹೊರದೇಶದಲ್ಲಿ ಇದು ಕಾಮನ್‌. ಮೂರು ವರ್ಷಗಳ ಹಿಂದೆ ಅಮೆರಿಕಾದಲ್ಲಿ "ಲಿಕ್ವಿಡ್‌ ನೈಟ್ರೋಜನ್‌"ನಿಂದ ಐಸ್‌ಕ್ರೀಂ ತಯಾರಿಸುವ ಟ್ರೆಂಡ್ ಶುರುವಾಯ್ತು. ಆಗ ಅಮೆರಿಕಾದಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿತ್ತು. ಈಗ ಬೆಂಗಳೂರಿಗೂ ಕೂಡ ನೈಟ್ರೋಜನ್‌ ಐಸ್‌ಕ್ರೀಂನ ಕ್ರೇಜ್ ಶುರುವಾಗಿದೆ.

ಇದನ್ನು ಓದಿ: 3 ಗಂಟೆ ಮುಂಚಿತವಾಗಿ ಬುಕ್ ಮಾಡಿ- ಮನೆ ಬಾಗಿಲಿಗೆ ಬರಲಿದೆ ಫ್ರೆಶ್​ ಹಣ್ಣು ತರಕಾರಿ..!

ಹೊಗೆ ಐಸ್‌ಕ್ರೀಂಗೆ ಹುಡುಗರು ಅದರಲ್ಲೂ ಯಂಗ್​ಸ್ಟರ್​ಗಳು ಸಖತ್ ಫಿದಾ ಆಗ್ಬಿಟ್ಟಿದ್ದಾರೆ. ಈ ಐಸ್‌ಕ್ರೀಂ ಪಾರ್ಲರ್‌ಗೆ ಹುಡುಗರು ಫ್ರೆಂಡ್ಸ್ ಜೊತೆ ಬರ್ತಿದ್ದಾರೆ. ಯಾಕೆ ಗೊತ್ತಾ.. ಬೆಂಗಳೂರಿನಲ್ಲಿ ಹೊಗೆ ಐಸ್‌ಕ್ರೀಂ ಈಗ ಪಾಪ್ಯುಲರ್ ಆಗ್ಬಿಟ್ಟಿದೆ. ಸದ್ಯದ ಟ್ರೆಂಡ್‌ ಕೂಡ ಹೌದು. ಐಸ್‌ಕ್ರೀಂ ಪ್ರಿಯರಿಗೆ ಈ ಐಸ್‌ಕ್ರೀಂ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಹುಡುಗರಂತೂ ಸಖತ್ ಎಂಜಾಯ್ ಮಾಡ್ಕೊಂಡು ವಿನೂತನ ಐಸ್‌ಕ್ರೀಂ ಸವಿಯುತ್ತಿದ್ದಾರೆ.

" ಐಸ್​ಕ್ರೀಮ್​ನಲ್ಲಿ ಹೊಸ ಅವಿಶ್ಕಾರ ಇದು. ವಿದೇಶದ ಕಾನ್ಸೆಪ್ಟ್ ಇದು. ಲಿಕ್ವಿಡ್ ನೈಟ್ರೋಜನ್​ನಲ್ಲಿ ಐಸ್ ಕ್ರೀಮ್​ ಮಾಡಿ ನಂತ್ರ ಗ್ರಾಹಕರಿಗೆ ಸರ್ವ್​ ಮಾಡುತ್ತೇವೆ. ಸಮ್ಮರ್ ನಲ್ಲಿ ಸಖತ್ತಾಗಿರುತ್ತದೆ. ಫ್ರೆಶ್ ಆಗಿ ಗ್ರಾಹಕರ ಮುಂದೆಯೇ ಐಸ್ ಮಾಡಿಕೊಡ್ತಿವಿ."
- ಫೈಸಲ್ ಮಥೀನ್,Cream Chemistry 

ಎಲ್ಲಿದೆ...ಏನೆಲ್ಲಾ..? 

