ಆವೃತ್ತಿಗಳು
Kannada

ಯಾರಿಗೆ ಬಿ`ಹಾರ'..? ಆಪ್‍ನ ಆಶುತೋಷ್ ಭವಿಷ್ಯ

ಟೀಮ್​​ ವೈ.ಎಸ್​​.

22nd Oct 2015
Add to
Shares
5
Comments
Share This
Add to
Shares
5
Comments
Share

ಬಿಹಾರದಲ್ಲಿ ರಣ ಕಹಳೆ ಮೊಳಗಿದೆ. ಬಿಹಾರದ ಗದ್ದುಗೆಗಾಗಿ ಬಿಗ್ ಫೈಟ್ ನಡೀತಾ ಇದೆ. ಈ ರಣರಂಗದಲ್ಲಿ ಸೋಲು ಯಾರಿಗೆ? ಗೆಲುವು ಯಾರಿಗೆ? ಬಿಜೆಪಿಗೆ ಪ್ಲಸ್ ಪಾಯಿಂಟ್ ಯಾವುದು? ನಿತೀಶ್ ಹವಾ ವರ್ಕೌಟ್ ಆಗುತ್ತಾ ? ಈ ಎಲ್ಲ ಲೆಕ್ಕಾಚಾರಗಳ ಬಗ್ಗೆ ಎಎಪಿ ನಾಯಕ ಆಶುತೋಷ್ ಮಾತನಾಡಿದ್ದಾರೆ. ಬಿಹಾರದ ಭವಿಷ್ಯದ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆ. ಅವರ ಮನದ ಮಾತುಗಳನ್ನು ನೋಡೋಣ ಬನ್ನಿ..

ದೆಹಲಿ ವಿಧಾನಸಭೆ ಚುನಾವಣೆಯಲ್ಲಾದ ಹೀನಾಯ ಮುಖಭಂಗ ಬಿಜೆಪಿಯನ್ನು ಬಿಹಾರ ಎಲೆಕ್ಷನ್‍ನಲ್ಲೂ ಬೆಂಬಿಡದೆ ಕಾಡುತ್ತಿದೆ. ಇತಿಹಾಸದಿಂದ ಪಾಠ ಕಲಿಯದವರು ಮತ್ತದನ್ನು ಮರುಕಳಿಸುತ್ತಾರೆ. ಮೊದಲ ಬಾರಿ ದುರಂತವಾದ್ರೆ, ಎರಡನೇ ಬಾರಿ ಪ್ರಹಸನ ಎಂಬ ಮಾತೇ ಇದೆ. ಅದರಂತೆ ಕೇಸರಿ ಪಕ್ಷದಲ್ಲಿ ನಿಜವಾಗಿಯೂ ಬುದ್ಧಿವಂತಿಕೆಯಿದ್ದರೆ ದೆಹಲಿ ಚುನಾವಣೆಯಿಂದ ಪಾಠ ಕಲಿಯಬೇಕಿತ್ತು. ಬಿಹಾರ ಚುನಾವಣೆಗೆ ಕಾರ್ಯತಂತ್ರ ರೂಪಿಸಬೇಕಿತ್ತು. ಆದ್ರೆ ಬಿಹಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಾಲಿಗೆ ಮತ್ತೊಂದು ನಿರ್ಣಾಯಕ ಯುದ್ಧವಾಗಲಿದೆ.

image


ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರದಲ್ಲಿ ಮೋದಿ ಅವರಿಗೆ ಸಿಕ್ಕ ಗೆಲುವು ನಿಜವಾದ ದಿಗ್ವಿಜಯವಲ್ಲ. ಜನರು ಪರ್ಯಾಯ ಮಾರ್ಗವಿಲ್ಲದೆ ಕಮಲ ಪಕ್ಷವನ್ನು ಬೆಂಬಲಿಸಿದ್ದಾರೆ ಅನ್ನೋದು ಆಶುತೋಷ್ ಅವರ ಅಭಿಪ್ರಾಯ. ಆದರೆ ಯಾರೂ ಇದನ್ನು ಒಪ್ಪಲು ಆಗ ಸಿದ್ಧರಿರಲಿಲ್ಲ ಎನ್ನುತ್ತಾರೆ ಆಶುತೋಷ್. ಛಿದ್ರ ಛಿದ್ರವಾದ ರಾಜಕೀಯ ಪಕ್ಷಗಳು ಮತ್ತು ಅಸಮರ್ಪಕ ಆಡಳಿತದಿಂದ ಜನತೆ ಬೇಸತ್ತಿದ್ರು. ಮೋದಿ ಹಾಗೂ ಬಿಜೆಪಿಯಿಂದ ದೇಶದಲ್ಲಿ ಹೊಸ ಅಲೆ ಸೃಷ್ಟಿಯಾಗಬಹುದು, ಬದಲಾವಣೆಯ ಜೊತೆಗೆ ಅಭಿವೃದ್ಧಿಯೂ ಆಗಬಹುದು ಅನ್ನೋ ನಿರೀಕ್ಷೆ ಜನಸಾಮಾನ್ಯರಲ್ಲಿತ್ತು. ಹಾಗಾಗಿಯೇ ಜನ ಅವರ ಬಗ್ಗೆ ಭಾಗಶಃ ನಂಬಿಕೆ ಇಟ್ಟಿದ್ರು, ಆದ್ರೆ ಸಂಪೂರ್ಣ ಭರವಸೆ ಇರಲಿಲ್ಲ ಅನ್ನೋದು ಅಶುತೋಷ್ ಅವರ ವಾದ.

