ಆವೃತ್ತಿಗಳು
Kannada

ಉದ್ಯಮವೊಂದು ಅನುಸರಿಸಲೇಬೇಕಾದ 4 ಮಹತ್ವದ ಅಂಶಗಳು

ಟೀಮ್​​ ವೈ.ಎಸ್​. ಕನ್ನಡ

15th Dec 2015
Add to
Shares
5
Comments
Share This
Add to
Shares
5
Comments
Share

ನಾವು ತಂತ್ರಜ್ಞಾನದ ಮತ್ತೊಂದು ಉಚ್ಛ್ರಾಯ ಸ್ಥಿತಿಯನ್ನು ಅಥವಾ ಈ ಶತಮಾನದ ಇಂಟಗ್ರೇಟೆಡ್ ಸರ್ಕ್ಯೂಟ್‌ನಲ್ಲಿ ಡಿಜಿಟಲ್ ಆರ್ಥಿಕತೆಯ ಅತೀ ದೊಡ್ಡ ಹಂತದಲ್ಲಿದ್ದೇವೆಯೇ ಎಂಬುದರ ಬಗ್ಗೆ ಭಾರತದಲ್ಲಿ ಮತ್ತು ಜಾಗತಿಕ ಉದ್ಯಮ ಜಗತ್ತಿನಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಅನೇಕ ಲೇಖನಗಳು, ಟ್ವೀಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ದೃಷ್ಟಿಕೋನಗಳನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.

ಆದರೆ ವಾಸ್ತವ ಸಂಗತಿ ಸ್ವಲ್ಪ ಜಟಿಲವಾಗಿದೆ. ಮೊದಲನೆಯದಾಗಿ ನಾವು ಇಂದಿನ ಜಾತ್ಯಾತೀತ ನಿಲುವಿನಲ್ಲಾಗುತ್ತಿರುವ ಬದಲಾವಣೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಂದು ದಿನ ನಿತ್ಯದ ಜೀವನ ಹಾಗೂ ಔದ್ಯಮಿಕ ಜೀವನ ಎರಡರಲ್ಲೂ ಅಂತರ್ಜಾಲ ತನ್ನದೇ ಆದ ವ್ಯಾಪ್ತಿ ಹೊಂದಿದೆ. 2014ರಲ್ಲಿ 2.4 ಬಿಲಿಯನ್‌ಗೂ ಹೆಚ್ಚು ಮಂದಿ ಇಂಟರ್‌ನೆಟ್‌ ಬಳಸುತ್ತಿದ್ದರು ಮತ್ತು 8.7 ಬಿಲಿಯನ್‌ಗೂ ಹೆಚ್ಚು ಇಂಟರ್‌ನೆಟ್ ಡಿವೈಸ್‌ಗಳು ಬಳಕೆಯಲ್ಲಿತ್ತು. 1998ರಲ್ಲೇ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 50 ಮಿಲಿಯನ್‌ನಷ್ಟಿತ್ತು. ಅಲ್ಲದೇ ಇಂಟರ್‌ನೆಟ್ ಬಳಸಲು ಗ್ರಾಹಕರು ಬಳಸುತ್ತಿರುವ ತಂತ್ರಗಳೂ ಸಹ ಬದಲಾಗಿವೆ. ಮೊಬೈಲ್, ಡಾಂಗಲ್‌ಗಳು, ವೈಫೈ ಸಂಪರ್ಕಗಳು ಇತ್ಯಾದಿಗಳ ಮೂಲಕ ಸುಲಭವಾಗಿ ಜನರು ಅಂತರ್ಜಾಲವನ್ನು ಬಳಸಬಹುದಾಗಿದೆ.

