ಆವೃತ್ತಿಗಳು
Kannada

ಶತಮಾನದ ವರನಟ ಡಾ.ರಾಜ್​​ಕುಮಾರ್​​​​​​

ಟೀಮ್​​ ವೈ.ಎಸ್​​.

30th Jun 2015
Add to
Shares
1
Comments
Share This
Add to
Shares
1
Comments
Share

ಡಾ. ರಾಜ್​​ಕುಮಾರ್​​. ಕನ್ನಡ ಚಿತ್ರರಂಗದ ಎವರ್​ ಗ್ರೀನ್​ ಸೂಪರ್​ಸ್ಟಾರ್​. ಸ್ಯಾಂಡಲ್​ವುಡ್​​ ಪಾಲಿಗೆ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಮೇರು ಕಲಾವಿದ. ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಹೀಗೆ ಅನೇಕ ಬಿರುದುಗಳು ರಾಜ್​​ಕುಮಾರ್​​ಗಿವೆ. ರಾಜ್​ಕುಮಾರ್​ ಓದಿದ್ದು ಕೇವಲ 3ನೇ ತರಗತಿ. ಆದ್ರೆ ವಿದ್ಯೆಗಿಂತ ಕಲೆಯೇ ಮೇಲು ಎಂಬುದನ್ನು ಡಾ. ರಾಜ್​ ತೋರಿಸಿಕೊಟ್ರು. ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಿಯಿಸಿದ್ರು. ಅಭಿಮಾನಿಗಳನ್ನು ದೇವರು ಎಂದು ಕರೆದು ಹೃದಯವಂತರಾದ್ರು.

ಕೇವಲ ನಟನೆ ಮಾತ್ರ ಡಾ. ರಾಜ್​​ಗೆ ಒಲಿದಿರಲಿಲ್ಲ. ಕಲೆಯ ಪ್ರತಿಯೊಂದು ಕ್ಲಾಸ್​​ಗಳಲ್ಲೂ ನಟ ಸಾರ್ವಭೌಮನ ಕೊಡುಗೆ ಇತ್ತು. ಅದು ಇಂಗ್ಲೀಷ್​ ಆಗಿರಲಿ ಅಥವಾ ಹಳೆಗನ್ನಡವೇ ಆಗಿರಲಿ ಡಾ.ರಾಜ್​ಗೆ ಎಲ್ಲದರಲ್ಲೂ ಪರಿಣಿತರಾಗಿದ್ರು.. ಚಿತ್ರಗಳಲ್ಲಿ ಹಾಡುತ್ತಿದ್ದರು. ಇಷ್ಟೆಲ್ಲಾ ಇದ್ರೂ ಡಾ.ರಾಜ್​ ಎಂದೂ ಪರಭಾಷಾ ಚಿತ್ರಗಳಲ್ಲಿ ನಟಿಸಲಿಲ್ಲ. ಆಫರ್​​ಗಳ ಮೇಲೆ ಆಫರ್​​ಗಳು ಬಂದ್ರೂ ರಾಜ್​​ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಡಾ.ರಾಜ್​​ಕುಮಾರ್​​​ಗೆ ರಾಷ್ಟ್ರಪ್ರಶಸ್ತಿ, ರಾಜ್ಯ ಫಿಲ್ಮ್​​ಫೇರ್​​ ಪ್ರಶಸ್ತಿ ಹೀಗೆ ಎಲ್ಲಾ ಪ್ರಶಸ್ತಿಗಳು ಡಾ.ರಾಜ್​​ಕುಮಾರ್​ಗೆ ಒಲಿದಿವೆ.

image


ರಾಜ್​​ ಕುಮಾರ್​ ಹಿನ್ನೋಟ:

ಡಾ. ರಾಜ್ ಅವರ ನಿಜ ನಾಮ ಮುತ್ತುರಾಜ್. ಮುತ್ತು ರಾಜ್​​ 1929 ರಂದು ಗಾಜನೂರಿನಲ್ಲಿ ಜನಿಸಿದರು. ಮಾತೃಭಾಷೆ ಕನ್ನಡ. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನ್ ಮತ್ತು ತಾಯಿ ಲಕ್ಷ್ಮಮ್ಮ. ರಾಜ್​​ ತಂದೆ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತಿದ್ದರು. ಕಂಸ, ರಾವಣ ಹೀಗೆ ಹಲವು ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಮುತ್ತುರಾಜ್ 8ನೇ ವಯಸಿನಲ್ಲೇ ಶಾಲೆ ಬಿಟ್ಟರು. ತನ್ನ 25 ನೇ ವಯಸಿನವರೆಗೂ ಗುಬ್ಬಿ ವೀರಣ್ಣ ಅವರ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತ್ತಿದ್ದರು. ಈ ಮಧ್ಯೆ ಪಾರ್ವತಮ್ಮಕೈ ಹಿಡಿದ್ರು.

ಸಿನಿಮಾ ಜೀವನ:

image


ರಾಜ್ ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಅಭಿನಯ ಮಾಡುತ್ತಿದ್ದರು ಆ ಸಮಯದಲ್ಲಿ ನಿರ್ದೇಶಕ ಸಿಂಹ ಕಣ್ಣಿಗೆ ಬಿದ್ದರು. ಸಿಂಹ ತಮ್ಮ ಚಿತ್ರ ಬೇಡರ ಕಣ್ಣಪ್ಪ ಪಾತ್ರಕ್ಕೆ ಹೊಸ ಕಲಾವಿದರನ್ನು ಹುಡುಕಾಟ ಮಾಡುತ್ತಿದ್ದರು. ಆ ಸಮಯದಲ್ಲಿ ರಾಜ್ ಅವರ ಅಭಿನಯ ಮೆಚ್ಚಿ ತಮ್ಮ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿದರು. ಮುತ್ತುರಾಜ್ ಹೆಸರು ಬದಲಿಸಿ ರಾಜ್‌ಕುಮಾರ್ ಎಂದು ನಾಮಕರಣ ಮಾಡಿದರು.ಅದು ರಾಜ್ ಅವರ ಮೊದಲ ಚಿತ್ರ. ಅಭಿನಯ ಮಾಡಿದ ಮೊದಲ ಚಿತ್ರದಲ್ಲೇ ಅದ್ಭುತ ನಟನೆ ನೀಡಿ ಸೈ ಅನ್ನಿಸಿಕೊಂಡರು ಮತ್ತು ಆ ಚಿತ್ರ ಬಹಳ ಯಶಸ್ವಿಯಾಯಿತು.

ರಾಜ್ ಬಬ್ರುವಾಹನ, ಕೃಷ್ಣ ದೇವರಾಯ, ಕಾಳಿದಾಸ ಹೀಗೆ ಹಲವು ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ರಾಜ್ ಮಾಡದೆ ಇರುವ ಪಾತ್ರಗಳೇ ಇಲ್ಲ. ಅಡು ಮುಟ್ಟದ ಸೊಪ್ಪಿಲ್ಲ ರಾಜ್ ಮಾಡದ ಪಾತ್ರ ಇಲ್ಲ ಎಂಬ ಗಾದೆಯೂ ಕೂಡ ಇದೆ. ರಾಜ್ ಅವರು ಕನ್ನಡದ ಎಲ್ಲ ನಾಯಕಿಯರ ಜೊತೆ ಅಭಿನಯ ಮಾಡಿದ್ದಾರೆ ಭಾರತಿ, ಜಯಂತಿ, ಲೀಲಾವತಿ, ಪಂಡರೀಬಾಯಿ, ಮಂಜುಳಾ ಹೀಗೆ ಎಲ್ಲರ ಜೊತೆಗೂ ಅಭಿನಯ ಮಾಡಿದ್ದಾರೆ. ಶಂಕರ್‌ನಾಗ್, ಪಂತುಲು ಸೇರಿದಂತೆ ಎಲ್ಲ ಪ್ರಸಿದ್ಧ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