ಆದ್ರೆ ಹೆಹಲಿಯಲ್ಲಿ ರಾಜಕೀಯದ ಹಾವು ಏಣಿ ಆಟವೇ ಬೇರೆ. ಬದಲಾವಣೆಯ ಹೊಸ ಗಾಳಿಯೊಂದಿಗೆ ಎಎಪಿ ಜನರ ವಿಶ್ವಾಸವನ್ನು ಗಳಿಸಿದೆ. ವಿನೂತನ, ಪ್ರಾಮಾಣಿಕ ಹಾಗೂ ಸ್ವಚ್ಛ ರಾಜಕಾರಣದ ಬಗ್ಗೆ ಮಾತನಾಡುತ್ತಿದೆ. ಕೇವಲ ಮಾತಿನಲ್ಲಿ ಮಾತ್ರವಲ್ಲ ನುಡಿದಂತೆ ನಡೆದಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಸಾಬೀತುಪಡಿಸಿದೆ ಅಂತಾ ಆಶುತೋಷ್ ಹೆಮ್ಮೆಯಿಂದ ಹೇಳಿಕೊಳ್ತಾರೆ. 2013ರಲ್ಲಿ ಕೇವಲ 49 ದಿನಗಳ ಆಡಳಿತದ ಮೂಲಕ ಆಪ್ ಜನರ ವಿಶ್ವಾಸ ಗಳಿಸಿತ್ತು. ಈ ವಿಶ್ವಾಸದ ಪ್ರತಿಬಿಂಬವೇ ಚುನಾವಣಾ ಫಲಿತಾಂಶ ಎನ್ನುತ್ತಾರೆ ಅವರು.

ದೆಹಲಿ ಚುನಾವಣಾ ಫಲಿತಾಂಶದ ಮೂಲಕ ಆಮ್ ಆದ್ಮಿ ಪಕ್ಷ ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸ ಶಕೆಯನ್ನು ಆರಂಭಿಸಿದೆ. 2009ರಲ್ಲಿ ಕಾಂಗ್ರೆಸ್ 200 ಸ್ಥಾನಗಳನ್ನು ಪಡೆದು ಅಭೂತಪೂರ್ವ ಸಾಧನೆ ಮಾಡಿದ್ರೂ ಮನಮೋಹನ್ ಸಿಂಗ್ ಅವರಿಗೆ ಕೈ ಪಕ್ಷ ಅವಕಾಶ ಕೊಡಲಿಲ್ಲ ಅನ್ನೋದು ಆಶುತೋಷ್ ಅವರ ಬೇಸರದ ನುಡಿ. ದೆಹಲಿಯನ್ನು ಆರ್ಥಿಕವಾಗಿ ಸದೃಢಗೊಳಿಸಿದ ಮನಮೋಹನ್ ಸಿಂಗ್‍ರನ್ನು ಆಶುತೋಷ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಾಸ್ತವ ಚರ್ಚೆಯಾಗಬೇಕು, ಅದಕ್ಕೆ ತಕ್ಕಂಥ ಬದಲಾವಣೆಯಾಗಬೇಕೆಂದು ಜನರೇ ಬಯಸಿದ್ರು. ಅದರ ಆಧಾರದ ಮೇಲೆ ಮತ ಚಲಾಯಿಸಿದ್ದಾರೆ ಎಂದಿರುವ ಆಶುತೋಷ್ ಅದನ್ನು ಭಾರತೀಯ ಚುನಾವಣೆಯಲ್ಲಿನ ಆಧುನಿಕತೆ ಎಂದು ಬಣ್ಣಿಸಿದ್ದಾರೆ.

