ಆವೃತ್ತಿಗಳು
Kannada

ಬ್ರಿಟಿಷರ ಕಾಲದ ಕಟ್ಟಡಗಳಿಗೆ ಜೀವಕಲೆ - ಇದು ನೃತ್ಯ, ಯೋಗ ಕಲೆಗಳ ಅಧ್ಯಯನ ತಾಣ

ಎಸ್​​.ಡಿ.

YourStory Kannada
4th Mar 2016
Add to
Shares
7
Comments
Share This
Add to
Shares
7
Comments
Share

ನಮ್ಮ ಬೆಂಗಳೂರು ಎಂದು ಎದೆ ಉಬ್ಬಿಸಿ ಎಲ್ಲರ ಮುಂದೆ ಹೇಳಿಕೊಳ್ಳಲು ನಮ್ಮಗೆ ಕಾರಣಗಳೇ ಬೇಕಿಲ್ಲ. ಯಾಕೆಂದರೆ ಈ ಕಾರಣಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಕಲೆ ಮತ್ತು ಸಂಸ್ಕೃತಿ ವಿಷಯಕ್ಕೆ ಬಂದರೆ ನಾವೇ ನಂಬರ್ ಒನ್. ಇದು ಬೆಂಗಳೂರಿನ ಸಾರ್ವಕಾಲಿಕ ದಾಖಲೆ. ಇದನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ.. ಮುರಿಯುವುದು ಅಸಾಧ್ಯ..!

ನಾನು ಇದೀಗ ಹೇಳ ಹೊರಟಿರುವ ಕಥೆ. ನಮ್ಮ ಬೆಂಗಳೂರಿನದ್ದು, ಬೆಂಗಳೂರಿನಲ್ಲಿ ಪುರಾತನ ಕಟ್ಟಡಗಳಿಗೆ ಕೊರತೆಯೇ ಇಲ್ಲ. ಇವು ಕೇವಲ ಕಟ್ಟಡಗಳಷ್ಟೇ ಅಲ್ಲ. ಈ ಕಟ್ಟಡಗಳು ನಮ್ಮ ಪರಂಪರೆಯ ಭಾಗವಾಗಿವೆ. ಇದರೊಂದಿಗೆ ಇತಿಹಾಸ ಬೆಸೆದುಕೊಂಡಿದೆ. ನಮ್ಮ ಹಿಂದಿನ ಸಾಹಸ, ಧೈರ್ಯಕ್ಕೆ ಇವು ಕೈ ಗನ್ನಡಿಯಾಗಿವೆ.

image


ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಸೈಂಟ್ ಮಾರ್ಕ್ಸ್ ರೋಡ್ ಇದಕ್ಕೆ ಅತ್ಯುತ್ತಮ ನಿದರ್ಶನ. ಬ್ರಿಟಿಷರ ಕಾಲದ ಹಳೆಯ ಕಟ್ಟಡಗಳಿಗೆ, ವಿಶಾಲ ಮನೆಗಳಿಗೆ ಸೈಂಟ್ ಮಾರ್ಕ್ಸ್ ರೋಡ್ ಹೆಸರುವಾಸಿ. ನಗರದ ಅಬ್ಬರದ ನಗರೀಕರಣದ ಮಧ್ಯೆಯೂ ಈ ಕಟ್ಟಡಗಳು ತಮ್ಮತನವನ್ನು ಉಳಿಸಿಕೊಂಡಿವೆ. ವರ್ತಮಾನದೊಂದಿಗೆ ಭೂತಕಾಲದ ನಂಟನ್ನು, ಭವಿಷ್ಯತ್ ಕಾಲದ ಜೊತೆ ಸಂಯೋಜಿಸಿದೆ.

ಇದನ್ನು ಓದಿ: ರಿಂಗ್ ರೋಡ್ ಸುಗಮ ಸಂಚಾರಕ್ಕೆ 25 ಸ್ಟೈವಾಕರ್​

ಈಗ ನಾನು ಹೇಳ ಹೊರಟಿರುವ ಕಥೆ ದಂಪತಿ ಲಕ್ಷ್ಮೀ ವಿಜಯೇಂದ್ರ ಮತ್ತು ವಿಜಯೇಂದ್ರ ಅವರದ್ದು. ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ 57, 58 ಮತ್ತು 60 ನಂಬರಿನ ಮನೆಯ ಮಾಲೀಕರು. ಬಾಡಿಗೆದಾರರಿಂದ ಮುಕ್ತಗೊಂಡ ಬಳಿಕ ಈ ಬಂಗ್ಲೆಗಳನ್ನು ತಮ್ಮ ಅಭಿರುಚಿಗೆ ತಕ್ಕಂತೆ ಬದಲಾಯಿಸಿದ್ದಾರೆ. ಅಂದರೆ ಪಾರಂಪರಿಕ ಸೊಗಡನ್ನು ಉಳಿಸಿಕೊಳ್ಳುತ್ತಲೇ ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ಬದಲಾಯಿಸಿದ್ದಾರೆ. ಅಲ್ಲಿ ಇದೀಗ ಯೋಗದ ಭಂಗಿಗಳು ಕಾಣಿಸಿಕೊಳ್ಳುತ್ತಿವೆ. ಚಿತ್ರಕಲೆ ಅರಳುತ್ತಿದೆ. ಸಂಗೀತ ಗುನುಗುನಿಸುತ್ತಿದೆ. ಕಾಲಕ್ಕೆ ತಕ್ಕಂತೆ ಬಂಗ್ಲೆಗಳಲ್ಲಿ ಸ್ವಲ್ಪ ರೂಪಾಂತರಗೊಂಡರೂ ಮೂಲ ಸ್ವರೂಪಕ್ಕೆ ಧಕ್ಕೆಯಾಗಿಲ್ಲ. ತಮ್ಮ ಹೊಸ ಸಾಹಸ ಮತ್ತು ಕನಸಿನ ಬಗ್ಗೆ ಲಕ್ಷ್ಮೀ ವಿಜಯೇಂದ್ರ ಅವರು ಅತೀವ ಹರ್ಷಿತರಾಗಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬ ನಾಣ್ನುಡಿಗೆ ನಿದರ್ಶನರಾಗಿದ್ದಾರೆ.

image


ಈ ಹಿಂದೆ ಈ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಕೀರ್ತನ್​ ಕುಮಾರ್ ಕೂಡ, ಈ ಬದಲಾವಣೆಗೆ ಸಂತಸಪಟ್ಟಿದ್ದಾರೆ. ಹಲವು ವರ್ಷ ಕಳೆದ ಬಳಿಕ ಆ ಮನೆಯನ್ನು ಬಿಟ್ಟು ಬರುವುದು ಬೇಸರ ತಂದಿತ್ತು. ಆದರೆ ಇದೀಗ ಅದು ಬಳಕೆಯಾಗುವ ರೀತಿ. ಅದರಲ್ಲೂ ಕಲಾ ಗ್ರಾಮವಾಗಿ ಅದು ರೂಪಾಂತರಗೊಂಡಿರುವುದು ಅತೀವ ಹರ್ಷ ತಂದಿದೆ ಎನ್ನುತಾರೆ ಕೀರ್ತನ್​​ ಕುಮಾರ್. ಇತರರೂ ಕೂಡ ಇದೇ ಮಾತನ್ನು ಅನುಮೋದಿಸಿದ್ದಾರೆ.

ಲಕ್ಷ್ಮೀ ವಿಜಯೇಂದ್ರ ಅವರು ತಮ್ಮ ಮುಂದೆ ಭವ್ಯವಾದ ಕನಸನ್ನು ಬಿಚ್ಚಿಟ್ಟಿದ್ದಾರೆ.ಕಲಾ ಗ್ರಾಮ ಪೂರ್ಣ ಪ್ರಮಾಣದ ನಾಟ್ಯ, ಸಂಗೀತ ಕಲೆಯ ತವರೂರಾಗಿ ಬೆಳೆಯಬೇಕು ಎಂಬುದು ಅವರ ಆಶಯ. ಕಲೆ ಅಧ್ಯಯನಕ್ಕೆ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಬೇಕಾಗಿರುವುದು ಆಸಕ್ತಿ ಮಾತ್ರ. ಆಸಕ್ತಿ ಇದ್ದರೆ ಜೊತೆಗೆ ಪರಿಶ್ರಮಪಟ್ಟರೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ನಂಬಿಕೆ ಲಕ್ಷ್ಮೀ ವಿಜಯೇಂದ್ರ ಅವರದ್ದು. ಅವರ ಮಾತು ಮತ್ತು ನಡೆ ಇದಕ್ಕೆ ಪೂರಕವಾಗಿದೆ.

