ಆವೃತ್ತಿಗಳು
Kannada

ಸುಮಧುರ ಕಂಠದ ಮನಸ್ಸಿನಲ್ಲಿದೆ ನೂರಾರು ಕನಸು- ಚಿಕ್ಕ ವಯಸ್ಸಿನಲ್ಲೇ ನೂರಾರು ಮಕ್ಕಳಿಗೆ ಆಸರೆ

ಆರಾಭಿ

YourStory Kannada
8th Mar 2016
11+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಪಲಕ್ ಮುಚ್ಚಲ್.. ಬಾಲಿವುಡ್ ಅಂಗಳದಲ್ಲಿ ಫೇಮಸ್ ಸಿಂಗರ್. ಸದ್ಯ ಬಿಟೌನ್ ನಲ್ಲಿ ಸಖತ್ ಸುದ್ದಿ ಮಾಡ್ತಿರೋ ಅರ್ಜಿತ್ ಸಿಂಗ್ ಜೊತೆ ಹಾಡುವಷ್ಟು ಫೇಮಸ್ ಆಗಿರೋ ಗಾಯಕಿ ಪಲಕ್ ಮುಚ್ಚಲ್. ಹವ್ಯಾಸಕ್ಕೆ ಅಂತ ಕಲಿತ ಸಂಗೀತ ಇಂದು ಲಿಮ್ಕಾ ಹಾಗೂ ಗಿನ್ನಿಸ್ ಬುಕ್ ನಲ್ಲಿ ದಾಖಲೆ ಬರೆಯುವಷ್ಟರ ಮಟ್ಟಿಗೆ ಕರೆದುಕೊಂಡು ಹೋಗಿದೆ..ಅದೇ ಸಂಗೀತ ಅದೆಷ್ಟೋ ಮಕ್ಕಳಿಗೆ ಜೀವನಕೊಟ್ಟಿದೆ. ಪಲಕ್ ಮೂಲತಃ ಮಧ್ಯಪ್ರದೇಶದ ಇಂದೋರ್ ನವರು ...ಪಲಕ್ ನಂತೆಯೇ ಅಣ್ಣ ಪಲಾಶ್ ಕೂಡ ಸಿಂಗರ್...ಪಲಕ್ ಮುಚ್ಚಲ್ ಹಾಡಷ್ಟೆ ಅಲ್ಲದೆ ನೋಡೋದಕ್ಕೂ ಕ್ಯೂಟ್...ಸದ್ಯ ಬಿಕಾಂ ಓದುತ್ತಿರೋ ಪಲಕ್ ಈಗ ಬಾಲಿವುಡ್ ನಲ್ಲಿ ಬೇಡಿಕೆಯ ಸಿಂಗರ್ ... ಒಂದಲ್ಲ ಎರಡಲ್ಲ 17 ಭಾಷೆಯಲ್ಲಿ ಹಾಡೋ ಸಾಮರ್ಥ್ಯ ಹೊಂದಿರೋ ಪಲಕ್ ಮೊದಲಿಗೆ ಹಾಡಿದ್ದು ಹಿಮೇಶ್ ರೇಷಮಿಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದ ದಮಾದಮ್ ಚಿತ್ರದ ಟೈಟಲ್ ಹಾಡಿಗೆ....ಮೊದಲ ಸಿನಿಮಾದಲ್ಲಿ ಎರಡು ಹಾಡಿಗೆ ಪಲಕ್ ದನಿಯಾಗಿದ್ರು...