image


ಇಷ್ಟು ವರ್ಷಗಳ ಕಾಲ ಇದ್ದ ಸಾಂಪ್ರದಾಯಿಕ ಮತದಾನಕ್ಕೆ ದೆಹಲಿ ಮತದಾರ ಎಳ್ಳುನೀರು ಬಿಟ್ಟಿದ್ದಾನೆ. ಅರ್ಥಾತ್ ಹಣ, ಹೆಂಡ, ಜಾತಿ, ಧರ್ಮ ಹಾಗೂ ಆಮಿಷಕ್ಕೆ ಬಲಿಯಾಗದೇ ಸ್ವತಂತ್ರವಾಗಿ ತನ್ನ ಹಕ್ಕನ್ನು ಚಲಾಯಿಸಿದ್ದಾನೆ. ಇಷ್ಟು ವರ್ಷಗಳ ಕಾಲ ಶೇಕಡಾ 4-6ರಷ್ಟು ಮತದಾರರದ್ದು ತೇಲುವ ಮತಗಳೇ. ಅಂದ್ರೆ ಕೊನೆ ಕ್ಷಣದಲ್ಲಿ ಗೊಂದಲಕ್ಕೊಳಗಾಗಿ ವಿವೇಚನೆಯಿಲ್ಲದೆ ಮತ ಹಾಕುತ್ತಿದ್ರು. ಆದ್ರೆ ದೆಹಲಿಯಲ್ಲಿ ಅದಕ್ಕೆಲ್ಲ ಪೂರ್ಣ ವಿರಾಮ ಬಿದ್ದಿದೆ. ಅಣ್ಣಾ ಹಜಾರೆ ಅವರ ಆಂದೋಲನವನ್ನು ಬೆಂಬಲಿಸಿಸುವ ಮೂಲಕ ಜನರು ಬದಲಾವಣೆಗೆ ತೆರೆದುಕೊಂಡಿದ್ದಾರೆ ಅನ್ನೋದು ಆಶುತೋಷ್ ಅವರ ಅಭಿಪ್ರಾಯ. ಆದ್ರೆ ನರೇಂದ್ರ ಮೋದಿ ತಮ್ಮ ಚಾಣಾಕ್ಷ ಮಾತುಗಳಿಂದ್ಲೇ ಜನರಿಗೆ ಮೋಡಿ ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ವಾಗ್ದಾನ ಮಾಡಿ ಪ್ರಧಾನಿ ಕುರ್ಚಿ ಏರಿದ್ದಾರೆ ಅನ್ನೋದನ್ನ ನೆನಪಿಸಲು ಆಶುತೋಷ್ ಮರೆತಿಲ್ಲ. ಆದ್ರೆ ಚುನಾವಣೆ ಬಳಿಕ ಮೋದಿ ಅವರ ವರಸೆ ಬದಲಾಗಿದೆ. ಯಾವುದೋ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಮೋ ಅವರ ಸ್ನೇಹಿತರೇ ಮಾತನಾಡ್ತಾರೆ. ಅವರ ಬಾಯಿಮುಚ್ಚಿಸಬೇಕಾದ ಕೆಲಸವನ್ನು ಮೋದಿ ಮಾಡಿಲ್ಲ ಎನ್ನುತ್ತಾರೆ ಆಶುತೋಷ್.

ದೆಹಲಿ ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಪ್ರಚಾರ ವೈಖರಿ, ಅರವಿಂದ್ ಕೇಜ್ರಿವಾಲ್‍ರನ್ನು ಜರಿದ ರೀತಿ ಯಾವುದೂ ಮತದಾರರನ್ನು ಸೆಳೆದಿಲ್ಲ. ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಜನರ ಮನಗೆದ್ದಿವೆ. ಜನರಿಗೆ ನಿಜವಾಗಿಯೂ ಬೇಕಾದ ಪರ್ಯಾಯ ಆಯ್ಕೆ ಅಂದ್ರೆ ಆಪ್. ತಮ್ಮ ವಾದಕ್ಕೆ ಫಲಿತಾಂಶವೇ ಸಾಕ್ಷಿ ಎನ್ನುತ್ತಾರೆ ಆಶುತೋಷ್. ಅತ್ತ ಬಿಹಾರದಲ್ಲೂ ಬಿಜೆಪಿಗೆ ಇದೇ ಪರಿಸ್ಥಿತಿ. ಅಲ್ಲಿನ ಜನತೆ ನಿತೀಶ್ ಕುಮಾರ್ ಅವರ ಮೇಲೆ ಅಚಲ ವಿಶ್ವಾಸ ಇಟ್ಟಿದ್ದಾರೆ. ಕಳೆದ 9 ವರ್ಷಗಳಿಂದ ಬಿಹಾರವನ್ನು ಆಳುತ್ತಿರುವ ನಿತೀಶ್ ಕುಮಾರ್ ಅವರೇ ಮೋದಿಗಿಂತಲೂ ಅಲ್ಲಿ ಜನಪ್ರಿಯ ಎನ್ನುತ್ತಾರವರು.

ಇದು ನಿಜಕ್ಕೂ ಭಾರತದ ರಾಜಕೀಯಲ್ಲಿನ ಆಮೂಲಾಗ್ರ ಬದಲಾವಣೆ. ನಿತೀಶ್ ಕುಮಾರ್ ಅವರ ಜನಪ್ರಿಯತೆ ಹಾಗೂ ಎಲ್ಲ ವರ್ಗ ಹಾಗೂ ಸಮುದಾಯದ ಜನರನ್ನು ಒಪ್ಪಿಕೊಳ್ಳುವ ಮನೋಭಾವವೇ ಅವರ ಪಕ್ಷಕ್ಕೆ ಬಂಡವಾಳ. ಜಾತಿ ಬಗ್ಗೆ ಮಾತನಾಡದೇ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿರುವ ನಿತೀಶ್ ಅವರಿಗೆ ಜನಬೆಂಬಲ ಸಿಗುವುದರಲ್ಲಿ ಅನುಮಾನವೇ ಇಲ್ಲ. ಲಾಲೂ ಪ್ರಸಾದ್ ಯಾದವ್ ಅವರ ಆರ್‍ಜೆಡಿ ಪಕ್ಷದ ಜೊತೆಗಿನ ಮೈತ್ರಿಯಿಂದ ಮತ್ತಷ್ಟು ಮತಗಳು ಅವರ ಪಾಲಾಗಲಿವೆ. ಆದ್ರೆ ದ್ವಂದ್ವ ಮನಸ್ಸಿನ ಶೇಕಡಾ 10ರಷ್ಟು ಮತದಾರರ ಪಾತ್ರವೇ ನಿರ್ಣಾಯಕ ಅನ್ನೋದು ಆಶುತೋಷ್ ಅವರ ಲೆಕ್ಕಾಚಾರ. ಅವರೆಲ್ಲ 2014ರಲ್ಲಿ ಮೋದಿ ಅವರ ಬೆನ್ನಿಗಿದ್ರು. ಈ ಬಾರಿ ಕೂಡ ಮೋದಿ ಮೇಲುಜಾತಿ-ಕೀಳು ಜಾತಿ, ಮಾಂಸ ನಿಷೇಧ, ಮೀಸಲಾತಿ , ಹಿಂದು-ಮುಸ್ಲಿಂ, ದಲಿತ-ಮಹಾದಲಿತ ಎಂಬೆಲ್ಲ ವಿಚಾರಗಳ ಬಗ್ಗೆ ಮಾತನಾಡ್ತಿದ್ದಾರೆ. ಹಾಗಾಗಿ ನೇರ ನುಡಿಯ ಮೋದಿ ಅವರ ಹೊಸ ವರಸೆ ಮತದಾರರಲ್ಲಿ ಅವಿಶ್ವಾಸ ಮೂಡಿಸಬಹುದು. ಆದ್ರೆ ಇದರಿಂದ ಬಿಹಾರದಲ್ಲಿ ಭಾರತೀಯ ಚುನಾವಣೆಯ ಆಧುನೀಕರಣದ ಪ್ರಕ್ರಿಯೆ ನಿಲ್ಲುವುದಿಲ್ಲ. ಇದು ಮತ್ತಷ್ಟು ಮೊನಚಾಗಲಿದೆ. ನಮ್ಮ ನಿಮ್ಮೆಲ್ಲರಿಗೂ ಪಾಠವಾಗಲಿದೆ ಅನ್ನೋದು ಆಪ್ ಮುಖಂಡ ಆಶುತೋಷ್ ಅವರ ಬಿಚ್ಚು ಮಾತು.

Add to
Shares
5
Comments
Share This
Add to
Shares
5
Comments
Share
Report an issue
Authors

Related Tags