ರಾಜ್ ಅವರು ಹಲವು ಚಿತ್ರಗಳಲ್ಲಿ ನಿರ್ಮಾಪಕ ಮತ್ತು ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಶಂಕರ್ ಗುರು, ಕವಿರತ್ನ ಕಾಳಿದಾಸ ಮುಂತಾದ ಚಿತ್ರಗಳು ಆಲ್​​ಟೈಮ್​​ ಹಿಟ್​​ಲಿಸ್ಟ್​​ನಲ್ಲಿ ಸೇರಿಕೊಂಡಿವೆ . ಆಪರೇಶನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿ ಐ ಡಿ 999 ನಂತಹ ಚಿತ್ರಗಳಲ್ಲಿ ಡಾ. ರಾಜ್​​ ಸಾಹಸ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ. ಅಚ್ಚರಿ ಅಂದ್ರೆ ಆಪರೇಶನ್ ಡೈಮಂಡ್ ರಾಕೆಟ್ ನಲ್ಲಿ ಇಂಗ್ಲೀಷ್​​ ಹಾಡು ಕೂಡ ಡಾ.ರಾಜ್​​ ಹಾಡಿದ್ದರು.

ಡಾ. ರಾಜ್ ತಮ್ಮ ವಜ್ರೇಶ್ವರಿ ಬ್ಯಾನರ್ ಅಂತ ಹೊಸ ಸಿಮಾನ ಪ್ರೊಕ್ಷನ್​​ ಅನ್ನು ಸ್ಥಾಪಿಸಿದ್ದರು. ಬೇರೆ ನಾಯಕರ ಚಿತ್ರಗಳನ್ನೂ ಕೂಡ ನಿರ್ಮಾಣ ಮಾಡಿದ್ದರು. ತಮ್ಮ ಬ್ಯಾನರ್ ಮೂಲಕ ಹಲವು ನಾಯಕಿಯರನ್ನು ಕನ್ನಡ ಚಿತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ರಮ್ಯಾ, ಪ್ರೇಮ, ರಕ್ಷಿತಾ ರಂತಹ ಸೂಪರ್​ ಸ್ಟಾರ್​​ಗಳು ಮೊದಲು ನಾಯಕಿಯರಾಗಿ ಕಾಣಿಸಿಕೊಂಡಿದ್ದು ವಜ್ರೇಶ್ವರಿ ಕಂಬೈನ್ಸ್​​ನಿಂದಲೇ.

ರಾಜ್ ಗಾಯಕರಾಗಿಯೂ ಕೂಡ ಹೆಸರು ಮಾಡಿದ್ದಾರೆ. ಅವರ ಆರಂಭದ ಚಿತ್ರಗಳಿಗೆ ಪಿ ಬಿ ಶ್ರೀನಿವಾಸ್ ಹಾಡುತ್ತಿದ್ದರು. ನಂತರ ರಾಜ್ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಯಾರೇ ಕೂಗಾಡಲಿ ಹಾಡು ಹಾಡಿದರು. ಅದು ಯಶಸ್ವಿ ಆಯಿತು ನಂತರ ತಮ್ಮ ಎಲ್ಲ ಚಿತ್ರಗಳಲ್ಲಿ ಅವರೇ ಹಾಡಿದ್ದಾರೆ. ಬೇರೆ ಚಿತ್ರಗಳಲ್ಲೂ ಹಾಡಿದ್ದಾರೆ. ಅವರ ನಾದಮಯ ಹಾಡಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ.

ಎಸ್ ಪಿ ಬಿ ಅಂತಹ ಹಾಡುಗಾರನಿಗೂ ಧನಿಯಾಗಿದ್ದಾರೆ. ತಂದೆ ಕೊಡಿಸೊ ಸೀರೆ ಎಂಬ ಅವರ ಹಾಡು ಇಂದಿಗೂ ಅಜರಾಮರ. ಹಲವು ದೇವರ ಹಾಡುಗಳನ್ನು ಕೂಡ ಹಾಡಿದ್ದಾರೆ.

