ಆವೃತ್ತಿಗಳು
Kannada

ರಾಷ್ಟ್ರೀಯತೆಯ ಹೆಸರಿನಲ್ಲಿ ಸಿದ್ಧಾಂತಗಳ ಸಂಘರ್ಷ- ಕಾನೂನು ಮರೆತಿರುವ ವಿದ್ಯಾರ್ಥಿಗಳು

ಟೀಮ್​ ವೈ.ಎಸ್. ಕನ್ನಡ

YourStory Kannada
3rd Mar 2017
Add to
Shares
1
Comments
Share This
Add to
Shares
1
Comments
Share

ರಾಂಜಸ್ ಕಾಲೇಜಿನ ಘಟನೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಟ್ಟ ರಾಜಕೀಯದ ಆಟಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅಷ್ಟು ಮಾತ್ರವಲ್ಲ ಸಮಾಜ ಯಾವ ಹಾದಿಯಲ್ಲಿ ಸಾಗುತ್ತಿದೆ ಅನ್ನುವ ಬಗ್ಗೆ ಭಯವಾಗುತ್ತಿದೆ. ಮೇಲ್ನೋಟಕ್ಕೆ ಇದೊಂದು ಅತ್ಯಂತ ಚಿಕ್ಕ ಘಟನೆ. ಎಲ್ಲಾ ಕಾಲೇಜಿನಲ್ಲಿ ನಡೆಯುವಂತೆ ನಡೆದ ಸೆಮಿನಾರ್ ಅಷ್ಟೇ. ಆದ್ರೆ ಕೆಲವರಿಗೆ ಅಲ್ಲಿಗೆ ಕರೆಸಿದ ಅತಿಥಿಗಳು ರಾಷ್ಟ್ರದ್ರೋಹಿಗಳಂತೆ ಕಂಡರು. ಅಲ್ಲಿಗೆ ಬಂದ ಅತಿಥಿ ಮೇಲಿನ ಕೇಸ್ ಇನ್ನೂ ಕೂಡ ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ. ಅದರ ಬಗ್ಗೆ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ಆದ್ರೆ ಕೆಲವರ ದೃಷ್ಟಿಯಲ್ಲಿ ಆತ ಈಗಲೇ ಅಪರಾಧಿ. ಇಲ್ಲಿ ಮೂರು ಮೂಲಭೂತ ಪ್ರಶ್ನೆಗಳಿವೆ. ಮೊದಲನೆಯದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದು. ಎರಡನೇಯದ್ದು ಒಬ್ಬ ವ್ಯಕ್ತಿ ಅಪರಾಧ ಮಾಡಿದ್ದಾನೋ ಇಲ್ವೋ ಅನ್ನೋದನ್ನ ನಿರ್ಧಾರ ಮಾಡಲು ಅವಕಾಶ ಕೊಟ್ಟಿದ್ದು ಯಾರು..? ಮೂರನೆಯದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡವರಿಗೆ ಶಿಕ್ಷೆ ನೀಡುವವರು ಯಾರು..?