ಬೆಂಗಳೂರಿನ ಕೋರಮಂಗಲದಲ್ಲಿರುವ ಐಸ್‌ಪಾರ್ಲರ್‌ನಲ್ಲೀಗ "ನೈಟ್ರೋಜನ್‌ ಐಸ್‌ಕ್ರೀಂ"ನದ್ದೇ ಕ್ರೇಜ್‌. ಎಲ್ಲರೂ ಈ ಐಸ್ ಕ್ರೀಮ್​ ತಿಂದು ಸಖತ್ ಇಂಪ್ರೇಸ್ ಆಗಿದ್ದಾರೆ . ಯಾಕಂದ್ರೆ, ಇಲ್ಲಿ ಒಂದೇ ವೈರೆಟಿ ಸಿಗೋಲ್ಲ. ಹಲವು ವೈರೆಟಿಯ ಐಸ್‌ಕ್ರೀಂ ಇಲ್ಲಿ ಲಭ್ಯ. ಚಾಕೋಲೇಟ್, ವೆನಿಲ್ಲಾ, ಜಾಕ್ ಫ್ರೂಟ್, ಸ್ಟ್ರಾಬೆರಿ, ಬಟರ್ ಸ್ಕಾಚ್ ಸೇರಿದಂತೆ ಹತ್ತಾರು ರೀತಿಯ ಐಸ್ ಕ್ರೀಮ್​ ಇಲ್ಲಿ ಲಭ್ಯವಿದೆ. ವಿಭಿನ್ನ ಐಸ್ ಕ್ರೀಮ್​ ಮಾತ್ರವಲ್ಲದೆ ಡಿಫರೆಂಟ್​ ಆಗಿ ಇದನ್ನ ಪ್ರೆಸೆಂಟ್ ಮಾಡುತ್ತಾರೆ. ಇದು ಗ್ರಾಹಕರನ್ನು ಮತ್ತಷ್ಟು ಇಂಪ್ರೆಸ್ ಮಾಡುತ್ತದೆ. ಲಿಕ್ವಿಡ್‌ನಿಂದ ಐಸ್‌ಕ್ರೀಂ ಮಾಡಿ ಫ್ರೀಜ್ ಮಾಡಿದ ತಕ್ಷಣ ನೈಟ್ರೋಜನ್ ಹೊಗೆ ಜೊತೆ ಸರ್ವ್ ಮಾಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ನೈಟ್ರೋಜನ್‌ ಐಸ್‌ಕ್ರೀಂ ಇರೋದು ಕೇವಲ ಕೋರಮಂಗದಲ್ಲಿ ಮಾತ್ರ. ಬಹುಶಃ ಮುಂದಿನ ದಿನಗಳಲ್ಲಿ ಈ ಟ್ರೆಂಡ್‌ ಮತ್ತಷ್ಟು ಹೆಚ್ಚಾಗಬಹುದು.

image


ಗ್ರಾಹಕರು ಏನು ಹೇಳುತ್ತಾರೆ..?

ಬಿಸಿಲಿನಿಂದ ಟೆಂಪರೇಷರ್​ ಹೆಚ್ಚಾಗುತ್ತಿದ್ದಂತೆ ಐಸ್​ಕ್ರೀಮ್​ ತಿನ್ನುವ ಆಸೆ ಹೆಚ್ಚಾಗುತ್ತದೆ. ಹೇಗಾದರೂ ಮಾಡಿ ದೇಹವನ್ನು ತಂಪಾಗಿರಿಸಿಕೊಳ್ಳಲು ಯೋಚನೆ ಮಾಡುವುದು ಸಹಜ. ಸಾಮಾನ್ಯವಾಗಿ ಎಲ್ಲಾ ಐಸ್​ಕ್ರೀಮ್​ಗಳನ್ನು ಟೇಸ್ಟ್​ ಮಾಡಿರುತ್ತಾರೆ. ಆದ್ರೆ ಈಗ ನೈಟ್ರೋಜನ್​ ಐಸ್​ಕ್ರೀಮ್​ನ ಕಾಲ. ಇದು ಬೆಂಗಳೂರಿಗೆ ಹೊಸತಾದರೂ ಗ್ರಾಹಕರು ಹೆಚ್ಚು ಖುಷ್​ ಆಗಿದ್ದಾರೆ.

" ನಾವು ಎಲ್ಲಾ ಐಸ್​ಕ್ರೀಮ್​ಗಳನ್ನು ಟೇಸ್ಟ್​ ಮಾಡಿದ್ದೇವೆ. ಫ್ಲೇವರ್​ಗಳು ಡಿಫರೆಂಟ್​ ಆಗಿರುತ್ತವೆ ಅನ್ನುವುದನ್ನು ಬಿಟ್ರೆ ಉಳಿದೆಲ್ಲವೂ ಸಾಮಾನ್ಯವಾಗಿರುತ್ತದೆ. ದುಡ್ಡು ಹೇಗೋ ಖರ್ಚಾಗುತ್ತದೆ. ಆದ್ರೆ ಟ್ರೆಂಡಿಯಾಗಿರುವ ನೈಟ್ರೋಜನ್​ ಐಸ್​ಕ್ರೀಮ್​ ಅನ್ನು ತಿಂದ್ರೆ ಮನಸ್ಸಿಗೆ ಖುಷಿಯಾಗುತ್ತದೆ. ವಿಭಿನ್ನ ಟೇಸ್ಟ್​ ಮತ್ತು ಟ್ರೆಂಡ್​ಗೆ ಹೊಂದಿಕೊಂಡ ನೆಮ್ಮದಿ ಕೂಡ ಸಿಗುತ್ತದೆ. "
- ದೀಪಾ, ಗ್ರಾಹಕಿ

ಅಂದಹಾಗೇ, ಟ್ರೆಂಡ್​ ಆಗಿರುವ ಐಸ್​ಕ್ರೀಮ್​ಗೆ ರೇಟ್​ ಹೆಚ್ಚಾಗಿರುತ್ತದೆ ಅನ್ನುವ ಟೆನ್ಷನ್​ ಬೇಡ. ಸದ್ಯಕ್ಕೆ ಇದು ಕೈಗೆಟಕುವ ದರದಲ್ಲೇ ಇದೆ. ಮುಂದಿನ ದಿನಗಳಲ್ಲಿ ಈ ರೀತಿಯ ವಿಭಿನ್ನ ಕಾನ್ಸೆಪ್ಟ್​ ಮತ್ತು ಟೇಸ್ಟ್​ಗಳನ್ನು ಹೊಂದಿರುವ ಟ್ರೆಂಡಿ ಐಸ್​ಕ್ರೀಮ್​ಗಳು ಮಾರುಕಟ್ಟೆ ಪ್ರವೇಶ ಪಡೆಯುವುದು ಸಹಜ.

ಇದನ್ನು ಓದಿ:

1. 1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್"

2. ಕ್ಯಾನ್ಸರ್​ ಪತ್ತೆ ಹಚ್ಚಲು ಹೊಸ ಉಪಕರಣ- ಮಹಾಮಾರಿಯನ್ನು ಓಡಿಸಲು ವೈದ್ಯಲೋಕದ ಪಣ

3. ಜವಾನನಾಗಿದ್ದವನು ಈಗ ಲಕ್ಷಾಧಿಪತಿ- ಶ್ಯಾಮ್ ನಿಷ್ಠೆಗೆ ಒಲಿದ ಬಹುಮಾನ


Add to
Shares
15
Comments
Share This
Add to
Shares
15
Comments
Share
Report an issue
Authors

Related Tags