ಆವೃತ್ತಿಗಳು
Kannada

ವ್ಯಾವಹಾರ ಶುರುಮಾಡುವುದು V/S ಉದ್ಯಮಿಯಾಗುವುದು

ಟೀಮ್​​​ ವೈ.ಎಸ್​​.ಕನ್ನಡ

YourStory Kannada
28th Nov 2015
Add to
Shares
2
Comments
Share This
Add to
Shares
2
Comments
Share

ಮನುಷ್ಯ ಮುಕ್ತವಾಗಿರಲು ಬಯಸುತ್ತಾನೆ. ಏಕೆಂದರೇ ಅವನನ್ನು ವಿಶ್ವದ ವ್ಯಾವಹಾರದೊಳಗೆ ಎಸೆದರೇ, ಅವನು ಮಾಡುವ ಪ್ರತೀ ಎಲ್ಲಾ ಕೆಲಸಗಳಿಗೆ ಅವನು ಜವಬ್ದಾರನಾಗಿರುತ್ತಾನೆ.

-ಜೇನ್ ಪಾಲ್ ಸಾರ್ಟ್ರೇ

ಉದ್ಯಮಿ ಮೊದಲನೆಯದಾಗಿ ಹಾಗೂ ಮುಖ್ಯವಾಗಿ ಗುರುತಿಸಿಕೊಳುವುದು ಉದ್ಯಮಿ ಎಂದೇ. ತನ್ನ ಉತ್ಸಾಹ ಹಾಗೂ ಸಾಮರ್ಥ್ಯಗಳಿಂದ ಏನೂ ಇಲ್ಲದ ಸ್ಥಿತಿಯಿಂದ ಗಳಿಸಿಕೊಳ್ಳುವ ಸ್ಥಿತಿಯತ್ತ ಉದ್ಯಮಿ ಭಡ್ತಿ ಹೊಂದುತ್ತಾನೆ. ಮೊದಲು ಯಾವುದಾದರೂ ಉದ್ಯಮವನ್ನು ಆರಂಭಿಸುವುದಷ್ಟೇ ಮೊದಲ ಆದ್ಯತೆ. ಆ ಬಳಿಕ ಏನನ್ನು ಉತ್ಪಾದಿಸಬೇಕು, ಯಾರಿಗಾಗಿ ಉತ್ಪಾದಿಸಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬೇಕು ಅನ್ನುವುದು ಆ ಉದ್ಯಮ ನಿರ್ಧರಿಸಬೇಕು.

ಈ ಪ್ರತ್ಯೇಕತೆ ಹಾಗೂ ಸ್ವ-ಪರಿಚಯ ಉದ್ಯಮ ಆರಂಭವಾಗುತ್ತದೆ ಉದ್ಯಮಿಯನ್ನು ಮಾರುಕಟ್ಟೆ ಮಾಡಿಸಿಕೊಡುತ್ತದೆ. ವ್ಯಾವಹಾರಿಕ ವಿಶ್ವದಲ್ಲಿ ಮೊದಲು ಪರಿಚಿತವಾದ ನಂತರವೇ ಆತನ ಕಾಯಾಚರಣೆಗಳು ಆರಂಭಗೊಳ್ಳುತ್ತದೆ. ಮೊದಲು ಉದ್ಯಮಿ ಆ ಬಳಿಕ ಉದ್ಯಮದ ಕಾರ್ಯಾಚರಣೆ. ಉದ್ಯಮವೊಂದು ಮೊದಲು ಗೋಚರವಾಗುತ್ತದೆ ಆ ಬಳಿಕ ಆ ಉದ್ಯಮದ ಪರಿಚಯವಾಗುತ್ತದೆ ಅನ್ನುವ 20ನೇ ಶತಮಾನದ ಪ್ರಖ್ಯಾತ ಈ ಮಾತನ್ನು ಹೇಳಿದವರು ಸಾರ್ಟ್ರೇ.