image


ಇದರಿಂದ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳೂ ಸಹ ಹೆಚ್ಚಿವೆ. ಮಾರುಕಟ್ಟೆಯಲ್ಲಿ ಈಗಾಗಲೇ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವವರಿಗೂ ಸ್ಪರ್ಧೆಗಳು ಹೆಚ್ಚುತ್ತಿವೆ. ಇದೇ ವೇಳೆ ಕೊನೆಯ ಹಂತದಲ್ಲಿ ಅಗತ್ಯವಿರುವ ದೊಡ್ಡ ಮಟ್ಟದ ಹೂಡಿಕೆಯನ್ನೂ ಒದಗಿಸಲಾರದೇ ಅನೇಕ ಉದ್ಯಮಗಳು ನೆಲಕಚ್ಚುತ್ತವೆ. ಯಾವುದೇ ಅನುಭವವಿಲ್ಲದ ಹಂತಲ್ಲಿ ಹೂಡಿಕೆದಾರರು ಮಾರುಕಟ್ಟೆ ಪ್ರವೇಶಿಸುವ ಹೂಡಿಕೆದಾರರ ಸಂಖ್ಯೆಯೂ ಸಹ ಹೆಚ್ಚುತ್ತಿದೆ. ಉತ್ಪನ್ನ ಮಾರುಕಟ್ಟೆಯ ಪ್ರಾಥಮಿಕ ಸಮೀಕ್ಷೆ ನಡೆಸುವ ಮೊದಲೇ, ಆರ್ಥಿಕತೆಯ ಯೋಜನೆ ಹಾಕಿಕೊಳ್ಳುವ ಮೊದಲೇ ಉದ್ಯಮಿಗಳು ಬೆಳವಣಿಗೆ ಸಾಧಿಸುವ ಇಚ್ಛೆ ಹೊಂದಿರುತ್ತಾರೆ. ಹೀಗಾಗಿ ಇಂತಹ ಉದ್ಯಮಗಳು ಶೀಘ್ರದಲ್ಲೇ ಸ್ಥಗಿತಗೊಳ್ಳುತ್ತವೆ.

ಇದನ್ನು ಹೊರತುಪಡಿಸಿ ಉದ್ಯಮಿಗಳ, ಗ್ರಾಹಕರ ಮನಸ್ಥಿತಿಗಳ ವಿಶ್ಲೇಷಣೆಗೆ ತೊಡಗಿಕೊಂಡರೆ ಉದ್ಯಮ ಚರಿತ್ರೆಯ ಉದ್ದಕ್ಕೂ ಒಂದೇ ರೀತಿ ಹೋಲಿಕೆ ನಿಮಗೆ ಕಂಡುಬರುತ್ತವೆ. ಆಶಾವಾದಿ ಮುನ್ನೋಟಗಳನ್ನು ಹೊಂದಿದ್ದರೆ ಅವು ನಿಮ್ಮ ಉದ್ಯಮದಲ್ಲಿ ಸಮಂಜಸವಾದ ರಿಸ್ಕ್‌ ಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತವೆ. ಅವಕಾಶಗಳ ಅಪರಿಮಿತ ಸಂಖ್ಯೆಯಿಂದ ಇಂತಹ ಮಟ್ಟವನ್ನು ತಲುಪಲು ಸಾಧ್ಯವಿದೆ. ಇಂತಹ ರಿಸ್ಕ್‌ ಗಳನ್ನು ತೆಗೆದುಕೊಳ್ಳುವುದರಿಂದ ಯಾವುದೋ ಒಂದು ಸಮಯದಲ್ಲಿ ತಾವು ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ಪ್ರತಿಯೊಬ್ಬರೂ ಹೊಂದಿರುತ್ತಾರೆ. ಈ ಪ್ರಕ್ರಿಯೆ ಮಾರುಕಟ್ಟೆಯ ಮಿತಿಯ ಅಂತಿಮ ಮಟ್ಟದ ರಿಸ್ಕ್ ತೆಗೆದುಕೊಳ್ಳುವವರೆಗೂ ಮುಂದುವರೆಯುತ್ತವೆ. ಇದು ಅತ್ಯಂತ ದುಬಾರಿಯಾದ ಶಿಕ್ಷಣವೊಂದನ್ನೂ ಸಹ ನೀಡುತ್ತವೆ. ಆರ್ಥಿಕತೆಯ ಸ್ವಾಭಾವಿಕವಾದ ಮಾಪನ ಮತ್ತು ಬ್ರಾಂಡಿಂಗ್‌ ಎಂಬುದು ಒಂದು ನಿರ್ದಿಷ್ಟ ವಿಭಾಗದಲ್ಲಿ ಒಂದು ಅಥವಾ ಎರಡು ಕಂಪನಿಗಳಿಗೆ ಅತ್ಯುನ್ನತವಾದದ್ದೇನೋ ಸಾಧಿಸಲು, ಯಶಸ್ಸುಗಳಿಸಲು ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ಇತಿಹಾಸದಿಂದ ನಾವು ಕಂಡುಕೊಳ್ಳಬಹುದಾಗಿದೆ. ಕೆಲವೊಂದು ಸಂಸ್ಥೆಗಳು ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟರೆ ಇನ್ನೂ ಕೆಲ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೋರಾಟ ನಡೆಸುತ್ತಲೇ ಇರುತ್ತವೆ ಮತ್ತೂ ಕೆಲವು ಸಂಸ್ಥೆಗಳು ನೆಲಕಚ್ಚುತ್ತವೆ.

ಇಂದಿನ ಬಹುತೇಕ ಉದ್ಯಮಗಳು ಮ್ಯೂಸಿಕಲ್ ಚೇರ್‌ನಂತಹ ಆಟದಲ್ಲಿ ತೊಡಗಿರುವುದನ್ನು ನಾವು ಗಮನಿಸಬಹುದಾಗಿದೆ. ಉಳಿದಿರುವ ಸ್ಥಾನವನ್ನು ನಾವು ಪಡೆದುಕೊಳ್ಳುವ ಮೂಲಕ ಇತರ ಉದ್ಯಮಿಗಳನ್ನು ಹಿಂದೆ ತಳ್ಳುತ್ತಿದ್ದೇವೆ. ನಾವು ಮಾತ್ರ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದೇವೆ ಎಂಬಂತೆ ನಾವು ನಮ್ಮ ತಂತ್ರಗಳನ್ನು ರೂಪಿಸುತ್ತಿರುತ್ತೇವೆ. ಒಂದು ಸಂಸ್ಥೆಯ ಯಶಸ್ಸು 4 ಕಂಬಗಳ ಮೇಲೆ ನಿಂತಿರುತ್ತದೆ. ಅವುಗಳೆಂದರೆ ಘಟಕ ಲಾಭದಾಯಕತೆ, ನಿರ್ಬಂಧಕ್ಕೊಳಪಟ್ಟ ದರಗಳು, ಹೂಡಿಕೆಯ ಸ್ಥಿರತೆ ಮತ್ತು ಮುಂಜಾಗರೂಕತೆಯ ಯೋಜನೆಗಳು. ಇಂತಹ ನಾಲ್ಕು ಸ್ಥಂಬಗಳನ್ನು ಹೊಂದಿರುವ ಸಂಸ್ಥೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ.

1. ಘಟಕ ಲಾಭದಾಯಕತೆ

ನೇರ ಉದ್ಯಮಗಳು ಈ ದಿನಗಳಲ್ಲಿ ಸಾಕಷ್ಟು ಅಪರೂಪವಾಗುತ್ತಿವೆಯಾದರೂ ಈ ಮಾದರಿಯ ಉದ್ಯಮಗಳು ಯಶಸ್ಸಿನ ರಹದಾರಿ ಎಂದು ಬಾರಿ ಬಾರಿ ಸಾಬೀತಾಗಿವೆ. ಸಾಮೂಹಿಕ ಹೂಡಿಕೆಯ ಅಗತ್ಯವಿಲ್ಲದೇ ಮಾರುಕಟ್ಟೆಯಲ್ಲಿ ಉತ್ಪನ್ನಗಳು ನೆಲೆಯಾಗುವಂತೆ ಮಾಡುವುದು ಮತ್ತು ಮಾರಾಟ ವಿಭಾಗದಲ್ಲಿ ಧನಾತ್ಮಕ ವಾಪಾಸಾತಿ ಕಂಡುಬರುವಂತೆ ಕೆಲಸ ಮಾಡುವುದರಿಂದ ಯಶಸ್ಸು ಸಾಧ್ಯವಾಗುತ್ತದೆ.

2.ನಿರ್ಬಂಧಕ್ಕೊಳಪಟ್ಟ ದರಗಳು

ಕಂಪನಿಯೊಂದನ್ನು ಆರಂಭಿಸಲು ಮೊದಲು ಕಡಿಮೆ ವೆಚ್ಚವಾಗುತ್ತದೆ ಮತ್ತು ಮೂಲ ಬಂಡವಾಳ ಹೂಡಿಕೆಯಲ್ಲೂ ನಿರಂತರತೆ ಇರುತ್ತದೆ. ಹೀಗಾಗಿ ಇದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಉದ್ಯಮ ವಲಯದಲ್ಲಿ ಸಾಕಷ್ಟು ದಾಖಲೆಗಳು ದೊರೆಯುತ್ತವೆ.