image


ರಾಂಜಾಸ್ ಕಾಲೇಜಿನಲ್ಲಿ ಒಂದು ಸೆಮಿನಾರ್ ನಡೆದಿದ್ದೇ ದೊಡ್ಡ ರಾದ್ಧಾಂತವಾಗಿದೆ. ಭಾರತ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಅನ್ನುವ ಆರೋಪ ಇರುವ ಮಾತ್ರಕ್ಕೆ ಆ ವ್ಯಕ್ತಿ ವಿರುದ್ಧ ಇಷ್ಟೆಲ್ಲಾ ನಡೆದಿದೆ. ಕೋರ್ಟ್​ಗಿಂತಲೂ ಮೊದಲು ಇವರೇ ಅಂತಿಮ ನಿರ್ಧಾರ ಹೊರಹಾಕಿದ್ದಾರೆ. ಇದೊಂದು ರೀತಿಯಲ್ಲಿ ವ್ಯಕ್ತಿ ವಿರುದ್ಧ ಹೂಡಿರುವ ಸಾಂಘೀಕ ಹೋರಾಟ. ಕಾನೂನಿನಲ್ಲಿ ಯಾರೂ ಕೂಡ ಒಬ್ಬನನ್ನು ಕೋರ್ಟ್ ಬಿಟ್ಟು ಹೊರಗೆ ಅಪರಾಧಿ ಅನ್ನುವಂತೆ ಬಿಂಬಿಸುವಂತಿಲ್ಲ. ತಪ್ಪಿತಸ್ಥ ಹೌದೋ ಅಲ್ವೋ ಅನ್ನುವುದನ್ನುಕೋರ್ಟ್ ಮಾತ್ರ ನಿರ್ಧಾರ ಮಾಡುತ್ತದೆ. ಆದ್ರೆ ಇಲ್ಲಿ ಪ್ರಜೆಯೊಬ್ಬನ ರಾಷ್ಟ್ರೀಯತೆಯನ್ನು ಕೂಡ ಕಸಿದುಕೊಳ್ಳಲಾಗಿದೆ.

ಇದನ್ನು ಓದಿ: ವಯಸ್ಸಾದ ಮೇಲೂ ಅದ್ಭುತ ಕನಸು ಕಾಣಬಹುದು..!

ಇದು ವಿಚಿತ್ರ ಮತ್ತು ಅಪಾಯಕಾರಿ. ಇದು ಹೀಗೇ ಮುಂದುವರೆದ್ರೆ ಮುಂದೊಂದು ದಿನ ಯಾರು ಕೂಡ ಸ್ವತಂತ್ರವಾಗಿ ಮಾತನಾಡಲು ಅಥವಾ ಅನಿಸಿಕೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇವತ್ತಿನ ಮೊಬೈಲ್ ಜಮಾನ ಕೂಡ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕಡಿವಾಣ ಹಾಕುತ್ತಿದೆ. ಸ್ವತಂತ್ರ ಅನಿಸಿಕೆಗಳೇ ಇಲ್ಲದೇ ಆಗುವ ಅಪಾಯ ಇದೆ. ಕಲೆ ಅಥವಾ ಪೇಯಿಂಟಿಂಗ್ ಅಂದುಕೊಂಡ ಹಾಗೇ ಚಿತ್ರಿಸಲು ಸಾಧ್ಯವಿಲ್ಲ. ಚಲನಚಿತ್ರ ಸಿಗುವುದಿಲ್ಲ. ಶಿಕ್ಷಣ ಕೂಡ ಉತ್ಕೃಷ್ಟ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಹೊಸ ಅನ್ವೇಷಣೆ ಸಾಧ್ಯವೇ ಇಲ್ಲ ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡುವುದಿಲ್ಲ. ಯಾಕಂದ್ರೆ ಅಂತಹ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲ. ಒಂದು ವೇಳೆ ಅನಿಸಿಕೆ ವ್ಯಕ್ತಪಡಿಸಿದರೆ ಅದಕ್ಕೆ ಶಿಕ್ಷೆಯಾಗುವುದು ಗ್ಯಾರೆಂಟಿ. ರಾಷ್ಟ್ರೀಯತೆಯ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದು ಇಡೀ ದೇಶವನ್ನು ಕಟ್ಟಿಹಾಕುವ ಕೆಲಸ ನಡೆಯುತ್ತಿದೆ.

ಭಾರತದ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದ್ರೆ ಅದು ಪರಿಪೂರ್ಣ ಸ್ವಾತಂತ್ರ್ಯದಿಂದ ಕೂಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯೂ ಅಷ್ಟೇ. ಅದಕ್ಕೊಂದು ಪರಿಮಿತಿ ಇದ್ದೇ ಇದೆ. ಆದ್ರೆ ಆ ಕಟ್ಟುಪಾಡಿಗೆ ಒಂದು ಕಾರಣವೂ ಇದೆ. ಕಾನೂನಿನಲ್ಲಿ ಮತ್ತೊಬ್ಬರ ಧರ್ಮ, ಹೆಸರು, ಜಾತಿ ಮತ್ತು ಧರ್ಮವನ್ನು ಹೇಳುವಂತಿಲ್ಲ. ಸಮಾಜಘಾತುಕವಾಗಿ ನಡೆದುಕೊಳ್ಳುವ ಹಾಗಿಲ್ಲ. ಆದ್ರೂ ನಿಮಗೆ ಸ್ವಾತಂತ್ರ್ಯ ಇದ್ದೇ ಇದೆ. ಆದ್ರೆ ರಾಂಜಸ್ ಘಟನೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಸಿದುಕೊಂಡಂತಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು 1975ರಲ್ಲಿ ಇಂದಿರಾಗಾಂಧಿ ಸರ್ಕಾರ ಹೇರಿದ್ದ ತುರ್ತುಪರಿಸ್ಥಿತಿಗೆ ಸಮ ಅನ್ನುವುದರಲ್ಲಿ ಎರಡು ಮಾತಿಲ್ಲ.

ಮುಂದಿನ ಅತೀ ದೊಡ್ಡ ಪ್ರಶ್ನೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದ್ದಾರೆ ಅನ್ನುವ ಬಗ್ಗೆ ನಿರ್ಧಾರ ಮಾಡುವವರು ಯಾರು ಅನ್ನುವುದು. ಕಾನೂನಿನ ಪ್ರಕಾರ ಪೊಲೀಸ್ ದೂರು ದಾಖಲಿಸಿಕೊಂಡು ಕೇಸ್ ಫೈಲ್ ಮಾಡಿ, ಆಧಾರ ಸಹಿತವಾಗಿ ಕೋರ್ಟ್​ಗೆ ನೀಡಬೇಕು. ಅಲ್ಲಿ ನ್ಯಾಯತೀರ್ಮಾನ ನಡೆಯುತ್ತದೆ. ಕೆಲವೊಮ್ಮೆ ಕೋರ್ಟ್ ತಾನೇ ಕೇಸು ದಾಖಲಿಸಿಕೊಳ್ಳಬಹುದು. ಆದ್ರೆ ರಾಂಜಸ್​ನಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಇದನ್ನು ನಿರ್ಧರಿಸಿ ಅಂತಿಮ ತೀರ್ಮಾನ ಮಾಡಿದ್ದಾರೆ. ಪೊಲೀಸ್, ಕೋರ್ಟ್ ಹೀಗೆ ಎಲ್ಲಾ ಕೆಲಸವನ್ನು ತಾವೇ ಮಾಡಿ ಮುಗಿಸಿದ್ದಾರೆ. ಸೆಮಿನಾರ್ ಆಯೋಸಿದವರಿಗೆ ಪಾಠ ಕಲಿಸಲು ಎಬಿವಿಪಿ ವಿದ್ಯಾರ್ಥಿಗಳು ಈ ರೀತಿ ಮಾಡಿದ್ದಾರೆ. ಗಲಾಟೆ ನಡೆಸಿದ್ದಾರೆ. ಇದು ಕಾನೂನನ್ನು ಕಾಪಾಡಿದ್ದು ಅಲ್ಲ, ಅದನ್ನು ಉಲ್ಲಂಘನೆ ಮಾಡಿದ್ದರು. ಲಾ ಅಂಡ್ ಆರ್ಡರ್​ಗೆ ಸಮಸ್ಯೆ ತರುತ್ತೆ ಅಂದ್ರೆ ಕೇವಲ ಪೊಲೀಸರಿಗೆ ಮಾತ್ರ ಸೆಮಿನಾರ್ ನಿಲ್ಲಿಸುವ ಅಧಿಕಾರವಿತ್ತು. ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಕೇವಲ ಪ್ರೇಕ್ಷಕರಾಗಿದ್ದು ವಿಪರ್ಯಾಸ. ವಿದ್ಯಾರ್ಥಿಗಳ ಗಲಾಟೆಯನ್ನು ಪೊಲೀಸರು ತಡೆಯುವ ಪ್ರಯತ್ನ ಕೂಡ ಮಾಡಲಿಲ್ಲ. ರಾಷ್ಟ್ರೀಯತೆ ಬಗ್ಗೆ ಮಾತನಾಡುವ ಎಬಿವಿಪಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ.