ಅವರು ತಮ್ಮ 72 ನೇ ವಯಸಿನಲ್ಲಿಯೂ ನಾಯಕನಾಗಿ ಶಬ್ದವೇದಿ ಚಿತ್ರದಲ್ಲಿ ಅಭಿನಯಿಸಿ ಅಭಿನಯಕ್ಕೆ ಮುಪ್ಪಿಲ್ಲ ಎಂದು ಡಾ.ರಾಜ್​​ ಸಾರಿದ್ದರು. ಆ ಚಿತ್ರವನ್ನು ಎಸ್​​. ನಾರಾಯಣ್ ನಿರ್ದೇಶನ ಮಾಡಿದ್ದರು. ಜಯಪ್ರದಾ ನಾಯಕಿಯಾಗಿ ಅಭಿನಯ ಮಾಡಿದ್ದರು.

ಕನ್ನಡ ಭಾಷೆಗಾಗಿ ಹೋರಾಟ:

ರಾಜ್ ಅವರಿಗೆ ರಾಜಕೀಯ ಮೊದಲಿಂದಲೂ ಇಷ್ಟವಿರಲಿಲ್ಲ. ಅದಕ್ಕಾಗಿ ಹಲವು ರಾಜಕೀಯ ಅವಕಾಶಗಳನ್ನು ತ್ಯಜಿಸಿದರು. ಆದರೆ ಅವರಿಗಿದ್ದ ಕನ್ನಡ ಅಭಿಮಾನ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡಿತು . ಅವಾಗ ಬೆಳಗಾವಿಯಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿದ್ದರು. ಭಾಷಣ ಮಾಡಿದ್ದರು. ರಾಜ್​​ ಭಾಷಣ ಕೇಳಲು ಸಾವಿರಾರು ಅಭಿಮಾನಿಗಳು ಸೇರುತ್ತಿದ್ದರು. ಗೋಕಾಕ್​​ ಚಳುವಳಿ ಯಶಸ್ವಿಯಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಓದಲೇ ಬೇಕು ಎಂದು ಘೋಷಣೆ ಆಯಿತು. ಇದಕ್ಕಾಗಿ ಡಾ.ರಾಜ್​​ ಹಗಲು ರಾತ್ರಿ ಎನ್ನದೆ ದುಡಿದಿದ್ದರು.

image


ಪ್ರಶಸ್ತಿ:

ಡಾ. ರಾ​ಜ್​​ ಕಿರೀಟಕ್ಕೆ ಹಲವು ಪ್ರಶಸ್ತಿಗಳು ಸೇರಿಕೊಂಡಿವೆ. ಪದ್ಮಭೂಷಣ, ಡಾಕ್ಟರೇಟ್, ರಾಷ್ಟ್ರ ಪ್ರಶಸ್ತಿ, ಫಿಲ್ಮ್‌ಫೇರ್ ಹೀಗೆ ಹಲವು ಪ್ರಶಸ್ತಿ ಅವರದಾಗಿವೆ.

ರಾಷ್ಟ್ರ ಪ್ರಶಸ್ತಿಗಳು:

1963: ಉತ್ತಮ ನಾಯಕ :ಸಂತ ತುಕಾರಾಮ ಚಿತ್ರಕ್ಕಾಗಿ

1992: ಅತ್ಯುತ್ತಮ ಹಿನ್ನಲೆಗಾಯಕ: ನಾದಮಯ ಹಾಡಿಗಾಗಿ

1995: ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

2002: ಎನ್ ಟಿ ಆರ್ ನ್ಯಾಷನಲ್ ಅವಾರ್ಡ್

ಫಿಲ್ಮ್ ಫೇರ್ ಪ್ರಶಸ್ತಿಗಳು:

ಗಂಧದ ಗುಡಿ: 1973

ಮಯೂರ: 1975

ಶಂಕರ್ ಗುರು: 1978

ಕೆರಳಿದ ಸಿಂಹ: 1981

ಧ್ರುವ ತಾರೆ: 1985

ಆಕಸ್ಮಿಕ: 1993

ಲೈಫ್​ ಟೈಮ್​​ ಅಚೀವ್​​ಮೆಂಟ್​​ ಅವಾರ್ಡ್​: 1993.