ಯಶಸ್ಸು ಗಳಿಸುವ ಸಲುವಾಗಿ ಹಲವು ಸಂಸ್ಥೆಗಳು ತಮ್ಮ ಇತರ ಸ್ಪರ್ಧಿಗಳಿಗಿಂತ ಕಡಿಮೆ ಹೂಡಿಕೆ ಮಾಡಿ ಆರಂಭಗೊಳ್ಳುವುದು ಮತ್ತು ಆಗಾಗ್ಗೆ ಸ್ಥಗಿತಗೊಳ್ಳುವುದು ಮತ್ತೆ ಆರಂಭಗೊಳ್ಳುವುದು ಇದು ಒಂದು ಚಕ್ರದಂತೆ ನಡೆಯುತ್ತಲೇ ಇರುತ್ತವೆ. ಇಂತಹ ಹಲವು ದುರ್ಘಟನೆಗಳು ಸಂಭವಿಸಿರುವ ಸಂಸ್ಥೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಕಡಿಮೆ ಹೂಡಿಕೆಯಿಂದಲೇ ಯಶಸ್ಸು ಗಳಿಸಿದ ಸಂಸ್ಥೆಗಳೂ ಇವೆ. ಇದರರ್ಥ ಕಂಪನಿಗಳು ಕಡಿಮೆ ಹೂಡಿಕೆ ಮಾಡಬೇಕೆಂದಲ್ಲ. ಆದರೆ ಹೂಡಿಕೆಯ ಕೊರತೆ ಮತ್ತು ಅದರ ಕುರಿತು ಇರುವ ಗೌರವಗಳು ಹೊಸ ಆಲೋಚನೆಗಳನ್ನು ಮಾಡುವತ್ತ ಮತ್ತು ಉದ್ಯಮದ ಕುರಿತು ಹೆಚ್ಚು ಗಮನಹರಿಸುವಂತೆ ಮಾಡುತ್ತವೆ. ಇವೆರಡೂ ಯಶಸ್ಸಿನ ಕೀಲಿಕೈಗಳಾಗಿವೆ.

3. ಹೂಡಿಕೆಯ ಸ್ಥಿರತೆ

ಒಮ್ಮೆ ಘಟಕ ಲಾಭದಾಯಕತೆ ಧನಾತ್ಮಕವಾಗಿ ಪರಿಣಮಿಸಿ ಪುನರಾವರ್ತನೆಯಾಗುತ್ತಿದ್ದರೆ ಮತ್ತು ಬೆಳವಣಿಗೆಗೆ ತಕ್ಕಂತೆ ನಿರ್ಬಂಧಿತ ದರಗಳು ಇದ್ದರೆ ಹೂಡಿಕೆಯೂ ಸಹ ಸ್ಥಿರತೆ ಸಾಧಿಸುತ್ತದೆ. ಘನ ಘಟಕ ಹಣಕಾಸು ನಿರ್ವಹಣೆ ಮತ್ತು ಮಾರುಕಟ್ಟೆಯಲ್ಲಿ ಉತ್ಪನ್ನವು ಸ್ಥಿರತೆ ಸಾಧಿಸಿದರೆ, ನಂತರ ಕಂಪನಿಯ ಕೋರ್ ಇಂಜಿನ್ ವ್ಯವಸ್ಥೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಷೇರುಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಹೂಡಿಕೆಯಲ್ಲಿ ಸ್ಥಿರತೆ ಕಂಡುಬರುತ್ತದೆ.

4.ಮುಂಜಾಗರೂಕತೆಯ ಯೋಜನೆಗಳು

ಉದ್ಯಮದಲ್ಲಿ ಸ್ಥಿರತೆ ಸಾಧಿಸಿದರೂ ಮುಂಜಾಗರೂಕತೆಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕ ಅಂಶ. ಉದಾಹರಣೆಗೆ, ಮಾರುಕಟ್ಟೆಯಲ್ಲಿ ಉತ್ಪನ್ನ ಸ್ಥಿರತೆ ಸಾಧಿಸುವ ಮೊದಲೇ ಉತ್ಪನ್ನವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಬೇಕೆಂಬ ಮನಸ್ಥಿತಿ ನಿಮಗಿದ್ದರೆ ನೀವು ಉದ್ಯಮದಲ್ಲಿ ಕೈ ಸುಟ್ಟುಕೊಳ್ಳುವುದು ಖಂಡಿತ. ಇದರ ಬದಲು ಹೂಡಿಕೆದಾರರನ್ನು ಆಕರ್ಷಿಸಿ ಹೆಚ್ಚುವರಿ ಹೂಡಿಕೆ ಮಾಡುವುದು ಸೂಕ್ತ. ಆದರೆ ಇದು ಬಹಳ ಕಷ್ಟಕರವಾದ ನೀವು ಘನ ಆರ್ಥಿಕ ಘಟಕ ಹೊಂದಿದ್ದರೆ, ನಿಮ್ಮ ಟಾರ್ಗೆಟ್ ಬೆಳವಣಿಗೆಯ ಗುರಿಯನ್ನು ಸಾಧಿಸಿದ್ದರೆ, ಅದರೊಂದಿಗೆ ಮಾರುಕಟ್ಟೆಯಲ್ಲೂ ಉತ್ಪನ್ನ ಸ್ಥಿರತೆ ಸಾಧಿಸಿದ್ದರೆ, ನಿಮ್ಮ ಆರ್ಥಿಕ ಮಾದರಿ ನಿಮಗೆ ಹೂಡಿಕೆಯನ್ನು ಪಡೆಯಲು ವಿಸ್ತಾರವಾದ ಅವಕಾಶವನ್ನು ದೊರಕಿಸಿಕೊಡುತ್ತದೆ.

ಮಾರುಕಟ್ಟೆಯಲ್ಲಾಗುವ ಬದಲಾವಣೆಗೆ ತಕ್ಕಂತೆ ಹೂಡಿಕೆದಾರರು ಒಂದು ಉತ್ಪನ್ನದಿಂದ ಇನ್ನೊಂದು ಉತ್ಪನ್ನದತ್ತ ಆಕರ್ಷಿತರಾಗುತ್ತಲೇ ಇರುತ್ತಾರೆ. ಹೀಗಾಗಿ ನಿಮ್ಮ ಸಂಸ್ಥೆ ಸಮಸ್ಯೆ ಎದುರಿಸಬೇಕಾದ ಸಂದರ್ಭವೂ ಬರಬಹುದು. ಇಂತಹ ಸನ್ನಿವೇಶದಲ್ಲಿ ನೀವು ಸಮಸ್ಯೆಯನ್ನು ನೇರವಾಗಿ ಎದುರಿಸಲು ಸಿದ್ಧರಿರಬೇಕು. ಪಾಲೋ ಆಲ್ಟೋ ಸಾಫ್ಟ್‌ ವೇರ್ ಪ್ರಕಾರ ಶೇ.79ರಷ್ಟು ಸಂಸ್ಥೆಗಳು ತಮಗೆ ಎದುರಾಗುವ ಸಮಸ್ಯೆಗಳನ್ನೆದುರಿಸಲು ಮುಂಜಾಗರೂಕತಾ ಯೋಜನೆ ಹಾಕಿಕೊಂಡಿರುತ್ತವೆ.

ಸಮಸ್ಯೆಗಳೆದುರಾದಾಗ ಮುಂಜಾಗರೂಕತಾ ಕ್ರಮಗಳನ್ನು ಹಾಕಿಕೊಂಡಿರುವ ಸಂಸ್ಥೆಗಳು ಘಟಕ ಲಾಭದಾಯಕತೆಯಿಂದ ಮತ್ತೆ ಹೊಸದಾಗಿ ಸಂಸ್ಥೆಯನ್ನು ಮುನ್ನಡೆಸಲು ನಿರ್ಧರಿಸುತ್ತವೆ. ಅಕಸ್ಮಾತ್ ನೀವು ನಿಮ್ಮ ಉತ್ಪನ್ನಗಳು ಲಾಭದಾಯಕವಲ್ಲ ಎಂದು ತಿಳಿದ ಮೇಲೆಯೂ ಮಾರುಕಟ್ಟೆಯಲ್ಲಿದ್ದರೆ ಅದರಿಂದ ಖಂಡಿತ ಲಾಭಗಳಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಉತ್ಪನ್ನ ಲಾಭದಾಯಕವಾಗಿ ಪರಿವರ್ತನೆಯಾಗುವುದಿಲ್ಲವೋ ಅಲ್ಲಿಯವರೆಗೆ ನೀವು ನಿಮ್ಮ ವಿಸ್ತರಣೆಯ ಯೋಜನೆಯನ್ನು ಸ್ಥಗಿತಗೊಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಒಂದು ಯೋಜನೆಯಲ್ಲಿ ಮುಂದುವರೆದರೆ ಮಾತ್ರ ಸಂಸ್ಥೆ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.

ಘಟಕ ಆರ್ಥಿಕತೆ, ನೇರ ಉದ್ಯಮದ ಸಿದ್ಧಾಂತಗಳು, ಹೂಡಿಕೆಯ ಸ್ಥಿರತೆ ಮತ್ತು ಮುಂಜಾಗ್ರತೆ ಕ್ರಮಗಳು ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಉದ್ಯಮವೊಂದು ಸ್ಥಿರವಾಗಿ ಬೆಳೆಯಬೇಕಾದರೆ ಮೇಲೆ ಹೇಳಿದ 4 ಅಂಶಗಳನ್ನು ಉದ್ಯಮಿಗಳು ಅನುಸರಿಸಬೇಕಾಗುತ್ತದೆ. ಆಗ ಮಾತ್ರ ಉದ್ಯಮ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ.

Add to
Shares
5
Comments
Share This
Add to
Shares
5
Comments
Share
Report an issue
Authors

Related Tags