ಆವೃತ್ತಿಗಳು
Kannada

ಯುವ ಆಭರಣ ವಿನ್ಯಾಸಕಿ ಶುಚಿ ಪಾಂಡ್ಯರ ಉದ್ಯಮದ ಪಯಣ ಪೈಪಾ+ಬೆಲ್ಲಾ

ಟೀಮ್​ ವೈ.ಎಸ್​​.

4th Oct 2015
Add to
Shares
8
Comments
Share This
Add to
Shares
8
Comments
Share

ಭಾರತದಲ್ಲಿ ಹರೆಯದ ಮಹಿಳೆ ಯಾವುದಾದರೂ ಉದ್ಯಮದ ಯೋಜನೆ ಹೆಣೆದರೆ ಅದಕ್ಕೆ ಎದುರಾಗುವ ಅತಿ ಮುಖ್ಯ ಪ್ರಶ್ನೆ ಆ ಮಹಿಳೆ ಉದ್ಯಮವನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರಾ ಅನ್ನುವುದು. ಅದು ಎಷ್ಟೇ ವಿನೂತನ ಹಾಗೂ ಲಾಭದಾಯಕ ಉದ್ಯಮವಾಗಿದ್ದರೂ ಹೂಡಿಕೆ ಮಾಡುವ ಮುಂಚೆ ಪ್ರತಿಯೊಬ್ಬರೂ ಯೋಚನೆ ಮಾಡುವುದು ಮದುವೆ ಅಥವಾ ಮಕ್ಕಳಾದ ನಂತರ ಆ ಮಹಿಳೆ ಉದ್ಯಮವನ್ನು ನಿರ್ವಹಿಸಿಕೊಂಡು ಹೋಗುತ್ತಾಳಾ ಅನ್ನುವ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ನಂಬಿಕೆ ಇಟ್ಟುಕೊಂಡು ಬದ್ಧತೆಯ ಮಾನದಂಡವನ್ನು ಮಾತ್ರ ಗಮನಿಸಿ ಹೂಡಿಕೆ ಮಾಡುವವರನ್ನು ಆಯ್ಕೆ ಮಾಡಿಕೊಂಡು ಉದ್ಯಮ ಆರಂಭಿಸಿದ ಮಹಿಳೆ ಶುಚಿ ಪಾಂಡ್ಯ.

ಶುಚಿ ಪಾಂಡ್ಯ ಪೈಪಾ+ಬೆಲ್ಲಾ ಸಂಸ್ಥೆಯ ಸಂಸ್ಥಾಪಕಿ. ಇತ್ತೀಚೆಗಷ್ಟೆ ಇವರ ಸಂಸ್ಥೆ ಸುಮಾರು 6,50,00 ಡಾಲರ್ ಮೊತ್ತದಷ್ಟು ಹಣವನ್ನು ಸಿಂಗಾಪುರ ಮೂಲದ ಲಯನ್ ರಾಕ್ ಕ್ಯಾಪಿಟಲ್​​ನ ರಾಜೇಶ್ ಸಾವ್ಹ್ನಿ, ಟೆರುಹೈಡ್ ಸ್ಯಾಟೋ ಹಾಗೂ ರೂಪನಾಥ್​​ರಿಂದ ಹೂಡಿಕೆ ಮಾಡಿಸಿಕೊಂಡಿದೆ. ಜಿಎಸ್ಎಫ್ ಸಂಸ್ಥೆಯ ಸಂಸ್ಥಾಪಕರಾದ ರಾಜೇಶ್ ಸಾವ್ಹ್ನಿ ಹಾಗೂ ಫ್ರೀಕಲ್ಟರ್.ಕಾಮ್ ಸಂಸ್ಥೆಯ ಮಾಜಿ ಸಿಇಓ ಸುಜಾಲ್ ಷಾ ಈ ಕಂಪೆನಿಯ ಸಲಹೆಗಾರರು.

image


ಪೈಪಾ+ಬೆಲ್ಲಾ ಮಹಿಳೆಯರ ಆಸಕ್ತಿಕರ ವಸ್ತುಗಳು ಹಾಗೂ ಅಲಂಕಾರಿಕ ಆಭರಣಗಳನ್ನು ಸಂಗ್ರಹಿಸಿ ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಸಂಸ್ಥೆಯಾಗಿದೆ. ಸಂಸ್ಥೆಯ ಹೆಸರೇ ಹೇಳುವಂತೆ ಪೈಪಾ ಅನ್ನುವ ಸ್ಪಾನಿಶ್ ಪದದ ಅರ್ಥ ಸಾಹಸಿ, ಬೋಲ್ಡ್ ಹಾಗೂ ಉತ್ಸಾಹಿ ಪ್ರವೃತ್ತಿ ಹೊಂದಿರುವವರು ಹಾಗೂ ಇಟಾಲಿಯನ್ ಬೆಲ್ಲಾ ಅಂದರೆ ಸುಂದರ ಹಾಗೂ ಸಾಂಪ್ರದಾಯಿಕ ಎಂದರ್ಥ. ಅಂದರೆ ಈ ಎರಡೂ ಮನೋಭಾವದ ಮಹಿಳೆಯರ ಅಗತ್ಯತೆಗಳು ಹಾಗೂ ಆಸಕ್ತಿಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶದಿಂದ ಸಂಸ್ಥೆ ಹುಟ್ಟಿಕೊಂಡಿದೆ ಅಂತ ಮಾಹಿತಿ ನೀಡಿದ್ದಾರೆ ಶುಚಿ. ಇತ್ತೀಚೆಗೆ ಅಪಾರ ಬಂಡವಾಳ ಹೂಡಿಕೆ ಮಾಡಿಕೊಂಡ ಶುಚಿ ಹಾಗೂ ತಂಡ ಉದ್ಯೋಗಿಗಳನ್ನು ಸೃಷ್ಟಿಸುವುದು, ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಸಾಧಿಸುವುದರತ್ತ ಹೆಚ್ಚಿನ ಗಮನ ಹರಿಸಿದೆ. ಮುಂಬೈ ಮೂಲದ ಈ ಸಂಸ್ಥೆ ಸಿಂಗಾಪುರದಲ್ಲೂ ತನ್ನ ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ.

ಶುಚಿ ಹೇಳುವಂತೆ ಅವರ ಸಂಸ್ಥೆ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಾಲಿಟ್ಟು ಕೆಲವು ರಾಷ್ಟ್ರಗಳಲ್ಲಿ ಪ್ರಚಾರ ಹಾಗೂ ಕಾರ್ಯಾಚರಣೆಗೆ ಮುಂದಾಗಿದ್ದೇವೆ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದ ಗ್ರಾಹಕರನ್ನು ಸೆಳೆಯುವುದು ಸಂಸ್ಥೆಯ ಅತೀ ಮುಖ್ಯ ಗುರಿ ಅಂತ ಶುಚಿ ಹೇಳಿದ್ದಾರೆ.

ಆಭರಣಗಳ ಉದ್ಯಮದ ಹಾದಿ

ಮುಂಬೈನಲ್ಲಿ ಆಭರಣ ವಿನ್ಯಾಸಕಾರರ ಕುಟುಂಬದಲ್ಲಿ ಜನಿಸಿದ ಶುಚಿಗೆ ಆಭರಣಗಳ ಮಾರಾಟದ ಉದ್ಯಮ ಮೊದಲಿನಿಂದಲೂ ಆಸಕ್ತಿಕರ ಕ್ಷೇತ್ರವಾಗಿತ್ತು. ಹಾಗಾಗಿ ಈ ನಿಟ್ಟಿನಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸಿ ವಿಸ್ತರಿಸುವ ಯೋಜನೆಗೆ ಶುಚಿ ಮುಂದಾದರು.

ನ್ಯೂಯಾರ್ಕ್‌ ವಿವಿಯ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಮಾರ್ಕೆಟಿಂಗ್ ವಿಷಯದ ಪದವಿ ಕಲಿಯುತ್ತಿದ್ದಾಗಲೇ ಬಿಸಿನೆಸ್‌ನ ಪ್ರಾಥಮಿಕ ಪಾಠಗಳನ್ನು ಅವರು ಕಲಿತಿದ್ದರು. ಭಾರತಕ್ಕೆವಾಪಾಸು ಬಂದ ಬಳಿಕ ಶುಚಿ ಕೆಲವು ಕಾಲ ಕುಟುಂಬದ ವ್ಯವಹಾರದ ಜೊತೆ ಕೈಜೋಡಿಸಿದ್ದರು. ಇದು ಶುಚಿಯ ಯೋಜನೆಗೆ ಬೇಕಿದ್ದ ಪ್ರಾಥಮಿಕ ಅನುಭವ ಒದಗಿಸಿಕೊಟ್ಟಿತು. ಜೊತೆಗೆ ಆಭರಣ ವಿನ್ಯಾಸ, ಸಿದ್ಧ ಆಭರಣಗಳ ಮಾರುಕಟ್ಟೆ, ಅಂತಿಮ ದರ ಹಾಗೂ ಗ್ರಾಹಕರ ಆಸಕ್ತಿ ಈ ವಿಷಯಗಳನ್ನು ಅಮೂಲಾಗ್ರವಾಗಿ ತಿಳಿದುಕೊಳ್ಳಲು ನೆರವಾಯಿತು.

image


2010ರಲ್ಲಿ ಶುಚಿ ವಾರ್ಟನ್ ಸ್ಕೂಲ್‌ನಲ್ಲಿ ಎಂಬಿಎ ಪದವಿ ಪಡೆಯಲು ಸೇರಿಕೊಂಡಿದ್ದರು. ಈ ವೇಳೆ ಅವರ ಮನಸ್ಸಿನಲ್ಲಿ ಪೈಪಾ+ಬೆಲ್ಲಾ ಸಂಸ್ಥೆಯ ಆರಂಭಿಸುವ ಯೋಜನೆ ಸೃಷ್ಟಿಯಾಗಿತ್ತು. ತಮ್ಮ ಎಂದಿನ ಕಲಿಕೆ ಜೊತೆ 8 ವಾರಗಳ ಬಿಸಿನೆಸ್ ಸಂಬಂಧಿ ವಿಶೇಷ ತರಬೇತಿಯನ್ನು ಶುಚಿ ಪಡೆದರು. ಫೈನಾನ್ಸ್- ಅಕೌಂಟಿಂಗ್, ಸಾಫ್ಟ್ ವೇರ್ ಕೋಡಿಂಗ್ ವಿಷಯಗಳನ್ನು ವಿಶೇಷವಾಗಿ ಅಭ್ಯಾಸ ಮಾಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಅಲ್ಲಿ ಸೂಕ್ತವಾದ ಮಾರ್ಗದರ್ಶನ ಕೂಡ ಲಭಿಸಿತ್ತು.

ತಮ್ಮ ಕೌಟುಂಬಿಕ ಅನುಭವದೊಂದಿಗೆ ಶುಚಿ, ಏನಾದರೂ ಸಾಧಿಸಲೇಬೇಕೆಂಬ ಉತ್ಕಟ ಹಂಬಲದೊಂದಿಗೆ ತಂತ್ರಜ್ಞಾನದ ನೆರವು ಪಡೆದುಕೊಂಡು ಆನ್​​ಲೈನ್​​ ಫ್ಲಾಟ್​​ಪಾರಂ ಹುಟ್ಟುಹಾಕಿದರು. ಆಭರಣಗಳು ಹೊಸ ಆಯಾಮದೊಂದಿಗೆ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವುದು, ಸಿದ್ಧ ಉಡುಪುಗಳ ಫ್ಯಾಷನ್ ಬದಲಾವಣೆಯೊಂದಿಗೆ ಆಭರಣಗಳತ್ತ ಯುವ ಸಮುದಾಯ ಆಸಕ್ತಿ ವಹಿಸುತ್ತಿರುವುದು ಹಾಗೂ ಮುಖ್ಯವಾಗಿ ಫ್ಯಾಷನ್ ಟ್ರೆಂಡ್​​ನ ಗೀಳು ಭಾರತೀಯ ಮಾರುಕಟ್ಟೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದು ಶುಚಿಯವರ ಹಂಬಲಕ್ಕೆ ನೀರೆರೆದಂತಾಯಿತು. ಬಂಗಾರ ಹಾಗೂ ವಜ್ರದ ಆಭರಣಗಳ ಅನಿಯಮನಿತ ಹಾಗೂ ಅನಿಶ್ಚಿತ ದರ ಬದಲಾವಣೆಯ ಕಾರಣ ಅಪರೂಪದ ಹಾಗೂ ಗುಣಮಟ್ಟದ ಆಭರಣಗಳನ್ನು ಕೈಗೆಟಕುವ ದರದಲ್ಲಿ ನೀಡಿದರೆ ಗ್ರಾಹಕರು ಆಕರ್ಷಿತರಾಗುತ್ತಾರೆ ಅನ್ನುವ ಅದಮ್ಯ ನಂಬಿಕೆ ಶುಚಿಯವರಿಗಿತ್ತು.

ನವೀನ ಅಂಶಗಳು

ಶುಚಿ ಧುಮುಕಿದ್ದ ಈ ಮಹಾಸಾಗರದಲ್ಲಿ ಅವರ ವರ್ಗದ ಅನೇಕ ಮೀನುಗಳು ಸ್ವಚ್ಛಂದವಾಗಿ ಈಜುತ್ತಿದ್ದವು. ಆದರೆ ಶುಚಿಗೆ ತಾವು ಯೋಜಿಸಿರುವ ವಿನೂತನ ಹಾಗೂ ನವ್ಯ ಶೈಲಿಯ ಆಭರಣಗಳ ಟ್ರೆಂಡ್ ಬಗ್ಗೆ ನಂಬಿಕೆ ಇತ್ತು. ಪ್ರತಿ ವಾರವೂ 100 ಹೊಸ ವಿನ್ಯಾಸಗಳನ್ನು ಸೃಷ್ಟಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಕೆಲಸಕ್ಕೆ ಶುಚಿ ಮುಂದಾದರು. ಆ ವೆಬ್‌ಸೈಟ್‌ನಲ್ಲಿ ಗ್ರಾಹಕರು ತಮಗೆ ಇಷ್ಟವಾದ ವಿನ್ಯಾಸವನ್ನು ಪ್ರಚುರಪಡಿಸುವ ಅವಕಾಶವಿತ್ತು.

12 ಜನರ ತಂಡ ಸಮರ್ಪಕ ತಂತ್ರಜ್ಞಾನ ಹಾಗೂ ವಿತರಣೆ ಕಾರ್ಯಶೈಲಿಯಿಂದ ಕ್ರಮೇಣವಾಗಿ ನೆಲೆ ನಿಲ್ಲುತ್ತಿರುವ ಸಂಸ್ಥೆ ಕೇವಲ 21 ದಿನಗಳಲ್ಲಿ ಅತಿ ಹೆಚ್ಚಿನ ವಿನೂತನ ವಿನ್ಯಾಸಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.

ಸಂಸ್ಥೆಯ ನಿರ್ದಿಷ್ಟ ಬ್ರಾಂಡ್ ಹಾಗೂ ಸೇವಾ ಗುಣಮಟ್ಟದತ್ತ ಗ್ರಾಹಕರ ನಂಬಿಕೆ ಸಾಧಿಸುವುದು ಸಂಸ್ಥೆಯ ಮುಂದಿರುವ ಅತಿದೊಡ್ಡ ಸವಾಲು. ಸಾಂಪ್ರದಾಯಿಕವಾಗಿ ಹಾಗೂ ಶ್ರೀಮಂತಿಕೆಯಿಂದ ಕೂಡಿರುವ ಕಲಾತ್ಮಕ ವಿನ್ಯಾಸಗಳನ್ನೂ ಕೈಗೆಟುಕುವ ಹಾಗೂ ಸರಳ ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುವುದು ಶುಚಿಯ ಮುಂದಿರುವ ಮತ್ತೊಂದು ಮಹತ್ತರ ಸವಾಲು. ಅದೃಷ್ಟವಶಾತ್ ಆಭರಣಗಳ ಉತ್ಪಾದನೆಯಲ್ಲಿ ಪ್ರಾವಿಣ್ಯ ಗಳಿಸಿರುವ ಶುಚಿಯ ಸಂಸ್ಥೆ ಗ್ರಾಹಕರಿಗೆ ವಿತರಣೆ ಹಾಗೂ ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿದೆ. ಇನ್ನೊಂದು ಕಡೆ ಶುಚಿಯವರ ಸಂಸ್ಥೆಯ ಆಭರಣಗಳು ಹಾಗೂ ಅತ್ಯುತ್ತಮ ವಿನ್ಯಾಸ ಈಗಾಗಲೇ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿರುವ ದೊಡ್ಡ ದೊಡ್ಡ ವ್ಯಾಪಾರಿಗಳ ವಿಶ್ವಾಸ ಗಳಿಸಿಕೊಂಡಿದೆ.

ಪ್ರತಿಭಾವಂತ ಉದ್ಯೋಗಿಗಳನ್ನು ಸಂಸ್ಥೆಗೆ ನೇಮಿಸಿಕೊಳ್ಳುವುದು ಶುಚಿ ಸ್ವತಃ ಅನುಭವಿಸಿದಂತಹ ಇನ್ನೊಂದು ಮಹತ್ತರ ಸವಾಲು. ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಉತ್ಸಾಹಿ, ಕ್ರಿಯಾಶೀಲ ಕೆಲಸಗಾರರನ್ನು ಅರಸಿ ನೇಮಿಸಿಕೊಳ್ಳುವಲ್ಲಿ ಪೈಪಾ+ಬೆಲ್ಲಾ ಸಂಸ್ಥೆ ಸಾಕಷ್ಟು ಶ್ರಮ ವಹಿಸಿದೆ. ಹಾಗೂ ಸಂಸ್ಥೆಯ ಬೆಳವಣಿಗೆ ನಿಟ್ಟಿನಲ್ಲಿ ಇದು ಅತ್ಯಗತ್ಯವೂ ಆಗಿತ್ತು ಎಂದು ಶುಚಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಶೀಘ್ರದಲ್ಲೇ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸುವ ಯೋಜನೆ ಹಮ್ಮಿಕೊಂಡಿದೆ. ಹೊಸ ಹೊಸ ಆಯಾಮದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ನಿತ್ಯವೂ ಹೊಸತನ್ನು ಯೋಚಿಸುವ ಯಾವುದೇ ಸಂಸ್ಥೆಗೂ ಹಿನ್ನಡೆಯಾಗಲಾರದು ಅನ್ನವುದು ಶುಚಿಯವರ ಅಭಿಪ್ರಾಯ.

ಹೂಡಿಕೆ ಕುರಿತ ಕೆಲವು ಸಲಹೆಗಳು

ಇತ್ತೀಚೆಗಷ್ಟೇ ಸಂಸ್ಥೆಗೆ ದೊರೆತ ಅಗಾಧ ಪ್ರಮಾಣದ ಬಂಡವಾಳ ಹೂಡಿಕೆ ಶುಚಿ ಮತ್ತಷ್ಟು ವಿಸ್ತಾರದಿಂದ ಕಂಪನಿ ಬೆಳೆಸಲು ಪ್ರೇರೇಪಿಸಿದೆ. ಶುಚಿ ಕೆಲವು ನಿರ್ದಿಷ್ಟ ವಿಷಯಗಳ ಮೇಲೆ ನಂಬಿಕೆ ಇಟ್ಟಿದ್ದಾರೆ.

ಮೊದಲನೆಯದಾಗಿ- ಯೋಜನೆಗೆ ಮೊದಲೇ ಆರಂಭಿಸಿ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಗುರಿ ಹಾಗೂ ನಿರೀಕ್ಷೆಗಿಂತ ಹೆಚ್ಚು ಹಣ ಹೂಡಿಕೆ ಈ ಎರಡೂ ಸಂಗತಿಗಳು ಸವಾಲು ಜೊತೆಗೆ ಸಂಕಷ್ಟ ತಂದೊಡ್ಡೊತ್ತವೆ.

ಎರಡನೆಯದಾಗಿ- ನಿಮ್ಮ ಹೂಡಿಕೆದಾರರೊಂದಿಗೆ ವಿಶ್ವಾಸದಿಂದ ವ್ಯವಹರಿಸಿ ಸಂಸ್ಥೆಯ ಎಲ್ಲಾ ಸವಾಲುಗಳನ್ನು, ಹಂತ ಹಂತಗಳಲ್ಲಿ ಬರುವ ತೊಂದರೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಇದು ನಿಮ್ಮ ಸಂಸ್ಥೆ ಸಾಗುತ್ತಿರುವ ದಾರಿಯ ಸ್ಪಷ್ಟ ಚಿತ್ರಣವನ್ನು ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಹೂಡಿಕೆ ಮಾಡುವವರಿಗೆ ನೆರವು ನೀಡುತ್ತದೆ.

ಮೂರನೆಯದಾಗಿ- ನಿಮ್ಮ ಕೆಲಸದ ಮೌಲ್ಯಗಳನ್ನು ನಿರ್ಧರಿಸುವುದು ಸಂಸ್ಥೆಯ ಬೆಳವಣಿಗೆಯಷ್ಟೇ ಅತ್ಯಗತ್ಯ. ನೀವು ಪ್ರತಿ ನಿತ್ಯ ಸಂಸ್ಥೆಯನ್ನು ಯಶಸ್ವಿಯಾಗಿ ಮುಂದುವರೆಸಲು ಯಾವ ಯೋಜನೆಗಳನ್ನು ಹೆಣೆಯುತ್ತಿದ್ದೀರಿ ಅನ್ನುವುದು ನಿಮಗೆ ಸ್ಪಷ್ಟವಾಗಿರಬೇಕು. ಒಬ್ಬ ಉತ್ತಮ ವಕೀಲರನ್ನು ನೇಮಿಸಿ ಸಂಸ್ಥೆಯ ಕಾನೂನಾತ್ಮಕ ದಾರಿಗಳನ್ನು ಸ್ಪಷ್ಟಪಡಿಸಿಕೊಳ್ಳಿ.

ನಾಲ್ಕನೆಯದಾಗಿ- ನೀವು ಹಣವನ್ನು ಎಲ್ಲಿಂದ ಹೂಡಿಕೆ ಮಾಡುತ್ತಿದ್ದೀರಾ ಮತ್ತು ನೀವು ಬಳಸುತ್ತಿರುವ ಹಣ ಎಲ್ಲಿ ವಿನಿಯೋಗವಾಗುತ್ತಿದೆ, ಅದರ ಫಲ ಎಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ ಅನ್ನುವುದು ನಿಮಗೆ ತಿಳಿದಿರಬೇಕು.

ಐದನೆಯದಾಗಿ- ನಿಮ್ಮ ಸಂಸ್ಥೆಯಲ್ಲಿ ಹಣ ಹೂಡುವ ಪ್ರತಿ ಹೂಡಿಕೆದಾರನೂ ಒಳ್ಳೆಯ ಹೂಡಿಕೆದಾರನಾಗಿರಬೇಕೆಂದೇನಿಲ್ಲ. ಹೂಡಿಕೆದಾರನಿಂದ ಯಾವುದಕ್ಕೆ ಹೂಡಿಕೆ ಮಾಡಿಸಬೇಕೆಂಬ ವಿಚಾರವೂ ನಿಮಗೆ ಸ್ಪಷ್ಟವಾಗಿ ತಿಳಿದಿರಬೇಕು ಅನ್ನುವುದು ಶುಚಿಯ ಅಭಿಮತ.

Add to
Shares
8
Comments
Share This
Add to
Shares
8
Comments
Share
Report an issue
Authors

Related Tags