ಕಳೆದ ವರ್ಷ ಜೆಎನ್​ಯುನಲ್ಲಿ ಆ್ಯಂಟಿ ಇಂಡಿಯಾ ಎಲಮೆಂಟ್​ಗಳು ಕಾರ್ಯನಿರ್ವಹಿಸುತ್ತಿವೆ ಅನ್ನುವ ಕಾರಣಕ್ಕೆ ಗಲಾಟೆ ನಡೆದಿತ್ತು. ಜೆಎನ್​ಯು ರಾಷ್ಟ್ರ ವಿರೋಧಿ ಘೋಷಣೆಗಳಿಗೆ ವೇದಿಕೆ ಆಗಿದ್ದು ಟಿವಿ ಚಾನೆಲ್​ಗಳಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಕನ್ಹಯ್ಯಕುಮಾರ್ ಸೇರಿಂತೆ ಹಲವು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಕೋರ್ಟ್ ಆವರಣದಲ್ಲೇ, ಹಿರಿಯ ವಕೀಲರ ಮುಂದೆ ಕನ್ಹಯ್ಯರನ್ನು ಥಳಿಸಲಾಯಿತು. ಅಚ್ಚರಿ ಅಂದ್ರೆ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದ 8 ವಿದ್ಯಾರ್ಥಿಗಳನ್ನು ಬಂಧಿಸಲಿಲ್ಲ. ಶಿಕ್ಷೆ ಕೂಡ ನೀಡಲಿಲ್ಲ. ಈಗ ಪೊಲೀಸ್ ರಿಪೋರ್ಟ್​ನಲ್ಲಿ ಕನ್ಹಯ್ಯ ಕುಮಾರ್ ರಾಷ್ಟ್ರ ವಿರೋಧಿ ಘೋಷಣೆ ಕೂಗಿಲ್ಲ ಅಂತ ಹೇಳಲಾಗಿದೆ. ಈ ಘಟನೆಯಲ್ಲೂ ಕೋರ್ಟ್, ನ್ಯಾಯ ಮತ್ತು ನ್ಯಾಯಲಯವನ್ನು ಮರೆತು ಕಾನೂನುಗಳನ್ನು ವಿದ್ಯಾರ್ಥಿಗಳೇ ಕೈಗೆತ್ತಿಕೊಂಡಿದ್ದರು. ಬಲಪಂಥೀಯರಿಗೆ ಮಿಡಿಯಾಗಳೇ ಎಲ್ಲವೂ ಆಗಿತ್ತು. ಇದು ಹೀಗೇ ಮುಂದುವರೆದ್ರೆ ಮುಂದೊಂದು ದಿನ, ಪೊಲೀಸ್ ಮತ್ತು ಕೋರ್ಟ್ ಬೇಡ ಅನ್ನುವ ದಿನ ಎದುರಾಗುವ ದಿನ ದೂರವಿಲ್ಲ.ಜನ ಯಾವಗ ಬೇಕೋ ಆವಗಾ, ಎಷ್ಟು ಹೊತ್ತಿಗೆ ಬೇಕೋ ಅಷ್ಟು ಹೊತ್ತಿಗೆ ನ್ಯಾಯ ತೀರ್ಮಾನ ಮಾಡುವ ಅಪಾಯವೂ ಇದ್ದೇ ಇದೆ.

ಕಳೆದ ಎರಡು ವರ್ಷಗಳಲ್ಲಿ ಹೊಸ ಮಗು ಹುಟ್ಟಿದೆ. ಅದರ ಹೆಸರು ರಾಷ್ಟ್ರೀಯತೆ. ಚಿಕ್ಕದನ್ನೂ ದೊಡ್ಡದಾಗಿ ಬಿಂಬಿಸುವುದೇ ಇವರ ಕೆಲಸ. ಇವರಿಗೆ ಸರ್ಕಾರ ಸೇರಿದಂತೆ ಹಲವು ಸಂಸ್ಥೆಗಳು ಕಾಣದ ಕೈಗಳಂತೆ ಬೆಂಬಲ ನೀಡುತ್ತಿವೆ. ಸಿದ್ಧಾಂತಗಳ ಸಂಘರ್ಷಕ್ಕೆ ಕೆಲವರು ವೇದಿಕೆ ಮಾಡಿಕೊಡುತ್ತಿದ್ದಾರೆ. ದಿನಕಳೆದಂತೆ ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಬಲ ಪಂಥೀಯ ಮತ್ತು ಎಡ ಪಂಥೀಯರ ನಡುವೆ ಕೈ ಕೈ ಮಿಲಾಯಿಸುವ ದಿನ ಎದುರಾಗಿದೆ. ಆದ್ರೆ ಅವರ್ಯಾರೂ ಸಿದ್ಧಾಂತದ ಬೆನ್ನು ಬಿದ್ದಿಲ್ಲ. ಬದಲಾಗಿ ರಾಷ್ಟ್ರೀಯತೆಯ ಹೆಸರು ಹೇಳಿಕೊಂಡು ಕಾನೂನು ಕೈಗೆ ತೆಗೆದಯಕೊಳ್ಳುತ್ತಿದ್ದಾರೆ. ನಿಜವಾದ ತಪ್ಪಿತಸ್ಥರಿಗೆ ಎಲ್ಲೂ ಶಿಕ್ಷೆ ಆಗುತ್ತಿಲ್ಲ. ಆದ್ರೆ ವಿರೋಧ ವ್ಯಕ್ತಪಡಿಸಿದವನನ್ನು ಸುಮ್ಮನೆ ಬಿಡುತ್ತಿಲ್ಲ.

ರಾಂಜಸ್ ಘಟನೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಲು ಹಿಂದೆಮುಂದೆ ನೋಡುತ್ತಿದೆ. ಪೊಲೀಸರು ಕೂಡ ಸರ್ಕಾರದ ಕೈಗೊಂಬೆಗಳಾಗಿದ್ದು ವಿಪರ್ಯಾಸ. ನಾನು ಭಾರತದಲ್ಲಿ ರಕ್ಷಣೆ ಇಲ್ಲ ಅಂತ ಹೇಳಲು ಇಷ್ಟಪಡುವುದಿಲ್ಲ. ಆದ್ರೆ ಸಿದ್ಧಾಂತಗಳ ನಡುವಿನ ಸಂಘರ್ಷ ಮಾತ್ರ ತುತ್ತತುದಿ ತಲುಪಿದೆ.

ಲೇಖಕರು: ಅಶುತೋಷ್ 

ಇದನ್ನು ಓದಿ:

1. ಪ್ರತಿಯೊಬ್ಬರ ಹೆಜ್ಜೆಗೂ "ಗೆಜ್ಜೆ"ಕಟ್ಟುವ ರೂಪಿಕಾ

2. ಕನ್ನಡ ಶಾಲೆಗಳಿಗೆ "ಶ್ರೀನಿವಾಸ"ಕೃಪೆ..!

3. ತಿಂಡಿ ಉಚಿತ-ಟೈಮ್​ಗೆ ದುಡ್ಡು..! ಇದು ಬೆಂಗಳೂರಿನ ಸ್ಪೆಷಲ್​ ಹೊಟೇಲ್​​​

Add to
Shares
1
Comments
Share This
Add to
Shares
1
Comments
Share
Report an issue
Authors

Related Tags