ಆವೃತ್ತಿಗಳು
Kannada

ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

ಟೀಮ್​ ವೈ.ಎಸ್​. ಕನ್ನಡ

YourStory Kannada
13th Dec 2016
Add to
Shares
21
Comments
Share This
Add to
Shares
21
Comments
Share
image


ನೋಟ್ ಬ್ಯಾನ್ ಆದಾಗಿನಿಂದ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕಾರಣ 500 ಹಾಗೂ 1000ರ ನೋಟುಗಳನ್ನು ಪಡೆಯುವ ಹಾಗಿಲ್ಲ, ಜನರ ಬಳಿ ಚಿಲ್ಲರೆ ಇಲ್ಲ. ಹೀಗಾಗಿಯೇ ಬಡಜನರು ಇವರ ಬಳಿ ಸಾಲ ಕೇಳುವುದು, ಇವರು ದೊಡ್ಡ ವ್ಯಾಪಾರಿಗಳ ಬಳಿ ಸಾಲ ಪಡೆಯುವುದು ನಡೆದೇ ಇತ್ತು. ಆದರೆ ಅದರಲ್ಲೂ ಹಲವು ಗೊಂದಲಗಳು. ಇದರಿಂದಾಗಿ ಚಿಲ್ಲರೆ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಈ ಸಮಸ್ಯೆಗೆ ಭಾರತದ ಅತಿ ದೊಡ್ಡ ವ್ಯಾಲೆಟ್ ಸಂಸ್ಥೆ ಪೇವರ್ಲ್ಡ್​ ಪರಿಹಾರ ಕಂಡುಹಿಡಿದಿದೆ.

image


ಭಾರತದ ಗ್ರಾಮಾಂತರ, ಪಟ್ಟಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿನ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪೇವರ್ಲ್ಡ್​ ಎಂಪೋಸ್ (ಮೊಬೈಲ್ ಪಾಯಿಂಟ್ ಆಫ್ ಸೇಲ್) ಎಂಬ ಸಾಧನವನ್ನು ಬಿಡುಗಡೆಗೊಳಿಸಿದೆ. ಇದರ ಮೂಲಕ ವ್ಯಾಪಾರಿಗಳು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಬಳಸಿ ಗ್ರಾಹಕರಿಂದ ಹಣ ವರ್ಗಾಯಿಸಿಕೊಳ್ಳಬಹುದು. ಸಣ್ಣ ರಿಟೇಲರ್‍ಗಳು ಮತ್ತು ಸಗಟು ವ್ಯಾಪಾರಸ್ಥರಿಗೆ ಈ ಪೇವರ್ಲ್ಡ್​ ಎಂಪೋಸ್ ವರದಾನವಾಗಲಿದೆ. ನಗದು ಕೊರತೆ ತೀವ್ರವಾಗಿರುವ ಈ ಸಂದರ್ಭದಲ್ಲಿ ಗ್ರಾಹಕರಿಂದ ಯಾವುದೇ ಬ್ಯಾಂಕ್‍ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆದು ಈ ಸಾಧನದಲ್ಲಿ ಸ್ವೈಪ್ ಮಾಡುವ ಮೂಲಕ ಹಣ ಸ್ವೀಕರಿಸಬಹುದು. ಪೇವರ್ಲ್ಡ್​ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್ ಜತೆಗೆ ಈ ಎಂಪೋಸ್‍ಗಳನ್ನು ನಿರ್ವಹಿಸಲು ಒಪ್ಪಂದ ಮಾಡಿಕೊಂಡಿದೆ. ಈ ಸಾಧನಗಳ ಮೂಲಕ ಗ್ರಾಹಕರು ಆರ್‍ಬಿಐ ಮಾರ್ಗದರ್ಶಿ ಪ್ರಕಾರ 2,000 ರೂ. ತನಕ ಹಣ ಪಾವತಿ ಮಾಡಬಹುದು.

image


ಪೇವರ್ಲ್ಡ್​ ಎಂಪೋಸ್‍ಗಳಲ್ಲಿ ಹೆಚ್ಚುವರಿ ಜಾಗ ಮತ್ತು ಭಾರಿ ಗಾತ್ರ ಇರುವುದಿಲ್ಲ. ಸರಳ ಹಾಗೂ ಸುಲಭವಾಗಿ ನಿರ್ವಹಿಸಬಹುದಾಗಿದೆ. ರಿಟೇಲರ್ ಸ್ಮಾರ್ಟ್​ಫೋನ್‍ನಲ್ಲಿ ಪೇವರ್ಲ್ಡ್​ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು, ಬ್ಲೂಟೂತ್ ನೆರವಿನಿಂದ ಕಾರ್ಡ್ ರೀಡರ್‍ಗೆ ಸಂಪರ್ಕ ಪಡೆಯಬಹುದು. ನಂತರ ಗ್ರಾಹಕರ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದರಾಯಿತು.

image


" ಕಳೆದ ಕೆಲವು ದಿನಗಳಿಂದೀಚೆಗೆ ವ್ಯಾಪಾರಿಗಳ ಮನೋಭಾವದಲ್ಲಿ ಬದಲಾವಣೆ ಕಂಡು ಬಂದಿದೆ. ಪೇವರ್ಲ್ಡ್​ನ ಎಂಪೋಸ್‍ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಚಿಕ್ಕ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಇದು ಅತ್ಯಂತ ಅನುಕೂಲಕರವಾಗಿದೆ. ನಗದು ಕೊರತೆ ಕಾಡುತ್ತಿರುವ ಈ ದಿನಗಳಲ್ಲಿ ಸಣ್ಣ ಪುಟ್ಟ ವರ್ತಕರಿಗೆ ಯಾವ ಸಮಸ್ಯಯೂ ಆಗದಿರಲು ಎಂಪೋಸ್ ಸಹಾಯಕವಾಗಲಿದೆ ಎಂಬ ವಿಶ್ವಾಸವಿದೆ"
- ಪ್ರವೀಣ್​ ಧಾಭಾಯಿ,ಸಿಒಒ, ಪೇ ವರ್ಲ್ಡ್​ ಎಂಪೋಸ್​

ಪೇವರ್ಲ್ಡ್​ ಬಗ್ಗೆ:

ಸುಗಲ್ ಆ್ಯಂಡ್ ಡೈಮಂಡ್ ಸಮೂಹದ ಅಧೀನದಲ್ಲಿರುವ ಪೇವರ್ಲ್ಡ್​ 2006ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು. ಭಾರತದಲ್ಲಿ 23 ರಾಜ್ಯಗಳಲ್ಲಿ, 630 ನಗರಗಳಲ್ಲಿ 62,000ಕ್ಕೂ ಹೆಚ್ಚು ರಿಟೇಲ್ ಟಚ್ ಪಾಯಿಂಟ್‍ಗಳನ್ನು ಇದು ಹೊಂದಿದೆ. "ಬದುಕನ್ನು ಸರಳಗೊಳಿಸುವುದು" ಪೇವರ್ಲ್ಡ್​ನ ಸಿದ್ಧಾಂತವಾಗಿದೆ. ರಿಟೇಲ್ ಟಚ್ ಪಾಯಿಂಟ್‍ಗಳಲ್ಲಿ ಎಲೆಕ್ಟ್ರಾನಿಕ್ ವರ್ಗಾವಣೆಯ ಮೂಲಕ ಹಣ ವರ್ಗಾವಣೆಗೆ ಸೂಕ್ತ ವ್ಯವಸ್ಥೆಯನ್ನು, ಅನುಕೂಲಕರ ಸಾಧನವನ್ನು ಒದಗಿಸುವುದು ಸಂಸ್ಥೆಯ ಉದ್ದೇಶ. ಈ ರಿಟೇಲ್ ಪಾಯಿಂಟ್‍ಗಳು ಪೇವರ್ಲ್ಡ್​ನ ಅಪ್ಲಿಕೇಶನ್ ಅನ್ನು ಡೆಸ್ಕ್​ಟಾಪ್, ಲ್ಯಾಪ್‍ಟಾಪ್, ಮೊಬೈಲ್‍ ಫೋನ್‍ಗಳಲ್ಲಿ ಬಳಸಬಹುದು. ಆಂಡ್ರಾಯ್ಡ್, ವಿಂಡೋಸ್, ಐಒಎಸ್ ಮತ್ತು ಜಾವಾ ಪ್ಲಾಟ್‍ಫಾರ್ಮ್​ನಲ್ಲಿ ಇದು ಲಭ್ಯ.

ಇದನ್ನು ಓದಿ: ಫಿಜ್ಝಾ ಡೆಲಿವರಿಯಿಂದ ಕೇಬಲ್ ನ್ಯೂಸ್ ಚಾನೆಲ್ ಕಟ್ಟುವ ತನಕ…

ಈ ಪ್ಲಾಟ್‍ಫಾರ್ಮ್​ನಲ್ಲಿ ಪೇವರ್ಲ್ಡ್​ ದೇಶೀಯ ಹಣ ಪಾವತಿ ಸೇವೆ ಒದಗಿಸುತ್ತದೆ. ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್, ರೈಲು, ವಿಮಾನ, ಬಸ್ ಟಿಕೆಟ್ ಕಾಯ್ದಿರಿಸುವಿಕೆ, ನಾನಾ ಬಿಲ್ ಪಾವತಿ ಸೇವೆ ಒದಗಿಸುತ್ತದೆ. ಡಿಜಿಟಲ್ ವ್ಯಾಲೆಟ್, ನಗದು ಹಿಂತೆಗೆತ ಪಾಯಿಂಟ್ ಮತ್ತು ಇ-ಕಾಮರ್ಸ್ ಸೇವೆ ನೀಡುತ್ತದೆ. 100 ದಶಲಕ್ಷಕ್ಕೂ ಹೆಚ್ಚು ವರ್ಗಾವಣೆಗಳು ಪ್ರತಿ ವರ್ಷ 62,000 ಟಚ್ ಪಾಯಿಂಟ್‍ಗಲ್ಲಿ ನಡೆಯುತ್ತಿದೆ. ಪೇವರ್ಲ್ಡ್​ ಲಾಭದಾಯಕ ಕಂಪನಿಯಾಗಿದ್ದು, ಶೇ.40 ಸಿಎಜಿಆರ್ ಹೊಂದಿದೆ. ಪೇವರ್ಲ್ಡ್​ನ ಶೇ.100 ಅಧೀನ ಕಂಪನಿ ಪೇವರ್ಲ್ಡ್​ ಮನಿಯಾಗಿದೆ. ಪೇ ವರ್ಲ್ಡ್​ ಮನಿಯು ಆರ್‍ಬಿಐನಿಂದ ಅನುಮೋದನೆ ಪಡೆದಿರುವ ಡಿಜಿಟಲ್ ಮೊಬೈಲ್ ವ್ಯಾಲೆಟ್ ಆಗಿದೆ.

ಬ್ಯಾಂಕಿಂಗ್ ಸೌಲಭ್ಯದ ವ್ಯಾಪ್ತಿಗೆ ಬಾರದವರನ್ನು ಅದರ ಪರಿಮಿತಿಗೆ ತರುವಲ್ಲಿ ಪೇವರ್ಲ್ಡ್​​ ಸೇವೆಯು ಗಮನಾರ್ಹವಾಗಿದೆ. ಸರಕಾರದ ಈ ಉದ್ದೇಶಕ್ಕೂ ಪೇವರ್ಲ್ಡ್​ ಪೂರಕವಾಗಿದೆ.

ಇದನ್ನು ಓದಿ:

1. ಸೌಂದರ್ಯ ಇದ್ದರೆ ಉದ್ಯೋಗಕ್ಕೊಂದು ಬೆಲೆ- ಆತ್ಮವಿಶ್ವಾಸಕ್ಕೆ ಕೈಗನ್ನಡಿ ಹೆಣ್ಣಿನ ಸೌಂದರ್ಯ

2. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್

3. Posಗಳಿಗೆ ದಿಢೀರ್​ ಬೇಡಿಕೆ- ಬ್ಯಾಂಕ್​ಗಳಿಗೆ ಹೆಚ್ಚಿದ ತಲೆನೋವು


Add to
Shares
21
Comments
Share This
Add to
Shares
21
Comments
Share
Report an issue
Authors

Related Tags