ರಾಜ್ಯ ಪ್ರಶಸ್ತಿ:

1967-68 : ಬಂಗಾರದ ಹೂವು

1970-71 : ಕುಲ ಗೌರವ

1974-75 :ಭಕ್ತ ಕುಂಬಾರ

1976-77:ಬಬ್ರುವಾಹನ

1981-82 :ಹೊಸ ಬೆಳಕು

1982-83 :ಹಾಲು ಜೇನು

1988-89:ದೇವತಾ ಮನುಷ್ಯ

1992-93 : ಜೀವನ ಚೈತ್ರ

1993-94: ಒಡಹುಟ್ಟಿದವರು

ಬೆಸ್ಟ್ ಸಿಂಗರ್ ಅವಾರ್ಡ್​

1993-94 :ಆಕಸ್ಮಿಕ

1994-95 : ತಾಯಿ ಇಲ್ಲದ ತವರು - ಅರಿಶಿನ ಕುಂಕುಮ

ಅಪಹರಣ:

ಕಾಡುಗಳ್ಳ ವೀರಪ್ಪನ್​​​ ಡಾ.ರಾಜ್​​ ಕುಮಾರ್​​ ಅವರನ್ನು ಹುಟ್ಟೂರು ಗಾಜನೂರಿಂದ ಜುಲೈ 30, 2000ನೇ ಇಸವಿಯಲ್ಲಿ ಅಪಹರಣ ಮಾಡಿದ್ದನು. ಸತತ 108 ದಿನಗಳ ಕಾಲ ವೀರಪ್ಪನ್​​​ ಡಾ.ರಾಜ್​​ರನ್ನು ತನ್ನಲ್ಲೇ ಇಟ್ಟುಕೊಂಡು ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳನ್ನು ಆಡಿಸಿದ್ದನು. ಈ ಸಮಯದಲ್ಲಿ ಇಡೀ ಕರ್ನಾಟಕದ ಜನತೆ ಮತ್ತು ಸ್ಯಾಂಡಲ್​ವುಡ್​​ ಡಾ. ರಾಜ್​​ರನ್ನು ಬಂಧಮುಕ್ತ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಸರ್ಕಾರ ಕೂಡ ರಾಜ್ ಅವರನ್ನು ಬಿಡಿಸಲು ಹರ ಸಾಹಸ ಮಾಡಬೇಕಾಯಿತು. ಕೊನೆಗೆ ನವಂಬರ್​ 15, 2000ರಂದು ವೀರಪ್ಪನ್​​ ಡಾ.ರಾಜ್​​ಕುಮಾರ್​​ರನ್ನು ಬಿಡುಗಡೆ ಮಾಡಿದ್ದನು.

ನಿಧನ:

12 ಏಪ್ರಿಲ್ 2006 ರಲ್ಲಿ ರಾಜ್ ತಮ್ಮ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದರು. ಕನ್ನಡ ಚಿತ್ರರಂಗದ ಅದ್ಭುತ ತಾರೆ ಮರೆಯಾಗಿ ಹೋಗಿತ್ತು. ಇಡೀ ಕರ್ನಾಟಕದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಎಲ್ಲರೂ ಕಣ್ಣೀರಿಟ್ಟರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ದೌಡಾಯಿಸಿದ್ದರು. ಆ ಸಮಯದಲ್ಲಿ ಹಲವು ಗಲಾಟೆಗಳು ಕೂಡ ನಡೆದಿತ್ತು. ಹಲವು ಅಭಿಮಾನಿಗಳು ಪ್ರಾಣವನ್ನು ಕೂಡ ಬಿಟ್ಟರು.ಕಂಠೀರವ ಸ್ಟುಡಿಯೋ ದಲ್ಲಿ ಡಾ. ರಾಜ್​​ ಸ್ಮಾರಕ ಇದೆ. ಅವರ ಹೆಸರಿನ ರಸ್ತೆಯು ಕೂಡ ಬೆಂಗಳೂರಿನಲ್ಲಿದೆ. ಆದ್ರೆ ಒಂದಂತೂ ನಿಜ ರಾಜ್​ ನಟನೆಗೆ ಸರಿಸಾಟಿ ಯಾರು ಇಲ್ಲ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags