ಆವೃತ್ತಿಗಳು
Kannada

ಜಿಗರಿ ದೋಸ್ತ್​ಗಳಿಂದ ಯುವ ಉದ್ಯಮಿಗಳಿಗೆ ಮಾರ್ಗದರ್ಶನ

ಉಷಾ ಹರೀಶ್​

usha harish
9th Feb 2016
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಭಾರತದದ್ಯಾಂತ ಈಗ ಸ್ಟಾರ್ಟ್ ಅಪ್​ಗಳ ಕಾಲ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲರೂ ಸ್ಟಾರ್ಟ್ಅಪ್ ಬಗ್ಗೆ ಮಾತನಾಡುತ್ತಾರೆ. ನಮ್ಮ ದೇಶದಲ್ಲಿ ಹೊಸದಾಗಿ ಉದ್ಯಮ ಪ್ರಾರಂಭಿಸಲು ಎಲ್ಲಾ ರೀತಿಯ ಸಹಕಾರವು ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿದೆ. ಆದರೆ ಕೆಲ ಉದ್ಯಮಿಗಳಿಗೆ ಉದ್ಯಮ ಪ್ರಾರಂಭಿಸಿ ಉತ್ತಮ ಸರಕುಗಳನ್ನು ಉತ್ಪಾದಿಸುವ ಸಾಮರ್ಥ್ಯ ಇರುತ್ತದೆ. ಆದರೆ ಅದನ್ನು ಮಾರುಕಟ್ಟೆ ಮಾಡುವ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ. ಇಂತವರ ಅನುಕೂಲಕ್ಕಾಗಿ ಇಬ್ಬರು ಗೆಳೆಯರು ಸೇರಿಕೊಂಡು ಒಂದು ಆನ್​ಲೈನ್​​ ಪೋರ್ಟಲ್​ಗಳನ್ನು ಆರಂಭಿಸಿದ್ದಾರೆ.

ಇದನ್ನು ಓದಿ

ದಿ ರಿಯಲ್ ಹೀರೋ!

ಹೌದು ಸಾಕಷ್ಟು ಉದ್ಯಮಿಗಳು ಉತ್ತಮವಾದ ವಸ್ತುಗಳನ್ನು ಉತ್ಪಾದಿಸುತ್ತಾರೆ. ಸರಿಯಾದ ಮಾರುಕಟ್ಟೆ ಜ್ಞಾನ ಇಲ್ಲದೇ ಇಂತಹ ಉತ್ತಮ ಸರಕುಗಳು ಮಾರಾಟವಾಗದೇ ಉದ್ಯಮಗಳು ನಷ್ಟದ ಹಾದಿ ಹಿಡಿಯುತ್ತವೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸುದಿ ಶೇಷಾಚಲ ಮತ್ತು ಬಾಬು ಜಯರಾಂ ಎಂಬಿಬ್ಬರು ಜಿಗರಿ ದೋಸ್ತ್​​ಗಳು ಸೇರಿಕೊಂಡು ಬಿ2ಬಿ ಸ್ಪೇರ್ ಎಂಬ ಕಂಪನಿ ಆರಂಭಿಸಿದ್ದಾರೆ.

ಸುದಿಶೇಷಾಚಲ ಮತ್ತು ಬಾಬು ಜಯರಾಂ ಇಬ್ಬರು ಬಾಲ್ಯದ ಗೆಳೆಯರು. ಚಿಕ್ಕವಯಸ್ಸಿನಿಂದಲೂ ತಮ್ಮದೇ ಆದ ಹೊಸ ಉದ್ಯಮ ಪ್ರಾರಂಭಿಸಬೇಕು ಎಂಬ ಕನಸನ್ನು ಹೊತ್ತುಕೊಂಡೆ ವಿದ್ಯಾಬ್ಯಾಸ ಮುಗಿಸಿದ ಈ ಗೆಳೆಯರು ಹೊಸ ಉದ್ಯಮ ಪ್ರಾರಂಭಿಸುವುದಕ್ಕೂ ಮುನ್ನ ಒಂದು ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆಯಲು ಕ್ಲೌಡ್ ಮ್ಯಾನೇಜ್​ಮೆಂಟ್ ಕ್ಷೇತ್ರದಲ್ಲಿ ಈಗಾಗಲೇ ಹೆಸರುವಾಸಿಯಾಗಿ ಉತ್ತಮ ವಹಿವಾಟು ನಡೆಸುತ್ತಿದ್ದ ಕ್ಸೇವಿಯರ್ ಕಂಪನಿಗೆ ಉದ್ಯೋಗಿಗಳಾಗಿ ಸೇರಿಕೊಂಡರು. ಸುಮಾರು ಐದು ವರ್ಷ ಕೆಲಸ ಮಾಡಿದ ಈ ಜಿಗರಿ ದೋಸ್ತ್​​ಗಳು ಇದರಿಂದ ಸಾಕಷ್ಟು ಅನುಭವ ಪಡೆದುಕೊಂಡರು. ಆ ಸಮಯದಲ್ಲಿ ಸಾಕಷ್ಟು ಮಂದಿಗೆ ಮಾರುಕಟ್ಟೆ ಮತ್ತು ಉತ್ಪಾದನಾ ವಲಯದಲ್ಲಿನ ಕಡಿಮೆ ಅರಿವಿನಿಂದ ನಷ್ಟವಾಗುತ್ತಿದ್ದನ್ನು ಕಂಡ ಇವರಿಬ್ಬರು ಈ ಎರಡು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು ಮತ್ತು ಜೊತೆಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿ2ಬಿಸ್ಪೇರ್ ಕಂಪನಿ ಸ್ಥಾಪಿಸಿದರು.

