ಆವೃತ್ತಿಗಳು
Kannada

ಅಲ್ಲಿ ಹೆಣ್ಣು ಮಗು ಜನಿಸಿದರೆ ಹಬ್ಬವೇ ಸರಿ..!

ಕೃತಿಕಾ

27th Nov 2015
Add to
Shares
10
Comments
Share This
Add to
Shares
10
Comments
Share

ಇವತ್ತಿಗೂ ಈ ದೇಶದಲ್ಲಿ ಹೆಣ್ಣು ಮಗುವಾದ್ರೆ ಮೂಗು ಮುರಿಯುವ ಜನರಿದ್ದಾರೆ. ಆದ್ರೆ ಮೊದಲಿದ್ದ ಪರ್ಸೆಂಟ್​​ನಷ್ಟು ಈ ಸಂಖ್ಯೆ ಇಲ್ಲದಿರಬಹುದು. ಆದ್ರೆ ಗಂಡು ಮಗು ಹುಟ್ಟಿದರೆ ಸಂಭ್ರಮಿಸುವವರ ಸಂಖ್ಯೆ ಇನ್ನೂ ದೊಡ್ಡ ಮಟ್ಟದಲ್ಲೇ ಇದೆ. ಇದರಿಂದಾಗಿಯೇ ಒಟ್ಟು ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಷಿನ ನಡುವಿನ ಅನುಪಾತ ಹೆಚ್ಚು ಕಡಿಮೆ ಇದೆ. ಇಂತಹ ಕಾಲಘಟ್ಟದಲ್ಲಿ ಒಂದು ಆಸ್ಪತ್ರೆ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ವಿನೂತನ ಮತ್ತು ಹಲವರಿಗೆ ಮಾದರಿಯಾಗುವಂತಹ ಕೆಲಸ ಮಾಡುತ್ತಿದೆ. ಅದೇ ಮಹಾರಾಷ್ಟ್ರದ ಪುಣೆಯಲ್ಲಿರುವ ಮೆಡಿಕೇರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ಈ ಆಸ್ಪತ್ರೆಯ ವಿಶೇಷ ಅಂದ್ರೆ ಗಂಡು ಮಗು ಜನಿಸಿದ್ರೆ ಚಿಕಿತ್ಸೆಯ ಅಷ್ಟೂ ಮೊತ್ತವನ್ನ ಒಂದು ಪೈಸೆಯೂ ಬಿಡದಂತೆ ವಸೂಲಿ ಮಾಡ್ತಾರೆ. ಆದ್ರೆ ಅದೇ ಹೆಣ್ಣು ಮಗು ಜನಿಸಿದ್ರೆ ಉಚಿತವಾಗಿ ಚಿಕಿತ್ಸೆ ನೀಡಿ ಮಗು ಮತ್ತು ತಾಯಿಯನ್ನು ನಗುಮೊಗದೊಂದಿಗೆ ಆರೈಕೆ ಮಾಡುತ್ತಾರೆ. ಇಂತದ್ದೊಂದು ವಿಶಿಷ್ಟ ಕೆಲಸವನ್ನು ಈ ಆಸ್ಪತ್ರೆ ಹಲವು ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದೆ. ಆಸ್ಪತ್ರೆಯ ಅಧ್ಯಕ್ಷರಾಗಿರುವ ಡಾ. ಗಣೇಶ್ ರಾಖ್ ಹೆಣ್ಣು ಮಕ್ಕಳೆಡೆಗೆ ನಮ್ಮ ಸಮಾಜಕ್ಕಿರುವ ಅಸಡ್ಡೆ ನಿವಾರಿಸುವ ಉದ್ದೇಶದಿಂದ ಇಂತದ್ದೊಂದು ಸ್ಫೂರ್ತಿಯುತ ಕಾರ್ಯಕ್ರಮವನ್ನು ಹೊವು ವರ್ಚಗಳಿಂದ ನಡೆಸಿಕೊಂಡು ಹೋಗುತ್ತಿದ್ದಾರೆ.

image


ಈ ಮೆಡಿಕೇರ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಹೆತ್ತವರ ಹೆರಿಗೆ ವೆಚ್ಚವನ್ನಷ್ಟೇ ಮನ್ನಾ ಮಾಡುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಇಡೀ ಆಸ್ಪತ್ರೆಯಲ್ಲಿ ಸಂಭ್ರಮದಂತಹ ವಾತಾವರಣ ಸೃಷ್ಟಿಯಾಗುತ್ತೆ. ಅವತ್ತು ಇಡೀ ಆಸ್ಪತ್ರೆಯಲ್ಲಿರುವ ಎಲ್ಲರಿಗೂ ಸಿಹಿ ಹಂಚಿ ಈ ಸಂಭ್ರಮ ಆಚರಿಸಲಾಗುತ್ತದೆ. ಈ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತೀ ಹೆಣ್ಣು ಮಗುವನ್ನೂ ಇದೇ ಸಂಭ್ರಮದಿಂದಲೇ ಸ್ವಾಗತಿಸಲಾಗುತ್ತದೆ. ಅಷ್ಟರಮಟ್ಟಿಗೆ ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಅವತ್ತು ಹಬ್ವ ಅಂತ ಅರ್ಥ. ಕಳೆದ ನಾಲ್ಕು ವರ್ಷಗಳಿಂದಲೂ ಈ ಆಸ್ಪತ್ರೆಯಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಇದರ ಅನುಕೂಲವನ್ನು ಸಾವಿರಾರು ಬಡ ಹೆಣ್ಣುಮಕ್ಕಳ ಪಡೆದಿದ್ದಾರೆ.

image


ಭಾರತದಲ್ಲಿ ಭ್ರೂಣ ಹತ್ಯೆ ಕಾನೂನು ಬಾಹಿರ. ಇಷ್ಟಿದ್ದರೂ ಕೂಡ ಅಲ್ಲಿ ದೊಡ್ಡ ಮಟ್ಟದಲ್ಲಿ ಹೆಣ್ಣುಮಕ್ಕಳ ಭ್ರೂಣ ಹತ್ಯೆಗಳು ನಡೆಯುತ್ತವೆ. ಮಹಾರಾಷ್ಟ್ರದಲ್ಲಿ ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ಆತಂಕ ಸೃಷ್ಟಿಸುವಷ್ಟರ ಮಟ್ಟಿಗಿದೆ. ಅಲ್ಲಿ ಪ್ರತೀ ಒಂದ ಸಾವಿರ ಗಂಡು ಮಕ್ಕಳಿಗೆ ಕೇವಲ 929 ಹೆಣ್ಣುಮಕ್ಕಳಷ್ಟೇ ಇದ್ದಾರೆ. ಅಂದರೆ ಬರೊಬ್ವರಿ 71 ಹೆಣ್ಣುಮಕ್ಕಳು ಪ್ರತೀ ಸಾವಿರ ಗಂಡುಮಕ್ಕಳಿಗಿಂತ ಕಡಿಮೆಯಿದ್ದಾರೆ. ಗಂಡು ಮಕ್ಕಳ ಮೇಲಿನ ಮೋಹದಿಂದ ಹೆಚ್ಚಾಗುತ್ತಿರುವ ಭ್ರೂಣ ಹತ್ಯೆಯಿಂದಾಗಿ ಗಂಡು ಮತ್ತು ಹೆಣ್ಣಿನ ನಡುವಿನ ಅನುಪಾತ ಆತಂಕ ಹುಟ್ಟಿಸುವ ಮಟ್ಟಿಗೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೆಣ್ಷು ಮಕ್ಕಳ ರಕ್ಷಣೆಗಾಗಿ ಈ ಆಸ್ಪತ್ರೆಯ ಅಧ್ಯಕ್ಷರಾದ ಗಣೇಶ್ ರಾಖ್ ತಮ್ಮ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ಆರಂಭಿಸಿಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಐನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಪ್ರಾಣ ಉಳಿದಿದೆ. ಇಲ್ಲದಿದ್ದರೆ ಭ್ರೂಣಾವಸ್ಥಯಲ್ಲಿರುವಾಗಲೇ ಅವುಗಳ ಕತ್ತು ಹಿಸುಕುವ ಕೆಲಸ ಸದ್ದಿಲ್ಲದೇ ನಡೆದುಹೋಗುತ್ತಿತ್ತು.

ನಮ್ಮ ಆಸ್ಪತ್ರೆಗೆ ಪ್ರತಿ ನಿತ್ಯ ಸಾಕಷ್ಟು ಗರ್ಬಿಣಿಯರು ಬರುತ್ತಾರೆ. ನಾಲ್ಕು ವರ್ಷದ ಹಿಂದೆ ತನ್ನ ಹೆಂಡತಿಗೆ ಹೆಣ್ಷು ಮಗುವಾಗಿದೆ ಎಂದು ಗೊತ್ತಾಗ್ತಿದ್ದಾಂತೆ ಗಂಡ ಮತ್ತು ಆತನ ಮನೆಯವರು ಆಸ್ಪತ್ರೆಗೆ ಹಣ ಕಟ್ಟೋ ವಿಚಾರಕ್ಕಾಗಿ ಜಗಳ ಮಾಡಿದರು. ಅವತ್ತೇ ನಾನು ನಿರ್ಧಾರ ಮಾಡಿದೆ. ಇನ್ನು ಮುಂದೆ ಈ ಆಸ್ಪತ್ರೆಯಲ್ಲಿ ಹೆಣ್ಷು ಮಗು ಜನಿಸಿದರೆ ಚಿಕಿತ್ಸೆ ಮತ್ತು ಆರೈಕೆಯನ್ನು ಉಚಿತವಾಗಿಯೇ ಮಾಡುವ ನಿರ್ಧಾರ ಮಾಡಿದೆ ಅಂತಾರೆ ಮೆಡಿಕೇರ್ ಆಸ್ಪತ್ರೆ ಅಧ್ಯಕ್ಷ ಡಾ. ಗಣೇಶ್ ರಾಖ್.

image


ಹೆಣ್ಣು ಮಕ್ಕಳನ್ನು ಹೆತ್ತಾಗಲೂ ಜನರು ಸಂತೋಷದಿಂದ ಸ್ವೀಕರಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಾವು ನಡೆಸಿಕೊಂಡು ಹೋಗುತ್ತಿದ್ದೇವೆ. ಈ ಕೆಲಸಕ್ಕೆ ನಮಗೆ ಅತ್ಯುತ್ತಮ ಸ್ಪಂದನೆಯೂ ದೊರೆತಿದೆ. ಕಾಲಾಂತರದಲ್ಲಿ ನಮ್ಮ ಜನರೂ ಬದಲಾಗುವ ವಿಶ್ವಾಸವಿದೆ ಅಂತಾರೆ ಡಾ. ಗಣೇಶ್ ರಾಖ್.

ಪ್ರಾಯೋಗಿಕವಾಗಿ ಜಾರಿಗೆ ತಂದ ಈ ಕಾರ್ಯಕ್ರಮ ಇವತ್ತು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಈ ಉತ್ತಮ ಕಾರ್ಯ ಇನ್ನೂ ಹೆಚ್ಚಿನ ಜನರಿಗೆ ತಲುಪಬೇಕು ಅನ್ನೋದು ಗಣೇಶ್ ಅವರ ಕನಸು. ದೇಶದ ಎಲ್ಲ ನಗರಗಲ್ಲೂ ಈ ರೀತಿಯ ಒಂದು ಆಸ್ಪತ್ರೆ ನೀಡಿ ಹೆಣ್ಣು ಬ್ರೂಣ ಹತ್ಯೆಯಾಗದಂತೆ ತಡೆಯಬೇಕು ಅನ್ನೋ ಕನಸ್ಸು ಇವರಿಗಿದೆ.

ಈ ನಿಟ್ಟಿನಲ್ಲಿ ದೇಶದ ಹಲವು ಪ್ರತಿಷ್ಟಿತ ಆಸ್ಪತ್ರೆಗಳೊಂದಿಗೆ, ವೈದ್ಯರೊಂದಿಗೆ ಚರ್ಚಿಸಿ ಆ ದಿಸೆಯಲ್ಲಿ ಹೆಜ್ಜೆ ಇರಿಸಿದ್ದಾರೆ. ಇಂತದ್ದೊಂದು ಮಹಾನ್ ಕೆಲಸವನ್ನು ಸದ್ದಿಲ್ಲದೇ ನಡೆಸಿಕೊಂಡು ಹೋಗುತ್ತಿರುವ ಈ ಆಸ್ಪತ್ರೆಗೆ ಮತ್ತು ಆಸ್ಪತ್ರೆಯ ಅಧ್ಯಕ್ಷ ಗಣೇಶ್ ರಾಖ್ ಗೆ ಹ್ಯಾಟ್ಸ್ ಆಫ್...

Add to
Shares
10
Comments
Share This
Add to
Shares
10
Comments
Share
Report an issue
Authors

Related Tags