image


ಕಲಾವಿದ V/S ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವವ

ಸೃಜನಾತ್ಮಕ ಪ್ರಸ್ತುತತೆ ಹೊಂದಿರಲೇಬೇಕು ಅಂತಿಲ್ಲ. ಆದರೆ ನೀವೊಂದು ಉದ್ಯಮವನ್ನು ಆರಂಭಿಸುತ್ತಿದ್ದೀರಿ ಅಂದರೆ, ಅದಕ್ಕೆ ಬೇಕಾದ ಮೊಬೈಲ್ ಆ್ಯಪ್ ನಿರ್ವಹಿಸಬೇಕಿದ್ದರೇ, ಆ ವಿನ್ಯಾಸಕ ಮೊದಲು ಕೆಲವು ಮೊಬೈಲ್ ಆ್ಯಪ್​​​ ನಿರ್ಮಾಣದಲ್ಲಿ ಅನುಭವ ಹೊಂದಿದವನಾಗಿರಬೇಕು. ಆತ ಮೊದಲು ವಿನ್ಯಾಸಗೊಳಿಸಿದ ಸೂತ್ರಗಳೋ ಅಥವಾ ಆ ತಾಂತ್ರಿಕತೆಯ ಸಂಪೂರ್ಣ ಜ್ಞಾನವನ್ನೂ ಕಾರ್ಯಗತಗೊಳಿಸುವಂತಿರಬೇಕು. ಈ ಮೂಲಕ ಆತ ಸಿದ್ಧಪಡಿಸುವ ಮೊಬೈಲ್ ಆ್ಯಪ್ ಸಂಸ್ಥೆಯ ಸಂಪೂರ್ಣ ಪರಿಚಯ ಮಾಡಿಸುವ ಜೊತೆಗೆ ಮಾಹಿತಿ ನೀಡುವಂತಿರಬೇಕು.

ಒಬ್ಬ ಅತ್ಯುತ್ತಮ ಕಲಾವಿದ ಅಥವಾ ಚಿತ್ರಕಾರ ಈ ಸಂಗತಿಯ ಬಗ್ಗೆ ಅರಿವು ಹೊಂದಿರುವುದಿಲ್ಲ. ಒಬ್ಬ ಉದ್ಯಮಿ ಯಾವಗಲೂ ಈ ತಂತ್ರಜ್ಞಾನ ಹೊಂದಿರುವ ಆ್ಯಪ್ ಡೆವಲಪರ್​​ಗೆ ಮಾನ್ಯತೆ ನೀಡುತಾನೆಯೇ ವಿನಃ ಸೃಜನಾತ್ಮ ಆಲೋಚನೆ ಹೊಂದಿರುವ, ತಾಂತ್ರಿಕ ಕೌಶಲ್ಯವಿಲ್ಲದ ಕಲಾವಿದನಿಗಲ್ಲ. ತಾರ್ಕಿಕವಾಗಿ ಉದ್ಯಮವನ್ನು ಅವಲೋಕಿಸಬಲ್ಲ ಆ್ಯಪ್ ಡೆವಲಪರ್​ಗೆ ವಾಸ್ತವದಲ್ಲಿ ಅಸ್ತಿತ್ವವಿರುತ್ತದೆ. ಅಥವಾ ತಂತ್ರಜ್ಞಾನ ಸಂಬಂಧಿ ಅಸ್ತಿತ್ವ ಹೊಂದಿರುವ ಹಿನ್ನೆಲೆಯ ವಿನ್ಯಾಸಕನಿಗೆ ಮಾತ್ರ ಉದ್ಯಮ ಮಣೆ ಹಾಕುತ್ತದೆ.

ಇದೇ ನೀತಿ ನಮ್ಮನ್ನು ಸೃಷ್ಟಿಸಿದ ದೇವರು ಅಥವಾ ಪ್ರಕೃತಿಗೂ ಅನ್ವಯಿಸುತ್ತದೆ. ದೇವರು ಅಥವಾ ಯಾವುದೋ ಶಕ್ತಿ ಸೃಷ್ಟಿಸುವ ಪ್ರತಿಯೊಂದು ಜೀವಿಗಳ ವಿಚಾರದಲ್ಲಿ ಸೃಷ್ಟಿಸಲ್ಪಡುತ್ತಿರುವುದೇನು ಅನ್ನವುದನ್ನು ದೇವರು ಅರಿತಿರುತ್ತಾನೆ. ಮಹಾನ್ ತತ್ವಜ್ಞಾನಿಗಳಾದ ಡೆಸ್ಕ್ರೇಟ್ಸ್ ಹಾಗೂ ಲೈಬ್ನಿಟ್ಸ್ ಈ ನೀತಿಯನ್ನು ಅರ್ಥಮಾಡಿಕೊಳ್ಳುವ ಆಧಾರದಲ್ಲಿ ನಿಂತಿದೆ ಅನ್ನುತ್ತಾರೆ. ಅದೇ ರೀತಿ ಉದ್ಯಮಿಯೂ ತಾನು ಉತ್ಪಾದಿಸುವ ಉತ್ಪನ್ನವೇನು? ಅದರ ಗುಣಾವಗುಣಗಳೇನು ಅನ್ನುವದನ್ನು ಅರಿತಿರುತ್ತಾನೆ.