2013ರ ತನಕ ಬಾಡಿಗೆದಾರ ಒಡೆತನದಲ್ಲಿದ್ದ ಈ ಮನೆಗಳು 2015ರ ಹೊತ್ತಿಗೆ ಪರಿವರ್ತನೆಯ ಹಾದಿ ತುಳಿದವು. ಒಂದು ದೊಡ್ಡ ಬದಲಾವಣೆಗೆ ನಾಂದಿ ಹಾಡಿದವು.

ಆರಂಭಿಕ ದಿನಗಳ ಬಗ್ಗೆ ಮಾತು

ತಮ್ಮ ಕನಸು ರೂಪುಗೊಂಡದ್ದು, ಅದು ಮೊಳಕೆಯೊಡೆದದ್ದು ಮತ್ತು ಸಾಕಾರಗೊಂಡ ಬಗ್ಗೆ ಲಕ್ಷ್ಮೀ ವಿಜಯೇಂದ್ರ ಅವರು ಈ ರೀತಿ ಹೇಳುತ್ತಾರೆ. 2015ರಲ್ಲಿ ಈ ಪಾರಂಪರಿಕ ಮನೆಗಳ ಪುನರುಜ್ಜೀವನ ಕನಸು ಮೊಳಕೆಯೊಡೆಯಿತು. ಪೂರ್ಣ ಪ್ರಮಾಣದ ಬದಲಾವಣೆಗೆ ನಿರ್ಧರಿಸಿದೆ. ಹೊಸತನದ ಸ್ಪರ್ಶ ನೀಡುವ ಮೊದಲು ಫೋಟೋ ತೆಗೆಸಿದೆ. ಅದ್ಭುತ ಕಲಾಕೃತಿಗಳಂತೆ ಅವು ಹೊರಹೊಮ್ಮಿದ್ದವು. ಬಳಿಕ ಮೆಲ್ಲ ಮೆಲ್ಲನೆ ಹೆಜ್ಜೆ ಇರಿಸಿದೆ. ಮನೆಯ ಬಾಹ್ಯ ಸೌಂದರ್ಯಕ್ಕೆ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಿದೆವು. ನೆಲ ಹಾಸಿನಲ್ಲಿ ಮರಗಳನ್ನೇ ಬಳಸಲಾಯಿತು ಎನ್ನುತ್ತಾರೆ ಲಕ್ಷ್ಮೀ ವಿಜಯೇಂದ್ರ.

ಬೆಂಗಳೂರಿನ ಮಟ್ಟಿಗೆ ಹೇಳುವುದಾರೆ ಇದು ಸುವರ್ಣ ಕ್ಷಣ. ಪ್ರತಿಯೊಂದನ್ನು ವ್ಯವಹಾರಿಕ ದೃಷ್ಟಿಕೋನದಿಂದ ನೋಡುವ ಈ ಸಂದರ್ಭದಲ್ಲಿ ಬೆಂಗಳೂರಿನ ಮನಸ್ಸು ಕಲೆಗೆ ಮಾರು ಹೋಗಿದೆ. ಅದನ್ನು ಬೆಳೆಸುವ ಸಂಕಲ್ಪ ಮಾಡಿದೆ. ಕಲಾ ಗ್ರಾಮದ ಮೂಲಕ ಇದು ಹರಡಿದೆ. ಅವರನ್ನು ನಾವು ಅಭಿನಂದಿಸಬೇಕು.. ಹಾರೈಸಬೇಕು...

ಇದನ್ನು ಓದಿ

1. ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

2. ವಿಶ್ವಾದ್ಯಂತ ಇರುವ ಕನ್ನಡಿಗರಿಗೆ ಇಂಟರ್​ನೆಟ್​ನಲ್ಲಿ ರೇಡಿಯೋ ಕೇಳಿಸಲಿದೆ ನಮ್ ರೇಡಿಯೋ ತಂಡ; ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ!!

3. ಕಸ ದಿಂದ ರಸ, ಮನೆಯಲ್ಲೇ ಬೆಳೆಯಿರಿ ತಾಜಾ ತರಕಾರಿ..!

Add to
Shares
7
Comments
Share This
Add to
Shares
7
Comments
Share
Report an issue
Authors

Related Tags