image


ಏನಿದು ಬಿ2ಬಿ

ಬಿ2ಬಿ ಎನ್ನುವುದು ಒಂದು ಆನ್​ಲೈನ್ ಪೋರ್ಟಲ್. ಈ ಪೋರ್ಟಲ್​​ನಲ್ಲಿ ಉದ್ಯಮ ಪ್ರಾರಂಭಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಮಾಡುತ್ತಾರೆ. ಅಂದರೆ ಮಾರುವವರಿಗೆ ಮತ್ತು ಕೊಳ್ಳುವವರಿಗೆ ಒಂದು ವೇದಿಕೆ ಕಲ್ಪಿಸುವುದೇ ಇದರ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಹೊಸದಾಗಿ ಉದ್ಯಮ ಪ್ರಾರಂಭಿಸುವ ಯುವ ಸಾಹಸಿಗಳಿಗೆ ಹೊಸ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ಮತ್ತು ಹಣಕಾಸಿನ ನೆರವುಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಲಾಗುವುದು.

image


ರಫ್ತಿನ ಬಗ್ಗೆಯೂ ಮಾಹಿತಿ

ಈ ಆನ್​​ಲೈನ್ ಪೋರ್ಟಲ್​​ನಲ್ಲಿ ದೇಶಿಯ ಮಾರುಕಟ್ಟೆ ಬಗೆಗಿನ ಮಾಹಿತಿ ಮಾತ್ರವಲ್ಲದೇ ವಿದೇಶದ ಮಾರುಕಟ್ಟೆಯ ಬಗ್ಗೆಯೂ ಮಾಹಿತಿ ನೀಡುವುದು ಮತ್ತು ರಫ್ತು ಮಾಡುವ ಬಗ್ಗೆಯೂ ಉದ್ಯಮ ಶೀಲರಿಗೆ ಮಾಹಿತಿ ನೀಡುತ್ತಿದ್ದಾರೆ.

5 ಸಾವಿರಕ್ಕೂ ಹೆಚ್ಚು ಕಂಪನಿಗಳ ನೊಂದಣಿ

ಈ ಬಿ2ಬಿಸ್ಪೇರ್ ಕಂಪನಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕಂಪನಿಗಳು ನೊಂದಣಿ ಮಾಡಿಕೊಂಡಿವೆ. ಇದರಲ್ಲಿ ವಸ್ತುಗಳನ್ನು ಕೊಳ್ಳುವವರಿಂದ ಹಿಡಿದು ಮಾರುವವರು ಇದ್ದಾರೆ. ಇಲ್ಲಿ ಸಿದ್ಧ ಉಡುಪುಗಳು ಸೇರಿದಂತೆ ಎಲ್ಲ ರೀತಿಯ ಉಡುಪುಗಳು,ಕೈಗಾರಿಕಾ ಉತ್ಪನ್ನಗಳು, ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಮತ್ತು ಲೋಹದ ಸರುಕುಗಳು, ಪಾದರಕ್ಷೆ, ಕೃಷಿ ಉತ್ಪನ್ನಗಳ ಉದ್ಯಮಿಗಳು ಸೇರಿದ್ದಾರೆ. ಈ ಮೂಲಕ ಮಾರಾಟಗಾರರು ಮತ್ತು ಕೊಳ್ಳುವವರು ಈ ಮೂಲಕ ಯುವ ಉದ್ಯಮಿಗಳಿಗೆ ಈ ಗೆಳೆಯರು ಪ್ರೋತ್ಸಾಹ ನೀಡುತ್ತಿದ್ದಾರೆ.

ನೀವು ಇದರಲ್ಲಿ ಲಾಗ್ ಇನ್ ಆಗಬೇಕೆಂದರೆ ವೆಬ್ ಸೈಟ್ b2bsphere.com/pricing, ಈ ಬಿ2ಬಿ ಸ್ಪೇರ್​​ನ ಆ್ಯಪ್ ಕೂಡಾ ಇದ್ದು ಸ್ಮಾರ್ಟ್ ಫೋನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು

ಇದನ್ನು ಓದಿ

ಪ್ರವಾಸಿಗಳಿಗೆ ಅತ್ಯುತ್ತಮ ಪ್ರವಾಸದ ಅನುಭವ ಒದಗಿಸಿಕೊಡಲು ತೀರ್ಮಾನಿಸಿದ್ದರು ಆ ದಂಪತಿಗಳು..!

ಹೂಗ್ಲಿ ದಡದ ಬ್ಯುಸಿನೆಸ್ ಸಾಮ್ರಾಟ : ರಾಜ್ ಕುಮಾರ್ ಗುಪ್ತಾರ ಅಪರೂಪದ ಯಶೋಗಾಥೆ..!

"ಕ್ಯುಟಿಯಪಾ"ದ ಕ್ರಿಯೆಟೀವ್ ಮ್ಯಾನ್ ಅರ್ನಬ್ ಕುಮಾರ್ : ಇದು ವಿಜುವಲ್ ಮೀಡಿಯಾದ ಮ್ಯಾಜಿಕ್

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags