ಆವೃತ್ತಿಗಳು
Kannada

ಗುಜರಾತ್​​ನಲ್ಲಿದೆ ದೇಶದ ಮೊತ್ತಮೊದಲ ಕ್ಯಾಶ್​​ಲೆಸ್ ಟೌನ್​ಶಿಪ್

ಟೀಮ್​ ವೈ.ಎಸ್​. ಕನ್ನಡ

14th Feb 2017
Add to
Shares
19
Comments
Share This
Add to
Shares
19
Comments
Share

ಕ್ಯಾಶ್​​ಲೆಸ್ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಡಿಜಿಟಲ್ ಇಂಡಿಯಾದ ಕನಸು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಭಾರತದ ಪ್ರತಿಯೊಂದು ಗ್ರಾಮಗಳು ಕೂಡ ಪ್ರಧಾನಿ ನರೇಂದ್ರ ಮೋದಿಯ ಕನಸನ್ನು ನನಸು ಮಾಡಲು ಶ್ರಮ ಪಡುತ್ತಿವೆ. ಈಗ ಗುಜರಾತ್​​ನ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ (GNFC) ಟೌನ್​ಶಿಪ್​ನ ಸರದಿ. ಭರೂಚ್ ಜಿಲ್ಲೆಯಲ್ಲಿರುವ GNFC ದೇಶದ ಮೊತ್ತಮೊದಲ ಕ್ಯಾಶ್​ಲೆಸ್​​ ಟೌನ್​ಶಿಪ್ ಅನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. GNFCಯಲ್ಲಿರುವ 10000ಕ್ಕೂ ಅಧಿಕ ಜನರು ಕ್ಯಾಶ್ ವ್ಯವಹಾರದ ಬದಲು, ಕ್ಯಾಶ್​ಲೆಸ್​​ ವ್ಯವಹಾರದ ಕಡೆಗೆ ಹೆಚ್ಚು ಮನಸ್ಸು ಮಾಡಿದ್ದಾರೆ.

image


ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ GNFCಯನ್ನು ದೇಶದ ಮೊದಲ ಕ್ಯಾಶ್​ಲೆಸ್ ಟೌನ್​ಶಿಪ್ ಅಂತ ಘೋಷಿಸಿದ್ರು. ಅಷ್ಟೇ ಅಲ್ಲ ಶೀಘ್ರದಲ್ಲೇ ಇಂಡಿಯಾ ಡಿಜಿಟಲ್ ಆಗಲಿದೆ ಅನ್ನುವ ಭರವಸೆಯನ್ನು ವ್ಯಕ್ತಪಡಿಸಿದ್ರು. ಗುಜರಾತ್​ನಿಂದಲೇ ಇತಿಹಾಸ ಆರಂಭವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ರು.

“ GNFC ಟೌನ್​ಶಿಪ್ ದೇಶದ ಮೊದಲ ಕ್ಯಾಶ್​ಲೆಸ್ ಟೌನ್​ಶಿಪ್. GNFCಯ ಜನರು ತೆಗೆದುಕೊಂಡಿರುವ ನಿರ್ಧಾರ ನನಗೆ ಸಂತೋಷ ನೀಡಿದೆ. ದೇಶದ ಇನ್ನುಳಿದ 180 ಟೌನ್​ಶಿಪ್​​ಗಳು ಕೂಡ ಶೀಘ್ರದಲ್ಲೇ ಕ್ಯಾಶ್​ಲೆಸ್ ವ್ಯವಹಾರದ ಕಡೆ ಗಮನ ಕೊಡಲಿವೆ. ಗುಜರಾತ್ ರಾಜ್ಯದ ಭರೂಚ್ ಜಿಲ್ಲೆಯ GNFC ಐತಿಹಾಸಿಕ ಹೆಜ್ಜೆ ಇಟ್ಟಿದೆ.”
- ವಿಜಯ್ ರೂಪನಿ, ಗುಜರಾತ್ ಮುಖ್ಯಮಂತ್ರಿ

GNFCಯಲ್ಲಿ ವಾಸ ಮಾಡುತ್ತಿರುವ ಜನರು ಇಡೀ ದೇಶಕ್ಕೆ ಮಾದರಿ ಆಗಿದ್ದಾರೆ. GNFCಯ ಜನರು ಶಾಪಿಂಗ್ ಸೆಂಟರ್, ಶಾಲೆ, ಕಾಲೇಜು, ಆಸ್ಪತ್ರೆ, ಸ್ಟೇಡಿಯಂ,ಲಾಂಡ್ರಿ, ಟೀ ಸ್ಟಾಲ್ ಹೀಗೆ ಎಲ್ಲಾ ಕಡೆಯಲ್ಲೂ ನಗದು ವ್ಯವಹಾರ ಮಾಡುವ ಬದಲು ಕ್ಯಾಶ್​ಲೆಸ್ ವ್ಯವಹಾರ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ಕನಸನ್ನು ಈ ಮೂಲಕ ನನಸು ಮಾಡಲು ಜನ ಶ್ರಮಿಸುತ್ತಿದ್ದಾರೆ.

ಇದನ್ನು ಓದಿ: ಒಂದೇ ಕ್ಲಿಕ್​- ಒಂದೇ ಮೆಸೇಜ್​​- ನಿಮ್ಮ ಮನೆ ಬಾಗಿಲಲ್ಲೇ ಇರುತ್ತೆ ತರಕಾರಿ ವ್ಯಾನ್​..!

ಇತ್ತೀಚೆಗೆ ಅರೇಬಿಯಮ್ ಸಮುದ್ರದಲ್ಲಿರುವ ಚಿಕ್ಕ ಕೇಂದ್ರಾಡಳಿತ ಪ್ರದೇಶ ದಮನ್ ಅಂಡ್ ದಿಯು ದೇಶದ ಮೊದಲ ಕ್ಯಾಶ್​​ಲೆಸ್ ರೀಜನ್ ಅನ್ನುವ ದಾಖಲೆ ಬರೆದಿತ್ತು. ಅಲ್ಲಿನ ಸ್ಥಳೀಯ ಆಡಳಿತ ಫ್ರೀ ವೈ-ಫೈ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿತ್ತು. ಕಳೆದ 45 ದಿನಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 32000 ಟೂರಿಸ್ಟ್​​ಗಳು 3500 ಜಿ.ಬಿ ಡೇಟಾವನ್ನು ಉಪಯೋಗಿಸಿದ್ದಾರೆ. ಸ್ಥಳೀಯ ಆಡಳಿತದ ಈ ಕ್ರಮವನ್ನು ಸಾಕಷ್ಟು ಜನರು ಹಾಡಿ ಹೊಗಳಿದ್ದರು. ಸರ್ಕಾರದ ಡಿಜಿಟಲ್ ಇಂಡಿಯಾ ಮತ್ತು ಇ-ಟ್ರಾನ್ಸ್ಆ್ಯಕ್ಷನ್ ಕನಸಿಗೆ ಇದು ದೊಡ್ಡ ವಿಶ್ವಾಸ ಕೂಡ ತುಂಬಿತ್ತು.

ಗುಜರಾತ್​​ನ ಸಬರಕಾಂತ್ ಜಿಲ್ಲೆಯ ಅಕೋಡರಾ ಈಗಾಗಲೇ ದೇಶದ ಮೊತ್ತಮೊದಲ ಡಿಜಿಟಲ್ ಗ್ರಾಮ ಅನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಅಹ್ಮದಾಬಾದ್​​ನಿಂದ ಕೇವಲ 90 ಕಿಲೋಮೀಟರ್ ದೂರದಲ್ಲಿರುವ ಅಕೋಡಾ ಕ್ಯಾಶ್​ಲೆಸ್ ವ್ಯವಸ್ಥೆಯಿಂದಾಗಿ, ನೋಟ್ ಬ್ಯಾನ್ ಆದ ಬಳಿಕವೂ ಸಹಜ ಸ್ಥಿತಿಯಲ್ಲೇ ಇತ್ತು. ದೇಶ ಡಿಜಿಟಲೀಕರಣವಾಗುತ್ತಿರುವುದು ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳಲ್ಲಿ ಉನ್ನತಿ ಸಾಧಿಸಲು ನೆರವಾಗಲಿದೆ. 

ಇದನ್ನು ಓದಿ:

1. ಬಾಹ್ಯಾಕಾಶದ ಮೇಲೆ ಹೆಜ್ಜೆಯಿಡಲಿದ್ದಾಳೆ ಗಗನಯಾತ್ರಿ: ಶವ್ನಾ ಪಾಂಡ್ಯಾ ಭಾರತದ ಹೆಮ್ಮೆಯ ಪುತ್ರಿ 

2. ಮಹಿಳೆಯರ ಒಳಿತಾಗಿ ಎದ್ದು ನಿಂತ ನಾರಿಯರು- "ಸ್ಕಿಲ್ ಶ್ರೀ"ನಿಂದ ಹೆಣ್ಣುಮಕ್ಕಳ ಜೀವನಕ್ಕೆ ಶ್ರೀಕಾರ 

3. “ಪಂಕ್ಚರ್ ಪ್ಲಾನರ್”ಗಳಿಗೆ ಪಾಠ ಕಲಿಸಿದ ಎಂಜಿನಿಯರ್- ರಸ್ತೆಯಿಂದ ಮೊಳೆ ಹೆಕ್ಕಿದ ಸಾಧಕ..!

Add to
Shares
19
Comments
Share This
Add to
Shares
19
Comments
Share
Report an issue
Authors

Related Tags