18ನೇ ಶತಮಾನದ ದೇವರಿಗೆ ಸಂಬಂಧಿಸಿದ ತರ್ಕಶಾಸ್ತ್ರವೂ ದೇವರ ಅಸ್ತಿತ್ವವನ್ನು ಸಾಬೀತು ಮಾಡುವುದರ ಮೊದಲೇ ದೇವರ ಅಸ್ತಿತ್ವ ನೆಲೆಗೊಳಿಸುವುದು ಅನ್ನುವುದಾಗಿತ್ತು.

ಅಸ್ತಿತ್ವವಾದ ಹೇಳುವಂತೆ ಮನುಷ್ಯ ಶಿಲೆಗಳಿಗಿಂತ ಭಿನ್ನ ಯಾಕಂದರೆ ಆತ ಸ್ವತಂತ್ರ್ಯವಾಗಿ ಚಲಿಸಬಲ್ಲ. ಮನುಷ್ಯನ ಅತಿ ಸ್ವ-ಉತ್ಸಾಹ ಮೀರಿದಂತೆ ಆತ ಕೇವಲ ತನ್ನ ಚಲನೆಯಿಂದ ತನ್ನ ಇರುವನ್ನು ಸಾಬೀತು ಮಾಡಿಕೊಳ್ಳಬಲ್ಲ. ಭೂತದ ವ್ಯವಹಾರ ಹಾಗೂ ಭವಿಷತ್ ಚಿಂತನೆಗಳ ನಡುವೆ ತನ್ನದೇ ಆದ ಪ್ರತ್ಯೇಕ ಆಯ್ಕೆಯನ್ನು ಆತ ಇಟ್ಟುಕೊಳ್ಳಬಲ್ಲ. ಆದರೆ ಮನುಷ್ಯನ ಅಸ್ತಿತ್ವದ ಕಾರ್ಯಾಚರಣೆಗಳು ಗಣನೆಗೆ ಬರುವುದು ಮಾತ್ರ ಆತ ಸತ್ತ ನಂತರ.

ಸಾವಿನ ಅಂಶದ ಕುರಿತಾದ ತನ್ನ ಆಲೋಚನೆಯನ್ನು ಸಾರ್ಟ್ರೇ ತನ್ನ ಪ್ರಸಿದ್ಧ ನಾಟಕ ನೋ ಎಕ್ಸಿಟ್ನಲ್ಲಿ ವಿಷದಪಡಿಸಿದ್ದಾನೆ. ಮೂವರು ವ್ಯಕ್ತಿಗಳು ಸತ್ತು ನರಕಕ್ಕೆ ಹೋಗುತ್ತಾರೆ. ಆದರೆ ಆಶ್ಚರ್ಯವೆಂದರೇ, ನರಕದಲ್ಲಿ ಅವರಾರಿಗೂ ಯಾವುದೇ ಶಿಕ್ಷೆಯಿರುವುದಿಲ್ಲ ಹಾಗೂ ಅವರನ್ನು ಹಿಂಸೆಗೆ ಒಳಪಡಿಸುವುದಿಲ್ಲ. ಅವರು ಅಲ್ಲಿನ ಸುವ್ಯವಸ್ಥಿತ ಕೋಣೆಯೊಂದರಲ್ಲಿ ಕನ್ನಡಿಯನ್ನು ದಿಟ್ಟಿಸುತ್ತಾ ಕೂರಬೇಕಿರುತ್ತದೆ. ಈ ಸತ್ತ ಆತ್ಮಗಳ ಪ್ರತಿಬಿಂಬ ಕನ್ನಡಿಯಲ್ಲಿ ಮೂಡುವುದಿಲ್ಲ. ಆದರೆ ನಿಧಾನವಾಗಿ ಅದರ ಪಾರದರ್ಶಕ ಛಾಯೆಯಲ್ಲಿ ಸತ್ತವರ ಪ್ರಜ್ಞೆಯ ಅರಿವು ಮೂಡತೊಡಗುತ್ತದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲಾರಂಭಿಸುತ್ತಾರೆ. ಸಾರ್ಟ್ರೇ ಇದನ್ನು ನರಕವೆಂದರೇ ಬೇರೆಯ ವ್ಯಕ್ತಿಗಳು ಎಂದು ತೀರ್ಮಾನಿಸುತ್ತಾರೆ.

ಮನುಷ್ಯ ಭವಿಷ್ಯದ ಮನುಷ್ಯತನದ ಬಿಂಬ

ಅಸ್ತಿತ್ವವಾದದ ತರ್ಕದ ಜೊತೆಗೆ ಸಾರ್ಟ್ರೇ, ಔದ್ಯಮಿಕ ಯುಗದ ವ್ಯಾಖ್ಯಾನ ಮಾಡಿದ್ದಾರೆ. ಬೆಳವಣಿಗೆಯ ಅಂಶವನ್ನು ನಿರಾಕರಿಸಿರುವ ಅವರು ಮಾನವತಾವಾದ ಅನ್ನುವ ಇನ್ನೊಂದು ತಾರ್ಕಿಕ ಆಯಾಮದ ಮೇಲೆ ಬೆಳಕು ಚೆಲ್ಲಿದ್ದಾರೆ. ಮಾನವತಾವಾದ ಅನ್ನುವುದು ಮಾನವನ ವರ್ತನೆಗಳ ಆಧಾರದ ಮೇಲೆ ವ್ಯಾಖ್ಯಾನಿಸಬಹುದಾದ ಅಂಶವಾಗಿದ್ದು, ಇಲ್ಲಿನ ಭೌತಿಕ ಸ್ವಭಾವ ಭಗವಂತನ ಸೃಷ್ಟಿ ಹಾಗೂ ಕಾರ್ಯಾಚರಣೆಯ ಅನ್ವಯ ನಿರ್ಧಾರಿತರವಾಗಿರುತ್ತದೆ. ಇಲ್ಲಿನ ಮಾನವತಾವಾದದ ಕಾರ್ಯಗಳು ಕಲೆ ಹಾಗೂ ಸಾಹಿತ್ಯದಲ್ಲಿ ಮುಖ್ಯವಾಗಿ ಅಭಿವ್ಯಕ್ತಗೊಳ್ಳುತ್ತವೆ ಅನ್ನುವುದು ಸಾರ್ಟ್ರೇಯ ವಾದ.

ಆಧುನಿಕ ಆರ್ಥಿಕತೆಯನ್ನು ನೋಡುವುದಾದರೇ, ಉದ್ಯಮಿ ತನ್ನ ಉದ್ಯಮದ ಕಾರ್ಯಾಚರಣೆಯನ್ನು ಪ್ರಶ್ನಿಸುವ ಪರಿಕ್ರಮ ಮುಖ್ಯವಾಗಿ ಕಂಡುಬರುತ್ತಿದೆ. ಉದ್ಯಮಿಯ ಅರಿವಿನ ದೃಷ್ಟಿಕೋನದಿಂದ ಈ ಕ್ರಮ ಸೂಕ್ತವೂ ಆಗಿದೆ. ಉದ್ಯಮಿಯ ವ್ಯಾವಹಾರಿಕ ಯೋಜನೆಯ ವಿಸ್ತಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬುಕ್ ಆಫ್ ಲೈಫ್ ರೈಟ್ಲೀ ಹೇಳುವಂತೆ ಬಹುತೇಕ ಔದ್ಯಮಿಕ ಕ್ಷೇತ್ರದ ಸಂಶೋಧಕರು ತಮ್ಮ ಆಲೋಚನೆಗಳನ್ನು ಹೀಗೆ ಮಾರ್ಪಡಿಸಿಕೊಳ್ಳುತ್ತಿದ್ದಾರೆ. ಉದ್ಯಮಿಗಳು ಕಲಾವಿದರಂತೆ ತಮ್ಮ ಆತ್ಮದೊಂದಿಗೆ ಅನುಸಂಧಾನ ಗೂ ಪರಿಣಾಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

image


ಆಶಾವಾದದ ತತ್ವಶಾಸ್ತ್ರದ ಅನ್ವಯ ಅಸ್ತಿತ್ವವಾದವು, ಸಂಪೂರ್ಣ ಸ್ವಾತಂತ್ರ್ಯ ಹಾಗೂ ಮೌಲ್ಯಗಳನ್ನು ಹೊಂದಿರುವ ಹಾಗೂ ಮಾನವ ಸಾಮರ್ಥ್ಯ ಹಾಗೂ ಪರಿಪೂರ್ಣ ಹೊಣೆಗಾರಿಕೆಯನ್ನು ವ್ಯಾಖ್ಯಾನಿಸುವ ಮುಖೇನ ಉದ್ಯಮ ಕ್ಷೇತ್ರದ ಫಲಿತಾಂಶಗಳನ್ನು ನಿರ್ಧರಿಸತೊಡಗಿದೆ. ಉದ್ಯಮಿ ಎಷ್ಟು ಆಶಾವಾದಿಯಾಗಿದ್ದಾನೆ ಎಂದು ತೀರ್ಮಾನಿಸುವುದು ಕಷ್ಟವೇನಲ್ಲ. ಕೇವಲ ಉದ್ಯಮಿಯ ಸಾಧನೆಗಳ ಮಾನದಂಡದ ಜೊತೆ ಆತ ಅನುಸರಿಸುತ್ತಿರುವ ಕಾರ್ಯಾಚರಣೆಯ ಮಾದರಿಯನ್ನೂ ಇಲ್ಲಿ ಪರಿಗಣಿಸುವುದು ಮುಖ್ಯ.

ತನಗೆ ಅಪರಿಚಿತವಾದ ಕ್ಷೇತ್ರದೊಳಗೆ ಕಾಲಿಡುವ ಯಾವುದೇ ಉದ್ಯಮಿಯಾದರೂ ಇಲ್ಲಿನ ಜೂಜಿನಂತಹ ಸ್ಫರ್ಧೆಗೆ ತನ್ನನ್ನು ತಾನು ಒಡ್ಡಿಕೊಳ್ಳುವ ಧೈರ್ಯ ತೋರಿಸಬೇಕಿದೆ. ಆ ಉದ್ಯಮಿ ಮಾನವತಾವಾದದ ಜೊತೆಗೆ ವ್ಯವಹರಿಸಲು ಕಲಿಯಬೇಕಿದೆ. ಇದು ಟ್ಯಾಕ್ಸಿ ಌಪ್ ಹೊಂದಿರುವ ಹಾಗೂ ಮಿಲಿಯನ್ಗಟ್ಟಲೇ ಜನರೊಂದಿಗೆ ವ್ಯವಹರಿಸುವ ಉದ್ಯಮಿಗೆ ಅತ್ಯಗತ್ಯವೂ ಹೌದು. ಇಲ್ಲಿ ಕೇವಲ ಹಣ ಮತ್ತು ವ್ಯವಹಾರ ಅತಿ ಮುಖ್ಯ ಪಾತ್ರ ವಹಿಸಿದರೂ, ಸೂಕ್ಷ್ಮ ಸಂಬಂಧಗಳ ಅವಲೋಕನವೂ ಅತ್ಯಗತ್ಯ.

ನೀವೇನಾಗಬೇಕಿತ್ತು V/S ನೀವೇನಾಗಲಿಲ್ಲ

ಅಸ್ತಿತ್ವವಾದದ ತತ್ವ, ಉದ್ಯಮಿಯ ಮುಖ್ಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ವಿಚಾರದಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವ್ಯವಹಾರದಲ್ಲಿ ಉದ್ಯಮಿಯೊಬ್ಬನ ವೈಯಕ್ತಿಕ ಪಾತ್ರವೇನು? ಆತ ಸೃಷ್ಟಿಸುವ ಕಾರ್ಯವ್ಯಾಪ್ತಿಯಲ್ಲಿ ಅವನ ಬದುಕಿನ ಆಯ್ಕೆಯ ಪ್ರಮಾಣವೇನು? ಆತನ ಉದ್ಯಮದಲ್ಲಿ ಉದ್ಯೋಗಿಗಳು ಎಷ್ಟು ಸ್ವಾತಂತ್ರ್ಯ ಹೊಂದಿದ್ದಾರೆ? ನಿರ್ಧಾರ ಕೈಗೊಳ್ಳುವ ಹಂತದಲ್ಲಿ ಅಪನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಮುಖ್ಯವಾಗಿ ಉದ್ಯಮಿಯ ಅಧಿಕೃತತೆಯ ಪರಿಮಾಣವೇನು?

ಸಾರ್ಟ್ರೇ ಹಾಗೂ ಹೈಡೆಗ್ಗರ್ ಇಬ್ಬರೂ ಅಸ್ತಿತ್ವವಾದದ ಆಯಾಮದಲ್ಲಿ ಉದ್ಯಮಿಯ ಅಧಿಕೃತತೆಯ ಪಾತ್ರವನ್ನು ಚರ್ಚಿಸಿದ್ದಾರೆ. ಕ್ರೈಂ ಎಂಡ್ ಪನಿಶ್ಮೆಂಟ್ನಲ್ಲಿ ದೋಸ್ತಾವಸ್ಕಿ ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದಾನೆ. ಮಾನವ ಏನಾಗಬಹುದಿತ್ತು ಹಾಗೂ ಏನಾಗಲಿಲ್ಲ ಅನ್ನುವ ಪ್ರಶ್ನೆಗಳಮಧ್ಯೆಯ ವೈರುಧ್ಯವೇ ಮನುಷ್ಯನ ಸಧ್ಯದ ಸ್ಥಿತಿ.

ಇದೇ ವಾದಕ್ಕೆ ಪೂರಕವೆಂಬಂತೆ ಸಕಾರಾತ್ಮಕ ಅವಕಾಶ ಗಳಿಕೆ ವರ್ಸಸ್ ಸಾಮಾಜಿಕ ಅಭಿವೃದ್ಧಿ ಆಯಾಮವನ್ನೂ ಚರ್ಚಿಸಲಾಗುತ್ತಿದೆ. ಧನಾತ್ಮಕ ಚಿಂತಕರು ವಿಶ್ವದಲ್ಲಿರುವ ಅವಕಾಶಗಳು ಸಂಶೋಧನೆಗೆ ಸಿದ್ಧವಿದೆ ಆದರೆ, ಉದ್ಯಮ ಕ್ಷೇತ್ರದಲ್ಲಿ ಸೃಜನಾತ್ಮಕ ಅವಕಾಶಗಳಿಂದ ಉಂಟಾಗುವ ಪ್ರಗತಿಯೇ ಸಾಮಾಜಿಕ ಅಭಿವೃದ್ಧಿ ಸಾಧಿಸುತ್ತದೆ ಎಂದು ನಂಬುತ್ತಾರೆ.

ಮೈಕಲ್ ಗೋಲ್ಡ್ಬೈ ಹಾಗೂ ರಾಬರ್ಟ್ ಮ್ಯಾಥ್ಯೂ ತಮ್ಮ ಉದ್ಯಮಶೀಲತೆ ಹಾಗೂ ಅಸ್ಥಿತ್ವವಾದ ಅನ್ನುವ ಪ್ರಬಂಧದಲ್ಲಿ ಅಸ್ತಿತ್ವವಾದದ ಪರವಾದ ನಿಲುವನ್ನು ಸಮರ್ಥಿಸಿದ್ದಾರೆ. ಅವಕಾಶಗಳು ಅಸ್ತಿತ್ವವಾದವನ್ನು ಪುಷ್ಟೀಕರಿಸುವ ಅಂಶ. ಇದೇ ಉದ್ಯಮಶೀಲತೆಯ ಸರ್ವಾಂಗೀಣ ಪ್ರಗತಿಯ ಮಾನದಂಡ ಅನ್ನುವುದು ಅವರ ವಾದದ ತಿರುಳಾಗಿದೆ.

ಪೈನ್ ಹಾಗೂ ಗಿಲ್ಮೋರ್ ಸಹ ತಮ್ಮ ದಿ ಎಕ್ಸ್ಪೀರಿಯನ್ಸ್ ಎಕಾನಮಿಯಲ್ಲಿ ಪ್ರತಿಯೊಂದು ವ್ಯವಹಾರವೂ ಕಾರ್ಯ ಹಾಗೂ ವೇದಿಕೆಯನ್ನು ನಿರ್ಮಿಸಿಕೊಡುವ ರಂಗವಿದ್ದಂತೆ ಅಂತ ವ್ಯಾಖ್ಯಾನಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಅಸ್ತಿತ್ವವಾದ ಉದ್ಯಮದಲ್ಲಿ ನೈತಿಕ ಮೌಲ್ಯಗಳನ್ನು ಸೇರಿದಂತೆ ಉಳಿದ ವಿಚಾರಗಳನ್ನು ಸಮರ್ಥಿಸುವ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ. ಲೌರಾ ನಾಶ್ರ ಪುಸ್ತಕ ಎಥಿಕ್ಸ್ ವಿತೌಟ್ ಸೆರ್ಮೋನ್ನಲ್ಲಿ ಉದ್ಯಮದಲ್ಲಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅಸ್ತಿತ್ವವಾದಕ್ಕೆ ಸಂಬಂಧಿಸಿದ 12 ಪ್ರಮುಖ ಪ್ರಶ್ನೆಗಳನ್ನು ಚರ್ಚಿಸಲಾಗಿದೆ.

1. ನೀವು ನಿಮ್ಮ ಸಮಸ್ಯೆಯನ್ನು ಸಮರ್ಪಕವಾಗಿ ವ್ಯಾಖ್ಯಾನಿಸಿದ್ದೀರಾ?

2. ನೀವು ನಿಮ್ಮ ಸಮಸ್ಯೆಯನ್ನು ಇನ್ನೊಂದು ಆಯಾಮದಿಂದ ಪರಾಮರ್ಶಿಸುವ ಪ್ರಯತ್ನ ಮಾಡಿದ್ದೀರಾ?

3. ಈ ಸನ್ನಿವೇಶ ಮೊದಲ ಸ್ಥಾನ ಪಡೆದುಕೊಂಡಿದ್ದು ಹೇಗೆ?

4. ಓರ್ವ ವ್ಯಕ್ತಿಯಾಗಿ ಹಾಗೂ ಒಂದು ಸಂಸ್ಥೆಯ ಸದಸ್ಯರಾಗಿ ನೀವು ನಿಮ್ಮ ನಿಷ್ಠೆಯನ್ನು ಯಾರಿಗೆ ಅರ್ಪಿಸುತ್ತೀರಿ?

5. ಈ ನಿರ್ಧಾರ ಮಾಡುವ ಹಿಂದಿರುವ ನಿಮ್ಮ ಉದ್ದೇಶವೇನು?

6. ಫಲಿತಾಂಶಗಳ ಹೋಲಿಕೆಯಲ್ಲಿ ನಿಮ್ಮ ಈ ಉದ್ದೇಶ ಹೇಗೆ ನೆರವಾಗುತ್ತದೆ?

7. ನಿಮ್ಮ ನಿರ್ಧಾರ ಹಾಗೂ ಕಾರ್ಯ ಯಾರಿಗೆ ಹಾನಿ ಮಾಡಬಹುದು?

8. ನಿಮ್ಮ ನಿರ್ಧಾರ ಕೈಗೊಳ್ಳುವಾಗ ಯಾವುದೋ ಸಮಸ್ಯೆ ಯಾರಿಗೋ ತೊಡಕನ್ನುಂಟು ಮಾಡಿದರೇ, ಅದನ್ನು ನೀವು ಪರಿಹರಿಸಲು ಸಿದ್ಧರಿದ್ದೀರಾ?

9. ನಿಮ್ಮ ಸ್ಥಾನ ದೀರ್ಘಕಾಲದವರೆಗೂ ನಿಮ್ಮೊಂದಿಗಿರುತ್ತದೆ ಅನ್ನುವ ನಂಬಿಕೆ ನಿಮಗಿದೆಯಾ?

10. ನೀವು ನಿಮ್ಮ ವ್ಯಾವಹಾರಿಕ ತೀರ್ಮಾನಗಳನ್ನು ಯಾರೊಂದಿಗೆ ಹಂಚಿಕೊಳ್ಳುತ್ತೀರಿ, ಅಂದರೆ ನಿಮ್ಮ ಸಿಇಓ, ಬೋರ್ಡ್ ಆಫ್ ಡೈರೆಕ್ಟರ್ಸ್, ನಿಮ್ಮ ಕುಟುಂಬ, ಅಥವಾ ಸಮಾಜದೆದರು?

11. ನಿಮ್ಮ ಯಾವ ಸಾಮರ್ಥ್ಯ ಸೂಚಕ ಅರ್ಥವಾಗಬಲ್ಲುದು? ಅಥವಾ ಅನರ್ಥಕ್ಕೆ ಎಡೆ ಮಾಡಿಕೊಡುತ್ತದೆ?

12. ಯಾವ ಸ್ಥಿತಿಯಲ್ಲಿ ನೀವು ನಿಮ್ಮ ನಿರ್ಧಾರವನ್ನು ಬಿಟ್ಟುಕೊಡುತ್ತೀರಿ?

ಇವೇ ಆ 12 ಪ್ರಶ್ನೆಗಳು. ದೊಡ್ಡ ದೊಡ್ಡ ಸಂಸ್ಥೆಗಳ ಡಿಸಿಷನ್ ಮೇಕರ್ಸ್ ಕಠಿಣವಾದ ಕ್ರಮಗಳನ್ನು ನೀತಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಯಾವುದೇ ಉದ್ಯಮದಲ್ಲಾದರೂ ಸವಾಲುಗಳು ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಸಂಪೂರ್ಣ ವಿಭಿನ್ನವಾಗಿರುತ್ತವೆ. ಸ್ವತಃ ಅರಿವು ಹಾಗೂ ಅಸ್ತಿತ್ವವಾದ ಇಲ್ಲಿ ಮೌಲ್ಯಗಳನ್ನು ನಿರ್ಧರಿಸುತ್ತವೆ.

ಪ್ರಸಿದ್ಧ ಉದ್ಯಮಿಗಳಾದ ಎವಾನ್ ವಿಲಿಯಂ, ಸ್ಟೀವ್ ಜಾಬ್ಸ್, ಎಲಾನ್ ಮಾಸ್ಕ್, ಪೀಟರ್ ಡೈಮೆಂಡೀಸ್ ಬದುಕನ್ನು ಹತ್ತಿರದಿಂದ ಗಮನಿಸಿದಾ ಸಣ್ಣ ಸಣ್ಣ ವಿಚಾರಗಳಿಗೆ ಅವರು ನೀಡುವ ಪ್ರಧಾನ್ಯತೆ ಹಾಗೂ ಮೌಲ್ಯಗಳ ಬಗ್ಗೆ ಅವರಿಗಿರುವ ಗೌರವ ಅರಿವಾಗುತ್ತದೆ. ಮುಖ್ಯವಾಗಿ ಅವರೆಲ್ಲರಲ್ಲೂ ಇರಬಹುದಾದ ಆಶಾವಾದ ಗೋಚರಿಸುತ್ತದೆ.

ಇಲ್ಲಿ ಸ್ಪಷ್ಟವಾದ ವ್ಯತ್ಯಾಸವೆಂದರೇ ವ್ಯವಹಾರವೇ ಬೇರೆ, ಉದ್ಯಮವೇ ಬೇರೆ. ಈ ಎರಡೂ ಕ್ಷೇತ್ರಗಳ ನಡುವೆ ವ್ಯಾಖ್ಯಾನಿಸಲ್ಪಟ್ಟ ಅಂತರವಿದೆ. ವ್ಯವಹಾರ ಅನ್ನುವುದು ಆರ್ಥಿಕ ಆಯಾಮವಾದರೇ, ಉದ್ಯಮಶೀಲತೆ ಇದನ್ನೂ ಮೀರಿದ ಮೂಲಭೂತ ಆಯಾಮ. ಪ್ರಾಯಶಃ ಸಾರ್ಟ್ರೇ ಹೇಳುವಂತೆ ಮನುಷ್ಯ ಅನ್ನುವುದೇ ನಿರುಪಯುಕ್ತ ಉತ್ಸಾಹ ಅನ್ನುವುದು ಸತ್ಯವೇನೋ.

ಲೇಖಕರು: ಸೌರವ್​ ರಾಯ್​​

ಅನುವಾದಕರು: ವಿಶ್ವಾಸ್​​​​​

Add to
Shares
2
Comments
Share This
Add to
Shares
2
Comments
Share
Report an issue
Authors

Related Tags