image


ಚಿಕ್ಕವಯಸ್ಸಿನಲ್ಲೇ ಅದ್ಬುತ ಸಾಧನೆ

ದಮಾದಮ್ ಸಿನಿಮಾದಲ್ಲಿ ಎರಡು ಹಾಡು ಹಾಡಿದ ನಂತ್ರ ಪಲಕ್ ಗೆ ಸಾಲು ಸಾಲು ಆಫರ್ ಗಳು ಬರೋದಕ್ಕೆ ಸ್ಟಾರ್ಟ್ ಆಯ್ತು... ದಮಾದಮ್ ಚಿತ್ರದ ನಂತ್ರ ಪಲಕ್ ಗೆ ಫೇಮ್ ತಂದು ಕೊಟ್ಟ ಸಾಂಗ್ ಅಂದ್ರೆ ಏಕ್ ಥಾ ಟೈಗರ್ ಚಿತ್ರದ ನಾ ಲಾಪತಾ..ಸಲ್ಲು ಹಾಗೂ ಕತ್ರೀನಾ ರೊಮ್ಯಾಂಟಿಕ್ ಸಾಂಗ್ ಗೆ ಪಲಕ್ ವಾಯ್ಸ್ ಸಖತ್ತಾಗಿ ಮ್ಯಾಚ್ ಆಗಿತ್ತು...ಸಿನಿಮಾ ಇಂಡಷ್ಟ್ರಿಗೆ ಬಂದ ನಾಲ್ಕೇ ವರ್ಷದಲ್ಲಿ ಪಲಕ್ ಮುಚ್ಚಾಲ್ ಬಾಲಿವುಡ್ ನ ಸೂಪರ್ ಸಿಂಗರ್ಸ್ ಜೊತೆ ಹಾಡಿದ್ದಾಳೆ...ಅರ್ಜಿತ್ ಸಿಂಗ್,ಅಂಕಿತ್ ತಿವಾರಿ,ಮಿಕಾ ಸಿಂಗ್ ,ಹನಿ ಸಿಂಗ್ ಸೇರಿದಂತೆ ಇನ್ನೂ ಅನೇಕ ಟಾಪ್ ಸಿಂಗರ್ ಜೊತೆ ಪಲಕ್ ಮುಚ್ಚಾಲ್ ವಾಯ್ಸ್ ಮಿಕ್ಸ್ ಆಯ್ತು...ತನ್ನ 21 ನೇ ವಯಸ್ಸಿನ್ಲೇ ಇಷ್ಟೇಲ್ಲ ಫೇಮಸ್ ಆಗಿರೋ ಪಲಕ್ ಮುಚ್ಚಾಲ್ ಗೆ ಈಗ ಕೈ ತುಂಬಾ ಆಫರ್ ಗಳಿವೆ...

image


ಇದನ್ನು ಓದಿ: ವಿಶ್ವಾದ್ಯಂತ ಇರುವ ಕನ್ನಡಿಗರಿಗೆ ಇಂಟರ್​ನೆಟ್​ನಲ್ಲಿ ರೇಡಿಯೋ ಕೇಳಿಸಲಿದೆ ನಮ್ ರೇಡಿಯೋ ತಂಡ; ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ!!

ಈ ಗಾಯಕಿ 572 ಮಕ್ಕಳ ಪಾಲಿಗೆ ಉಸಿರಾದ ನಾಯಕಿ

ನಾಲ್ಕನೇ ವರ್ಷದಲ್ಲೇ ಸಂಗೀತ ಕಲಿತ ಪಲಕ್ ತನ್ನ ಸಂಗೀತವನ್ನ ಬಳಸಿಕೊಂಡಿದ್ದು ಸಮಾಜ ಸೇವೆಗಾಗಿ ...ಭಾರತ ಸೇರಿದಂತೆ ವಿದೇಶದಲ್ಲಿ ಸ್ಟೇಜ್ ಶೋ ಗಳನ್ನ ಮಾಡಿ ಫಂಡ್ ಕಲೆಕ್ಟ್ ಮಾಡಿ ಅದ್ರಿಂದ ಅದೆಷ್ಟೋ ಮಕ್ಕಳಿಗೆ ಜೀವನಕೊಟ್ಟಿದ್ದಾರೆ...ಹಾರ್ಟ್ ಡಿಸೀಸ್ ಇರೋ ಮಕ್ಕಳಿಗಾಗಿ ಪಲಕ್ ಸ್ಟೇಜ್ ಮೇಲೆ ತಮ್ಮ ಸಿಂಗಿಂಗ್ ಟ್ಯಾಲೆಂಟ್ ಅನ್ನ ತೋರಿಸ್ತಾರೆ.ತನ್ನ ಏಳನೇ ವಯಸ್ಸಿನಲ್ಲೇ ತನ್ನೂರಿನಲ್ಲೇ ಪಲಕ್ ಬೀದಿ ಬೀದಿಯಲ್ಲಿ ಹಾಡಿ ಕಾರ್ಗಿಲ್ ವಾರ್ ನಲ್ಲಿ ಪ್ರಾಣಕಳೆದುಕೊಂಡವ್ರಿಗಾಗಿ ಫಂಡ್ ಕಲೆಕ್ಟ್ ಮಾಡಿದ್ರು...ಸಣ್ಣ ವಯಸ್ಸಿನಲ್ಲೇ ಬಂದ ಈ ಸಮಾಜಸೇವಾ ಮನೋಭಾವ ಇನ್ನೂ ಹಾಗೆಯೇ ಮುಂದುವರೆದಿದೆ..ಸಿನಿಮಾದಲ್ಲಿ ಹಾಡೋದಕ್ಕಿಂತ ಪಲಕ್ ಹೆಚ್ಚಾಗಿ ಸ್ಟೇಜ್ ಶೋ ಗಳಲ್ಲಿ ಭಾಗವಹಿಸ್ತಾರೆ...ಸ್ಟೇಜ್ ಶೋ ನಲ್ಲಿ ಬಂದ ಕಂಪ್ಲಿಟ್ ಹಣವನ್ನ ಹಾರ್ಟ್ ಫೌಂಡೇಷನ್ ಗೆ ನೀಡ್ತಾರೆ ಪಲಕ್ ಸುಮಾರು 17 ಭಾಷೆಯಲ್ಲಿ ಹಾಡೋದ್ರಿಂದ ಅದನ್ನೆ ಬಂಡವಾಳವಾಗಿಟ್ಟುಕೊಂಡು ಸ್ಟೇಜ್ ಶೋ ಮಾಡ್ತಾರೆ...ಆಯಾ ದೇಶದಲ್ಲಿ ಆಯಾ ಭಾಷೆಯಲ್ಲಿ ಹಾಡಿ ಅಭಿಮಾನಿಗಳನ್ನ ರಂಜಿಸ್ತಾರೆ...ಅಷ್ಟೇ ಅಲ್ಲದೆ ಅಲ್ಲಿಯ ಹಾಡುಗಳನ್ನ ಹಾಡಿ ತನ್ನ ಫ್ಯಾನ್ಸ್ ಗಳನ್ನ ಇಂಪ್ರೇಸ್ ಮಾಡ್ತಾಳೆ

image


ಪಲಕ್ ಗಾನಕ್ಕೆ ಹರಿದು ಬಂದು 25 ಮಿಲಿಯನ್ ಹಣ

ಕಳೆದ ವರ್ಷ ಪಲಕ್ ಹಾಗೂ ಪಲಾಶ್ ವಿದೇಶದಲ್ಲಿ ನಡೆಸಿದ ಒಂದೇ ಒಂದು ಸ್ಟೇಜ್ ಶೋಗೆ 25 ಮಿಲಿಯನ್ ಹಣ ಹರಿದುಬಂದಿದ್ದು. ಇಲ್ಲಿಂದ ಬಂದ ಹಣದಿಂದ ಹಾರ್ಟ್ ಡಿಸಿಸ್ ಯಿಂದ ಬಳಲುದಿಲ್ಲ 572 ಮಕ್ಕಳಿಗೆ ಸಹಾಯ ಮಾಡಿದ್ರು.ತನ್ನ ಗಾಯನನಿಂದಲೇ ಸಖತ್​ ಫೇಮಸ್ ಆಗಿರೋ ಪಲಕ್ ಹೆಸರು ಈಗಾಗಲೇ ಗಿನ್ನಿಸ್ ಹಾಗೂ ಲಿಮ್ಕಾ ಬುಕ್ ನಲ್ಲಿ ದಾಖಲಾಗಿದೆ...ಮಕ್ಕಳ ಜೀವ ರಕ್ಷಣೆಗಾಗಿ ದೇಶ ದೇಶ ಸುತ್ತಿ ಸಹಾಯ ಮಅಡ್ತಿರೋ ಪಲಕ್​​ಗೆ ಭಾರತ ಸರ್ಕಾರದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಸೇರಿದಂತೆ ಇನ್ನೂ ಸಾಕಷ್ಟು ಪ್ರಶಸ್ತಿಗಳು ಸಂದಿವೆ..

ಇದನ್ನು

1. ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !

2. ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

3. ಕಸ ದಿಂದ ರಸ, ಮನೆಯಲ್ಲೇ ಬೆಳೆಯಿರಿ ತಾಜಾ ತರಕಾರಿ..!

11+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags